»   » ಕಿಚ್ಚ ಸುದೀಪ್ ಜೀವನದ ಗುರಿ ಏನು ಗೊತ್ತಾ?

ಕಿಚ್ಚ ಸುದೀಪ್ ಜೀವನದ ಗುರಿ ಏನು ಗೊತ್ತಾ?

Posted By: Bharath Kumar
Subscribe to Filmibeat Kannada

ಮನುಷ್ಯನಾಗಿ ಹುಟ್ಟಿದ ಪ್ರತಿಯೊಬ್ಬರಿಗೂ ಜೀವನದಲ್ಲಿ ಒಂದು ಗುರಿ-ಉದ್ದೇಶ ಇದ್ದೇ ಇರುತ್ತೆ. ಅದೇ ರೀತಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೂ ಕೂಡ ಜೀವನದಲ್ಲಿ ಒಂದು ಗುರಿ ಅಥವಾ ಉದ್ದೇಶ ಇರುತ್ತೆ. ಅದು ಏನು ಅಂತ ಎಷ್ಟೋ ಜನಕ್ಕೆ ಗೊತ್ತಿರಲ್ಲ. ಅದನ್ನ ತಿಳ್ಕೋಬೇಕು ಅಂತ ಅದೇಷ್ಟೋ ಅಭಿಮಾನಿಗಳ ಆಸೆ ಕೂಡ ಆಗಿರಬಹುದು.

ಸುದೀಪ್ ಬಗ್ಗೆ ಹಾಗೂ ಅವರ ಸಿನಿಮಾಗಳ ಬಗ್ಗೆ ಕಿಚ್ಚನ ಅಭಿಮಾನಿಗಳಿಗೆ ಬಹುತೇಕ ಗೊತ್ತಿರುತ್ತೆ. ಅವರು ಚಿತ್ರರಂಗಕ್ಕೆ ಬರುವ ಮುಂಚೆ ಅವರು ಪಟ್ಟ ಕಷ್ಟ, ಚಿತ್ರರಂಗಕ್ಕೆ ಬಂದ ಮೇಲೆ ಅವರಿಗೆ ಎದುರಾದ ಸವಾಲು, ಈಗ ಸ್ಯಾಂಡಲ್ ವುಡ್ ನಲ್ಲಿ ಅವರ ಸ್ಥಾನಮಾನ ಏನು ಅಂತ ನಾವು ನೋಡುತ್ತಿದ್ದೇವೆ.

ಸುದೀಪ್ ಬಗ್ಗೆ ಇಷ್ಟೆಲ್ಲಾ ತಿಳಿದುಕೊಂಡಿರುವ ಅಭಿಮಾನಿಗಳಿಗೆ ಅವರ ಜೀವನದ ಗುರಿ ಏನು ಅಂತ ತಿಳಿದುಕೊಳ್ಳುವ ಆಸಕ್ತಿ ಖಂಡಿತ ಇದ್ದೇ ಇರುತ್ತೆ. ಹಾಗಾದ್ರೆ, ಇಷ್ಟೆಲ್ಲಾ ಸಾಧನೆ ಮಾಡಿರುವ ಕಿಚ್ಚನಿಗೆ ತಮ್ಮ ಜೀವನದಲ್ಲಿ ದೊಡ್ಡ ಗುರಿ ಇದಿಯಾ? ಇನ್ನೂ ಸಾಧಿಸ ಬೇಕಾಗಿರುವ ಸಾಧನೆ ಇದಿಯಾ? ಈ ಎಲ್ಲ ಪ್ರಶ್ನೆಗಳಿಗೆ ಸ್ವತಃ ಸುದೀಪ್ ಅವರೇ ಉತ್ತರ ಕೊಟ್ಟಿದ್ದಾರೆ. [ಟ್ವಿಟ್ಟರ್ ಕಾಂಪಿಟೇಷನ್: 'ಉಪೇಂದ್ರ' ಕೇಳಿದ ಪ್ರಶ್ನೆಗೆ 'ಕಿಚ್ಚನ' ಉತ್ತರ ಇಲ್ಲಿದೆ]

ಹೌದಾ, ಹಾಗಾದ್ರೆ ಕಿಚ್ಚ ಸುದೀಪ್ ತಮ್ಮ ಆಸೆಯನ್ನ ಹೇಳಿಕೊಂಡಿದ್ದು ಎಲ್ಲಿ? ಅವರ ಜೀವನದ ಮಹತ್ವಕಾಂಕ್ಷೆ ಏನು? ಕಿಚ್ಚ ಹೇಳಿದ್ದೇನೆ ಅಂತ ಇಲ್ಲಿದೆ ನೋಡಿ....

ಉಪ್ಪಿ ಕೇಳಿದ ಪ್ರಶ್ನೆಗೆ ಕಿಚ್ಚನ ಸೀರಿಯಸ್ ಉತ್ತರ

ಕಳೆದ ನಾಲ್ಕೈದು ದಿನಗಳಿಂದ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಸುದೀಪ್ ಮಧ್ಯೆ, ಟ್ವಿಟ್ಟರ್ ನಲ್ಲಿ ಪ್ರಶ್ನೋತ್ತರ ಸ್ವರ್ಧೆ ನಡೆಯುತ್ತಿದೆ ಎಂಬುದು ಗೊತ್ತಿದೆ. ಕಿಚ್ಚನ ಎಲ್ಲ ಪ್ರಶ್ನೆಗಳಿಗೂ ಉತ್ತರ ಕೊಟ್ಟಿರುವ ಸುದೀಪ್, ಈಗ ಉಪೇಂದ್ರ ಅವರು ಕೇಳಿದ ಸೀರಿಯಸ್ ಪ್ರಶ್ನೆಗೆ, ತುಂಬಾ ಸೀರಿಯಸ್ ಆಗಿಯೇ ಉತ್ತರ ಕೊಟ್ಟಿದ್ದಾರೆ.

ಉಪ್ಪಿ ಕೇಳಿದ ಸೀರಿಯಸ್ ಪ್ರಶ್ನೆ

''ನಿಮ್ಮ ಜೀವನದ ಮಹತ್ವಕಾಂಕ್ಷೆ (ambition) ಏನು ? ಲೈಪ್ ನಲ್ಲಿ ಏನು ಸಾಧನೆ ಮಾಡಬೇಕು ಎಂದುಕೊಂಡಿದ್ದೀರಾ? ಇದನ್ನ ಮಾಡಿದ್ರೆ ನಾನು ಸಂಪೂರ್ಣ ತೃಪ್ತ ಎನ್ನುವುದು ಇನ್ನೂ ಏನಿದೆ ನಿಮ್ಮ ಲೈಪ್ ನಲ್ಲಿ?''.- ಎಂದು ಉಪೇಂದ್ರ ಕಿಚ್ಚನಿಗೆ ಪ್ರಶ್ನೆ ಕೇಳಿದ್ದಾರೆ. (ಈ ವಿಡಿಯೋ ಲಿಂಕ್ ಇಲ್ಲಿದೆ ನೋಡಿ)

ಸುದೀಪ್ ಕೊಟ್ಟ ಉತ್ತರ

''ಮಹತ್ವಕಾಂಕ್ಷೆ (ambition).....! ನಿಮ್ಮಂತ ಹಿರಿಯ ನಿರ್ದೇಶಕರನ್ನ ನೋಡಿ, ಹಿರಿಯ ಕಲಾವಿದರನ್ನ ನೋಡಿ ಒಂದು ಟೈಮ್ ನಲ್ಲಿತ್ತು. ನಾವು ಆ ಮಟ್ಟಿಗೆ ಬೆಳಿತಿವಾ ? ಚಿತ್ರರಂಗ ನಮ್ಮ ಕೈ ಹಿಡಿಯುತ್ತಾ ಅಂತ! ನನ್ನ ವಿಚಾರದಲ್ಲಿ ಇದೆಲ್ಲ ಆಗಿದೆ. ಜನ ಕೈ ಹಿಡಿದಿದ್ದಾರೆ. ಕೈ ಹಿಡಿಯುವುದಕ್ಕಿಂತ ಹೆಚ್ಚು ಪ್ರೀತಿ ತೋರಿಸಿದ್ದಾರೆ'. ಇದಕ್ಕಿಂತ ಇನ್ನೂ ಹೆಚ್ಚು ಕೇಳಿದ್ರೆ ನಮಗಿಂತ ದೊಡ್ಡ ಬೆಗ್ಗರ್ಸ್ ಇರಲ್ಲ''.-ಸುದೀಪ್

ಆಸೆಗೆ ಕೊನೆಯಿಲ್ಲ

''ಇವತ್ತು ಒಂದು ಆಸೆ ಇದ್ರೆ, ನಾಳೆ ಇನ್ನೊಂದು ಆಸೆ ಬರುತ್ತೆ. ಇದಕ್ಕೆ ಕೊನೆನೇ ಇಲ್ಲ. ಎಲ್ಲ ಭಗವಂತ ಕೊಟ್ಟಿದ್ದಾನೆ. ಅದನ್ನ ಉಳಿಸಿಕೊಂಡು ಹೋಗೋಣ. ಇದರಿಂದ ಉಪಯೋಗವಾಗುವಂತದ್ದು ಏನಾದರೂ ಮಾಡುವುದಕ್ಕೆ ಆಗುತ್ತಾ ಅಂತ ಯೋಚನೆ ಮಾಡೋಣ. ಇದರ ಮೇಲೆ ಸಂಪೂರ್ಣ ಎನ್ನುವುದು ನಮಗೆ ಬಿಟ್ಟಿದ್ದು''.-ಸುದೀಪ್

ಇರುವುದರಲ್ಲಿ ಖುಷಿ ಹುಡುಕಬೇಕು ಅಷ್ಟೇ

''ಖುಷಿ ಇರುವುದರಲ್ಲಿ ಹುಡುಕಬೇಕು ಅಂತ ಹೇಳ್ತಾರಲ್ಲ ಸರ್, ಅದನ್ನ ಮಾಡುತ್ತಿದ್ದೇನೆ ಅಷ್ಟೇ. ನನಗೆ ಅನಿಸುವ ಮಟ್ಟಿಗೆ ನಾನು ತುಂಬಾ ಖುಷಿಯಾಗಿದ್ದೇನೆ. ಈ ಮಟ್ಟಿಗೆ ಭಗವಂತ ಕರಕೊಂಡು ಬರ್ತಾನೆ ಅಂತ ನಾನು ಅಂದುಕೊಂಡಿರಲಿಲ್ಲ. ಬಂದ ಮೇಲೆ ಆಸೆ, ಮಹತ್ವಕಾಂಕ್ಷೆ ನನಗಿಲ್ಲ''.-ಸುದೀಪ್

ಭಾವುಕರಾದ ಕಿಚ್ಚ

''ವೈಯಕ್ತಿಕವಾಗಿ ನಾನು ಅಪೂರ್ಣನಾಗಿದ್ದೇನೆ. ಉತ್ತಮ ವ್ಯಕ್ತಿಯಾಗುವುದಕ್ಕೆ ಪ್ರಯತ್ನ ಪಡುತ್ತಿದ್ದೇನೆ. ನನಗೆ ಗೊತ್ತು ನನ್ನಿಂದ ಅದು ಸಾಧ್ಯ ಅಂತ''.-ಸುದೀಪ್

ಮಹತ್ವಕಾಂಕ್ಷೆ (ambition) ಏನು ಇಲ್ಲ ಸರ್?

''ಅಷ್ಟೇ ಸರ್. ಇಷ್ಟು ಮಾತ್ರ ನನ್ನ ಆಸೆ. ಈಗ ನನ್ನ ಜೀವನದಲ್ಲಿ ಮಹತ್ವಕಾಂಕ್ಷೆ (ambition) ಎನ್ನುವುದು ಏನು ಇಲ್ಲ ಸರ್''.- ಉಪೇಂದ್ರ ಅವರ ಪ್ರಶ್ನೆಗೆ ಸುದೀಪ್ ಅವರು ಭಾವುಕರಾಗಿ ಉತ್ತರ ಕೊಟ್ಟಿದ್ದಾರೆ.(ಸುದೀಪ್ ಕೊಟ್ಟ ಉತ್ತರ ಇಲ್ಲಿದೆ ನೋಡಿ)

English summary
Real Star Upendra has taken his Twitter Account to ask question for Kiccha Sudeep on 'Life Ambition'. Here is the detailed report on Upendra's Questions and Sudeep's Answers in Twitter.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada