For Quick Alerts
  ALLOW NOTIFICATIONS  
  For Daily Alerts

  ಡಿಂಪಲ್ ಕ್ವೀನ್ ರಚಿತಾ ರಾಮ್ ಆಸೆ ಯಾವಾಗ ಈಡೇರುತ್ತೋ.?

  |
  Nata Sarvabhouma Movie : ರಚಿತಾ ರಾಮ್ ಆಸೆ ಈಡೇರುವುದು ಯಾವಾಗ? | Filmibeat Kannada

  ಚಾಲೆಂಜಿಂಗ್ ಸ್ಟಾರ್ ದರ್ಶನ್, ಗೋಲ್ಡನ್ ಸ್ಟಾರ್ ಗಣೇಶ್, ಕಿಚ್ಚ ಸುದೀಪ್, ರೋರಿಂಗ್ ಸ್ಟಾರ್ ಶ್ರೀಮುರಳಿ, ನಟ ರಮೇಶ್ ಅರವಿಂದ್, ಧ್ರುವ ಸರ್ಜಾ, ದುನಿಯಾ ವಿಜಯ್, ರಿಯಲ್ ಸ್ಟಾರ್ ಉಪೇಂದ್ರ, ಪವರ್ ಸ್ಟಾರ್ ಪುನೀತ್ ರಾಜಕುಮಾರ್... ಹೀಗೆ ಸ್ಯಾಂಡಲ್ ವುಡ್ ನ ಟಾಪ್ ನಟರ ಜೊತೆ ಡಿಂಪಲ್ ಕ್ವೀನ್ ರಚಿತಾ ರಾಮ್ ತೆರೆ ಹಂಚಿಕೊಂಡಿದ್ದಾರೆ.

  ಗಾಂಧಿನಗರದಲ್ಲಿ ಬಹು ಬೇಡಿಕೆಯ ನಟಿಯಾಗಿ ಬೆಳೆದಿರುವ ರಚಿತಾ ರಾಮ್ ಗೆ ಒಂದು ಆಸೆ ಇತ್ತಂತೆ. ಏನಪ್ಪಾ ಅಂದ್ರೆ, ಅಣ್ಣಾವ್ರ ಮಗ ಪುನೀತ್ ರಾಜಕುಮಾರ್ ಜೊತೆಗೆ ಡ್ಯಾನ್ಸಿಂಗ್ ನಂಬರ್ ನಲ್ಲಿ ಸಖತ್ತಾಗಿ ಸ್ಟೆಪ್ ಹಾಕಬೇಕು ಎಂಬುದು ರಚಿತಾ ರಾಮ್ ಬಯಕೆ ಆಗಿತ್ತು.

  ಈಗಾಗಲೇ ಪುನೀತ್ ರಾಜಕುಮಾರ್ ಜೊತೆ 'ಚಕ್ರವ್ಯೂಹ' ಮತ್ತು 'ನಟ ಸಾರ್ವಭೌಮ' ಚಿತ್ರಗಳಲ್ಲಿ ರಚಿತಾ ರಾಮ್ ಅಭಿನಯಿಸಿದ್ದಾರೆ. ಆದರೆ ಅವರ ಆಸೆ ಮಾತ್ರ ಈಡೇರಿಲ್ಲ.

  'ನಟ ಸಾರ್ವಭೌಮ' ಶೀರ್ಷಿಕೆ ಕೇಳಿದ ಕೂಡಲೆ ಪುನೀತ್ ಗೆ ಟೆನ್ಷನ್ ಆಗಿತ್ತಂತೆ.!

  'ಚಕ್ರವ್ಯೂಹ' ಮತ್ತು 'ನಟ ಸಾರ್ವಭೌಮ' ಚಿತ್ರಗಳಲ್ಲಿ ಪುನೀತ್ ರಾಜಕುಮಾರ್ ಹಾಗೂ ರಚಿತಾ ರಾಮ್ ಕಾಂಬಿನೇಶನ್ ನಲ್ಲಿ ಹಾಡುಗಳು ಮೂಡಿಬಂದಿವೆ. ಆದರೆ ಫಾಸ್ಟ್ ಸಾಂಗ್ ಗೆ ಪುನೀತ್ ಜೊತೆ ಸ್ಟೈಲಿಶ್ ಸ್ಟೆಪ್ ಹಾಕುವ ಚಾನ್ಸ್ ರಚಿತಾ ರಾಮ್ ಗೆ ಇನ್ನು ಸಿಕ್ಕಿಲ್ಲ.

  'ನಟ ಸಾರ್ವಭೌಮ' ಕ್ರೇಜ್ ಅಂದ್ರೆ ಇದು: ಊರ್ವಶಿಯಲ್ಲಿ ಮುಂಜಾನೆ 4 ಗಂಟೆ ಶೋ ಟಿಕೆಟ್ಸ್ ಸೋಲ್ಡ್ ಔಟ್.!

  ರಚಿತಾ ರಾಮ್ ರವರ ಈ ಆಸೆ ಯಾವಾಗ ಈಡೇರುತ್ತೆ ಗೊತ್ತಿಲ್ಲ. ಆದರೆ ''ಮುಂದೆ ಮತ್ತೆ ಪುನೀತ್ ಜೊತೆ ಅಭಿನಯಿಸುವ ಅವಕಾಶ ಸಿಕ್ಕರೆ, ಅಪ್ಪು ಜೊತೆ ಸೂಪರ್ ಸ್ಟೆಪ್ ಹಾಕುವೆ'' ಎನ್ನುತ್ತಾರೆ ನಟಿ ರಚಿತಾ ರಾಮ್.

  ನಟಸಾರ್ವಭೌಮ ನೋಡಲು ರಜೆ ಕೇಳಿ ವಿದ್ಯಾರ್ಥಿನಿ ಬರೆದ ಪತ್ರ ವೈರಲ್

  ಅಂದಹಾಗೆ ರಚಿತಾ ರಾಮ್ ಮತ್ತು ಪುನೀತ್ ರಾಜಕುಮಾರ್ ಅಭಿನಯದ 'ನಟ ಸಾರ್ವಭೌಮ' ಇದೇ ವಾರ ನಿಮ್ಮೆಲ್ಲರ ಮುಂದೆ ಬರಲಿದೆ. ಇಲ್ಲಿಯವರೆಗೂ ರಚಿತಾ ರಾಮ್ ಕಾಣಿಸಿಕೊಳ್ಳದ ಪಾತ್ರದಲ್ಲಿ ಈ ಬಾರಿ ಅಭಿನಯಿಸಿದ್ದಾರೆ. 'ನಟ ಸಾರ್ವಭೌಮ' ಚಿತ್ರದಲ್ಲಿ ಸಿನಿಪ್ರಿಯರಿಗೆ ರಚಿತಾ ರಾಮ್ ಸರ್ಪ್ರೈಸ್ ಕೊಡೋದು ಗ್ಯಾರಂಟಿ. ಅದನ್ನು ನೋಡಲು ನೀವು ರೆಡಿನಾ.?

  English summary
  When will Kannada Actress Rachita Ram's desire be fulfilled.?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X