»   » ಎಲ್ಲ ಅಂತೆ-ಕಂತೆಗಳ ಮೂಟೆಗೆ ಗಂಟು ಕಟ್ಟಿದ 'ರಾಜಕುಮಾರ' ನಿರ್ದೇಶಕ.!

ಎಲ್ಲ ಅಂತೆ-ಕಂತೆಗಳ ಮೂಟೆಗೆ ಗಂಟು ಕಟ್ಟಿದ 'ರಾಜಕುಮಾರ' ನಿರ್ದೇಶಕ.!

Posted By:
Subscribe to Filmibeat Kannada

ನಿರ್ದೇಶಕ ಸಂತೋಷ್ ಆನಂದ್ ರಾಮ್ ಆಕ್ಷನ್ ಕಟ್ ಹೇಳಿದ ಎರಡು ಚಿತ್ರಗಳು ಸೂಪರ್ ಡ್ಯೂಪರ್ ಹಿಟ್ ಆಗಿವೆ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಹಾಗೂ ಪುನೀತ್ ರಾಜ್ ಕುಮಾರ್ ನಟನೆಯ 'ರಾಜಕುಮಾರ'... ಎರಡೂ ಚಿತ್ರಗಳು ಬ್ಯಾಕ್ ಟು ಬ್ಯಾಕ್ ಬ್ಲಾಕ್ ಬಸ್ಟರ್ ಆದ್ಮೇಲೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ರವರ ಮುಂದಿನ ಪ್ರಾಜೆಕ್ಟ್ ಮೇಲೆ ಈಗ ಎಲ್ಲರ ದೃಷ್ಟಿ ಇದೆ.[ವಿಮರ್ಶೆ: ಡಾ'ರಾಜಕುಮಾರ' ಹೆಸರು ಉಳಿಸಿದ ಸಿನಿಮಾ]

ಈಗಾಗಲೇ ಸಂತೋಷ್ ಆನಂದ್ ರಾಮ್ ರವರ ಮುಂಬರುವ ಚಿತ್ರದ ಬಗ್ಗೆ ಗಾಂಧಿನಗರದಲ್ಲಿ ಗುಸು ಗುಸು ಆರಂಭವಾಗಿದೆ. ಅಂತೆ-ಕಂತೆ ಪುರಾಣ ತಮ್ಮ ಕಿವಿಗೂ ಬಿದ್ಮೇಲೆ ಅದಕ್ಕೆ ಪೂರ್ಣ ವಿರಾಮ ಇಡಲು ನಿರ್ದೇಶಕ ಸಂತೋಷ್ ಆನಂದ್ ರಾಮ್ ಮುಂದಾಗಿದ್ದಾರೆ. ಮುಂದೆ ಓದಿ....

ಸಂತೋಷ್ ಆನಂದ್ ರಾಮ್ ಮುಂದಿನ ಚಿತ್ರ ಯಾವುದು.?

ಈ ಪ್ರಶ್ನೆಗೆ ಸ್ವತಃ ಸಂತೋಷ್ ಆನಂದ್ ರಾಮ್ ರವರ ಬಳಿಯೂ ಉತ್ತರ ಇಲ್ಲ. ಸ್ಕ್ರಿಪ್ಟ್ ಕೆಲಸ ಇನ್ನೂ ಮುಗಿದಿಲ್ಲ ಎನ್ನುತ್ತಾರೆ ನಿರ್ದೇಶಕ ಸಂತೋಷ್ ಆನಂದ್ ರಾಮ್.[ಸಿಎಂ ಸಿದ್ದರಾಮಯ್ಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಅಣ್ಣಾವ್ರ ಮಗ ಅಪ್ಪು!]

ಮೂರು ವಾರದ ನಂತರ ಉತ್ತರ

''ನನ್ನ ಮುಂದಿನ ಚಿತ್ರದ ಬಗ್ಗೆ ಇನ್ನೂ ಯಾವುದೂ ಫೈನಲೈಸ್ ಆಗಿಲ್ಲ. ಸ್ಕ್ರಿಪ್ಟ್ ಬಗ್ಗೆ ನಿರ್ಧಾರ ಮಾಡಲು ಕನಿಷ್ಟ ಅಂದರೂ ಇನ್ನೂ ಮೂರು ವಾರ ಬೇಕು. ಸುಮ್ಮನೇ ಗಾಳಿ ಸುದ್ದಿ ಹಬ್ಬುತ್ತಿದೆ'' - ಸಂತೋಷ್ ಆನಂದ್ ರಾಮ್, ನಿರ್ದೇಶಕ.

ಕಿವಿಗೆ ಬಿದ್ದ ಗಾಳಿ ಸುದ್ದಿ ಇದು...

ನಿರ್ದೇಶಕ ಸಂತೋಷ್ ಆನಂದ್ ರಾಮ್ ರವರ ಮುಂದಿನ ಚಿತ್ರ 'ರಣರಂಗ'. ಅದಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಾಯಕ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಈ ಸುದ್ದಿ ನಿಜವೋ, ಸುಳ್ಳೋ... ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

'ರಾಜಕುಮಾರ' ವಿಜಯಯಾತ್ರೆ

ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ 'ರಾಜಕುಮಾರ' ಚಿತ್ರದ ವಿಜಯಯಾತ್ರೆ ಮುಂದಿನ ವಾರ ಶುರುವಾಗಲಿದೆ ಅಂತ ನಿರ್ದೇಶಕ ಸಂತೋಷ್ ಆನಂದ್ ರಾಮ್ ತಿಳಿಸಿದ್ದಾರೆ.

English summary
Which is Santhosh Ananddram's next movie?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada