For Quick Alerts
  ALLOW NOTIFICATIONS  
  For Daily Alerts

  'ಕೂಲ್ ಗಣೇಶ' ಜಗ್ಗೇಶ್ ರಾಂಗ್ ಆದ್ರೆ ನಿಮ್ಗೆ ಬಿಟ್ಟಿದ್ದು

  By Rajendra
  |

  ನವರಸ ನಾಯಕ ಜಗ್ಗೇಶ್ ಈಗ ಕೂಲ್ ಆಗಿದ್ದಾರೆ. ಲಕ್ಕಿ ಗರ್ಲ್ ರಮ್ಯಾ ಜೊತೆಗಿನ 'ನೀರ್ ದೋಸೆ' ವಿವಾದವೂ ತಣ್ಣಗಾಗಿದ್ದು ಜೊತೆಗೆ ವಾತಾವರಣವೂ ಕೂಲ್ ಆಗಿದೆ. ಈ ಸಂದರ್ಭದಲ್ಲೇ ಅವರು 'ಕೂಲ್ ಗಣೇಶ'ನಾಗಿ ಶುಕ್ರವಾರ (ನ.28) ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

  ಈ ಸಿನಿಮಾಗೆ ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ ವಸಂತ್ ಅವರದು. 'ರಾಂಗ್ ಆದ್ರೆ..ನಿಮ್ಗೆ ಬಿಟ್ಟಿದ್ದ್ದು' ಎಂಬುದು ಚಿತ್ರದ ಅಡಿಬರಹ. ಈ ಚಿತ್ರಕ್ಕೆ ಇಬ್ಬರು ನಿರ್ಮಾಪಕರು ಬಿ.ಸುರೇಶ್ ಹಾಗೂ ಪಿ ಸುರೇಂದ್ರ. ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ.

  ಸಾಮಾನ್ಯವಾಗಿ ಜಗ್ಗೇಶ್ ಚಿತ್ರಗಳಂದರೆ ಹಾಸ್ಯವನ್ನು ಪ್ರೇಕ್ಷಕರು ನಿರೀಕ್ಷಿಸುತ್ತಾರೆ. ಜೊತೆಗೆ ಡಬಲ್ ಮೀನಿಂಗ್ ಡೈಲಾಗ್ ಗಳೂ ಉಪ್ಪಿನಕಾಯಿ ತರಹ ಇದ್ರೆ ಚೆನ್ನಾಗಿರುತ್ತದೆ ಎಂದೇ ಭಾವಿಸುತ್ತಾರೆ. ಈ ಚಿತ್ರವೂ ಖಂಡಿತ ನಿರಾಸೆ ಮೂಡಿಸಲ್ಲ ಎಂಬ ಭರವಸೆ ಚಿತ್ರತಂಡದ್ದು.

  ರಮೇಶ್ ಬಾಬು ಅವರ ಛಾಯಾಗ್ರಹಣ, ಮಣಿಕಾಂತ್ ಕದ್ರಿ ಅವರ ಸಂಗೀತ, ಕೆಎಂ ಪ್ರಕಾಶ್ ಅವರ ಸಂಕಲನ ಚಿತ್ರಕ್ಕಿದೆ. ಚಿತ್ರದಲ್ಲಿ ಹಾಸ್ಯದ ಜೊತೆಗೆ ಫೈಟ್ಸ್ ಸಹ ಇದ್ದು ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಮಾಡಿದ್ದಾರೆ. ತಶು ಕೌಶಿಕ್ ಚಿತ್ರದ ನಾಯಕಿ.

  ಪಾತ್ರವರ್ಗದಲ್ಲಿ ಆರ್ಎನ್ ಸುದರ್ಶನ್, ಶೈಲಶ್ರೀ, ಶೋಭಾರಾಜ್, ಗಿರಿಜಾ ಲೋಕೇಶ್, ಜೀವನ್, ಕುರಿ ಪ್ರತಾಪ್, ಚಿದಾನಂದ್ ಸೇರಿದಂತೆ ಮುಂತಾದವರಿದ್ದಾರೆ. ಚಿತ್ರದಲ್ಲಿ ಹಾಸ್ಯದ ಜೊತೆಗೆ ಒಂದು ಸಂದೇಶವೂ ಇದೆ. ಅದೇನು ಎಂಬುದನ್ನು ಚಿತ್ರಮಂದಿರದಲ್ಲಿ ನೋಡಿ ಎನ್ನುತ್ತಿದೆ ಚಿತ್ರತಂಡ. (ಒನ್ಇಂಡಿಯಾ ಕನ್ನಡ)

  English summary
  Navarasa Nayaka Jaggesh 'Cool Ganesha' releasing on 29th November, 2013. Actress Tasu Kaushik is female lead. Ramesh Babu cinematography, Manikanth Khadri music, KM Prakash editing, Thriller Manju stunts are other credits of this film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X