»   » ಆ ಮೂವರು ನಿರ್ದೇಶಕರಲ್ಲಿ ಯಾರು ಉತ್ತಮರು?

ಆ ಮೂವರು ನಿರ್ದೇಶಕರಲ್ಲಿ ಯಾರು ಉತ್ತಮರು?

Posted By:
Subscribe to Filmibeat Kannada

ಈ ವರ್ಷ ಸ್ಯಾಂಡಲ್ ವುಡ್ ನ ಹಲವು ನಿರ್ದೇಶಕರ ಪಾಲಿಗೆ ಬಹಳಷ್ಟು ನಿರೀಕ್ಷೆಗಳ ವರ್ಷ ಅದಕ್ಕೆ ಕಾರಣವೂ ಇದೆ. ಒಬ್ಬ ನಿರ್ದೇಶಕನ ಒಂದು ಸಿನಿಮಾ ಯಶಸ್ವಿಯಾದ್ರೇನೇ ಉಸ್ಸಪ್ಪಾ ಅಂತ ನಿಟ್ಟುಸಿರುಬಿಡ್ತಾರೆ. ಆದ್ರೆ ಈ ವರ್ಷ ಮೂರು ನಿರ್ದೇಶಕರು ಹ್ಯಾಟ್ರಿಕ್ ಬಾರಿಸೋಕೆ ಕಾದಿದ್ರು.

ಈ ಮೂರು ನಿರ್ದೇಶಕರಲ್ಲಿ ಇಬ್ಬರ ಭವಿಷ್ಯ ನಿರ್ಧಾರವಾಗಿದೆ. ಬಾಕಿ ಇರೋದು ಒಬ್ಬ ನಿರ್ದೇಶಕರು ಮಾತ್ರ. ಮೂರೂ ನಿರ್ದೇಶಕರ ಎಡು ಸಿನಿಮಾಗಳು ಸೂಪರ್ ಡ್ಯೂಪರ್ ಹಿಟ್ಟಾಗಿವೆ. ಮೂರನೇ ಸಿನಿಮಾವನ್ನೂ ಗೆಲ್ಲೋದು ಸವಾಲೇ ಸರಿ.

ಕನ್ನಡದಲ್ಲೂ ಸ್ವಮೇಕ್ ಸಿನಿಮಾಗಳ ಮೂಲಕ ಮುನ್ನುಗ್ಗೋ ನಿರ್ದೇಶಕರಿದ್ದಾರೆ ಅನ್ನೋ ನಂಬಿಕೆಯನ್ನ ಮತ್ತಷ್ಟು ಬಲವಾಗಿಸಿದ್ದೇ ಈ ಮೂವರು. ಆ ಮೂರು ನಿರ್ದೇಶಕರು ಯಾರು ಅವ್ರ ಹ್ಯಾಟ್ರಿಕ್ ರಿಸಲ್ಟ್ ಏನಾಯ್ತು ಸ್ಲೈಡ್ ನಲ್ಲಿದೆ ನೋಡಿ.

ಪವನ್ ಒಡೆಯರ್ ವಿಕ್ರಮ..

ಇತ್ತೀಚೆಗೆ ತೆರೆಗೆ ಬಂದ ರಣವಿಕ್ರಮ ಚಿತ್ರ 238 ಥಿಯೇಟರ್ ಗಳಲ್ಲಿ ತೆರೆಕಂಡಿದೆ. ಅಷ್ಟೂ ಥಿಯೇಟರ್ ಗಳಲ್ಲಿ ಎರಡನೇ ವಾರವೂ ಮುನ್ನುಗ್ತಿದೆ. ಅಲ್ಲಿಗೆ ಪವನ್ ಒಡೆಯರ್ ಹ್ಯಾಟ್ರಿಕ್ ಗೆಲುವು ಬಹುತೇಕ ಖಚಿತ.

ಪವನ್ ಗೆಲುವಿನ ಗೂಗ್ಲಿ

ಈ ಹಿಂದೆ ಪವನ್ ಒಡೆಯರ್ ನಿರ್ದೇಶನದಲ್ಲಿ 'ಗೂಗ್ಲಿ' ಗೆಲುವಿನ ದಾಖಲೆ ಬರೆಯೋದ್ರ ಜೊತೆಗೆ ಆರು ಸೈಮಾ ಅವಾರ್ಡ್ಸ್ ಮುಡಿಗೇರಿಸಿಕೊಂಡಿತ್ತು. ಇನ್ನು 2012ರಲ್ಲಿ ಪ್ಯಾರ್ ಗೇ ಆಗ್ಬಿಟ್ಟೈತೆ ಅಂತ 'ಗೋವಿಂದಾಯ ನಮಃ' ಚಿತ್ರದ ಮೂಲಕ ಮೊದಲ ಗೆಲುವಿನ ಸವಿ ಕಂಡಿದ್ರು ಪವನ್ ಒಡೆಯರ್.

ಎ ಪಿ ಅರ್ಜುನ್ ರಾಟೆ ಗೆಲ್ತಾ?

ಎ ಪಿ ಅರ್ಜುನ್ ಕೂಡ ಈ ವರ್ಷ ಹ್ಯಾಟ್ರಿಕ್ ಗೆಲುವಿಗೆ ಕಾದಿದ್ದ ನಿರ್ದೇಶಕ. ಆದ್ರೆ 'ರಾಟೆ' ಗೆಲ್ತೋ ಸೋಲ್ತೋ ಗೊತ್ತಿಲ್ಲ. ಒಂದೆರೆಡು ವಾರದ ನಂತ್ರ ಸುದ್ದಿ ಆಗ್ಲೇ ಇಲ್ಲ. ಚಿತ್ರಮಂದಿರಗಳಿಂದ ಚಿತ್ರ ಮಾಯವಾಯ್ತು.

ಅದ್ದೂರಿ, ಅಂಬಾರಿ ಏರಿ ಬಂದ ಅರ್ಜುನ

ಇದಕ್ಕೂ ಮೊದಲು ಮಂಡ್ಯದ ಹೈದ ಎ ಪಿ ಅರ್ಜುನ್ ಅವರು ಲೂಸ್ ಮಾದ ಯೋಗಿ ನಟನೆಯಲ್ಲಿ ಸೂಪರ್ ಡ್ಯೂಪರ್ ಹಿಟ್ 'ಅಂಬಾರಿ' ಸಿನಿಮಾ ಕೊಟ್ಟಿದ್ರು. ಅದಾದ ನಂತ್ರ ಧ್ರುವ ಸರ್ಜಾ ಅಭಿನಯದಲ್ಲಿ 'ಅದ್ದೂರಿ' ಚಿತ್ರವನ್ನೂ ಸೂಪರ್ ಡ್ಯೂಪರ್ ಹಿಟ್ಟಾಗಿಸಿದ್ರು ಅರ್ಜುನ್.

ನಂದಕಿಶೋರ್ ರನ್ನ ಚಿನ್ನ?

ಖ್ಯಾತ ಖಳನಟ ದಿ.ಸುಧೀರ್ ಪುತ್ರ ನಂದಕಿಶೋರ್ ಗೆ ಸದ್ಯ ಗೆಲ್ಲೋ ಚಾಲೆಂಜ್ ಇದೆ. ತೆಲುಗಿನ 'ಅತ್ತಾರಿಂಟಿಕೆ ದಾರೇದಿ' ರೀಮೇಕ್ ಮಾಡಿರೋ ನಂದಕಿಶೋರ್ ಚಿತ್ರವನ್ನ ಬಿಗ್ ಬಜೆಟ್ ನಲ್ಲಿ ಮೇಕಿಂಗ್ ಮಾಡಿದ್ದಾರೆ. ಚಿತ್ರ ಮೇ 1ಕ್ಕೆ ತೆರೆಗೆ ಬರೋದು ಬಹುತೇಕ ಖಚಿತವಾಗಿದ್ದು ನಂದಕೀಶೋರ್ ಹ್ಯಾಟ್ರಿಕ್ ಹೊಡೀತಾರಾ ಕಾದುನೋಡ್ಬೇಕು.

ಅಧ್ಯಕ್ಷನ ಬಿಗ್ ವಿಕ್ಟರಿ

ಸ್ಯಾಂಡಲ್ ವುಡ್ ನಲ್ಲಿ ಶರಣ್ ಗೆ ಎರಡೆರೆಡು ಹಿಟ್ ಸಿನಿಮಾ ನಿರ್ದೇಶಿಸಿದ್ದಾರೆ ನಂದಕಿಶೋರ್. ವಿಕ್ಟರಿ ಚಿತ್ರದ ಮೂಲಕ ಯಶಸ್ವಿ ನಿರ್ದೇಶಕನಾಗಿ ಓಪನಿಂಗ್ ಮಾಡಿದ ನಂದಕಿಶೋರ್ ಎರಡನೇ ಸಿನಿಮಾ ಅಧ್ಯಕ್ಷ ಮೂಲಕ ಎರಡನೇ ಸಕ್ಸಸ್ ಪಡ್ಕೊಂಡ್ರು.

English summary
Young and energitic directors are making wonders in Sandalwood. They are giving back to back hit movies. Pawan Wadeyar, Nanda Kishore and AP Arjun are the most succesful three directosr in Kannada now a days. Among thses theree who is best?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada