»   » ರಜನಿಕಾಂತ್ ಗಿಂತಲೂ ಅಧಿಕ ಸಂಭಾವನೆ ಪಡೆದ ತಲೈವಾ

ರಜನಿಕಾಂತ್ ಗಿಂತಲೂ ಅಧಿಕ ಸಂಭಾವನೆ ಪಡೆದ ತಲೈವಾ

By: ಜೀವನರಸಿಕ
Subscribe to Filmibeat Kannada

ಬಹುಶಃ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೂ ಸಿಗದ ಸಂಭಾವನೆ ಇದು. ಈ ಸಂಭಾವನೆ ಪಡೀತಾ ಇರೋದು ರಜನಿಕಾಂತ್ ಅಣ್ಣ. ಮೇಲುಕೋಟೆಯಲ್ಲಿ 'ಚಂದ್ರಮುಖಿ' (ಆಪ್ತಮಿತ್ರ ರೀಮೇಕ್) ಸಿನಿಮಾದ ಶೂಟಿಂಗ್ ನಡೀತಾ ಇತ್ತು.

ಸಾಂಗ್ ಶೂಟಿಂಗ್ ನಲ್ಲಿ ಒಮ್ಮೆ ರಜನಿ ಗೆಳೆಯ ರಾಜ್ ಬಹದ್ದೂರ್ ಗೆ ಮೂರು ಸೆಕೆಂಡ್ ನ ಒಂದು ಕ್ಯಾರೆಕ್ಟರ್ ಮಾಡು ಅಂದ್ರು. ರಾಜ್ ಬಹಾದ್ದೂರ್ ಮಾಡಿದ್ರು. ಅಲ್ಲಿ ಅವ್ರು ಹೇಳಿದ್ದು ಒಂದೇ ಪದ "ರಿಪೀಟ್" ಅಂತ. 'ಚಂದ್ರಮುಖಿ' ಸಿನಿಮಾದ ಹಾಡಲ್ಲಿ ಬರೋ ಈ ಒಂದು ಪದ ಹೇಳೋ ವ್ಯಕ್ತಿ ಯಾರು ಅಂತ ಕಾಲಿವುಡ್ ತಲೆಕೆಡಿಸಿಕೊಂಡಿತ್ತು. [ಕನ್ನಡಕ್ಕೆ 'ಒನ್ ವೇ'ಯಲ್ಲಿ ಬರಲಿರುವ ರಜನಿಕಾಂತ್]


ಚಿತ್ರದ ರಿಲೀಸ್ ಟೈಮಲ್ಲಿ ಮಾಧ್ಯಮ ಒಂದರಲ್ಲಿ ತೂರಿ ಬಂದ ಪ್ರಶ್ನೆಗೆ ರಜನಿ ಹೇಳಿದ್ರು. ಅದು ಈ ತಲೈವಾನ ಅಣ್ಣ. ಹೌದಾ ಅಂತ ಚಾನೆಲ್ ನವರು ತಲೆ ಕೆರೆದುಕೊಳ್ಳುವಾಗ ರಜನಿ ಹೇಳಿದ್ರು. ಆ ತಲೈವಾನಿಂದಲೇ ಈ ರಜನಿ ಸ್ಟಾರ್ ಆಗಿದ್ದು, ಸ್ಟೈಲ್ ಕಿಂಗ್ ಆಗಿದ್ದು, ಈಗ ನಿಮ್ಮ ಮುಂದೆ ನಿಂತಿರೋದು ಅಂತ. ಅದಾದ ನಂತರ ರಾಜ್ ಬಹಾದ್ದೂರ್ ರನ್ನ ತಮಿಳುನಾಡಲ್ಲಿ ತಲೈವಾಗ ತಲೈವಾ ಅಂತಾರೆ. ಅಂದ್ರೆ ಅಣ್ಣನಿಗೆ ಅಣ್ಣ ಅಂತ.

ಈಗ ಮ್ಯಾಟ್ರಿಗೆ ಬರೋಣ. ಈ ರಾಜ್ ಬಹಾದ್ದೂರ್ ನಟಿಸ್ತಾ ಇರೋ ಚಿತ್ರಕ್ಕೆ ಋಷಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದ ಹೆಸರು 'ಒನ್ ವೇ'. ಈ ಚಿತ್ರದ ತಮಿಳು ರೈಟ್ಸ್ ರು.30 ಲಕ್ಷಕ್ಕೆ ಮಾರಾಟವಾಗಿದೆ. ಅಂದರೆ ಒಂದು ಪದ ಹೇಳಿದ್ದಕ್ಕೇ ರು.30 ಲಕ್ಷ. ಇನ್ನು ಇಡೀ ಸಿನಿಮಾ ಮಾಡಿದ್ದರೆ ಲೆಕ್ಕಹಾಕಿ ಸಂಭಾವನೆ ಎಷ್ಟಾಗುತ್ತಿತ್ತು ಎಂದು.

'ಒನ್ ವೇ' ಚಿತ್ರತಂಡ ರಜನಿಕಾಂತ್ ಗಾಗಿ ಒಂದು ಅದ್ಭುತ ಸಾಂಗನ್ನೂ ರೆಡಿಮಾಡಿದೆ. ಅದೂ ಸದ್ಯದಲ್ಲೆ ನಿಮ್ಮನ್ನ ರಂಜಿಸೋಕೆ ಬರಲಿದೆ. ರಜನಿ ಅನ್ನೋ ರಂಜನೀಯ ಸರಳ ಶ್ರೀಮಂತ ವ್ಯಕ್ತಿತ್ವದ ನಿಮಗೇ ಗೊತ್ತಿಲ್ಲದ ಕಥೆಗಳನ್ನ ನಾವ್ ನಿಮ್ಗೆ ಕೊಡ್ತಾ ಇರ್ತೀವಿ ಮಿಸ್ ಮಾಡದೇ ನೋಡ್ತಾ ಇರಿ.

English summary
His remuneration is more than Super Star Rajinikanth. Tamil people called his as Talaivaaga Talai. Who is he? Present now he is acting in Kannada movie 'One Way'. He is none other than Rajini close friend Raj Bahadur. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada