Just In
Don't Miss!
- News
2023ರ ಚುನಾವಣೆ; ಇಬ್ಬರು ಅಭ್ಯರ್ಥಿಗಳನ್ನು ಘೋಷಿಸಿದ ಎಚ್ಡಿಕೆ!
- Sports
ಶ್ರೀಲಂಕಾದಿಂದಲೇ ಟೀಮ್ ಇಂಡಿಯಾಗೆ ಎಚ್ಚರಿಕೆ ರವಾನಿಸಿದ ಜೋ ರೂಟ್
- Finance
"ಟಿಕ್ ಟಾಕ್ ಸೇರಿ ಚೀನಾದ ಕೆಲವು ಆಪ್ ಗಳಿಗೆ ಭಾರತದಲ್ಲಿ ಶಾಶ್ವತ ನಿಷೇಧ"
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಯಶ್-ರಾಧಿಕಾ ಪಂಡಿತ್ ಮಗಳ ಹೆಸರಿನ ನಿಜವಾದ ಅರ್ಥ.!
ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಗೆ ಹೆಣ್ಣು ಮಗು ಎಂದ ಕೂಡಲೇ ಆ ಮಗುವಿಗೆ ಹೆಸರೇನಿಡಬಹುದು ಎಂಬ ಚರ್ಚೆ ಅಭಿಮಾನಿಗಳಲ್ಲಿ ಶುರುವಾಗಿತ್ತು. ಯಶಿಕಾ, ಲಕ್ಷ್ಮಿ ಹೀಗೆ ಒಬ್ಬೊಬ್ಬರು ಒಂದೊಂದು ಹೆಸರು ಹೇಳುತ್ತಿದ್ದರು.
ಆದರೆ ಅಂತಿಮವಾಗಿ ರಾಕಿಂಗ್ ದಂಪತಿಯ ಮಗಳಿವೆ Ayra (ಐರಾ/ಆಯ್ರಾ) ಎಂದು ಹೆಸರಿಡಲಾಗಿದೆ. ಈ ಹೆಸರು ಸಾಮಾನ್ಯ ಜನರಿಗೆ ಬಹಳ ಹೊಸತು. ಎಲ್ಲೋ ಕೇಳಿದ ನೆನಪು ಅನ್ನೋದು ಬಿಟ್ಟರೆ ಈ ಹೆಸರಿನ ಅರ್ಥವೇನು ಎಂಬುದು ಅನೇಕರಿಗೆ ಗೊತ್ತಿಲ್ಲ.
ರಾಧಿಕಾ ಪಂಡಿತ್ ಮತ್ತೆ ಗರ್ಭಿಣಿ : 2ನೇ ಮಗುವಿಗೆ ಅಪ್ಪ ಆಗುತ್ತಿರುವ ಯಶ್
ಒಬ್ಬೊಬ್ಬರು ಒಂದೊಂದು ರೀತಿ ಅರ್ಥೈಸುತ್ತಿದ್ದಾರೆ. ಸರಿ ಈ ಹೆಸರಿಗೆ ಏನು ಅರ್ಥ ಇರಬಹುದು ಎಂದು ಗೂಗಲ್ ನಲ್ಲಿ ಹುಡುಕಿದರೇ, ಅರೇಬಿಕ್ ಪದ ಎಂದು ಸೂಚಿಸುತ್ತಿದೆ. ಹೀಗೆ, Ayra ಪದದ ಅರ್ಥ ಹುಡುಕಿದರೇ ಗೊಂದಲವೇ ಹೆಚ್ಚು. ಇದೀಗ, ಈ ಬಗ್ಗೆ ಸ್ವತಃ ರಾಧಿಕಾ ಪಂಡಿತ್ ಅವರೇ ಬಹಿರಂಗಪಡಿಸಿದ್ದು, ನಿಜವಾದ ಅರ್ಥವೇನು ಎಂದು ತಿಳಿಸಿದ್ದಾರೆ. ಮುಂದೆ ಓದಿ.....

'ಲಕ್ಷ್ಮಿ' ಬಂದಳು ಎಂಬ ಖುಷಿ
''ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಗೆ ಹೆಣ್ಣು ಜನಿಸಿದಾಗ, ಅಭಿಮಾನಿಗಳು ಮನೆಗೆ ಲಕ್ಷ್ಮಿ ಬಂದಳು, ಲಕ್ಷ್ಮಿ ಎಂದೇ ಹೆಸರಿಡಿ ಎಂದು ಹೇಳುತ್ತಿದ್ದರು. ಅದೇ ಯೋಚನೆಯಲ್ಲಿ ಯೋಚಿಸಿದಾಗ 'ಐರಾ' ಎನ್ನುವುದು ಅಂತಿಮವಾಯಿತು. ಐರಾವತಿ ಅಂದ್ರೆ ಲಕ್ಷ್ಮಿ ಅದರಲ್ಲಿ ಐರಾ ಬಂದಿದೆ'' ಎಂದು ಯಶ್ ಪತ್ನಿ ತಿಳಿಸಿದರು.
ಈವರೆಗೂ ಯಶ್ ಮಗಳನ್ನು ನೋಡಲು ಆಗಿಲ್ಲ - ಸುಮಲತಾ

ಹೆಸರಿನಲ್ಲಿ YR ಬೇಕಿತ್ತು
''ಅಭಿಮಾನಿಗಳೆಲ್ಲ YR ಎಂದು ಹೇಳುತ್ತಿದ್ದರು. ಅದೂ ಕೂಡ ಗಮನದಲ್ಲಿಟ್ಟಕೊಂಡು YR ಬರುವಂತೆ ಹೆಸರು ಇರಲಿ ಎಂದು ನಿರ್ಧರಿಸಿದೆವು. AYRA ಎಂದ ಹೆಸರಿನಲ್ಲಿ AY ಅಂದ್ರೆ ಯಶ್ (ಉಲ್ಟಾ). RA ಅಂದ್ರೆ ರಾಧಿಕಾ ಎಂಬ ಅರ್ಥವೂ ಇದೆ. AYRA ಅಪ್ಪ ಯಶ್ ಮತ್ತು ರಾಧಿಕಾ ಅಮ್ಮ ಎಂದು ಅರ್ಥವೂ ಇರಬಹುದು. YR ಒಟ್ಟಿಗೆ ಇರಬೇಕು ಎಂಬ ಉದ್ದೇಶವೂ ಇರಬಹುದು'' ಎಂದು ರಾಧಿಕಾ ಹೇಳಿಕೊಂಡರು.
ಯಶ್-ರಾಧಿಕಾ ಮುದ್ದು ಮಗಳಿಗೆ ನಾಮಕರಣ

ಎರಡನೇ ಮಗು ನಿರೀಕ್ಷೆಯಲ್ಲಿ ರಾಕಿಂಗ್ ದಂಪತಿ
ಮೊದಲ ಮಗು ಹೆಸರಿನ ಬಗ್ಗೆ ಚರ್ಚೆಯಾಗುತ್ತಿರುವಾಗಲೇ ಯಶ್ ದಂಪತಿ ಇನ್ನೊಂದು ಸರ್ಪ್ರೈಸ್ ಸುದ್ದಿ ನೀಡಿದ್ದಾರೆ. ರಾಧಿಕಾ ಪಂಡಿತ್ ಎರಡನೇ ಮಗುವಿಗೆ ಗರ್ಭಿಣಿಯಾಗಿದ್ದಾರೆ ಎಂದು ಸಂತಸ ಹಂಚಿಕೊಂಡಿದ್ದಾರೆ.
ಕೊನೆಗು ಯಶ್-ರಾಧಿಕಾ ಮಗಳ ಹೆಸರು ಫೈನಲ್ ಆಯ್ತು

ಎರಡನೇ ಮಗು ಹೆಸರಿಗೆ ಇನ್ನೆಷ್ಟು ಯೋಚಿಸಬೇಡ
ಮೊದಲ ಮಗುವಿಗೆ ಹೆಸರಿಡಲು ಬಹಳ ಸಮಯ ತೆಗೆದುಕೊಂಡ ಯಶ್ ದಂಪತಿ, ಬಹಳ ಕ್ರಿಯಾತ್ಮಕವಾಗಿ ಯೋಚಿಸಿ AYRA ಎಂದು ಹೆಸರಿಟ್ಟರು. ಈಗ ರಾಧಿಕಾ ನಾಲ್ಕು ತಿಂಗಳು ಗರ್ಭಿಣಿ. ಹಾಗಾಗಿ, ಇದೇ ವರ್ಷ ಎರಡನೇ ಮಗುವಿಗೆ ಜನ್ಮ ನೀಡಲಿದ್ದಾರೆ ಯಶ್ ಪತ್ನಿ. ಸೋ, ಎರಡನೇ ಮಗುವಿನ ಹೆಸರು ನಿರ್ಧರಿಸಲು ಮತ್ತೆಷ್ಟು ಚಿಂತಿಸಬಹುದು?