For Quick Alerts
  ALLOW NOTIFICATIONS  
  For Daily Alerts

  ಕಿರಿಕ್‌ ಬೆಡಗಿ ಸಂಯುಕ್ತ ಹೆಗ್ಡೆ ಈಗ ಏನ್‌ ಮಾಡ್ತಿದ್ದಾರೆ?

  |

  ಕನ್ನಡ ಚಿತ್ರರಂಗದಲ್ಲಿ ಕಿರಿಕ್‌ ಪಾರ್ಟಿ ಸಿನಿಮಾ ಮೂಲಕ ಹೆಸರು ಮಾಡಿದ ನಟಿಯರು ರಶ್ಮಿಕಾ ಮಂದಣ್ಣ ಮತ್ತು ಸಂಯುಕ್ತ ಹೆಗ್ಡೆ. ಈ ಇಬ್ಬರಿಗೂ ಕಿರಿಕ್‌ ಪಾರ್ಟಿ ಸಿನಿಮಾ ಬಹಳ ದೊಡ್ಡ ಯಶಸ್ಸು ಕೊಟ್ಟಿತ್ತು. ಈ ಚಿತ್ರದ ಬಳಿಕ ರಶ್ಮಿಕಾ ಮಂದಣ್ಣ ಒಂದು ರೀತಿಯ ಖ್ಯಾತಿ ಪಡೆದರೆ ನಟಿ ಸಂಯುಕ್ತ ಹೆಗ್ಡೆ ಅವರಿಗೂ ಕೂಡ ಪರ ಭಾಷೆಗಳಿಂದ ಆಫರ್‌ಗಳು ಬರುತ್ತಿವೆ.

  ಈಗಾಗಲೇ ಸಂಯುಕ್ತ ತಮಿಳು ಸಿನಿಮಾ ರಂಗದಲ್ಲಿ ಬ್ಯುಸಿ ಆಗಿದ್ದಾರೆ. ತಮಿಳಿನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಸಂಯುಕ್ತ ಹೆಗ್ಡೆ ಅಭಿನಯಿಸುತ್ತಿದ್ದಾರೆ.

  ಈಗ ಸಂಯುಕ್ತ ಮತ್ತೆ ಕನ್ನಡ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಹೊಸ ಚಿತ್ರಕ್ಕೆ ಸಹಿ ಹಾಕುವುದರ ಮೂಲಕ ಸಂಯುಕ್ತ ಸುದ್ದಿ ಆಗಿದ್ದಾರೆ. ಹಾಗಂತ ಸಂಯುಕ್ತ ಚಿತ್ರಕ್ಕೆ ನಾಯಕಿ ಆಗಿ ಅಲ್ಲ. ಬದಲಿಗೆ ಚಿತ್ರದ ಹಾಡೊಂದರಲ್ಲಿ ಹೆಜ್ಜೆ ಹಾಕಲಿದ್ದಾರೆ.

  'ರಾಣ' ಚಿತ್ರಕ್ಕಾಗಿ ಹೆಜ್ಜೆ ಹಾಕಲಿರುವ ಸಂಯುಕ್ತ ಹೆಗ್ಡೆ!

  'ರಾಣ' ಚಿತ್ರಕ್ಕಾಗಿ ಹೆಜ್ಜೆ ಹಾಕಲಿರುವ ಸಂಯುಕ್ತ ಹೆಗ್ಡೆ!

  ಸಂಯುಕ್ತ ಹೆಗ್ಡೆ ಸದ್ಯ 'ರಾಣ' ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಹಾಗಂತ ಚಿತ್ರದ್ಲಲಿ ಸಂಯುಕ್ತ ನಾಯಕಿ ಅಲ್ಲ. ವಿಶೇಷ ಪಾತ್ರ ಅಥವ ಅತಿಥಿ ಪಾತ್ರದಲ್ಲೂ ಕಾಣಿಸಿಕೊಳ್ಳುತ್ತಾ ಇಲ್ಲ. ಬದಲಿಗೆ ಚಿತ್ರದ ಹಾಡೊಂದರಲ್ಲಿ ಡಾನ್ಸ್ ಮಾಡುತ್ತಿದ್ದಾರೆ. 'ರಾಣ' ಚಿತ್ರದ ವಿಶೇಷ ಹಾಡಿನಲ್ಲಿ ಸಂಯುಕ್ತ ಹೆಜ್ಜೆ ಹಾಕಲಿದ್ದಾರೆ. ಈ ಹಾಡಿನಲ್ಲಿ ಚಿತ್ರದ ನಾಯಕ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಕೆ.ಮಂಜು ಜೊತೆಗೆ ಕುಣಿಯಲಿದ್ದಾರೆ ಸಂಯುಕ್ತ ಹೆಗ್ಡೆ.

  ಹಾಡಿಗಾಗಿ ಅದ್ಧೂರಿ ಸೆಟ್‌ ನಿರ್ಮಾಣ!

  ಹಾಡಿಗಾಗಿ ಅದ್ಧೂರಿ ಸೆಟ್‌ ನಿರ್ಮಾಣ!

  ಈ ಹಾಡಿನ ಚಿತ್ರೀಕರಣಕ್ಕಾಗಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅದ್ಧೂರಿ ಸೆಟ್ ಹಾಕಲಾಗಿದೆ. ಕಲಾ ನಿರ್ದೇಶಕ ಶಿವು ಭವ್ಯವಾದ ಸೆಟ್ ನಿರ್ಮಾಣ ಮಾಡಿದ್ದಾರೆ. ಈ ಸೆಟ್‌ನಲ್ಲಿ ಹಾಡಿನ ಚಿತ್ರೀಕರಣ ನಡೆಯಲಿದೆ. ಈ ಹಾಡಿಗೆ ‌ಶಿವು ಭೇರ್ಗಿ ಸಾಹಿತ್ಯ ಇದೆ. ಚಂದನ್ ಶೆಟ್ಟಿ ಸಂಗೀತ ನೀಡಿದ್ದಾರೆ. ಇನ್ನು ನಿರ್ದೇಶಕ ನಂದಕಿಶೋರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.ಶ್ರೇಯಸ್‌ ಅವರಿಗೆ ನಾಯಕಿಯರಾಗಿ‌ ರೀಷ್ಮಾ ನಾಣಯ್ಯ ಹಾಗೂ ರಜನಿ ಭಾರದ್ವಾಜ್ ನಟಿಸುತ್ತಿದ್ದಾರೆ.

  ಕೆ. ಮಂಜು ಅರ್ಪಿಸುವ ಈ ಚಿತ್ರವನ್ನು ಗುಜ್ಜಲ್ ಪುರುಷೋತ್ತಮ್ ನಿರ್ಮಿಸುತ್ತಿದ್ದಾರೆ. ಶೇಖರ್ ಚಂದ್ರು ಛಾಯಾಗ್ರಹಣ, ರವಿವರ್ಮ ಅವರ ಸಾಹಸ ನಿರ್ದೇಶನ 'ರಾಣ' ಚಿತ್ರಕ್ಕೆ ಇದೆ.

  ರಾಗಿಣಿ ನಂತರ 'ರಾಣ'ನಿಗೆ ಜೊತೆಯಾದ ಸಂಯುಕ್ತ ಹೆಗ್ಡೆ!

  ರಾಗಿಣಿ ನಂತರ 'ರಾಣ'ನಿಗೆ ಜೊತೆಯಾದ ಸಂಯುಕ್ತ ಹೆಗ್ಡೆ!

  ಇತ್ತೀಚೆಗೆ ನಟಿ ರಾಗಿಣಿ ರಾಣ ಚಿತ್ರದ ಹಾಡಿನಲ್ಲಿ ನೃತ್ಯ ಮಾಡಿದ್ದಾರೆ ಎನ್ನುವ ಸುದ್ದಿ ಚಿತ್ರ ತಂಡದಿಂದ ಬಂದಿತ್ತು.

  ನಟಿ ರಾಗಿಣಿ ಸಿನಿಮಾದ ವಿಶೇಷ ಹಾಡಿನಲ್ಲಿ ನಟ ಶ್ರೇಯಸ್ ಜೊತೆಗೆ ಡಾನ್ಸ್‌ ಮಾಡುತ್ತಿದ್ದಾರೆ. ಈ ವಿಚಾರವನ್ನು ಚಿತ್ರ ತಂಡ ಹಂಚಿಕೊಂಡಿತ್ತು. ಈಗ ರಾಗಿಣಿ ಬಳಿಕ ಸಂಯುಕ್ತ ಹೆಗ್ಡೆ ಹೆಸರು ಕೇಳಿ ಬರುತ್ತಿದೆ. ಹಾಗಾಗಿ ಇಬ್ಬರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರಾ ಎನ್ನುವ ಕುತೂಹಲ ಮೂಡಿದೆ.

  ಕನ್ನಡದ ಜೊತೆಗೆ ತೆಲುಗು, ತಮಿಳಿನಲ್ಲೂ ಬ್ಯೂಸಿ!

  ಕನ್ನಡದ ಜೊತೆಗೆ ತೆಲುಗು, ತಮಿಳಿನಲ್ಲೂ ಬ್ಯೂಸಿ!

  ಕನ್ನಡದಲ್ಲಿ ಕಿರಿಕ್ ಪಾರ್ಟಿ, ಕಾಲೇಜ್‌ ಕುಮಾರ ಸಿನಿಮಾಗಳ ನಂತರ ಸಂಯುಕ್ತ ಹೆಗ್ಡೆ ಕಿರಿಕ್‌ ಪಾರ್ಟಿಯ ತೆಲುಗು ರಿಮೇಕ್‌ನಲ್ಲಿ ಅಭಿನಯಿಸಿದ್ದಾರೆ. ಅಲ್ಲಿಂದ ಸಂಯುಕ್ತಗೆ ಪರ ಭಾಷೆಯ ನಂಟು ಆರಂಭವಾಯ್ತು. ನಂತರ ಸಂಯುಕ್ತ ತಮಿಳು ಚಿತ್ರರಂಗದಲ್ಲೂ ಬ್ಯೂಸಿ ಆದರು. ತಮಿಳಿನ ವಾಚ್‌ಮೆನ್, ಕೊಮಾಲಿ ಸಿನಿಮಾಗಳಲ್ಲಿ ಸಂಯುಕ್ತ ಹೆಗ್ಡೆ ನಟಿಸಿದ್ದಾರೆ. ಸದ್ಯ ಇನ್ನು ಒಂದು ತಮಿಳು ಮತ್ತು ಎರಡು ಕನ್ನಡ ಚಿತ್ರಗಳು ಸಂಯುಕ್ತ ಕೈಯಲ್ಲಿ ಇವೆ.

  English summary
  Actress Samyuktha Hegde To Dance In Special Numer For Her Next Movie,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X