Just In
Don't Miss!
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಟಾಟಾ ಆಲ್ಟ್ರೊಜ್ ಐಟರ್ಬೋ ಕಾರಿನ ಟೀಸರ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್
- Sports
ಐಎಸ್ಎಲ್: ಪ್ಲೇ ಆಫ್ ನಿರೀಕ್ಷೆಯಲ್ಲಿ ಜೆಮ್ಷೆಡ್ಪುರ, ನಾರ್ಥ್ ಈಸ್ಟ್
- News
ಭಾರತದಲ್ಲಿ ಮೊದಲ ದಿನ ಕೊರೊನಾ ಲಸಿಕೆ ಪಡೆದವರೆಷ್ಟು ಮಂದಿ?
- Lifestyle
ಆರೋಗ್ಯಕರ ಋತುಚಕ್ರಕ್ಕೆ ಇಲ್ಲಿವೆ ಕೆಲವೊಂದು ಯೋಗಾಸನಗಳು
- Finance
ಬಜೆಟ್ 2021: MSME ವಲಯಕ್ಕೆ ಏನು ಸಿಗಬಹುದು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕೋಟ್ಯಧಿಪತಿ ಶೋನಲ್ಲಿ 1 ಕೋಟಿ ಗೆಲ್ಲುವ ವಿಜೇತರ ಕೈಗೆ ಸಿಗುವ ಹಣವೆಷ್ಟು?

ಕನ್ನಡದ ಕೋಟ್ಯಾಧಿಪತಿ ನಾಲ್ಕನೇ ಆವೃತ್ತಿ ಆರಂಭವಾಗುತ್ತಿದೆ. ಇದುವರೆಗೂ ಮೂರು ಸೀಸನ್ ಯಶಸ್ವಿಯಾಗಿ ನಡೆದಿದೆ. ಈಗ ನಾಲ್ಕನೇ ಸೀಸನ್ ಗೆ ದಿನಗಣನೆ ಆರಂಭವಾಗಿದೆ. ಜೂನ್ 22ರಿಂದ ಶನಿವಾರ ಮತ್ತು ಭಾನುವಾರ ಕನ್ನಡದ ಕೋಟ್ಯಧಿಪತಿ ಪ್ರಸಾರವಾಗಲಿದೆ.
ಹದಿನೈದು ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದವರಿಗೆ ಒಂದು ಕೋಟಿ ಬಹುಮಾನ ಸಿಗುತ್ತೆ. ಹಾಗ್ನೋಡಿದ್ರೆ, ಇದುವರೆಗೂ ಈ ಶೋನಲ್ಲಿ ಒಂದು ಕೋಟಿ ಗೆದ್ದ ಅಭ್ಯರ್ಥಿ ಒಬ್ಬರೇ. ಅವರನ್ನ ಬಿಟ್ಟರೇ ಮತ್ಯಾರು ಒಂದು ಕೋಟಿಗೆ ಒಡೆಯರಾಗಿಲ್ಲ.
'ಕನ್ನಡದ ಕೋಟ್ಯಧಿಪತಿ'ಯಲ್ಲಿ ಅತಿ ಹೆಚ್ಚು ಹಣ ಗೆದ್ದಿರುವ 'ಸ್ಟಾರ್' ಯಾರು.?
ಅಂದ್ಹಾಗೆ, ಈ ಶೋನಲ್ಲಿ ಒಂದು ಕೋಟಿ ಗೆದ್ದವರಿಗೆ ಸಂಪೂರ್ಣ ಹಣ ಕೊಡ್ತಾರಾ ಎಂಬ ಕುತೂಹಲ ಸಾಮಾನ್ಯ ಪ್ರೇಕ್ಷಕರನ್ನ ಕಾಡುತ್ತೆ. ಟ್ಯಾಕ್ಸ್ ಎಲ್ಲ ಹೋಗಿ ಎಷ್ಟು ಹಣ ಅವರ ಕೈಗೆ ಸಿಗುತ್ತೆ ಎಂಬುದರ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಆದ್ರೆ, ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್ ಒಂದು ಅಂದಾಜು ನೀಡಿದ್ದಾರೆ.

