twitter
    For Quick Alerts
    ALLOW NOTIFICATIONS  
    For Daily Alerts

    2012ರಿಂದ 2022ರವರೆಗೆ ಸೈಮಾ ಬೆಸ್ಟ್ ಸಿನಿಮಾ ಪ್ರಶಸ್ತಿ ಗೆದ್ದ ಕನ್ನಡ ಚಿತ್ರಗಳು: ಯಾವ ನಟನ ಚಿತ್ರಗಳು ಹೆಚ್ಚು?

    |

    ಸೌತ್ ಇಂಡಿಯಾ ಇಂಟರ್‌ನ್ಯಾಷನಲ್ ಮೂವಿ ಅವಾರ್ಡ್ಸ್ ( ಸೈಮಾ ) 2012ರಲ್ಲಿ ಆರಂಭವಾದ ಈ ಸಿನಿಮಾ ಪ್ರಶಸ್ತಿ ಸದ್ಯ ದಕ್ಷಿಣ ಭಾರತ ಚಿತ್ರರಂಗದ ಪ್ರತಿಷ್ಠಿತ ಪ್ರಶಸ್ತಿ ಎನಿಸಿಕೊಂಡಿದೆ. ಈ ಅವಾರ್ಡ್ಸ್‌ನಲ್ಲಿ ದಕ್ಷಿಣ ಭಾರತದ ಎಲ್ಲಾ ನಾಲ್ಕೂ ಭಾಷೆಯ ಸಿನಿಮಾಗಳಿಗೆ ಪ್ರತ್ಯೇಕವಾಗಿ ಪ್ರಶಸ್ತಿಯನ್ನು ನೀಡಲಾಗುತ್ತದೆ. ಹೀಗೆ ನಡೆಯುವ ಸೈಮಾ ಇದೀಗ ದಶಕವನ್ನು ಪೂರೈಸಿರುವುದು ವಿಶೇಷವಾಗಿದೆ.

    ಇನ್ನು 2012ರಲ್ಲಿ 2011ನೇ ಸಾಲಿನಲ್ಲಿ ಬಿಡುಗಡೆಯಾದ ಸಿನಿಮಾಗಳಿಗೆ ಪ್ರಶಸ್ತಿಯನ್ನು ನೀಡಲಾಗಿತ್ತು. ಅದೇ ರೀತಿ ಪ್ರತೀ ವರ್ಷವೂ ಸಹ ನಡೆಯುತ್ತಾ ಬಂದಿದ್ದು ಸದ್ಯ ಈ ವರ್ಷ ನಡೆದ ಸೈಮಾ ಕಾರ್ಯಕ್ರಮ ಹನ್ನೊಂದನೇ ಬಾರಿಗೆ ನಡೆದ ಸೈಮಾ ಅವಾರ್ಡ್ಸ್ ಕಾರ್ಯಕ್ರಮವಾಗಿದೆ. ಈ ಬಾರಿ ಕನ್ನಡದ ಪೈಕಿ ದರ್ಶನ್ ಅಭಿನಯದ ರಾಬರ್ಟ್ ಹತ್ತು ಕೆಟಗರಿಯಲ್ಲಿ, ರಾಜ್ ಬಿ ಶೆಟ್ಟಿ ನಿರ್ದೇಶನದ ಗರುಡ ಗಮನ ವೃಷಭ ವಾಹನ ಎಂಟು ಕೆಟಗರಿಗಳಲ್ಲಿ ಹಾಗೂ ಪುನೀತ್ ರಾಜ್‌ಕುಮಾರ್ ಅಭಿನಯದ ಯುವರತ್ನ ಚಿತ್ರ ಏಳು ಕೆಟಗರಿಗಳಲ್ಲಿ ನಾಮಿನೇಟ್ ಆಗಿದ್ದವು.

    ಈ ಪೈಕಿ ಪುನೀತ್ ರಾಜ್‌ಕುಮಾರ್ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾದರೆ, ರಾಬರ್ಟ್ ನಿರ್ದೇಶಕ ತರುಣ್ ಸುಧೀರ್ ಅತ್ಯುತ್ತಮ ನಿರ್ದೇಶಕನಾಗಿ ಹೊರಹೊಮ್ಮಿದರು ಹಾಗೂ ರಾಜ್ ಬಿ ಶೆಟ್ಟಿ ನಿರ್ದೇಶನದ ಗರುಡ ಗಮನ ವೃಷಭ ವಾಹನ ಸಿನಿಮಾ ಈ ಬಾರಿಯ ಸೈಮಾದಲ್ಲಿ ಬೆಸ್ಟ್ ಸಿನಿಮಾವೆಂದು ಪ್ರಶಸ್ತಿ ಪಡೆಯಿತು. ಹೀಗೆ ಈ ಬಾರಿಯ ಅತ್ಯುತ್ತಮ ಚಿತ್ರ ಪ್ರಶಸ್ತಿ ಗರುಡ ಗಮನ ವೃಷಭ ವಾಹನ ಚಿತ್ರದ ಪಾಲಾದರೆ, ಇಲ್ಲಿಯವರೆಗೂ ನಡೆದಿರುವ ಉಳಿದ ಸೈಮಾದಲ್ಲಿ ಯಾವ ಚಿತ್ರಗಳು ಬೆಸ್ಟ್ ಸಿನಿಮಾ ಎನಿಸಿಕೊಂಡಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ.

    2012ರಿಂದ 2022ರವರೆಗೆ ಸೈಮಾ ಪ್ರಶಸ್ತಿ ಗೆದ್ದಿರುವ ಕನ್ನಡ ಚಿತ್ರಗಳ ಪಟ್ಟಿ

    2012ರಿಂದ 2022ರವರೆಗೆ ಸೈಮಾ ಪ್ರಶಸ್ತಿ ಗೆದ್ದಿರುವ ಕನ್ನಡ ಚಿತ್ರಗಳ ಪಟ್ಟಿ

    2012 - ಸಾರಥಿ

    2013 - ಕಠಾರಿವೀರ ಸುರಸುಂದರಾಂಗಿ

    2014 - ಮೈನಾ

    2015 - ಮಿ & ಮಿ ರಾಮಾಚಾರಿ

    2016 - ಮೈತ್ರಿ

    2017 - ಕಿರಿಕ್ ಪಾರ್ಟಿ

    2018 - ರಾಜಕುಮಾರ

    2019 - ಕೆಜಿಎಫ್ ಚಾಪ್ಟರ್ 1

    2020 - ಯಜಮಾನ

    2021 - ಲವ್ ಮಾಕ್‌ಟೇಲ್

    2022 - ಗರುಡ ಗಮನ ವೃಷಭ ವಾಹನ

    ಪುನೀತ್ ಅಭಿನಯದ ಎರಡು ಚಿತ್ರಗಳು

    ಪುನೀತ್ ಅಭಿನಯದ ಎರಡು ಚಿತ್ರಗಳು

    ಇಲ್ಲಿಯವರೆಗೂ ನಡೆದಿರುವ ಸೈಮಾ ಕಾರ್ಯಕ್ರಮಗಳ ಪೈಕಿ ಪುನೀತ್ ರಾಜ್‌ಕುಮಾರ್ ಅಭಿನಯದ ಮೈತ್ರಿ ಹಾಗೂ ರಾಜಕುಮಾರ ಈ ಎರಡು ಚಿತ್ರಗಳು ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿವೆ. 2016ರಲ್ಲಿ ಮೈತ್ರಿ ಚಿತ್ರ ಹಾಗೂ 2018ರಲ್ಲಿ ರಾಜಕುಮಾರ ಚಿತ್ರಗಳು ಸೈಮಾ ಪ್ರಶಸ್ತಿಯನ್ನು ಪಡೆದವು.

    ಯಶ್ ಮತ್ತು ದರ್ಶನ್ ಅವರದ್ದೂ ಎರಡು ಚಿತ್ರಗಳು

    ಯಶ್ ಮತ್ತು ದರ್ಶನ್ ಅವರದ್ದೂ ಎರಡು ಚಿತ್ರಗಳು

    ಯಶ್ ಅಭಿನಯದ ಮಿ & ಮಿ ರಾಮಾಚಾರಿ ಹಾಗೂ ಕೆಜಿಎಫ್ ಚಾಪ್ಟರ್ 1 ಈ ಎರಡು ಚಿತ್ರಗಳು ಸೈಮಾ ಅತ್ಯುತ್ತಮ ಚಿತ್ರಗಳನ್ನು ಪಡೆದುಕೊಂಡಿವೆ. ಇನ್ನು ಚಾಲೆಂಜಿಂಗ್ ಸ್ಟಾರ್ ಅಭಿನಯದ ಸಾರಥಿ ಮತ್ತು ಯಜಮಾನ ಚಿತ್ರಗಳು ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿವೆ. ಈ ಮೂಲಕ ಅಪ್ಪು, ಯಶ್ ಹಾಗೂ ದರ್ಶನ್ ಸೈಮಾ ಅತ್ಯುತ್ತಮ ಚಿತ್ರ ಪ್ರಶಸ್ತಿಯಲ್ಲಿ ಸಮಬಲ ಸಾಧಿಸಿವೆ.

    ಎರಡು ಬಾರಿ ಗೆದ್ದಿರುವ ನಿರ್ಮಾಣ ಸಂಸ್ಥೆ ಹೊಂಬಾಳೆ ಮಾತ್ರ

    ಎರಡು ಬಾರಿ ಗೆದ್ದಿರುವ ನಿರ್ಮಾಣ ಸಂಸ್ಥೆ ಹೊಂಬಾಳೆ ಮಾತ್ರ

    ಸದ್ಯ ಕನ್ನಡ ಚಿತ್ರರಂಗದ ಬೆಸ್ಟ್ ಬ್ಯಾನರ್ ಎಂದ ಕೂಡಲೇ ಎಲ್ಲರ ಬಾಯಲ್ಲೂ ಬರುವ ಒಂದೇ ಹೆಸರು ಹೊಂಬಾಳೆ ಫಿಲ್ಮ್ಸ್. ನಿನ್ನಿಂದಲೇ ಮತ್ತು ಮಾಸ್ಟರ್‌ಪೀಸ್ ಚಿತ್ರಗಳನ್ನು ನಿರ್ಮಿಸಿದ್ದ ಹೊಂಬಾಳೆ ಫಿಲ್ಮ್ಸ್ ತಿರುವು ಪಡೆದುಕೊಂಡದ್ದು ರಾಜಕುಮಾರ ಮೂಲಕ. ಇಂಡಸ್ಟ್ರಿ ಹಿಟ್ ರಾಜಕುಮಾರಗೆ 2018ರ ಸೈಮಾದಲ್ಲಿ ಬೆಸ್ಟ್ ಸಿನಿಮಾ ಪ್ರಶಸ್ತಿ ಲಭಿಸಿತು ಹಾಗೂ ಇದೇ ಹೊಂಬಾಳೆ ನಿರ್ಮಾಣದ ಮತ್ತೊಂದು ದೊಡ್ಡ ಸಿನಿಮಾ ಕೆಜಿಎಫ್ ಚಾಪ್ಟರ್ 1 ಸಹ 2019ರ ಸೈಮಾದಲ್ಲಿ ಬೆಸ್ಟ್ ಸಿನಿಮಾ ಪ್ರಶಸ್ತಿ ಗೆದ್ದಿದೆ. ಈ ಸೈಮಾ ಇತಿಹಾದಲ್ಲಿ ಬೆಸ್ಟ್ ಸಿನಿಮಾ ಪ್ರಶಸ್ತಿಯನ್ನು ಎರಡು ಬಾರಿ ಗೆದ್ದಿರುವ ಏಕೈಕ ನಿರ್ಮಾಣ ಸಂಸ್ಥೆ ಎಂಬ ದಾಖಲೆಯನ್ನು ಹೊಂಬಾಳೆ ಫಿಲ್ಮ್ಸ್ ಹೊಂದಿದೆ.

    English summary
    Which Kannada actor's movies has won SIIMA Best Movie awards for most times? Take a look
    Monday, September 12, 2022, 19:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X