For Quick Alerts
  ALLOW NOTIFICATIONS  
  For Daily Alerts

  ದರ್ಶನ್ 50ನೇ ಚಿತ್ರದ ಬಗ್ಗೆ ನಿಲ್ಲದ ಚರ್ಚೆ: ಗೊಂದಲವೇ ಹೆಚ್ಚು.!

  |
  Yajamana Movie: ದರ್ಶನ್ 50ನೇ ಚಿತ್ರದ ಬಗ್ಗೆ ನಿಲ್ಲದ ಚರ್ಚೆ: ಗೊಂದಲವೇ ಹೆಚ್ಚು.!

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷೆಯ ಚಿತ್ರಗಳು ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ. ದಾಸನ 50ನೇ ಸಿನಿಮಾ ಯಾವುದು ಎಂಬ ಕುತೂಹಲ, ಅನುಮಾನ ಹೆಚ್ಚಾಗಿದೆ. ಅದಕ್ಕೆ ತಕ್ಕಂತೆ ಬೆಳವಣಿಗೆಗಳೂ ಕೂಡ ನಡೆಯುತ್ತಿದೆ.

  ಈ ಮೊದಲು ಪೌರಾಣಿಕ ಸಿನಿಮಾ ಕುರುಕ್ಷೇತ್ರ ದರ್ಶನ್ ಅವರ 50ನೇ ಸಿನಿಮಾ ಆಗುತ್ತೆ ಎಂದು ಘೋಷಿಸಲಾಗಿತ್ತು. ಆದ್ರೆ, ಕುರುಕ್ಷೇತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಯದ ಕಾರಣ ಅಂದುಕೊಂಡಿದ್ದ ದಿನಾಂಕಕ್ಕೆ ಬಂದಿಲ್ಲ. ಅಷ್ಟರೊಳಗೆ 'ಯಜಮಾನ' ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ.

  ದರ್ಶನ್ ಜೀವನ ಚರಿತ್ರೆ ತೆರೆದಿಟ್ಟ ಸಂಗೀತ ನಿರ್ದೇಶಕ ಹರಿಕೃಷ್ಣ

  ಹಾಗ್ನೋಡಿದ್ರೆ, ಈಗ ಕುರುಕ್ಷೇತ್ರಕ್ಕಿಂತ ಮುಂಚೆ ಯಜಮಾನ ಸಿನಿಮಾನೇ ಬರುತ್ತೆ ಎನ್ನಲಾಗುತ್ತಿದೆ. ಆದ್ರೆ, ಮುನಿರತ್ನ ಅವರು ಕುರುಕ್ಷೇತ್ರ ರಿಲೀಸ್ ದಿನಾಂಕವನ್ನ ಪ್ರಕಟ ಮಾಡಿದ್ದಾರೆ. ಹೀಗಾಗಿ, ಈಗಲೂ 50ನೇ ಸಿನಿಮಾ ಯಾವುದು ಎಂಬ ಗೊಂದಲದಲ್ಲಿದ್ದಾರೆ ಡಿ ಫ್ಯಾನ್ಸ್. ಅಷ್ಟಕ್ಕೂ, ಈ ಅನುಮಾಗಳು ಬರಲು ಕಾರಣವೇನು? ಮುಂದೆ ಓದಿ.....

  ಯುಗಾದಿಗೆ ಕುರುಕ್ಷೇತ್ರ?

  ಯುಗಾದಿಗೆ ಕುರುಕ್ಷೇತ್ರ?

  ನಿರ್ಮಾಪಕ ಮುನಿರತ್ನ ಅವರು ಹೇಳಿರುವ ಪ್ರಕಾರ, ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾ ಯುಗಾದಿ ಹಬ್ಬದ ಪ್ರಯುಕ್ತ ಏಪ್ರಿಲ್ 5 ರಂದು ತೆರೆಕಾಣಲಿದೆ. ಈಗ ಪ್ರಶ್ನೆ ಮೂಡುತ್ತಿರುವುದು ಅದಕ್ಕೂ ಮುಂಚೆ ಯಜಮಾನ ರಿಲೀಸ್ ಆಗುತ್ತಾ ಅಂತ?

  ಬೆಟ್ಟಿಂಗ್ ಕಟ್ಟುವ ಆತುರದಲ್ಲಿ 'ಕುರುಕ್ಷೇತ್ರ' ರಿಲೀಸ್ ದಿನಾಂಕ ಹೇಳಿದ ಮುನಿರತ್ನ

  ಸೆನ್ಸಾರ್ ಮುಗಿಸಿದ 'ಯಜಮಾನ'

  ಸೆನ್ಸಾರ್ ಮುಗಿಸಿದ 'ಯಜಮಾನ'

  ಈಗಾಗಲೇ ಹಾಡುಗಳನ್ನ ರಿಲೀಸ್ ಮಾಡಿರುವ ಯಜಮಾನ ಫೆಬ್ರವರಿ 10 ರಂದು ಟ್ರೈಲರ್ ಬಿಡುಗಡೆ ಮಾಡುತ್ತಿದೆ. ನಿನ್ನೆಯಷ್ಟೇ ಸೆನ್ಸಾರ್ ಮುಗಿಸಿರುವ ಯಜಮಾನ ಯು/ಎ ಪ್ರಮಾಣಪತ್ರ ಪಡೆದುಕೊಂಡಿದೆ. ಅಲ್ಲಿಗೆ ಯಜಮಾನ ಚಿತ್ರಮಂದಿರಕ್ಕೆ ಬರಲು ಸಿದ್ಧವಾಗಿದೆ. ಯಜಮಾನನ ವೇಗ ನೋಡಿದ್ರೆ ಕುರುಕ್ಷೇತ್ರ ಚಿತ್ರಕ್ಕೂ ಮೊದಲೇ ಬರುತ್ತಾ ಎಂಬ ಅನುಮಾನ ಕಾಡ್ತಿದೆ.

  ಯಜಮಾನ D51 ಆಗಲಿದೆ

  ಯಜಮಾನ D51 ಆಗಲಿದೆ

  ಹಾಡು, ಟ್ರೈಲರ್, ಸೆನ್ಸಾರ್ ಮುಗಿಸಿದ್ರು ಯಜಮಾನ ಬರೋದು ಸ್ವಲ್ಪ ತಡವಾಗುತ್ತೆ. ಯಾಕಂದ್ರೆ, 50ನೇ ಸಿನಿಮಾ ಕುರುಕ್ಷೇತ್ರವೇ ಮೊದಲು ಎನ್ನಲಾಗಿದೆ. ಯುಗಾದಿಗೆ ಕುರುಕ್ಷೇತ್ರ ಬಂದ್ರೆ, ಅದಾದ ಬಳಿಕ ಯಜಮಾನ ಬರ್ತಾನೆ. ಇಲ್ಲಿಯವರೆಗೂ ಯಜಮಾನ 51ನೇ ಸಿನಿಮಾ ಎಂದೇ ಗುರುತಿಸಿಕೊಳ್ಳುತ್ತಿದೆ.

  ಕುರುಕ್ಷೇತ್ರ ಮುಂದಕ್ಕೆ ಹೋದರೇ....?

  ಕುರುಕ್ಷೇತ್ರ ಮುಂದಕ್ಕೆ ಹೋದರೇ....?

  ಎಲ್ಲ ಅಂದುಕೊಂಡಂತೆ ಆಗಿದ್ದರೇ ಕುರುಕ್ಷೇತ್ರ ಇಷ್ಟೋತ್ತಿಗಾಗಲೇ ತೆರೆಗೆ ಬರಬೇಕಿತ್ತು. 3ಡಿ ಕೆಲಸ ನಡೆಯುತ್ತಿದ್ದು, ವಿಳಂಬವಾಗ್ತಿದೆ. ಒಂದು ವೇಳೆ ಈ ಕೆಲಸ ಇನ್ನೂ ಲೇಟ್ ಆದ್ರೆ ಕುರುಕ್ಷೇತ್ರ ಚಿತ್ರಕ್ಕೂ ಮೊದಲೇ ಯಜಮಾನ ಬರೋದು ಖಚಿತ.

  'ಕುರುಕ್ಷೇತ್ರ' ನೋಡಿದ ರಾಕ್ ಲೈನ್ ಏನಂದ್ರು, ಜಗ್ಗೇಶ್ ನುಡಿದ ಭವಿಷ್ಯವೇನು.?

  ದರ್ಶನ್ ಹುಟ್ಟುಹಬ್ಬಕ್ಕೆ ಸ್ಪಷ್ಟನೆ ಸಿಗಬಹುದು

  ದರ್ಶನ್ ಹುಟ್ಟುಹಬ್ಬಕ್ಕೆ ಸ್ಪಷ್ಟನೆ ಸಿಗಬಹುದು

  ಈ ಎಲ್ಲ ಗೊಂದಲಗಳಿಗೂ ದರ್ಶನ್ ಹುಟ್ಟುಹಬ್ಬದಂದು ಸ್ಪಷ್ಟನೆ ಸಿಗಬಹುದು ಎಂಬ ನಿರೀಕ್ಷೆ ಇದೆ. ಯಜಮಾನ, ಕುರುಕ್ಷೇತ್ರ, ಒಡೆಯ, ಗಂಡುಗಲಿ ಮದಕರಿ, ರಾಬರ್ಟ್ ಚಿತ್ರಗಳಿಂದ ಡಿ ಬಾಸ್ ಬರ್ತಡೇಗೆ ಟೀಸರ್, ಟ್ರೈಲರ್, ಪೋಸ್ಟರ್ ರಿಲೀಸ್ ಮಾಡಬಹುದು. ಈ ವೇಳೆಯಲ್ಲಿ ರಿಲೀಸ್ ಡೇಟ್ ಘೋಷಣೆ ಮಾಡಿದ್ರೂ ಅಚ್ಚರಿಯಿಲ್ಲ.

  English summary
  Kurukshetra and yajamana which is the challenging star darshan's 50th movie?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X