For Quick Alerts
  ALLOW NOTIFICATIONS  
  For Daily Alerts

  ಕಲೆಕ್ಷನ್ನಲ್ಲಿ ವಿಜಲ್ ಕೇಕೆ, ಬಾಲಿವುಡ್ ಗೆ ಪ್ರಶಾಂತ್

  By Rajendra
  |

  ರೊಮ್ಯಾಂಟಿಕ್, ಹಾರರ್, ಸಸ್ಪೆನ್ಸ್ ಅಂಶಗಳಿಂದ ಕೂಡಿರುವ 'ವಿಜಲ್' ಚಿತ್ರ ಮೂರನೇ ದಿನವು ಬಾಕ್ಸ್ ಆಫೀಸ್ ನಲ್ಲಿ ಕೇಕೆ ಹಾಕಿದೆ. ಚಿತ್ರಕ್ಕೆ ಎಲ್ಲಡೆಯಿಂದಲೂ ಉತ್ತಮ ಪ್ತತಿಕ್ರಿಯೆ ವ್ಯಕ್ತವಾಗುತ್ತಿರುವುದೇ ಇದಕ್ಕೆ ನಿದರ್ಶನ. ಮೂರನೇ ದಿನದ ಸರಾಸರಿ ಗಳಿಕೆ ಹೀಗಿದೆ.

  ಚಿತ್ರ ಇದುವರೆಗೂ (ಸೋಮವಾರ ಜು.15ರ ಮ್ಯಾಟಿನಿ ಶೋವರೆಗೆ) ರು.1.43 ಕೋಟಿ ಕಲೆಕ್ಷನ್ ಮಾಡಿದ್ದು ನಿರ್ಮಾಪಕರ ಜೇಬಿಗೆ ಜಮೆಯಾಗಿದೆ. ಒಂದು ವಾರ ಕಳೆಯುವಷ್ಟರಲ್ಲಿ ನಿರ್ಮಾಪಕರು ಸೂಟ್ ಕೇಸ್ ಹಿಡಿದು ಓಡಾಡುವಂತಾಗುವಲ್ಲಿ ಯಾವುದೇ ಅನುಮಾನವಿಲ್ಲ.

  ಈ ಮೂರು ದಿನಗಳಲ್ಲಿ ಅತ್ಯಧಿಕ ಕಲೆಕ್ಷನ್ ಆಗಿರುವುದು ಬೆಂಗಳೂರು ಕೇಂದ್ರದಲ್ಲಿ ಎಂಬುದು ವಿಶೇಷ. ಶೇ.40ರಷ್ಟು ಕಲೆಕ್ಷನ್ ಬೆಂಗಳೂರಿನಲ್ಲೇ ಆಗಿದೆ. ಉಳಿದಂತೆ ತುಮಕೂರು ಹುಬ್ಬಳ್ಳಿ ತಲಾ ಶೇ.20ರಂತೆ ನಂತರದ ಸ್ಥಾನದಲ್ಲಿ ಇವೆ. ಮುಂಬೈ, ಚೆನ್ನೈ ಹಾಗೂ ಪುಣೆ ಕೇಂದ್ರಗಳಲ್ಲೂ ಕಲೆಕ್ಷನ್ ಚೆನ್ನಾಗಿದೆ.

  ತೆರೆಕಂಡಿರುವ ಎಲ್ಲಾ ಕೇಂದ್ರಗಳಲ್ಲೂ ಸರಾಸರಿ ಶೇ. 70ರಷ್ಟು ಪ್ರದರ್ಶನ ಕಾಣುತ್ತಿರುವುದು ವಿಜಲ್ ಚಿತ್ರದ ಇನ್ನೊಂದು ವಿಶೇಷ. ಏತನ್ಮಧ್ಯೆ ಪ್ರಶಾಂತ್ ರಾಜ್ ಅವರಿಗೆ ಬಾಲಿವುಡ್ ಚಿತ್ರವನ್ನು ನಿರ್ದೆಶಿಸುವ ಸದಾವಕಾಶವೂ ಸಿಕ್ಕಿದೆ. ದೊಡ್ಡ ಬ್ಯಾನರ್ ಚಿತ್ರವೊಂದನ್ನು ಅವರು ನಿರ್ದೇಶಿಸಲಿದ್ದಾರೆ.

  ಈ ಬಗ್ಗೆ ಶೀಘ್ರದಲ್ಲೇ ವಿವರಗಳನ್ನು ನೀಡುವುದಾಗಿಯೂ ತಿಳಿಸಿದ್ದಾರೆ. ಯೋಗರಾಜ್ ಭಟ್ ಬಾಲಿವುಡ್ ಕಡೆಗೆ ಹೆಜ್ಜೆ ಹಾಕಿದ ಬಳಿಕ ಈಗ ಪ್ರಶಾಂತ್ ರಾಜ್ ಅವರು ಹಿಂದಿ ಚಿತ್ರರಂಗಕ್ಕೆ ಅಡಿಯಿಡುತ್ತಿದ್ದಾರೆ.

  ಸರಿಸುಮಾರು ರು.3 ಕೋಟಿ ಬಜೆಟ್ ನಲ್ಲಿ ನಿರ್ಮಿಸಿರುವ ಚಿತ್ರ ಇದಾಗಿದ್ದು ಕಲೆಕ್ಷನ್ ಇದೇ ರೀತಿ ಮುಂದುವರಿದರೆ ಒಂದೇ ವಾರದಲ್ಲಿ ಪೈಸಾ ವಸೂಲ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. 'ವಿಜಲ್' ಚಿತ್ರ ತಮಿಳಿನ 'ಪಿಜ್ಜಾ' ರಿಮೇಕ್ ಆದರೂ ತಾಜಾ ಕಥೆ ಹಾಗೂ ನಿರೂಪಣೆಯಿಂದಾಗಿ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ.

  ಸಂತೋಷ್ ರೈ ಪತಾಜೆ ಅವರ ಛಾಯಾಗ್ರಹಣ, ಜೋಶ್ವಾ ಶ್ರೀಧರ್ ಅವರ ಸಂಗೀತ ಚಿತ್ರದ ಬಿಗಿ ನಿರೂಪಣೆಗೆ ಮತ್ತಷ್ಟು ಮೆರುಗು ನೀಡುತ್ತದೆ. ಹಾರರ್, ಸಸ್ಪೆನ್ಸ್, ಥ್ರಿಲ್ಲಿಂಗ್, ಸೆಂಟಿಮೆಂಟ್ ಅಂಶಗಳಿಂದ ಕೂಡಿರುವ 'ವಿಜಲ್' ಚಿತ್ರ ಎಲ್ಲ ವರ್ಗದ ಪ್ರೇಕ್ಷಕರನ್ನೂ ಸೆಳೆಯುತ್ತಿದೆ. (ಒನ್ಇಂಡಿಯಾ ಕನ್ನಡ)

  English summary
  The Chiranjeevi Sarja and Pranitha starrer Kannada film Whistle day threes box office report. The movie collects Rs.1.43 cr in three days. Meanwhile director Prashanth Raj will soon make his B'wood debut.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X