twitter
    For Quick Alerts
    ALLOW NOTIFICATIONS  
    For Daily Alerts

    'ಪೋಕಿರಿ'- 'ಜಲ್ಸಾ' ಹಿಟ್: ಕನ್ನಡದ ಯಾವ್ಯಾವ ಕಲ್ಟ್ ಸಿನಿಮಾ 4K ವರ್ಷನ್‌ನಲ್ಲಿ ನೋಡಲು ಬಯಸುತ್ತೀರಾ?

    |

    ಟಾಲಿವುಡ್‌ನಲ್ಲಿ ಹೊಸ ಟ್ರೆಂಡ್ ಶುರುವಾಗಿದೆ. ಸ್ಟಾರ್‌ಗಳ ಹುಟ್ಟುಹಬ್ಬದ ಸಂಭ್ರಮದಲ್ಲಿ ಹಳೇ ಸೂಪರ್ ಹಿಟ್ ಚಿತ್ರವನ್ನು ಹೊಸ ತಂತ್ರಜ್ಞಾನದಲ್ಲಿ ರೀ ರಿಲೀಸ್ ಮಾಡ್ತಿದ್ದಾರೆ. ಮಹೇಶ್ ಬಾಬು, ಪವನ್ ಕಲ್ಯಾಣ್ ಹುಟ್ಟುಹಬ್ಬಕ್ಕೆ 'ಪೋಕಿರಿ' ಹಾಗೂ 'ಜಲ್ಸಾ' ಸಿನಿಮಾಗಳು 4K ವರ್ಷನ್‌ನಲ್ಲಿ ರಿಲೀಸ್ ಆಗಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಕನ್ನಡದ ಸಿನಿರಸಿಕರು ಕೂಡ ಹಳೇ ಕ್ಲಾಸಿಕ್ ಸಿನಿಮಾಗಳನ್ನು ಹೊಸ ರೂಪದಲ್ಲಿ ರಿಲೀಸ್ ಮಾಡಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಮನವಿ ಮಾಡ್ತಿದ್ದಾರೆ.

    ಕನ್ನಡದಲ್ಲೂ ಕೆಲ ಹಳೇ ಸಿನಿಮಾಗಳನ್ನು ಹೊಸ ತಂತ್ರಜ್ಞಾನದ ಸಹಾಯದಿಂದ ಫ್ರೆಶ್ ಆಗಿ ರೀ ರಿಲೀಸ್ ಮಾಡಲಾಗಿತ್ತು. 'ನಾಗರಹಾವು', 'ಕಸ್ತೂರಿ ನಿವಾಸ', 'ಮೆಜೆಸ್ಟಿಕ್' ಸೇರಿದಂತೆ ಒಂದಷ್ಟು ಸಿನಿಮಾಗಳನ್ನು ಮತ್ತೊಮ್ಮೆ ಪ್ರೇಕ್ಷಕರ ಮುಂದೆ ತರಲಾಗಿತ್ತು. ಟಾಲಿವುಡ್‌ನಲ್ಲಿ 'ಪೋಕಿರಿ' ಹಾಗೂ 'ಜಲ್ಸಾ' ಸಿನಿಮಾಗಳು ಸಕ್ಸಸ್ ಕಂಡ ಬೆನ್ನಲ್ಲೇ ಕನ್ನಡದ ಮತ್ತಷ್ಟು ಕಲ್ಟ್ ಸಿನಿಮಾಗಳನ್ನು 4K ವರ್ಷನ್‌ನಲ್ಲಿ ರೀ-ರಿಲೀಸ್ ಮಾಡಬೇಕು ಎಂದು ಕೆಲವರು ಕೇಳ್ತಿದ್ದಾರೆ.

    ಪವನ್ ಕಲ್ಯಾಣ್ ಸಿನಿಮಾದ 3 ಕೋಟಿ ಕಲೆಕ್ಷನ್ ಮುರಿದು ಹಾಕಲು ರೆಡಿಯಾಗ್ತಿದೆ ಪ್ರಭಾಸ್ ಸಿನಿಮಾ!ಪವನ್ ಕಲ್ಯಾಣ್ ಸಿನಿಮಾದ 3 ಕೋಟಿ ಕಲೆಕ್ಷನ್ ಮುರಿದು ಹಾಕಲು ರೆಡಿಯಾಗ್ತಿದೆ ಪ್ರಭಾಸ್ ಸಿನಿಮಾ!

    'ಓಂ', 'ಎಕೆ47', 'ಅಪ್ಪು' ರೀತಿಯ ಬ್ಲಾಕ್‌ಬಸ್ಟರ್‌ ಸಿನಿಮಾಗಳನ್ನು 4K ವರ್ಷನ್ ಹಾಗೂ ಡಿಟಿಎಸ್ ಸೌಂಡ್‌ನಲ್ಲಿ ರಿಲೀಸ್ ಮಾಡಿ ಸೂಪರ್ ಹಿಟ್ ಆಗುವುದು ಗ್ಯಾರೆಂಟಿ. ಅಂದು ಥಿಯೇಟರ್‌ನಲ್ಲಿ ನೋಡದೇ ಇರುವವರು ಈಗ ನೋಡಿ ಎಂಜಾಯ್ ಮಾಡ್ತಾರೆ. ಕನ್ನಡದಲ್ಲಿ ಯಾವುದೇ ದೊಡ್ಡ ದೊಡ್ಡ ಸಿನಿಮಾಗಳು ಇಲ್ಲದೇ ಇರುವ ಸಮಯದಲ್ಲಿ ಇಂತಹ ಪ್ರಯತ್ನ ಮಾಡಬಹುದು ಎಂದು ಸಲಹೆ ನೀಡುತ್ತಿದ್ದಾರೆ.

    ಉಪ್ಪಿ ಸಿನಿಮಾಗಳಿಗೆ ಮೊದಲ ಆದ್ಯತೆ

    ಉಪ್ಪಿ ಸಿನಿಮಾಗಳಿಗೆ ಮೊದಲ ಆದ್ಯತೆ

    ಕನ್ನಡದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಸಿನಿಮಾಗಳನ್ನು ಹೊಸ ತಂತ್ರಜ್ಞಾನದಲ್ಲಿ ನೋಡಲು ಸಿನಿರಸಿಕರು ಹೆಚ್ಚು ಇಷ್ಟಪಡುತ್ತಿದ್ದಾರೆ. ಉಪ್ಪಿ ನಿರ್ದೇಶನ 'ಓಂ', 'ಎ','ಉಪೇಂದ್ರ' ಸಿನಿಮಾಗಳು ಲಿಸ್ಟ್‌ನಲ್ಲಿ ಮೊದಲ ಸ್ಥಾನದಲ್ಲಿದೆ. 'ಎ' ಹಾಗೂ 'ಉಪೇಂದ್ರ' ಸಿನಿಮಾಗಳಲ್ಲಿ ಸ್ವತಃ ರಿಯಲ್ ಸ್ಟಾರ್ ಹೀರೊ ಆಗಿ ನಟಿಸಿದ್ದರು. ಇನ್ನು 'ಓಂ' ಸಿನಿಮಾ ಈಗಾಗಲೇ ಸಾಕಷ್ಟು ಬಾರಿ ರೀರಿಲೀಸ್ ಆಗಿ ಸಕ್ಸಸ್ ಕಂಡಿದೆ. ಇವತ್ತಿನ ಯುವ ಸಿನಿರಸಿಕರು ಈ ಸಿನಿಮಾಗಳನ್ನು ಥಿಯೇಟರ್‌ನಲ್ಲಿ ನೋಡಿಲ್ಲ. ಮತ್ತೆ ಬಂದರೆ ಖಂಡಿತ ಒಳ್ಳೆ ರೆಸ್ಪಾನ್ಸ್ ಸಿಗಲಿದೆ.

    4K ವರ್ಷನ್‌ನಲ್ಲಿ 'ಅಪ್ಪು'

    4K ವರ್ಷನ್‌ನಲ್ಲಿ 'ಅಪ್ಪು'

    20 ವರ್ಷಗಳ ಹಿಂದೆ ತೆರೆಗೆ ಬಂದಿದ್ದ 'ಅಪ್ಪು' ಚಿತ್ರವನ್ನು ಮರೆಯೋಕೆ ಸಾಧ್ಯವಿಲ್ಲ. ಪುರಿ ಜಗನ್ನಾಥ್ ನಿರ್ದೇಶನದ ಈ ರೊಮ್ಯಾಂಟಿಕ್ ಆಕ್ಷನ್‌ ಸಿನಿಮಾ ಸೂಪರ್ ಹಿಟ್ ಆಗಿತ್ತು. ಹೀರೊ ಆಗಿ ಮೊದಲ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಸಂಚಲನ ಸೃಷ್ಟಿಸಿದ್ದರು. ಅಪ್ಪು ಡ್ಯಾನ್ಸ್, ಫೈಟ್, ಆಕ್ಟಿಂಗ್ ನೋಡಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದರು. 4K ತಂತ್ರಜ್ಞಾನದಲ್ಲಿ ಈ ಸಿನಿಮಾ ಮತ್ತೆ ತೆರೆಕಂಡರೆ ಬಾಕ್ಸಾಫೀಸ್ ಶೇಕ್ ಆಗೋದು ಗ್ಯಾರೆಂಟಿ.

    'ಪೋಕಿರಿ' ಹಾಗೂ 'ಜಲ್ಸಾ' ದಾಖಲೆ

    'ಪೋಕಿರಿ' ಹಾಗೂ 'ಜಲ್ಸಾ' ದಾಖಲೆ

    ಆಗಸ್ಟ್ 9ಕ್ಕೆ ಸೂಪರ್ ಸ್ಟಾರ್ ಮಹೇಶ್ ಬಾಬು ಹುಟ್ಟುಹಬ್ಬ ಸಂಭ್ರಮದಲ್ಲಿ 'ಪೋಕಿರಿ' ಸಿನಿಮಾ ರೀ ರಿಲೀಸ್ ಆಗಿತ್ತು. 300 ಶೋಗಳು ಹೌಸ್‌ಫುಲ್‌ ಆಗಿ 1.76 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಎಲ್ಲರ ಹುಬ್ಬೇರಿಸಿತ್ತು. ಇನ್ನು ಸೆಪ್ಟೆಂಬರ್ 2ಕ್ಕೆ ಪವನ್ ಕಲ್ಯಾಣ್ ಬರ್ತ್‌ಡೇ ಸ್ಪೆಷಲ್ಲಾಗಿ 'ಜಲ್ಸಾ' ಸಿನಿಮಾ ತೆರೆಕಂಡು 3.20 ಕೋಟಿ ರೂ. ಗಳಿಸಿ ದಾಖಲೆ ಬರೆದಿದೆ.

    ಪ್ರಭಾಸ್ ಹುಟ್ಟುಹಬ್ಬಕ್ಕೆ 'ಬಿಲ್ಲಾ' ಸಿನಿಮಾ

    ಪ್ರಭಾಸ್ ಹುಟ್ಟುಹಬ್ಬಕ್ಕೆ 'ಬಿಲ್ಲಾ' ಸಿನಿಮಾ

    'ಜಲ್ಸಾ' ಹಾಗೂ 'ಪೋಕಿರಿ' ಸಿನಿಮಾಗಳು ರೀ ರಿಲೀಸ್ ಆಗಿ ಸಕ್ಸಸ್ ಕಂಡ ಬೆನ್ನಲ್ಲೇ ಪ್ರಭಾಸ್ ನಟನೆಯ 'ಬಿಲ್ಲಾ' ಚಿತ್ರವನ್ನು ಹೊಸ ರೂಪದಲ್ಲಿ ತೆರೆಗೆ ತರುವ ಕೆಲಸ ಶುರುವಾಗಿದೆ. ಅಕ್ಟೋಬರ್ 23ಕ್ಕೆ ಟಾಲಿವುಡ್ ಯಂಗ್ ರೆಬೆಲ್ ಸ್ಟಾರ್ ಹುಟ್ಟುಹಬ್ಬ. ಸದ್ಯ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಪ್ರಭಾಸ್ ಸದ್ದು ಮಾಡ್ತಿದ್ದು, 'ಬಿಲ್ಲಾ' ಸಿನಿಮಾ ಹೊರ ತಂತ್ರಜ್ಞಾನದಲ್ಲಿ ಸಿನಿರಸಿಕರು ಮನಗೆಲ್ಲೋದು ಗ್ಯಾರೆಂಟಿ.

    English summary
    Which Kannada Movie Do you Like To Watch Again in 4k Version. After Mahesh Babu's Pokiri, Pawan Kalyan's Jalsa kannada Audience Asking To Re Release Super hit Movies in New technology.
    Sunday, September 11, 2022, 15:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X