»   » ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಕಥೆ ಮುಂದೇನು?

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಕಥೆ ಮುಂದೇನು?

By: ಜೀವನರಸಿಕ
Subscribe to Filmibeat Kannada

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಮತ್ತೆ ಸಿನಿಮಾದಲ್ಲಿ ನಟಿಸ್ತಾರೆ ಅನ್ನೋದು ಗಾಂಧಿನಗರದಲ್ಲಿ ಹರಿದಾಡ್ತಿರೋ ಗಾಳಿ ಸುದ್ದಿ. ಮಂಡ್ಯದ ಮಾಜಿ ಸಂಸದೆ ವಿಧಾನ ಪರಿಷತ್ ಗೆ ಆಯ್ಕೆಯಾಗ್ತಾರೆ ಅನ್ನೋ ಸುದ್ದಿ ಇದ್ದರೂ ಸದ್ಯಕ್ಕೆ ಕಾಂಗ್ರೇಸ್ ರಮ್ಯಾರನ್ನ ವಿಧಾನ ಪರಿಷತ್ ಗೆ ಕಳಿಸೋದು ಅನುಮಾನ.

ಸದ್ಯ ರಮ್ಯಾರಿಗೆ ಹಳೇ ಗಂಡನ ಪಾದವೇ ಗತಿ ಅನ್ನೋ ಸ್ಥಿತಿ ಬಂದೊದಗಿದೆ. ರಮ್ಯಾರನ್ನ ಮೆಚ್ಚಿ ಕೊಂಡಾಡಿ ಉನ್ನತ ಮಟ್ಟಕ್ಕೆ ಬೆಳೆಸಿದ್ದೇ ಕನ್ನಡ ಚಿತ್ರರಂಗ. ಈಗ ಮತ್ತೆ ರಮ್ಯಾ ತವರಿಗೆ ಮರಳೋ ಯೋಚನೆಯಲ್ಲಿದ್ದಾರೆ. ಆದ್ರೆ ರಮ್ಯಾ ಮತ್ತೆ ಸಿನಿಮಾಗೆ ಬಂದ್ರೆ ಸರಿಯಾದ ವೆಲ್ ಕಮ್ ಸಿಕ್ಕುತ್ತಾ ಗೊತ್ತಿಲ್ಲ. ['ದೊಡ್ಮನೆ ಹುಡ್ಗ' ಪುನೀತ್ ಜೊತೆ ಲಕ್ಕಿ ಸ್ಟಾರ್ ರಮ್ಯಾ!]

ಯಾಕಂದ್ರೆ ರಮ್ಯಾ ಸಿನಿಮಾ ಬಿಟ್ಟು ರಾಜಕೀಯಕ್ಕೆ ಹೊರಟ ನಂತರ ಸಿನಿಮಾ ಬೇಡವೇ ಬೇಡ. ಸಿನಿಮಾ ಸಾಕು ರಾಜಕೀಯವನ್ನ ಮುಂದುವರೆಸ್ತೀನಿ. ಇದ್ದರೂ ಮಂಡ್ಯದಲ್ಲೆ ಕೊನೆಯಾದ್ರೂ ಮಂಡ್ಯದಲ್ಲೇ ಅನ್ನೋ ಮಾತುಗಳನ್ನಾಡಿದ್ರು. ಆದ್ರೆ ಚುನಾವಣೆ ಸೋತು ಮರುದಿನವೇ ಮಂಡ್ಯದ ಮನೆ ಖಾಲಿ ಮಾಡಿದ್ರು. ರಮ್ಯಾ ಕಥೆ ಮುಂದೇನು? ರಮ್ಯಾ ಸಿನಿಮಾಗೆ ಬರ್ತಾರಾ? ಬಂದ್ರೆ ಏನಾಗುತ್ತೆ ? ರಮ್ಯಾ ಅರ್ಥ ಮಾಡಿಕೊಳ್ಳಲೇಬೇಕಾದ ಕೆಲವೊಂದು ರಿಯಾಲಿಟಿಗಳು ಇಲ್ಲಿದೆ.

ರಮ್ಯಾ ಹಠಮಾರಿತನ ಬಿಡಬೇಕು

ರಮ್ಯಾ ಬುದ್ಧಿವಂತೆ, ಆದ್ರೆ ಸ್ವಲ್ಪ ಹಠಮಾರಿ ತಾನು ಅಂದುಕೊಂಡಿದ್ದು ಆಗದಿದ್ರೆ ಬೇಗ ಕೋಪ ಮಾಡಿಕೊಳ್ತಾರೆ ಅನ್ನೋದು ಅವರ ಆತ್ಮೀಯರ ಅನಿಸಿಕೆ. ಕೋಪ, ಹಠಮಾರಿತನ ಕಡಿಮೆ ಮಾಡಿಕೊಂಡ್ರೆ ರಮ್ಯಾ ಎಲ್ಲೇ ಹೋದ್ರೂ ಸಕ್ಸಸ್ ಕನ್ಫರ್ಮ್.

ಮಾತಲ್ಲಿ ಹಿಡಿತ ಇದ್ರೆ ರಮ್ಯಾ ಸೇಫ್

ಸಂಸದೆ ಆಗಿದ್ದಾಗ ನಂಗೆ ಸಿನಿಮಾ ಸಾಕು ರಾಜಕೀಯದಲ್ಲಿ ಮುಂದುವರೀತೀನಿ ಅಂದಾಗ ಸ್ಯಾಂಡಲ್ ವುಡ್ ನಲ್ಲಿ ರಮ್ಯಾ ಇರೋದೇ ಹೀಗೆ. ಕಾಲು ನೆಲದ ಮೇಲಿದ್ರೆ ಒಳ್ಳೆಯದು. ಅಲ್ಲಿ ಸೋತರೆ ಮತ್ತೆ ಇಲ್ಲಿಗೆ ಬರ್ಲೇಬೇಕು ಅನ್ನೋದು ರಮ್ಯಾಗೆ ನೆನಪಿಲ್ಲ ಅಂದಿದ್ರು.

ರಮ್ಯಾ ಸೋತಿದ್ದು ಕಾಂಗ್ರೇಸ್ ನಿಂದ

ಸಿನಿಮಾದಲ್ಲಿ ಮೇಕಪ್ ಮಾಡ್ಕೊಂಡು ಏಸಿ ಕ್ಯಾರಾವಾನ್ ನಲ್ಲಿ ಕೂತಿರ್ತಿದ್ದ ರಮ್ಯಾ, ಮಂಡ್ಯದಲ್ಲಿ ಚೂಡಿದಾರ್ ಹಾಕ್ಕೊಂಡು ಬೀದಿಗಿಳಿದಿದ್ರು. ಸ್ವಂತ ಖರ್ಚಲ್ಲಿ ರಸ್ತೆ ಮಾಡಿಸಿದ್ರು. ಗೆದ್ದೇ ಗೆಲ್ತೀನಿ ಅನ್ನೋ ಆತ್ಮ ವಿಶ್ವಾಸ ರಮ್ಯಾರಿಗಿತ್ತು. ಆದ್ರೆ ಮಂಡ್ಯದ ಬಣ ರಾಜಕಾರಣ, ಗುಂಪುಗಳ ಕಿತ್ತಾಟ ರಮ್ಯಾ ಸೋಲಿಗೆ ನೂರಕ್ಕೆ ನೂರು ಕಾರಣವಾಯ್ತು.

ಕಿರಿಕ್ ಮಾಡದಿದ್ರೆ ಒಳ್ಳೆಯದು

ಸಂಸದೆಯಾಗಿದ್ದ ರಮ್ಯಾ ರಾಜಕೀಯದ ಹಳಿತಪ್ಪಿದೆ. ರಾಜಕೀಯ ಸಿನಿಮಾ ಅಲ್ಲ. ಒಂದು ಸಿನಿಮಾ ಸೋತ್ರೆ ಮತ್ತೊಂದು ಸಿನಿಮಾ ಸಿಕ್ಕುತ್ತೆ. ಆದ್ರೆ ರಾಜಕೀಯದಲ್ಲಿ ಒಮ್ಮೆ ಸೋತ್ರೆ ಮತ್ತೆ ಕಷ್ಟ ಕಷ್ಟ. ಈಗಲಾದ್ರೂ ರಮ್ಯಾ ಕಿರಿಕ್ ಮಾಡ್ದಿರೋದು ಒಳ್ಳೆಯದು ಅದು ರಾಜಕೀಯದಲ್ಲಾಗ್ಲಿ ಸಿನಿಮಾದಲ್ಲೇ ಆಗ್ಲಿ ಅಂತಿದ್ದಾರೆ ಎಕ್ಸ್ ಫರ್ಟ್ಸ್.

ಈಗಲೂ ರಮ್ಯಾ ರಾಣೀನೆ

ರಾಜಕೀಯದಲ್ಲಿ ಗೆದ್ದ ಐದು ವರ್ಷ ಮಾತ್ರ ಅಭಿಮಾನಿಗಳಿರ್ತಾರೆ. ಅಧಿಕಾರ ಇರೋವರೆಗೆ ಮಾತ್ರ. ಆದ್ರೆ ಸಿನಿಮಾದಲ್ಲಿ ಅಭಿಮಾನಿಗಳು ಜೀವ ಇರೋವರೆಗೂ ಇರ್ತಾರೆ. ಸಿನಿಮಾದಲ್ಲಿ ಅಭಿಮಾನಿಗಳು ಗೆದ್ರೂ ಪ್ರೀತಿಸ್ತಾರೆ, ಸೋತ್ರೂ ಪ್ರೀತಿಸ್ತಾರೆ. ರಮ್ಯಾ ಸ್ಯಾಂಡಲ್ ವುಡ್ ಗೆ ಬಂದ್ರೆ ರಮ್ಯಾ ಈಗಲೂ ರಾಣೀನೆ.

ಆರ್ಯನ್ ಸಿನಿಮಾ ಬರ್ತಿದೆ

ರಮ್ಯಾ ಅಭಿನಯದ 'ಆರ್ಯನ್' ಸಿನಿಮಾ ಜೂನ್ ಅಥವಾ ಜುಲೈ ತಿಂಗಳಲ್ಲಿ ತೆರೆಗೆ ಬರುತ್ತೆ. ಸಿನಿಮಾ ಗೆದ್ರೆ ರಮ್ಯಾ ಮತ್ತೆ ಚಿತ್ರಪ್ರೇಮಿಗಳಿಗೆ ಇಷ್ಟವಾಗ್ತಾರೆ. ರಾಜಕೀಯದ ರಮ್ಯಾರನ್ನ ಜನರು ಮರೆತುಬಿಡ್ತಾರೆ. ರಮ್ಯಾಗೆ ರಾಜಕೀಯಕ್ಕಿಂತ ಸಿನಿಮಾನೇ ಚೆನ್ನಾಗಿ ಸೂಟಾಗೋದು ಅಂತಿದ್ದಾರೆ ಅಭಿಮಾನಿಗಳು.

English summary
The happy information for Sandalwood Queen fans is she coming back to rock. Despite working for 12 years, the actress turned politician, Ramya claims that she doesn’t miss the glitzy, glamour world of Kannada films any more. Again that magic going to happen soon. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada