twitter
    For Quick Alerts
    ALLOW NOTIFICATIONS  
    For Daily Alerts

    ಪಂಜುರ್ಲಿ, ಗುಳಿಗದ ಕಥೆ ಪ್ರಪಂಚಕ್ಕೆ ಹೇಳಿದ ರಿಷಬ್ ಶೆಟ್ಟಿ ನಂಬುವ ದೈವ ಯಾವುದು?

    By ಮಂಗಳೂರು ಪ್ರತಿನಿಧಿ
    |

    ಪ್ರಪಂಚಕ್ಕೆ ತುಳುನಾಡಿನ ಕಾರಣಿಕ ಶಕ್ತಿಗಳಾದ ಪಂಜುರ್ಲಿ ಮತ್ತು ಗುಳಿಗ ದೈವದ ಮಹಿಮೆಯನ್ನು ಸಾರಿ ಹೇಳಿದ ನಟ ನಿರ್ದೇಶಕ ರಿಷಬ್ ಶೆಟ್ಟಿಯನ್ನು ಭಾರತೀಯ ಚಿತ್ರರಂಗ ಕೊಂಡಾಡುತ್ತಿದೆ.

    ರಿಷಬ್ ಸಾಧನೆಯನ್ನು ತಲೈವಾ ರಜನಿಕಾಂತ್ ಆದಿಯಾಗಿ ದಕ್ಷಿಣ ಮತ್ತು ಉತ್ತರ ಭಾರತದ ಸೂಪರ್‌ ಸ್ಟಾರ್ ಗಳು ಸಹ ಕೊಂಡಾಡಿದ್ದಾರೆ. ದೈವದ ಶಕ್ತಿಗಳನ್ನು ತೋರಿಸಿ ಕಾಂತಾರಾದ ಕೀರ್ತಿಯನ್ನು ಜಗದಗಲಕ್ಕೆ ಸಾರಿದ ರಿಷಬ್ ಶೆಟ್ಟಿ ನಂಬುವ ದೈವ ಉಡುಪಿಯ ಕೊರಂಗ್ರಪಾಡಿಯ ಶ್ರೀ ನೀಲಕಂಠ ಮಹಾ ಬಬ್ಬು ಸ್ವಾಮಿ ಅನ್ನೋದು ಬಹುತೇಕ ಮಂದಿಗೆ ತಿಳಿಯದ ವಿಚಾರ.

    ರಿಷಭ್ ಶೆಟ್ಟಿ ಯಾವುದೇ ಚಿತ್ರದಲ್ಲಿ ನಟನೆ ಅಥವಾ ನಿರ್ದೇಶನ ಮಾಡುವ ಮೊದಲು ಉಡುಪಿಯ ಕೊರಂಗ್ರಪಾಡಿಯಲ್ಲಿರುವ ಶ್ರೀ ನೀಲಕಂಠ ಮಹಾ ಬಬ್ಬು ಸ್ವಾಮಿ ದೈವಸ್ಥಾನಕ್ಕೆ ಭೇಟಿ ನೀಡಿ, ಬಬ್ಬು ಸ್ವಾಮಿಯಲ್ಲಿ ಪ್ರಾರ್ಥಿಸಿ ಮತ್ತು ಅಲ್ಲಿರುವ ಕೊರಗಜ್ಜ ಗುಡಿಯಲ್ಲಿ ದೈವದ ಅಪ್ಪಣೆ ಕೇಳುತ್ತಾರೆ. ಅದರಂತೆಯ ಕಾಂತರ ಚಿತ್ರದ ಸಮಯದಲ್ಲಿಯೂ ಇದೇ ಕ್ಷೇತ್ರಕ್ಕೆ ಭೇಟಿ ಚಿತ್ರದ ಯಶಸ್ಸಿಗಾಗಿ ರಿಷಬ್ ಶೆಟ್ಟಿ ಮೊದಲು ಪ್ರಾರ್ಥನೆ ಮಾಡಿಕೊಂಡಿದ್ದಾರೆ. ಕಾಂತರ ಚಿತ್ರ ಬಿಡುಗಡೆಗೂ ಮೊದಲು ಶ್ರೀ ನೀಲಕಂಠ ಮಹಾ ಬಬ್ಬು ಸ್ವಾಮಿ ದೈವಸ್ಥಾನಕ್ಕೆ ಕೃಷ್ಣ ಜನ್ಮಾಷ್ಟಮಿಯ ಸಮಯದಲ್ಲಿ ಭೇಟಿಕೊಟ್ಟು ಪ್ರಾರ್ಥನೆ ಸಲ್ಲಿದ್ದಾರೆ.

    Which Daiva Did Rishab Shetty Believes In And Devote to

    ಇನ್ನು ಈ ಕ್ಷೇತ್ರದ ಬಗ್ಗೆ ರಿಷಭ್ ಶೆಟ್ಟಿಗೆ ತಿಳಿಸಿದ್ದು, ರಿಷಬ್ ಗೆಳೆಯ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಯಂತೆ. 'ಉಳಿದವರು ಕಂಡಂತೆ' ಚಿತ್ರದ ಬಳಿಕ ನಟ ರಕ್ಷಿತ್ ಶೆಟ್ಟಿ ಯಾವುದೇ ಒಳ್ಳೆಯ ಕೆಲಸ ಆರಂಭಿಸುವ ಮೊದಲು ಈ ದೈವಸ್ಥಾನಕ್ಕೆ ಬಂದು ಪ್ರಾರ್ಥನೆ ಸಲ್ಲಿಸುತ್ತಾರೆ. ಬಳಿಕ ಅದೇ ಹಾದಿಯನ್ನು ರಿಷಬ್ ಹಿಡಿದರು ಅಂತಾ ದೇವಸ್ಥಾನ ಆಡಳಿತ ಮಂಡಳಿ ಹೇಳಿದೆ.

    ರಿಷಬ್ ಶೆಟ್ಟಿ 'ರಿಕ್ಕಿ', 'ಕಿರಿಕ್ ಪಾರ್ಟಿ', 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಚಿತ್ರದ ಸಂಧರ್ಭದಲ್ಲೂ‌ ಈ ದೈವವನ್ನು ನೆನವರಿಕೆ ಮಾಡಿಕೊಂಡಿದ್ದರು. ದೈವದ ಅಪ್ಪಣೆಯನ್ನು ಪಡೆದೇ ಕೆಲಸಕ್ಕೆ ಕೈ ಹಾಕುವ ರಿಷಬ್ ಶ್ರಮಜೀವಿ ಜೊತೆಗೆ ಅಪ್ಪಟ ದೈವ ಭಕ್ತ ಅನ್ನೋದು ಕ್ಷೇತ್ರದ ಆಡಳಿತ ಮಂಡಳಿಯವರ ಅಭಿಪ್ರಾಯ.

    English summary
    Rishab Shetty told Guliga and Panjurli Daivas story through Kantara movie. But in which Daiva did Rishab Shetty believes in.
    Wednesday, October 26, 2022, 23:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X