For Quick Alerts
  ALLOW NOTIFICATIONS  
  For Daily Alerts

  'ಗಂಧದ ಗುಡಿ' ಮೇಕಿಂಗ್ ವೇಳೆ ದನದ ಕೊಟ್ಟಿಗೆಯಲ್ಲಿ ಸೊಂಪಾಗಿ ನಿದ್ದೆ ಮಾಡಿದ್ದ ಅಪ್ಪು!

  |

  'ಗಂಧದ ಗುಡಿ' ಸ್ಯಾಂಡಲ್‌ವುಡ್‌ನ ಮತ್ತೊಂದು ಪ್ರಯೋಗಾತ್ಮಕ ಸಿನಿಮಾ. ಬಹುಶ: ಬೇರೆ ಚಿತ್ರರಂಗದಲ್ಲಿ ಇಂತಹದ್ದೊಂದು ಪ್ರಯತ್ನ ಮಾಡಿರಲಿಕ್ಕಿಲ್ಲ. ಇದು ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಕಂಡ ಕನಸು. ಅಪ್ಪು ಕಂಡ ಈ ಕನಸು ಅಕ್ಟೋಬರ್ 28ಕ್ಕೆ ವಿಶ್ವದಾದ್ಯಂತ ಅನಾವರಣಗೊಳ್ಳಲಿದೆ.

  ಪುನೀತ್ ರಾಜ್‌ಕುಮಾರ್‌ಗೆ ಕರ್ನಾಟಕವನ್ನು ಹಾಗೂ ಇಲ್ಲಿನ ಟೂರಿಸಂ ಅನ್ನು ತೋರಿಸಬೇಕು ಅನ್ನೋ ಆಸೆ ಇತ್ತು. ಅದಕ್ಕೆ ಅವರೇ ಕಾಡಿಗೆ ಹೋಗಿ ಒಂದು ವಿಡಿಯೋವನ್ನು ಶೂಟ್ ಮಾಡುವುದಕ್ಕೆ ಮುಂದಾಗಿದ್ದರು. 'ಗಂಧದ ಗುಡಿ' ಕಾನ್ಪೆಪ್ಟ್ ಅಸಲಿಗೆ ಶುರುವಾಗಿದ್ದು ಇಲ್ಲಿಂದಲೇ. ಈ ವೇಳೆ ನಡೆದ ಇಂಟ್ರೆಸ್ಟಿಂಗ್ ಸಂಗತಿಯನ್ನು ವಿನಯ್ ರಾಜ್‌ಕುಮಾರ್ ಹಂಚಿಕೊಂಡಿದ್ದಾರೆ.

  'ಪುನೀತ್ ಪರ್ವ' ವೇದಿಕೆಯಲ್ಲಿ ಪರ್ಫಾಮೆನ್ಸ್ ನೀಡುವ ಸೆಲೆಬ್ರೆಟಿಗಳು, ಅತಿಥಿಗಳ ಲಿಸ್ಟ್ ಇಲ್ಲಿದೆ!'ಪುನೀತ್ ಪರ್ವ' ವೇದಿಕೆಯಲ್ಲಿ ಪರ್ಫಾಮೆನ್ಸ್ ನೀಡುವ ಸೆಲೆಬ್ರೆಟಿಗಳು, ಅತಿಥಿಗಳ ಲಿಸ್ಟ್ ಇಲ್ಲಿದೆ!

  ಅಪ್ಪು ಜೊತೆ ವಿನಯ್ ರಾಜ್‌ಕುಮಾರ್ ಕೂಡ 'ಗಂಧದ ಗುಡಿ'ಯ ಶೂಟ್ ಮಾಡಲು ಹೋಗಿದ್ದರು. ಬೆಳಗಾವಿಯ ದಾಂಡೇಲಿ ಸಮೀಪದ ಕುಗ್ರಾಮದಲ್ಲಿ ಚಿತ್ರೀಕರಣ ಮಾಡಲಾಗುತ್ತಿತ್ತು. ಈ ವೇಳೆ ನಡೆದ ಘಟನೆಯನ್ನು ಫುಡ್ ಲವರ್ಸ್‌ ಟಿವಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅದರ ಸಾರಾಂಶ ಇಲ್ಲಿದೆ.

