»   » ರಮ್ಯಾ ರಂಗಿಲ್ಲದೆ ಸೊರಗಿದ ಆರ್ ಸಿಬಿ ಹುಡುಗರು

ರಮ್ಯಾ ರಂಗಿಲ್ಲದೆ ಸೊರಗಿದ ಆರ್ ಸಿಬಿ ಹುಡುಗರು

By: ಉದಯರವಿ
Subscribe to Filmibeat Kannada

ಇಂಡಿಯನ್ ಪ್ರೀಮಿಯರ್ ಲೀಗ್ ಏಳನೇ ಆವೃತ್ತಿ ಬಿರುಸಿನಿಂದ ಸಾಗಿದೆ. ಬೆಂಗಳೂರಿಗರ ಹಾಟ್ ಫೇವರಿಟ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ). ಈ ಹಿಂದೆ ಈ ತಂಡಕ್ಕೆ ಲಕ್ಕಿ ಸ್ಟಾರ್ ರಮ್ಯಾ ಬ್ರಾಂಡ್ ಅಂಬಾಸಿಡರ್ ಆಗಿದ್ದರು. ಆದರೆ ಈಗ ಆರ್ ಸಿಬಿ ತಂಡದಲ್ಲಿ ಗ್ಲಾಮರ್ ಇಲ್ಲದೆ ಗರಬಡಿದಂತಾಗಿದೆ.

ಮಂಡ್ಯ ಸಂಸದೆಯಾದ ಬಳಿಕ ರಮ್ಯಾ ಅವರು ಆರ್ ಸಿಬಿ ತಂಡದಿಂದ ದೂರ ಉಳಿದರು. ಆರ್ ಸಿಬಿ ತಂಡದ ಆಟಗಾರರು ಬೌಂಡರಿ, ಸಿಕ್ಸರ್ ಭಾರಿಸುತ್ತಿದ್ದರೆ ಅವರ ಉತ್ಸಾಹಕ್ಕೆ ರಮ್ಯಾ ಇನ್ನಷ್ಟು ಹುರುಪು ತುಂಬಿ ದಿಲ್ ರಂಗೀಲಾ ಮಾಡುತ್ತಿದ್ದರು.

ಸದ್ಯಕ್ಕೆ ರಮ್ಯಾ ರಾಜಕೀಯದಲ್ಲಿ ಬಿಜಿಯಾದ ಬಳಿಕ ಅವರಿಲ್ಲದೆ ಸ್ಥಾನ ಖಾಲಿಯಾಗಿದೆ. ಆ ಖಾಲಿ ಜಾಗವನ್ನು ತುಂಬಲು ಆರ್ ಸಿಬಿ ತಂಡದ ಮಾಲೀಕ ವಿಜಯ್ ಮಲ್ಯ ಅವರು ಮತ್ತೊಬ್ಬ ಹಾಟ್ ಬೆಡಗಿಯನ್ನು ಕರೆತರಲು ಮುಂದಾಗಿದೆ. ಇವರಲ್ಲಿ ಯಾರಿಗೆ ಒಲಿಯಬಹುದು ಆರ್ ಸಿಬಿ ಬ್ರಾಂಡ್ ಅಂಬಾಸಿಡರ್ ಪಟ್ಟ.

ಕಳೆದ ಆರು ವರ್ಷಗಳಿಂದ ರಂಜಿಸಿದ ರಮ್ಯಾ

ಕಳೆದ ಆರು ವರ್ಷಗಳಿಂದ ರಮ್ಯಾ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬ್ರಾಂಡ್ ಅಂಬಾಸಿಡರ್ ಆಗಿ ಪ್ರಚಾರ ಮಾಡುತ್ತಾ ಅಭಿಮಾನಿಗಳನ್ನು ಹುರುದುಂಬಿಸಿ, ರಂಜಿಸಿದ್ದರು.

ತುಪ್ಪದ ಬೆಡಗಿ ರಾಗಿಣಿಗೆ ಪಟ್ಟ ಗ್ಯಾರಂಟಿನಾ?

ಆರ್ ಸಿಬಿ ತಂಡದ ಮಾಲೀಕರು ಪರಿಶೀಲಿಸುತ್ತಿರುವ ಪಟ್ಟಿಯಲ್ಲಿ ಕನ್ನಡದ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಬಹುಶಃ ಈ ಬಾರಿ ಅವರೇ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾದರೂ ಅಚ್ಚರಿಯಿಲ್ಲ.

ರಾಧಿಕಾ ಪಂಡಿತ್ ಗೆ ಒಲಿಯಲಿದೆಯಾ ಚಾನ್ಸ್?

ಬೆಂಗಳೂರು ಬ್ಯೂಟಿ ರಾಧಿಕಾ ಪಂಡಿತ್ ಅವರಿಗೆ ಅಭಿಮಾನಿ ಬಳಗ ಬಹಳ ದೊಡ್ಡದಾಗಿದೆ. ಅವರ ಹೆಸರನ್ನೂ ಆರ್ ಸಿಬಿ ತಂಡದ ಮಾಲೀಕರು ಪರಿಶೀಲಿಸುತ್ತಿದ್ದಾರೆ.

