For Quick Alerts
  ALLOW NOTIFICATIONS  
  For Daily Alerts

  'ಚಿಕು-ಬುಕು ರೈಲು' ಬಿಟ್ಟ 'ಜೋಗಿ' ಬೆಡಗಿ ಜೆನ್ನಿಫರ್ ಈಗೆಲ್ಲಿ?

  By Harshitha
  |

  ''ಚಿಕು-ಬುಕು ರೈಲು ನಿಲ್ಲೋದಿಲ್ಲ ಎಲ್ಲೂ, ಯಾಕ್ಹಿಂಗೆ ಓಡ್ತೈತೋ...'' ಸೂಪರ್ ಡ್ಯೂಪರ್ ಹಿಟ್ 'ಜೋಗಿ' ಚಿತ್ರದ ಈ ಹಾಡು ಗೊತ್ತಲ್ವಾ? ಅದೇ ಹಾಡಲ್ಲಿ ಕುಣಿದು ಕುಪ್ಪಳಿಸಿ 'ಜೋಗಪ್ಪನ ಅರಮನೆ ವಿಳಾಸ' ಕೇಳಿದ ನಾಯಕಿ ಜೆನ್ನಿಫರ್ ಕೋತ್ವಾಲ್ ನೆನಪಿದ್ದಾರಾ?

  'ಜೋಗಿ' ಚಿತ್ರದ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ಜೆನ್ನಿಫರ್, ಕನ್ನಡ ಚಿತ್ರರಂಗದಲ್ಲಿ 'ಶ್ರೀ', 'ಮಸ್ತಿ', 'ಸತ್ಯವಾನ್ ಸಾವಿತ್ರಿ', 'ಈ ಬಂಧನ', ಸೇರಿದಂತೆ ಅನೇಕ ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ್ದರು.

  ಶಿವರಾಜ್ ಕುಮಾರ್, ಉಪೇಂದ್ರ, ವಿಜಯ್ ರಾಘವೇಂದ್ರ, ರವಿಚಂದ್ರನ್, ರಮೇಶ್ ಅರವಿಂದ್, ದರ್ಶನ್ ಸೇರಿದಂತೆ ಕನ್ನಡದ ದಿಗ್ಗಜರಿಗೆ ನಾಯಕಿಯಾಗಿ ನಟಿಸಿದ್ದ ಜೆನ್ನಿಫರ್ ಕೋತ್ವಾಲ್, ಎರಡು ವರ್ಷದಿಂದ ಗಾಂಧಿನಗರದಲ್ಲಿ ನಾಪತ್ತೆ! ['ಜೋಗಿ' ನಾಯಕಿ ಜೆನ್ನಿಫರ್ ಕೊತ್ವಾಲ್ ಎಲ್ಲಿ?]

  ಸ್ಯಾಂಡಲ್ ವುಡ್ ನಲ್ಲಿ ಕಳೆದ ಎರಡು ವರ್ಷಗಳಿಂದ ಕಣ್ಮರೆಯಾಗಿದ್ದ ಜೆನ್ನಿಫರ್ ಇದೀಗ ದುಬೈನಲ್ಲಿ ಪ್ರತ್ಯಕ್ಷವಾಗಿದ್ದಾರೆ. ಜನಪ್ರಿಯ ತಾರೆ ಕಿಮ್ ಕರ್ದಾಶಿಯನ್ ಸಹೋದರಿ ಕೆಂಡಾಲ್ ಜೆನ್ನರ್ ಜೊತೆ ದುಬೈನಲ್ಲಿ ಇಯರ್ ಎಂಡ್ ಪಾರ್ಟಿ ಸೆಲೆಬ್ರೇಟ್ ಮಾಡಿದ್ದಾರೆ ಜೆನ್ನಿಫರ್ ಕೋತ್ವಾಲ್.

  ಹಾಗಾದ್ರೆ, ಜೆನ್ನಿಫರ್ ದುಬೈನಲ್ಲೇ ಸೆಟ್ಲ್ ಆಗಿದ್ದಾರಾ? ಈ ಪ್ರಶ್ನೆಗೆ ಉತ್ತರ ಇನ್ನೂ ಸಿಕ್ಕಿಲ್ಲ. ಅದನ್ನ ಜೆನ್ನಿ ಬಹಿರಂಗಗೊಳಿಸಿಲ್ಲ. ಆಗಾಗ ಸ್ನೇಹಿತರೊಂದಿಗೆ ಮುಂಬೈನ ಪಬ್, ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುವ ಜೆನ್ನಿ ಈಗೇನ್ ಮಾಡ್ತಿದ್ದಾರೆ ಅನ್ನೋದೂ ಯಾರಿಗೂ ಗೊತ್ತಿಲ್ಲ. [ದಿನೇಶ್ ಬಾಬು ಮತ್ತೊಂದು ಮದುವೆಗೆ ರೆಡಿಯಾದ್ರು]

  ಸದಾ ಮೋಜು, ಮಸ್ತಿಯಲ್ಲಿ ಇರುವ ಜೆನ್ನಿ ಎರಡು ವರ್ಷದಿಂದ ಯಾವುದೇ ಚಿತ್ರದಲ್ಲಿ ಅಭಿನಯಿಸಿಲ್ಲ. ಅವಕಾಶಗಳ ಕೊರತೆಯೋ, ಇಲ್ಲಾ ಇಷ್ಟದ ಪಾತ್ರ ಲಭಿಸದ ಕಾರಣಕ್ಕೋ, ಒಟ್ನಲ್ಲಿ ಜೆನ್ನಿ ಅಂತೂ ಖಾಲಿ ಇದ್ದಾರೆ. ಟ್ವಿಟ್ಟರ್ ನಲ್ಲಿ ಸಕ್ರಿಯರಾಗಿರುವ ಜೆನ್ನಿ, ಬೆಂಗಳೂರು ಬೆಡಗಿ ಶರ್ಮಿಳಾ ಮಾಂಡ್ರೆ ಗೂ ಆತ್ಯಾಪ್ತೆ.

  ಕಳೆದುಹೋಗಿದ್ದ ಶರ್ಮಿಳಾ ಕೂಡ ಇತ್ತೀಚೆಗಷ್ಟೆ ಮರಳಿ ಟ್ರ್ಯಾಕ್ ಗೆ ಬಂದು ಬಣ್ಣ ಹಚ್ಚಿದ್ದಾರೆ. ಇದೇ ಹಾದಿಯಲ್ಲಿ ಜೆನ್ನಿಫರ್ ಕೋತ್ವಾಲ್ ವಾಪಸ್ಸು ಬರುತ್ತಾರಾ? ಯಾರಾದರೂ ನಿರ್ಮಾಪಕರು ಮನಸ್ಸು ಮಾಡಬೇಕಷ್ಟೆ..! (ಫಿಲ್ಮಿಬೀಟ್ ಕನ್ನಡ)

  English summary
  Do you remember Sandalwood Actress Jennifer Kotwal of Jogi fame? It's been two years, since Jennifer Kotwal has appeared on Big Screen. Where is Jennifer Kotwal now?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X