»   » ಎಲ್ಲಾ ಓಕೆ, 'ಕರ್ವ' ಶೀರ್ಷಿಕೆ ಯಾಕೆ? ಅದರ ಅರ್ಥ ನಿಮಗೆ ಗೊತ್ತಾ?

ಎಲ್ಲಾ ಓಕೆ, 'ಕರ್ವ' ಶೀರ್ಷಿಕೆ ಯಾಕೆ? ಅದರ ಅರ್ಥ ನಿಮಗೆ ಗೊತ್ತಾ?

Posted By:
Subscribe to Filmibeat Kannada

ಸೂಪರ್ ಹಿಟ್ ಸಿನಿಮಾ '6-5=2' ಚಿತ್ರದ ನಿರ್ಮಾಪಕರಿಂದ ಬರುತ್ತಿರುವ ಮತ್ತೊಂದು ಕೊಡುಗೆ 'ಕರ್ವ' ಸಿನಿಮಾದ ಬಗ್ಗೆ ನಿಮಗೆಲ್ಲಾ ಗೊತ್ತಿದೆ. ಆದ್ರೆ, 'ಕರ್ವ' ಪದದ ಅರ್ಥವೇನು ಅನ್ನೋದು ನಿಮಗೆ ಗೊತ್ತಾ?

ಗೊತ್ತಿಲ್ಲ ಅಂದ್ರೆ, ನಾವು ಹೇಳ್ತೀವಿ ಕೇಳಿ...'ಕರ್ವ' ಪದಕ್ಕೆ ಕಲರ್ ಫುಲ್ ಅಥವಾ ರೂಡ್ ಲವ್ ಎಂಬರ್ಥ ಇದೆ. ಬಲಾತ್ಕಾರದ ಪ್ರೀತಿ ಅಂತಲೂ ಅರ್ಥೈಸಿಕೊಳ್ಳಬಹುದು.

what-is-the-meaning-of-karva

'ಕರ್ವ' ಪದಕ್ಕಿರುವ ಅರ್ಥಕ್ಕೆ ತಕ್ಕಂತೆ ಚಿತ್ರಕಥೆಯನ್ನು ಹೆಣೆಯಲಾಗಿದ್ಯಂತೆ. ಕಥಾಹಂದರದಲ್ಲಿ ಎಷ್ಟು ಟ್ವಿಸ್ಟ್ ಗಳಿವೆ ಎಂದರೆ, ಸಿನಿಮಾನ ಐದು ನಿಮಿಷ ಮಿಸ್ ಮಾಡಿದರೂ, ಕಥೆ ಅರ್ಥವಾಗುವುದಿಲ್ಲವಂತೆ. ಹಾಗೆ, 'ವಿಭಿನ್ನವಾಗಿ ಕಥೆ ಮಾಡಿದ್ದೇನೆ' ಎನ್ನುತ್ತಾರೆ ನಿರ್ದೇಶಕ ನವನೀತ್. [ಬ್ರೇಕಿಂಗ್ ನ್ಯೂಸ್; 'ಕರ್ವ' ಚಿತ್ರದಲ್ಲಿ 'ಹೀಗೂ ಉಂಟೇ.!']

ಅಪ್ಪಟ ಸಸ್ಪೆನ್ಸ್-ಥ್ರಿಲ್ಲರ್ ಆಗಿರುವ 'ಕರ್ವ' ಚಿತ್ರ ಬೆಂಗಳೂರು, ಮೈಸೂರು, ಊಟಿ, ಶ್ರೀಲಂಕಾ ಸೇರಿದಂತೆ ಅನೇಕ ರಮಣೀಯ ತಾಣಗಳಲ್ಲಿ ಶೂಟಿಂಗ್ ಮುಗಿಸಿದೆ.

ಡೈನಾಮಿಕ್ ಹೀರೋ ದೇವರಾಜ್, ತಿಲಕ್, ರೋಹಿತ್ ಸೇರಿದಂತೆ ಅನೇಕ ಕಲಾವಿದರು 'ಕರ್ವ' ಚಿತ್ರದಲ್ಲಿದ್ದಾರೆ. ಸದ್ಯದಲ್ಲೇ 'ಕರ್ವ' ಚಿತ್ರ ನಿಮ್ಮೆದುರಿಗೆ ಬರಲಿದೆ.

English summary
Karva, Another Suspense-thriller film from the makers of '6-5=2'. 'Karva' features Kannada Actor Devaraj, Tilak, Rohit in the prominent role. The movie is directed by Navneeth. But what is the meaning of 'Karva'? Read the article to know the answer.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada