Don't Miss!
- News
ಚಿಮ್ಮನಹಳ್ಳಿ ದುರ್ಗಾಂಬಿಕೆ ರಥೋತ್ಸವ: ಜನರ ಮನಸ್ಸು ಬದಲಾಗಲಿ, ರೈತರಿಗೆ ಕನ್ಯೆ ಕೊಡಲಿ, ವೈರಲ್
- Sports
ಆತನಿಗೆ ನೀಡಿದ ಜವಾಬ್ಧಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ: ತ್ರಿಪಾಠಿ ಪ್ರದರ್ಶನಕ್ಕೆ ಬಂಗಾರ್ ಹರ್ಷ
- Finance
ಉದ್ಯೋಗಿಗಳಿಗೆ ಟೊಯೋಟಾ ಗ್ಲಾನ್ಜಾ ಗಿಫ್ಟ್ ನೀಡಿದ ರಮೇಶ್ ಮರಂದ್ ಯಾರು?
- Automobiles
ಭಾರತದಲ್ಲಿ ದುಬಾರಿ ಬೆಲೆಯ ಈ ಕಿಯಾ ಕಾರಿಗೆ ಭಾರೀ ಡಿಮ್ಯಾಂಡ್: ಇನೋವಾಗೆ ಹೆಚ್ಚಿದ ಪೈಪೋಟಿ
- Lifestyle
ಸುಖಿ ಸಂಸಾರ ಅಂತ ಇದ್ದರೂ ಗಂಡ ಅನೈತಿಕ ಸಂಬಂಧ ಬೆಳೆಸುವುದೇಕೆ?
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ದರ್ಶನ್‌ಗೆ 'ಚಾಲೆಂಜಿಂಗ್ ಸ್ಟಾರ್', 'ಡಿಬಾಸ್' ಅನ್ನೋ ಟೈಟಲ್ ಬಂದಿದ್ದು ಯಾವಾಗ?
ಯಾವುದೇ ಚಿತ್ರರಂಗದ ಸೂಪರ್‌ಸ್ಟಾರ್‌ಗಳಿರಲಿ ಅವರಿಗೆ ಅಭಿಮಾನಿಗಳು ಪ್ರೀತಿಯಿಂದ ಒಂದಲ್ಲ ಒಂದು ಹೆಸರನ್ನು ಇಟ್ಟೇ ಇಡುತ್ತಾರೆ. ಕೆಲವೊಮ್ಮೆ ಒಂದರಿಂದ ಎರಡಾಡುತ್ತೆ. ಎರಡರಿಂದ ಹತ್ತು ಟೈಟಲ್ ಬರುತ್ತೆ.
ಕನ್ನಡ ಚಿತ್ರರಂಗದಲ್ಲಿರೋ ಸೂಪರ್‌ಸ್ಟಾರ್‌ಗಳಿಗೂ ಹತ್ತು ಹಲವು ಟೈಟಲ್‌ಗಳಿವೆ. ಅವುಗಳನ್ನು ಅಭಿಮಾನಿಗಳೇ ಪ್ರೀತಿಯಿಂದ ಕೊಟ್ಟಿದ್ದಾರೆ. ಇದರಲ್ಲಿ ದರ್ಶನ್ ಹೆಸರು ಕೂಡ ಇದೆ. ಇವರ ಅಭಿಮಾನಿಗಳು, ಆಪ್ತರು ಪ್ರೀತಿಯಿಂದ ಹಲವು ಬಿರುದುಗಳನ್ನು ಕೊಟ್ಟಿದ್ದಾರೆ.
ಕ್ರೇಜಿ,
ದಚ್ಚು
ಜೊತೆ
ಕಿಚ್ಚನ
ಸೆಲ್ಫಿ:
ಜೂಮ್
ಮಾಡಿ..
ಜೂಮ್
ಮಾಡಿ
ನೋಡ್ತಿದ್ದಾರೆ
ಫ್ಯಾನ್ಸ್!
ದರ್ಶನ್ ಅಭಿಮಾನಿಗಳು ನೀಡಿದ ಎರಡು ಬಿರುದುಗಳು ಇಂದಿಗೂ ಫೇಮಸ್. ಒಂದು ಚಾಲೆಂಜಿಂಗ್ ಸ್ಟಾರ್ ದರ್ಶನ್. ಇನ್ನೊಂದು ಡಿ ಬಾಸ್. ಈ ಎರಡೂ ಬಿರುದುಗಳು ಯಾವಾಗ ಬಂತು? ದರ್ಶನ್ ಮೊದಲ ಹೆಸರು ಹೇಮಂತ್ ಕುಮಾರ್ ಹೌದಾ? ಈ ಬಗ್ಗೆ ದರ್ಶನ್ ಖಡಕ್ ಸಿನಿಮಾ ಅನ್ನೋ ಯೂಟ್ಯೂಬ್ ಚಾನೆಲ್‌ನಲ್ಲಿ ಮನಬಿಚ್ಚಿ ಮಾತಾಡಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ಅನ್ನೋ ಬಿರುದು ಬಂದಿದ್ಯಾವಾಗ?
ದರ್ಶನ್ ಅಭಿಮಾನಿಗಳು ಪ್ರೀತಿಯಿಂದ ಚಾಲೆಂಜಿಂಗ್ ಸ್ಟಾರ್ ಅಂತ ಕರೀತಾರೆ. ಹಲವು ವರ್ಷಗಳಿಂದ ಅಭಿಮಾನಿಗಳ ಬಾಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೇಳಿಸುತ್ತಿದೆ. ಹೀಗಾಗಿ ಈ ಟೈಟಲ್ ಯಾವಾಗ ಬಂತು? ಕೊಟ್ಟಿದ್ದು ಯಾರು? ಅನ್ನೋದು ಪ್ರಶ್ನೆ ಇದ್ದೇ ಇತ್ತು. ಅದಕ್ಕೀಗ ಸ್ವತ: ದರ್ಶನ್ ಪ್ರತಿಕ್ರಿಯೆ ನೀಡಿದ್ದಾರೆ. "ಲಾಲಿ ಹಾಡು ಆದ್ಮೇಲೆ ಅನಿಸುತ್ತೆ. ಲಾಲಿಹಾಡು, ದಾಸ ಟೈಂನಲ್ಲಿ. ನಮ್ಮ ಮೈಸೂರಿನಲ್ಲಿ ನಮ್ಮ ಸ್ನೇಹಿತರೆಲ್ಲ ಸೇರಿ ಯಾವುದಾದರೂ ಒಂದು ಟೈಟಲ್ ಹಾಕಬೇಕು ಅಂತಿದ್ರು. ಅವಾಗ ಚಾಲೆಂಜಿಂಗ್ ಸ್ಟಾರ್ ಅಂತ ಹುಟ್ಟಿಕೊಂಡಿತ್ತು. " ಎಂದು ದರ್ಶನ್ ರಿವೀಲ್ ಮಾಡಿದ್ದಾರೆ.

ದರ್ಶನ್ ಡಿ ಬಾಸ್ ಆಗಿದ್ಯಾವಾಗ?
ಚಾಲೆಂಜಿಂಗ್ ಸ್ಟಾರ್ ಬಳಿಕ ಮತ್ತೊಂದು ಫೇಮಸ್ ಟೈಟಲ್ ಅಂದ್ರೆ ಅಂದು ಡಿ ಬಾಸ್. ಸೋಶಿಯಲ್ ಅಭಿಮಾನಿಗಳು ದರ್ಶನ್ ಅನ್ನೋ ಹೆಸರನ್ನೇ ಮರೆತಂತಿದೆ. ಎಲ್ಲರೂ ಡಿ ಬಾಸ್ ಅಂತಲೇ ಕರೆಯೋಕೆ ಶುರು ಮಾಡಿದ್ದಾರೆ. ಆದರೆ, ದರ್ಶನ್‌ಗೆ ಈ ಟೈಟಲ್ ಯಾವಾಗ ಬಂತು ಅನ್ನೋದು ಗೊತ್ತಿಲ್ಲ. "ಡಿ ಬಾಸ್ ಅದ್ಯಾವಾಗ ಶುರುವಾಯ್ತು ಅಂತಾನೇ ಗೊತ್ತಿಲ್ಲ. ಪಾಪ ಅವರು ಕರೆದು ನಾನು ಓಕೆ ಅಂದೆ ಅಷ್ಟೇ." ಎನ್ನುತ್ತಾರೆ.

'ಎಲ್ಲರೂ ತಪ್ಪು ತಿಳಿದುಕೊಂಡಿದ್ದಾರೆ'
"ಎಲ್ಲರೂ ತಪ್ಪು ತಿಳಿದುಕೊಂಡಿದ್ದಾರೆ. ದರ್ಶನ್ ಅಂತಾನೇ ಇಟ್ಟಿದ್ದು. ರಾಂಗ್ ಇದು. ತೊಟ್ಟಿಲಲ್ಲಿ ಹಾಕುವಾಗ ಎರಡು ಹೆಸರು ಇಡುತ್ತಾರಂತೆ. ಒಂದು ಹೆಸರು. ಇನ್ನೊಂದು ಹೆಸರು ಅಂತ. ಯಾವುದೇ ಸ್ಕೂಲ್ ಸರ್ಟಿಫಿಕೇಟ್ ತಗೀರಿ. ನನ್ನದು ಏನೇ ದಾಖಲೆ ತಗೀರಿ ದರ್ಶನ್ ಅಂತಾನೇ. ನೀವು ಹೋಗ್ಬಿಟ್ಟು ಹೇಮಂತ್ ಕುಮಾರ್ ಅಂದ್ರೆ ಯಾರೂ ಇಲ್ಲ. ಹೇಮಂತ್ ಕುಮಾರ್ ಅನ್ನೋದನ್ನು ಎಲ್ಲೂ ಬಳಸುವುದಿಲ್ಲ." ಎನ್ನುತ್ತಾರೆ ದರ್ಶನ್.

ಸಿನಿಮಾಗೆ ಬಂದ್ಮೇಲೆ ಹೆಸರು ಬದಲಾಗಿಲ್ಲ'
" ನಮ್ಮ ಮನೆಯಲ್ಲಿ ದಿವ್ಯ ದರ್ಶನ್ ದಿನಕರ್ ಅಂತ ಹೆಸರಿಟ್ಟಿದ್ದರು. ಜಯಮಾಲ ಹೇಮಂತ್ ಉಮೇಶ್ ಅಂತ ಜನ ಕರೆದಿದ್ದು. ಅದೇನೋ ಎರಡು ಹೆಸರು ಇಟ್ಟಿರುತ್ತಾರಂತಲ್ಲ. ಆದರೆ, ಎಲ್ಲಾ ಕಡೆನೂ ದರ್ಶನ್ ಅಂತಲೇ ಇರೋದು. ಚಿತ್ರರಂಗಕ್ಕೆ ಬಂದು ನಾನು ಬದಲಾವಣೆ ಮಾಡಿಕೊಂಡಿಲ್ಲ." ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.