»   » ಸದ್ಯಕ್ಕೆ ಕನ್ನಡದಲ್ಲಿ ಬಿಜಿಯೆಸ್ಟ್ ಹೀರೋ ಯಾರು?

ಸದ್ಯಕ್ಕೆ ಕನ್ನಡದಲ್ಲಿ ಬಿಜಿಯೆಸ್ಟ್ ಹೀರೋ ಯಾರು?

By: ಜೀವನರಸಿಕ
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ಪತ್ರಕರ್ತರೇ ಸೃಷ್ಟಿ ಮಾಡಿರೋ ಒಂದು ರೋಲಿಂಗ್ ಟೈಟಲ್ ಇದೆ. ಇದೊಂದು ರೋಲಿಂಗ್ ಟೈಟಲ್ ವರ್ಷಕ್ಕೊಬ್ಬರ ತಲೆಗೆ ಹೋಗ್ತಾನೆ ಇರುತ್ತೆ. ಕೆಲವೊಮ್ಮೆ ಆರು ತಿಂಗಳಿಗೆ ಮೂರು ತಿಂಗಳಿಗೂ ಬದಲಾಗ್ತಾ ಇರುತ್ತೆ. ಅದು ಸ್ಯಾಂಡಲ್ ವುಡ್ ನ ಬಿಜಿಯೆಸ್ಟ್ ಹೀರೋ ಯಾರು ಅನ್ನೋದು. ಈಗ ಈ ಟೈಟಲ್ ಸಿಕ್ಕಿರೋದು ಚಿರಂಜೀವಿ ಸರ್ಜಾಗೆ.

ಚಿರಂಜೀವಿ ಸರ್ಜಾ ಸ್ಯಾಂಡಲ್ ವುಡ್ ನಲ್ಲಿ ಫುಲ್ ಬಿಜಿ ಹೀರೋ. ಒಂದಲ್ಲ ಒಂದು ಸಿನಿಮಾಗಳು ಚಿರೂ ಬೆನ್ನು ಹತ್ತುತ್ತಾ ಇವೆ. ಚಿರು ಆಸೆ ತಾನೊಬ್ಬ ಕಂಪ್ಲೀಟ್ ಮಾಸ್ ಹೀರೋ ಆಗ್ಬೇಕು ಅನ್ನೋದು. ಆ ಆಸೆ ಈಡೋರೋ ಕಾಲ ಹತ್ತಿರವಾಗಿದೆ. ಚಿರು ಕೈಯ್ಯಲ್ಲಿ ನಾಲ್ಕೈದು ಸಿನಿಮಾಗಳಿವೆ. ಒಂದಷ್ಟು ರಿಲೀಸ್ಗೂ ರೆಡಿ ಇವೆ.

ಸಾಕಷ್ಟು ಸಿನಿಮಾಗಳು ರೆಡಿಯಾಗ್ತಿದ್ದು ಚಿರಂಜೀವಿ ಸರ್ಜಾ ಸದ್ಯ ಸಿಸಿಎಲ್ ಮುಗಿಸಿ ಬಂದರೆ ರಾತ್ರಿ ಹಗಲು ಶೂಟಿಂಗ್ ಮಾಡುವಷ್ಟು ಸಿನಿಮಾಗಳಿವೆ. ಚಿರು ಸಿನಿಮಾಗಳ ಒಂದು ಝಲಕನ್ನು ಸ್ಲೈಡ್ ನಲ್ಲಿ ನೋಡ್ತಾ ಹೋಗಿ.

ರಿಲೀಸ್ ಗೆ ರೆಡಿಯಿದೆ ಚಂದ್ರಲೇಖ

ಓಂಪ್ರಕಾಶ್ ರಾವ್ ನಿರ್ದೇಶನದ ಹಾರರ್ ಸಿನಿಮಾ 'ಚಂದ್ರಲೇಖ'. ಸದ್ಯ ರಿಲೀಸ್ ಗೆ ರೆಡಿಯಾಗಿದೆ. ಇಲ್ಲಿ ಚಿರುಗೆ ಸಾನ್ವಿ ಜೋಡಿಯಾಗಿದ್ದು ಮಾಸ್ ಸಿನಿಮಾಗಳ ನಿರ್ದೇಶಕ ಓಂಪ್ರಕಾಶ್ ರಾವ್ ಹಾರರ್ ಸಿನಿಮಾದಲ್ಲಿ ಚಿರು ಮೂಲಕ ಹೇಗೆ ಥ್ರಿಲ್ ಕೊಡ್ಬಹುದು ಅನ್ನೋ ಕುತೂಹಲ ಚಿತ್ರಪ್ರೇಮಿಗಳಿಗಿದೆ.

ಪಯ್ಯ ಅಜಿತ್ ಪವರ್ಫುಲ್ ಸಿನಿಮಾ

ತಮಿಳಿನ 'ಪಯ್ಯ' ಚಿತ್ರದ ರೀಮೇಕ್ ಅಜಿತ್ ಹಾಡುಗಳು ಈಗಾಗ್ಲೇ ಮಾರುಕಟ್ಟೆಯಲ್ಲಿವೆ. ಮಹೇಶ್ ಬಾಬು ಡೈರೆಕ್ಟ್ ಮಾಡಿರೋ ಲವ್ ಸ್ಟೋರಿ ಥ್ರಿಲ್ ಕೊಡೋ ನಿರೀಕ್ಷೆಯಿದ್ದು ಚಿತ್ರ ಮಾರ್ಚ್ನಲ್ಲಿ ತೆರೆಗೆ ಬರೋ ನಿರೀಕ್ಷೆಯಿದೆ

ಅಯ್ಯ-2 ಶೂಟಿಂಗ್ ಕೊನೇ ಹಂತದಲ್ಲಿ

ದರ್ಶನ್, ಓಂಪ್ರಕಾಶ್ ರಾವ್ ಜೋಡಿಯ ಸೂಪರ್ ಡೂಪರ್ ಹಿಟ್ 'ಅಯ್ಯ' ಸಿನಿಮಾ ಟೈಟಲ್ ನಲ್ಲೇ ಬರ್ತಿರೋ 'ಅಯ್ಯ 2'ನಲ್ಲಿ ಚಿರು ಪೊಲೀಸ್ ಮಾತ್ರ ಮಾಡ್ತಿದ್ದು ಐಶ್ವರ್ಯ ದೇವನ್ ಚಿರುಗೆ ಜೋಡಿ.

ಸಾಮ್ರಾಟ್ ಶೂಟಿಂಗ್ ಇನ್ ಪ್ರೊಗ್ರೆಸ್

ಸಾಮ್ರಾಟ್ ಅನ್ನೋ ಮಾಸ್ ಟೈಟಲ್ ಸಿನಿಮಾ ಕೂಡ ಶೂಟಿಂಗ್ ಹಂತದಲ್ಲಿದ್ದು 'ಅಯ್ಯ-2' ನಂತರ ಚಿರು ಸಾಮ್ರಾಟ್ ನಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲಿದ್ದಾರೆ.

ರುದ್ರತಾಂಡವ ಆಡಲಿದ್ದಾರೆ ಚಿರು

'ರಾಜಾಹುಲಿ' ಯಶಸ್ವಿಯಾದ ನಂತರ ತಮಿಳಿನ ಮತ್ತೊಂದು ಸಿನಿಮಾ 'ಪಾಂಡಿಯನಾಡು' ಚಿತ್ರವನ್ನ ನಿರ್ದೇಶಕ ಗುರು ದೇಶಪಾಂಡೆ ರೀಮೇಕ್ ಮಾಡ್ತಿದ್ದು ಚಿರುವನ್ನ 'ರುದ್ರತಾಂಡ' ಚಿತ್ರಕ್ಕೆ ರೆಡಿ ಮಾಡಿಸೋ ಮೂಲಕ ಬಿಜಿಯೆಸ್ಟ್ ಹೀರೋ ರೋಲಿಂಗ್ ಟೈಟಲ್ ತೊಡಿಸಿದ್ದಾರೆ.

English summary
Kannada actor Chiranjeevi Sarja career is soaring high. And just like 2013, this year too Chiru is very busy in 2014. Now he is busy in Chandralekha, Ayya 2, Samrat, Rudratandava and Payya remake movies.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada