twitter
    For Quick Alerts
    ALLOW NOTIFICATIONS  
    For Daily Alerts

    '9' ಸಂಖ್ಯೆಯಲ್ಲಿ ಅಡಗಿದ್ಯಾ ಮುನಿರತ್ನ 'ಕುರುಕ್ಷೇತ್ರ'ದ ಅದೃಷ್ಟ.!

    |

    ಸಾಮಾನ್ಯವಾಗಿ ಚಿತ್ರರಂಗದಲ್ಲಿ ಕೆಲವು ದಿನಗಳು ಮತ್ತು ದಿನಾಂಕಗಳ ಮೇಲೆ ನಿರ್ಮಾಪಕರು, ನಿರ್ದೇಶಕರು, ಕಲಾವಿದರು ಹೆಚ್ಚು ನಂಬಿಕೆ ಇಟ್ಟಿರ್ತಾರೆ. ಆ ದಿನ ಸಿನಿಮಾ ಆರಂಭಿಸಿದ್ರೆ, ಹಾಡು ಬಿಡುಗಡೆ ಮಾಡಿದ್ರೆ, ಸಿನಿಮಾ ರಿಲೀಸ್ ಮಾಡಿದ್ರೆ ಚೆನ್ನಾಗಿ ಆಗುತ್ತೆ, ಅದು ಲಕ್ಕಿ ಎಂದು ಕೂಡ ನಂಬುವವರಿದ್ದಾರೆ.

    ಕೆಲವೊಮ್ಮೆ ಕಾಕತಾಳೀಯ ಎಂಬಂತೆ ಒಂದೇ ನಂಬರ್ ಚಿತ್ರಕ್ಕೆ ಎಲ್ಲ ರೀತಿಯಲ್ಲೂ ಅದೃಷ್ಟ ತಂದುಕೊಡುತ್ತೆ. ಇದೀಗ, ಅಂತಹದ್ದೇ ಅದೃಷ್ಟದ ಸಂಖ್ಯೆ ಕುರುಕ್ಷೇತ್ರಕ್ಕೆ ಸಿಕ್ಕಿರಬಹುದು ಎಂಬ ಮಾತು ಚರ್ಚೆಯಾಗ್ತಿದೆ. ಅದಕ್ಕೆ ಕಾರಣ ಸಂಖ್ಯೆ 9.

    ನಿರ್ಮಾಪಕ ಮುನಿರತ್ನ ಮೇಲೆ ಮುನಿಸಿಕೊಂಡ ಚಿತ್ರರಂಗ? ನಿರ್ಮಾಪಕ ಮುನಿರತ್ನ ಮೇಲೆ ಮುನಿಸಿಕೊಂಡ ಚಿತ್ರರಂಗ?

    ಹೌದು, ಕುರುಕ್ಷೇತ್ರ ಚಿತ್ರಕ್ಕೆ 9ರ ಅದೃಷ್ಟ ಒಲಿದಿರಬಹುದು. ಇದು ಗೊತ್ತಿದ್ದೋ ಅಥವಾ ಗೊತ್ತಿಲ್ಲದೆನೋ ನಿರ್ಮಾಪಕರಿಗೆ ಒಳ್ಳೆಯ ಗಳಿಕೆ ತಂದುಕೊಡುತ್ತಿದೆ. ಅಷ್ಟಕ್ಕೂ, ಏನಿದು 9ರ ಗುಟ್ಟು? ಮುಂದೆ ಓದಿ......

    ಆಗಸ್ಟ್ 9 ಕ್ಕೆ ರಿಲೀಸ್

    ಆಗಸ್ಟ್ 9 ಕ್ಕೆ ರಿಲೀಸ್

    ನಿರ್ಮಾಪಕ ಮುನಿರತ್ನ ಅಧಿಕೃತವಾಗಿ ಹೇಳಿರುವ ಪ್ರಕಾರ ಆಗಸ್ಟ್ 9 ರಂದು ಕುರುಕ್ಷೇತ್ರ ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಪ್ರಪಂಚದಾದ್ಯಂತ ತೆರೆಕಾಣುತ್ತಿದೆ. ಈ ದಿನಾಂಕ ಹೇಳಿದ್ಮೇಲೆಯೇ ಆ ಸಂಖ್ಯೆಯಲ್ಲಿ ಅದೃಷ್ಟ ಇರಬಹುದಾ ಎಂಬ ಚರ್ಚೆ ಆರಂಭವಾಗಿತ್ತು.

    9 ಕೋಟಿಗೆ ಹಿಂದಿ ಡಬ್ಬಿಂಗ್ ಹಕ್ಕು

    9 ಕೋಟಿಗೆ ಹಿಂದಿ ಡಬ್ಬಿಂಗ್ ಹಕ್ಕು

    ಆಗಸ್ಟ್ 9ನೇ ತಾರೀಖು ಸಿನಿಮಾ ರಿಲೀಸ್ ಆಗ್ತಿದೆ. ಅದಕ್ಕೂ ಮುಂಚೆಯೇ ಕುರುಕ್ಷೇತ್ರ ಚಿತ್ರದ ಹಿಂದಿ ಡಬ್ಬಿಂಗ್ ಹಕ್ಕು 9 ಕೋಟಿಗೆ ಸೇಲ್ ಆಗಿತ್ತು. ಅಲ್ಲಿಗೆ 9 ಕೋಟಿ ಮತ್ತು 9ನೇ ತಾರೀಖು ಹೊಂದಾಣಿಕೆಯಾಗಿದೆ.

    'ಕುರುಕ್ಷೇತ್ರ' ವಿಚಾರಕ್ಕೆ ಮುನಿರತ್ನ ಸಿಕ್ಕಾಪಟ್ಟೆ ಟ್ರೋಲ್: ಯಾಕೆ ಹೀಗೆ ಆಯ್ತು? 'ಕುರುಕ್ಷೇತ್ರ' ವಿಚಾರಕ್ಕೆ ಮುನಿರತ್ನ ಸಿಕ್ಕಾಪಟ್ಟೆ ಟ್ರೋಲ್: ಯಾಕೆ ಹೀಗೆ ಆಯ್ತು?

    ಟಿವಿ ಹಕ್ಕು 9 ಕೋಟಿ.!

    ಟಿವಿ ಹಕ್ಕು 9 ಕೋಟಿ.!

    ಇನ್ನು ಕುರುಕ್ಷೇತ್ರ ಚಿತ್ರದ ಕನ್ನಡ ವರ್ಷನ್ ಟಿವಿ ಪ್ರಸಾರ ಹಕ್ಕನ್ನ ಜೀ ಕನ್ನಡ ಖರೀದಿಸಿದೆಯಂತೆ. ನಿರ್ಮಾಪಕ ಮುನಿರತ್ನ ಹೇಳಿದ ಪ್ರಕಾರ 9.5 ಕೋಟಿಗೆ ಕನ್ನಡ ಸ್ಯಾಟ್ ಲೈಟ್ ಹಕ್ಕು ಸೇಲ್ ಆಗಿದೆ. ಅಲ್ಲಿಗೆ ಇಲ್ಲಿಯೂ 9 ಸಂಖ್ಯೆಯೇ ಕುರುಕ್ಷೇತ್ರಕ್ಕೆ ಆಗಿ ಬಂದಿದೆ.

    ಕುರುಕ್ಷೇತ್ರ ಹೊಸ ಟೀಸರ್: ಕರ್ಣ, ಅರ್ಜುನ, ದ್ರೌಪದಿ, ಕೃಷ್ಣಾವತಾರ ದರ್ಶನ ಕುರುಕ್ಷೇತ್ರ ಹೊಸ ಟೀಸರ್: ಕರ್ಣ, ಅರ್ಜುನ, ದ್ರೌಪದಿ, ಕೃಷ್ಣಾವತಾರ ದರ್ಶನ

    ಪ್ರಿ-ಕಲೆಕ್ಷನ್ 20 ಕೋಟಿ

    ಪ್ರಿ-ಕಲೆಕ್ಷನ್ 20 ಕೋಟಿ

    ಕುರುಕ್ಷೇತ್ರ ರಿಲೀಸ್ ಆಗಲು ಎರಡು ತಿಂಗಳು ಸಮಯವಿದೆ. ಹಿಂದಿ ಡಬ್ಬಿಂಗ್ ಹಕ್ಕು ಮತ್ತು ಕನ್ನಡ ಸ್ಯಾಟ್ ಲೈಟ್ ಹಕ್ಕು ಸೇರಿ 18.5 ಕೋಟಿ ಸಿಕ್ಕಿದೆ. ಜೊತೆಗೆ ಲಹರಿ ಸಂಸ್ಥೆ ಕುರುಕ್ಷೇತ್ರದ ಕನ್ನಡ ಹಾಡುಗಳನ್ನ ಕೊಂಡುಕೊಂಡಿದ್ದು ಒಂದೂವರೆ ಕೋಟಿ ನೀಡಿದೆಯಂತೆ. ಅಲ್ಲಿಗೆ ಬಿಡುಗಡೆಗೂ ಮುಂಚೆ 20 ಕೋಟಿ ಕಲೆಕ್ಷನ್ ಮಾಡಿದಂತಾಯಿತು.

    'ಕುರುಕ್ಷೇತ್ರ'ದ ಟಿವಿ ಹಕ್ಕು ಖರೀದಿ ಮಾಡಿದ ಜೀ ಕನ್ನಡ: ಎಷ್ಟು ಕೋಟಿ ಗೊತ್ತಾ?'ಕುರುಕ್ಷೇತ್ರ'ದ ಟಿವಿ ಹಕ್ಕು ಖರೀದಿ ಮಾಡಿದ ಜೀ ಕನ್ನಡ: ಎಷ್ಟು ಕೋಟಿ ಗೊತ್ತಾ?

    ನೂರು ಕೋಟಿ ಗಳಿಸಬಹುದು.!

    ನೂರು ಕೋಟಿ ಗಳಿಸಬಹುದು.!

    ಅತಿ ದೊಡ್ಡ ಬಜೆಟ್ ನಲ್ಲಿ ಕುರುಕ್ಷೇತ್ರ ಸಿನಿಮಾ ತಯಾರಾಗಿದೆ ಎನ್ನಲಾಗಿದೆ. ಸದ್ಯಕ್ಕೆ 20 ಕೋಟಿ ಬಿಸಿನೆಸ್ ಮಾಡಿದೆ. ಇನ್ನು ಐದು ಭಾಷೆಯಲ್ಲಿ ರಿಲೀಸ್ ಆಗುತ್ತಿರುವುದರಿಂದ ಮತ್ತು ಬಾಕ್ಸ್ ಆಫೀಸ್ ಗಳಿಕೆ ಲೆಕ್ಕಾಚಾರ ನೋಡಿದ್ರು ಈ ಚಿತ್ರ 100 ಕೋಟಿ ಆಗುತ್ತೆ ಎಂದು ಅಂದಾಜಿಸಲಾಗುತ್ತಿದೆ.

    English summary
    Muniratna kurukshetra is releasing on august 9. the movie kannada satellite rights sale for 9.5 crore and hindi dubbing right sale for 9 crore.
    Wednesday, May 22, 2019, 15:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X