ತೆರಿಗೆ ಪಾವತಿಸಬೇಕು
ಒಂದು ಕೋಟಿ ಬಹುಮಾನ ಎಂದು ಘೋಷಿಸಿದ್ದರೂ ತೆರಿಗೆ ಪಾವತಿಸಿ ಬಾಕಿ ಹಣ ವಿಜೇತರ ಕೈಗೆ ಸಿಗುತ್ತೆ. ಆಯಾ ವರ್ಷದ ಕೇಂದ್ರ ಸರ್ಕಾರದ ತೆರಿಗೆ ನೀತಿಗೆ ಸಂಬಂಧಪಟ್ಟಂತೆ ಹಣ ಕಟ್ ಆಗಿ, ಉಳಿದ ಹಣ ವಿಜೇತರ ಕೈ ಸೇರುತ್ತೆ. ಈ ಹಿಂದೆ ಒಂದು ಕೋಟಿ ಗೆದ್ದ ಅಭ್ಯರ್ಥಿಗೆ ಎಷ್ಟು ಸಿಕ್ಕಿದೆ ಎಂಬುದರ ನಿಖರ ಮಾಹಿತಿ ಇಲ್ಲ.

ಶೇಕಡಾ 33 ರಷ್ಟು ತೆರಿಗೆ
ಸದ್ಯದ ಕೇಂದ್ರ ಸರ್ಕಾರದ ನೀತಿ ಪ್ರಕಾರ ಒಂದು ಕೋಟಿ ಗೆದ್ದರೇ, ಶೇಕಡಾ 33 ರಷ್ಟು ತೆರಿಗೆ ಪಾವತಿಸಿ ಬಾಕಿ ಹಣ ವಿಜೇತರ ಖಾತೆಗೆ ಸೇರುತ್ತೆ. ಅಂದ್ರೆ, ಅಂದಾಜು ಒಂದು ಕೋಟಿಯಲ್ಲಿ 67 ಲಕ್ಷ ಅಭ್ಯರ್ಥಿಯ ಕೈ ಸೇರಬಹುದು ಎಂಬ ಅಂದಾಜು ಇದೆ.
'ಕನ್ನಡದ ಕೋಟ್ಯಧಿಪತಿ'ಯಲ್ಲಿ 1 ಕೋಟಿ ಗೆದ್ದಿದ್ದು ಇವರೊಬ್ಬರೇ.!

ಒಂದು ಕೋಟಿ ಗೆದ್ದ ಆ ವ್ಯಕ್ತಿ ಯಾರು?
ಕನ್ನಡದ ಕೋಟ್ಯಧಿಪತಿಯ ಎರಡನೇ ಆವೃತ್ತಿಯಲ್ಲಿ ಹುಸೇನ್ ಬಾಷಾ ಎಂಬುವರು ಮೊದಲ ಬಾರಿಗೆ 1 ಕೋಟಿ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. 28 ಮತ್ತು 29 ಏಪ್ರಿಲ್ 2013 ರಂದು ಈ ಎಪಿಸೋಡ್ ಪ್ರಸಾರವಾಗಿತ್ತು. ಹುಸೇನ್ ಬಾಷಾ ಮೂಲತಃ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನಲ್ಲಿರುವ ಕರಟಗಿ ಬಳಿ ಚೆಲ್ಲೂರಿನ ಗ್ರಾಮದವರು.

ಯಾವ ಸೆಲೆಬ್ರಿಟಿ ಹೆಚ್ಚು ಗೆದ್ದಿದ್ದಾರೆ
ಇನ್ನು ಕನ್ನಡದ ಕೋಟ್ಯಧಿಪತಿಯಲ್ಲಿ ಹಲವು ಸಿನಿಮಾ ಸೆಲೆಬ್ರಿಟಿಗಳು ಭಾಗವಹಿಸಿದ್ದಾರೆ. ರಮ್ಯಾ, ಪ್ರಭುದೇವ, ಗಣೇಶ್, ರವಿಚಂದ್ರನ್, ಉಪೇಂದ್ರ, ಸೃಜನ್ ಲೋಕೇಶ್, ಯಶ್, ರಾಧಿಕಾ ಪಂಡಿತ್, ಜಗ್ಗೇಶ್ ಸೇರಿದಂತೆ ಹಲವು ಹಾಟ್ ಸೀಟ್ ನಲ್ಲಿ ಕೂತಿದ್ದರು. ಇವರಲ್ಲಿ ಪ್ರಭುದೇವ ಮತ್ತು ಅನಿಲ್ ಕುಂಬ್ಳೆ ತಲಾ 25 ಲಕ್ಷ ಗೆದ್ದಿದ್ದಾರೆ.