  'ದನದ ಕೊಟ್ಟಿಗೆಯಲ್ಲಿ ಅಪ್ಪು ನಿದ್ದೆ'

  'ದನದ ಕೊಟ್ಟಿಗೆಯಲ್ಲಿ ಅಪ್ಪು ನಿದ್ದೆ'

  ಬೆಳಗಾವಿಯಲ್ಲಿ 'ಗಂಧದ ಗುಡಿ' ಶೂಟಿಂಗ್ ಮಾಡುವಾಗ ಪುನೀತ್ ರಾಜ್‌ಕುಮಾರ್ ಕುಗ್ರಾಮದಲ್ಲಿ ಬಾಳೆ ಎಲೆಯಲ್ಲಿ ಊಟ ಮಾಡಿದ್ದರು. ಬಳಿಕ ಅಲ್ಲೇ ಇದ್ದ ದನದ ಕೊಟ್ಟಿಗೆಯಲ್ಲಿ ಮಲಗಿದ್ದರು. "ಅಲ್ಲಿನ ಜನರಿಗೆ ಹೊರಗಿನ ಪ್ರಪಂಚ ಗೊತ್ತಿಲ್ಲ. ಪುನೀತ್ ರಾಜ್‌ಕುಮಾರ್ ಯಾರು ಅಂತ ಅವರಿಗೆ ಗೊತ್ತಿರಲಿಲ್ಲ. ಎಲ್ಲಾ ಕಡೆ ಹೇಗೆ ಅಂದರೆ, ಚಿಕ್ಕ ನೋಡಿದ ಕೂಡ ಎಲ್ಲರೂ ಎದ್ದು ನಿಂತುಕೊಳ್ಳುತ್ತಾರೆ. ವಿಶ್ ಮಾಡುತ್ತಾರೆ. ಆದರೆ, ಮೊದಲ ಬಾರಿಗೆ ಹೇಗಿತ್ತು ಅಂದರೆ, ಒಬ್ಬ ಸಾಮಾನ್ಯ ವ್ಯಕ್ತಿ ಹೇಗೆ ಭೇಟಿ ಮಾಡುತ್ತಾರೋ ಹಾಗಿತ್ತು. ಹೀಗಾಗಿ ಚಿಕ್ಕಪ್ಪಗೂ ತುಂಬಾ ಆರಾಮ್ ಅನಿಸಿತ್ತು. ಅಲ್ಲೇ ಕೂತು ಚೆನ್ನಾಗಿ ಊಟ ಮಾಡಿದ್ರು. ಬಳಿಕ ಪಕ್ಕದಲ್ಲೇ ಕೊಟ್ಟಿಗೆ ಇತ್ತು. ಅಲ್ಲಿ ಅರ್ಧ ಗಂಟೆ ನಿದ್ದೆ ಮಾಡಿದ್ದರು. ಅಂದು ತುಂಬಾನೇ ಖುಷಿಯಾಗಿದ್ದರು." ಎಂದು ಅಪ್ಪು ಅಂದು ದನ ಕೊಟ್ಟಿಗೆಯಲ್ಲಿ ನಿದ್ರಿಸಿದ್ದ ಬಗ್ಗೆ ವಿನಯ್ ರಿವೀಲ್ ಮಾಡಿದ್ದಾರೆ.

  ಅಪ್ಪು ನಿದ್ದೆ ಮಾಡಿದ್ದ ಆ ಜಾಗ ಯಾವುದು?

  ಅಪ್ಪು ನಿದ್ದೆ ಮಾಡಿದ್ದ ಆ ಜಾಗ ಯಾವುದು?

  "ದಾಂಡೇಲಿಯಲ್ಲಿ ಪಾತಾಳಗುಡಿ ಅಂತ ಇದೆ. ಅಲ್ಲಿ ಇಡೀ ಸಮುದಾಯ ಒಂದೇ ಕುಟುಂಬ ಶುರು ಮಾಡಿದ್ದರು. ಅಲ್ಲಿ ಬಾಳೆ ಎಲೆ ಊಟ ಮಾಡಿದ್ವಿ. ಅಲ್ಲಿ ಎಲೆಯನ್ನು ಉದ್ದಕ್ಕೆ ಹಾಕುತ್ತಾರೆ. ಅದರಲ್ಲಿ ಎಲ್ಲಾ ಪದಾರ್ಥಗಳನ್ನು ಇಡುತ್ತಾರೆ. ಅದು ನೆಟೀವ್ ಫಾರೆಸ್ಟ್ ಫುಡ್. ಅಲ್ಲಿ ಕೂತು ಚಿಕ್ಕಪ್ಪ ಊಟ ಮಾಡಿದ್ದಾರೆ. ಅಲ್ಲಿ ಹೇಗೆ ಅಂದರೆ, ಅವರಿಗೆ ಹೊರಗಿನ ಪ್ರಪಂಚವೇ ಗೊತ್ತಿಲ್ಲ. ಬರೀ ಉಪ್ಪು ತರಲು ಮಾತ್ರ ಆಚೆ ಹೋಗುತ್ತಾರೆ. ಎಲ್ಲಾ ಅವರೇ ರೆಡಿ ಮಾಡುತ್ತಾರೆ. " ಎಂದು ಪಾತಾಳಗುಡಿ ಜಾಗದ ಬಗ್ಗೆ ವಿನಯ್ ರಾಜ್‌ಕುಮಾರ್ ಫುಡ್ ಲವರ್ಸ್‌ ಟಿವಿಗೆ ರಿವೀಲ್ ಮಾಡಿದ್ದಾರೆ.

  ಅಪ್ಪುಗೆ ಊಟದ ಬಗ್ಗೆ ಕ್ರೇಜ್

  ಅಪ್ಪುಗೆ ಊಟದ ಬಗ್ಗೆ ಕ್ರೇಜ್

  "ಅವರೊಂದಿಗೆ ನಾನು ತುಂಬಾನೇ ಟ್ರಾವೆಲ್ ಮಾಡಿದ್ದೇನೆ. ವಿದೇಶಕ್ಕೆ ಶೂಟಿಂಗ್ ಹೋದಾಗಲೆಲ್ಲಾ ಅವರು ಇಡೀ ದಿನ ಶೂಟಿಂಗ್ ಮಾಡೋರು. ರಾತ್ರಿ ಬಂದಾಗ ಅವರು ನೀನು ಏನ್ ತಿಂದೆ? ಏನೇನು ಟ್ರೈ ಮಾಡಿದೆ? ಯಾವ ಮಾಂಸ ತಿಂದೆ? ಹೆಂಗಿತ್ತು? ಫುಲ್ ಡಿಟೈಲ್ ಹೇಳಬೇಕಿತ್ತು. ಬೆಂಗಳೂರು ಬಂದ ಕೂಡಲೇ ಎಲ್ಲವನ್ನೂ ಶೇರ್ ಮಾಡುತ್ತಿದ್ದರು. ವಿನು ಇದು ತಿಂದ. ವಿನು ಅದು ತಿಂದ ಅಂತ. ಅದು ಅವರಿಗೆ ದೊಡ್ಡ ಚರ್ಚೆ ಅಂತ ಅನಿಸುತ್ತಿತ್ತು. ಅವರು ಯಾವಾಗಲೂ ಫುಡ್ ಬಗ್ಗೆನೇ ಮಾತುಕತೆ ಮಾಡೋರು." ಎಂದು ಪುನೀತ್ ರಾಜ್‌ಕುಮಾರ್ ಅವರನ್ನು ನೆನಪಿಸಿಕೊಂಡಿದ್ದಾರೆ.

  ಅಪ್ಪು ಗಂಧದ ಗುಡಿ ಕ್ರೇಜ್ ಹೇಗಿದೆ?

  ಅಪ್ಪು ಗಂಧದ ಗುಡಿ ಕ್ರೇಜ್ ಹೇಗಿದೆ?

  ಪುನೀತ್ ರಾಜ್‌ಕುಮಾರ್ ಕೊನೆಯ ಬಾರಿಗೆ ದರ್ಶನ ನೀಡುತ್ತಿರುವ ಸಿನಿಮಾ 'ಗಂಧದ ಗುಡಿ'. ಇದು ಕನ್ನಡ ಅಷ್ಟೇ ಅಲ್ಲ. ಭಾರತೀಯ ಚಿತ್ರರಂಗಕ್ಕೆ ವಿಶಿಷ್ಟ ಸಿನಿಮಾ. ಸದ್ಯ ಮೂರು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗುತ್ತಿದ್ದು, ವಿಶ್ವದಾದ್ಯಂತ ಸಿನಿಮಾ ರಿಲೀಸ್ ಆಗಲಿದೆ. ಹೀಗಾಗಿ ಕನ್ನಡದ ಮತ್ತೊಂದು ಸಿನಿಮಾ ವರ್ಲ್ಡ್‌ವೈಡ್ ಲೆವೆಲ್‌ನಲ್ಲಿ ಸದ್ದು ಮಾಡುವ ಎಲ್ಲಾ ಲಕ್ಷಣಗಳೂ ಇವೆ.

  English summary
  While Making Gandhada Gudi Puneeth Rajkumar Slept In Cowshed Near Dandeli, Know More.
  Friday, October 21, 2022, 19:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X