»   » ಎತ್ತ ಕಳೆದುಹೋದರು 'ಆ ದಿನಗಳು' ಚೇತನ್?

ಎತ್ತ ಕಳೆದುಹೋದರು 'ಆ ದಿನಗಳು' ಚೇತನ್?

Posted By:
Subscribe to Filmibeat Kannada

ಸ್ಟಾರ್ ಸಿನಿಮಾಗಳದ್ದೇ ಅಬ್ಬರವಾಗಿರುವ ಗಾಂಧಿನಗರದಲ್ಲಿ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುವ ನಟ ಚೇತನ್. ಇನ್ನೂ ಬಿಡಿಸಿ ಹೇಳಬೇಕೆಂದರೆ 'ಆ ದಿನಗಳು' ಚೇತನ್. ಬಣ್ಣದ ಪ್ರಪಂಚಕ್ಕೆ ಕಾಲಿಟ್ಟು 7 ವರ್ಷಗಳಾದರೂ ಚೇತನ್ ನಟಿಸಿರುವುದು ಕೇವಲ 6 ಚಿತ್ರಗಳಲ್ಲಿ. ಎರಡು ವರ್ಷಕ್ಕೊಮ್ಮೆ ಒಂದು ಸಿನಿಮಾ ಮಾಡುವ ಚೇತನ್ ಈ ವರ್ಷ ಗಾಂಧಿನಗರದ ಕಡೆ ಮುಖ ಮಾಡೇ ಇಲ್ಲ.

ಕಳೆದ ವರ್ಷ ರಿಲೀಸ್ ಆಗಿದ್ದ 'ಮೈನಾ' ಸಿನಿಮಾ ಹಿಟ್ ಆದ್ರೂ, ಮತ್ತೆ ಬಣ್ಣ ಹಚ್ಚದ ಚೇತನ್ ಇದೀಗ ಎಲ್ಲಿದ್ದಾರೆ? ಏನು ಮಾಡ್ತಿದ್ದಾರೆ ಅಂದ್ರೆ, 'ಫಿಲ್ಮಿಬೀಟ್ ಕನ್ನಡ'ಗೆ ಚೇತನ್ ಕೊಟ್ಟ ಉತ್ತರ ''ಸಮಾಜಸೇವೆ''.

Chetan Kumar

ನಿಮಗಿದು ಗೊತ್ತಿದೆಯೋ ಇಲ್ಲವೋ, ನಟನೆಗಿಂತ ಹೆಚ್ಚಾಗಿ ಚೇತನ್ ತೊಡಗಿಸಿಕೊಂಡಿರುವುದು ಸಮಾಜಸೇವೆ ಕಾರ್ಯಗಳಲ್ಲಿ. ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆದಿದ್ದರೂ, ಚೇತನ್ ಮೈಸೂರಿನಲ್ಲಿರುವ ಪುಟ್ಟ ಶಾಲೆಯೊಂದರಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದಾರೆ. [ನಾಗಶೇಖರೂ ದಯವಿಟ್ಟು ಟ್ರಾಜಿಡಿ ಬಿಡಪ್ಪ]

ಇದರ ಜೊತೆಗೆ ತಮ್ಮ ಸ್ನೇಹಿತರ ತಂಡದೊಂದಿಗೆ ಅನೇಕ ಜಾಗೃತಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಚೇತನ್ ಸಮಾಜವನ್ನು ತಿದ್ದುವ ಕೆಲಸವನ್ನೂ ಮಾಡುತ್ತಿದ್ದಾರೆ. ಮುಂದಿನ ವಾರ ಮೂಢನಂಬಿಕೆ ವಿರುದ್ಧ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಬೆಳಗಾವಿಯಲ್ಲಿ ಭಾಷಣವನ್ನೂ ಮಾಡೋಕೆ ಸಜ್ಜಾಗುತ್ತಿದ್ದಾರೆ.

myna new

ಚಿತ್ರರಂಗಕ್ಕೆ ಗುಡ್ ಬೈ?
ಸಮಾಜಸೇವೆಯಲ್ಲೇ ಹೆಚ್ಚು ಸಕ್ರಿಯನಾಗಿರುವ ಚೇತನ್ ಚಿತ್ರರಂಗದಿಂದ ಮರೆಯಾಗುತ್ತಿದ್ದಾರಾ ಅಂದ್ರೆ ಚೇತನ್ ಕಡೆಯಿಂದ ಬಂದ ಉತ್ತರ ''ಖಂಡಿತ ಇಲ್ಲ, ಬರುವ ಅವಕಾಶವನ್ನೆಲ್ಲಾ ಒಪ್ಪಿಕೊಳ್ಳೋಕೆ ಆಗಲ್ಲ. ವರ್ಷಕ್ಕೊಂದೇ ಸಿನಿಮಾ ಮಾಡಿದರೂ ಒಳ್ಳೆ ಸಿನಿಮಾ ಮಾಡಬೇಕು'' ಅಂತ ಹೇಳುವ ಚೇತನ್ ತಮ್ಮ ಮುಂದಿನ ಚಿತ್ರಕ್ಕಾಗಿ ತಾವೇ ಕಥೆ-ಚಿತ್ರಕಥೆ ರೆಡಿಮಾಡುತ್ತಿದ್ದಾರಂತೆ.

''60 ವರ್ಷಗಳ ಹಿಂದಿನ ಕಥೆಯನ್ನಿಟ್ಟುಕೊಂಡು ಸ್ಕ್ರಿಪ್ಟ್ ರೆಡಿ ಮಾಡುತ್ತಿದ್ದೀನಿ. ಇದು ನೈಜಕಥೆ ಆಧರಿಸಿರುವ ಸಿನಿಮಾ. ಕಥೆ-ಚಿತ್ರಕಥೆ ನನ್ನದೇ ಆದರೂ ಚಿತ್ರಕ್ಕೆ ಗಾಂಧಿನಗರದ ದೊಡ್ಡ ನಿರ್ದೇಶಕರು ಆಕ್ಷನ್ ಕಟ್ ಹೇಳಲಿದ್ದಾರೆ. ಬಹುದೊಡ್ಡ ನಿರ್ಮಾಪಕರೇ ಚಿತ್ರಕ್ಕೆ ಬಂಡವಾಳ ಹಾಕಲಿದ್ದಾರೆ'', ಅಂತ 'ಫಿಲ್ಮಿಬೀಟ್ ಕನ್ನಡ' ಜೊತೆ ಮಾತನಾಡುತ್ತಾ ಚೇತನ್ ಹೇಳಿದರು.

ಆದರೆ ಆ ದೊಡ್ಡ ನಿರ್ದೇಶಕ ಮತ್ತು ನಿರ್ಮಾಪಕ ಯಾರು ಅನ್ನುವ ಗುಟ್ಟನ್ನ ಚೇತನ್ ಬಿಟ್ಟು ಕೊಡಲಿಲ್ಲ. ಸದ್ಯಕ್ಕೆ ಪ್ರೀ ಪ್ರೊಡಕ್ಷನ್ ಕೆಲಸದಲ್ಲಿ ಬಿಜಿಯಿರುವ ಚೇತನ್ ಇನ್ನೂ ಕೆಲವೇ ದಿನಗಳಲ್ಲಿ ಸರ್ಪ್ರೈಸ್ ನೀಡಲಿದ್ದಾರೆ. (ಫಿಲ್ಮಿಬೀಟ್ ಕನ್ನಡ)

English summary
Actor Chethan of AA Dinagalu fame is not seen in Gandhinagara after Myna became hit. Being very active in humanitarian work, Chethan is presently writing a script based on a real incident.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X