ಸಂಜನಾ ಹೆಸರೂ ಪರಿಶೀಲನೆಯಲ್ಲಿದೆಯಂತೆ

ತನ್ನ ಹಾಟ್ ಅಂಡ್ ಸೆಕ್ಸಿ ಲುಕ್ ಮೂಲಕ ಕ್ರಿಕೆಟ್ ಅಭಿಮಾನಿಗಳನ್ನು ಆಕರ್ಷಿಸುವ ಚಾಕಚಕ್ಯತೆ ಸಂಜನಾ ಅವರಿಗೆ ಇದೆ. ಸಂಜನಾ ಅವರನ್ನು ಆರಾಧಿಸುವ ಅಭಿಮಾನಿಗಳಿಗೂ ಬರವಿಲ್ಲ. ಪಟ್ಟಿಯಲ್ಲಿ ಅವರ ಹೆಸರೂ ಇದೆ ಎನ್ನಲಾಗಿದೆ.

ಆರ್ ಸಿಬಿಗೆ ಸನಿಹವಾಗಲಿದ್ದಾರಾ ದೀಪಾ ಸನ್ನಿಧಿ?

ಇನ್ನು ಕನ್ನಡ ಚಿತ್ರರಂಗದಲ್ಲಿ ಈಗೀಗಷ್ಟೇ ಮುಂದಡಿಯಿಡುತ್ತಿರುವ ದೀಪಾ ಸನ್ನಿಧಿ ಅವರ ಹೆಸರೂ ಕೇಳಿಬರುತ್ತಿದೆ.

ಪ್ರಿಯಾಮಣಿ ಪ್ರಿಯವಾಗಲಿದ್ದಾರಾ?

ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ ಎಲ್ಲ ತಂಡಗಳ ಜೊತೆಗೂ ಗುರುತಿಸಿಕೊಂಡ ತಾರೆ ಪ್ರಿಯಾಮಣಿ. ಅವರಿಗೂ ಕನ್ನಡದಲ್ಲಿ ಸಾಕಷ್ಟು ಫ್ಯಾನ್ ಫಾಲೋಯಿಂಗ್ ಇದೆ. ಅವರ ಹೆಸರು ಪರಿಶೀಲನೆಯಲ್ಲಿದೆ.

ಮೈದಾನಕ್ಕೆ ಚಿಗರೆ ಐಂದ್ರಿತಾ ಜಿಗಿಯಲಿದೆಯೇ?

ಸ್ಯಾಂಡಲ್ ವುಡ್ ನ ಹಾಟ್ ಬೆಡಗಿಯರಲ್ಲಿ ಚಿಗರೆ ಕಂಗಳ ಐಂದ್ರಿತಾ ರೇ ಸಹ ಒಬ್ಬರು. ಅವರ ಹೆಸರು ಕೇಳಿಬರುತ್ತಿದೆ.

ಎಲ್ಲೋ ಜೋಗಪ್ಪ ನಿನ್ನ ಅರಮನೆ ಬೆಡಗಿ

'ಜೋಗಿ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ ಜೆನ್ನಿಫರ್ ಕೊತ್ವಾಲ್ ಹೆಸರು ಉಂಟು. ಆದರೆ ವಿಜಯ್ ಮಲ್ಯ ಸಾಹೇಬರ ತೀರ್ಮಾನವೇ ಅಂತಿಮ.

ಪ್ರಣೀತಾ ಹೆಸರು ಕೇಳಿಬರುತ್ತಿದೆ

ಇನ್ನು ಸ್ಯಾಂಡಲ್ ವುಡ್ ನ ಮಿಲ್ಕಿ ಬ್ಯೂಟಿ ಪ್ರಣೀತಾ ಹೆಸರು ಪಟ್ಟಿಯಲ್ಲಿದೆಯಂತೆ. ಮಲ್ಯ ಸಾಹೇಬರು ಏನು ತೀರ್ಮಾನಿಸುತ್ತಾರೋ ಗೊತ್ತಿಲ್ಲ.

ಪಟ್ಟಿಯಲ್ಲಿ ಹರ್ಷಿಕಾ ಪೂಣಚ್ಚ ಕೂಡ ಇದ್ದಾರೆ

ಇತ್ತೀಚೆಗೆ ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಸಾಕಷ್ಟು ಸದ್ದು ಮಾಡಿದ ಬೆಡಗಿಯರಲ್ಲಿ ಹರ್ಷಿಕಾ ಪೂಣಚ್ಚ ಕೂಡ ಒಬ್ಬರು. ಅವರನ್ನೂ ತಳ್ಳಿಹಾಕುವಂತಿಲ್ಲ.

ಆಯ್ಕೆಯಾಗುತ್ತಾರಾ ಪ್ಯಾರ್ ಗೆ ಆಗ್ಬಿಟ್ಟೈತೆ ಬೆಡಗಿ

ಪ್ಯಾರ್ ಗೆ ಆಗ್ಬಿಟ್ಟೈತೆ ಎಂದು ಪಡ್ಡೆಗಳ ಹೃದಯ ಕದ್ದ ಚೆಲುವೆ ಪರುಲ್ ಯಾದವ್. ಸಿಸಿಎಲ್ ಪಂದ್ಯಾವಳಿಯಲ್ಲೂ ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ಬೆಂಬಲಿಸಿದ್ದರು. ಈಗ ಆರ್ ಸಿಬಿ ತಂಡಕ್ಕೆ ಆಯ್ಕೆಯಾಗುತ್ತಾರಾ?

English summary
Here is a task for the supporters of Royal Challengers Bangalore (RCB) in Indian Premier League (IPL7), who are upset to see the league matches without the brand ambassador. All these days it was Sandalwood Queen Ramya, who was wearing RCB's jersey and cheering crowd in Chinnaswamy Stadium. Now, as the actress has become busy bee in politics, the league matches seems to be dry without the star attraction. Here is our list of actresses, who could be the successor of Ramya and make the Best Brand ambassador.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada