»   » ಸ್ಯಾಂಡಲ್ ವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಯಾರು?

ಸ್ಯಾಂಡಲ್ ವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಯಾರು?

Posted By: ಜೀವನರಸಿಕ
Subscribe to Filmibeat Kannada

ಬಾಲಿವುಡ್ ಬಿಜಿನೆಸ್ ನೂರಾರು ಕೋಟಿಗಳಲ್ಲಿ ನಡೆದರೆ ಕನ್ನಡ ಹತ್ತಾರು ಕೋಟಿಗಳಲ್ಲಿ ನಡೀತಾ ಇರೋ ಚಿತ್ರರಂಗ. ಆದರೆ ಕನ್ನಡ ಚಿತ್ರರಂಗ ಕೂಡ ಪ್ರತಿಭೆಗಳ ಸಾಗರ. ಬಾಲಿವುಡ್ ನ ನಟರಿಗೇ ಸೆಡ್ಡು ಹೊಡೆಯುವಂತಾ ಅದ್ಭುತ ನಟರು ಕನ್ನಡದಲ್ಲಿದ್ದಾರೆ.

ಬಾಲಿವುಡ್ ನಟರು ರು.20 ಕೋಟಿ ಸಂಭಾವನೆ ಪಡೆದರೆ ಕನ್ನಡದ ನಟರು ರು.2 ಕೋಟಿ ಪಡೀತಾರೆ ಅಷ್ಟೇ. ಸಂಭಾವನೆಯಲ್ಲಿ ಮಾತ್ರ ಕನ್ನಡದ ನಮ್ಮ ಎಸ್ಆರ್ಕೆ ಶಿವರಾಜ್ ಕುಮಾರ್ ರು.3 ಕೋಟಿ ಪಡೆದ್ರೆ ಬಾಲಿವುಡ್ ಎಸ್ಆರ್ಕೆ ರು.30 ಕೋಟಿ ಪಡೀತಾರೆ.

ಅಂದ್ರೆ 8 ಪಟ್ಟು ಜಾಸ್ತಿ ಪಡೆಯೋ ಶಾರುಖ್ ರಲ್ಲಿ ಬೇರೆ ಪ್ರತಿಭೆ ಇದ್ಯಾ. ಅವ್ರು ಮಾಡೋದು ಅಭಿನಯಾನೇ ನಾವು ಮಾಡೋದು. ಆದರೆ ಬಾಲಿವುಡ್ ಮಾರ್ಕೆಟ್ ದೊಡ್ಡದು ಅಷ್ಟೇ. ನಮ್ಮಲ್ಲೂ ಅಮೀರ್ ಖಾನ್ ರಂತಹಾ ಮಿಸ್ಟರ್ ಪರ್ಫೆಕ್ಷನಿಸ್ಟ್ ಗಳಿದ್ದಾರೆ.

ಅದೇ ರೀತಿ ನಮ್ಮಲ್ಲೂ ಖಿಲಾಡಿಗಳಿದ್ದಾರೆ. ನಮ್ಮಲ್ಲೂ ಆಕ್ಷನ್ ಕಿಂಗ್ ಗಳಿದ್ದಾರೆ. ಆದರೆ ಅವರು ಯಾರು ಗೊತ್ತಾ? ಬಾಲಿವುಡ್ ನಲ್ಲಿ ಕನ್ನಡದ ನಟರಿಗೆ ಹೋಲಿಕೆಯಾಗೋರ್ಯಾರಿದ್ದಾರೆ. ತುಂಬಾನೇ ಇಂಟರೆಸ್ಟಿಂಗ್ ಹೋಲಿಕೆ ಇಲ್ಲಿದೆ ನೋಡಿ.

ಸ್ಯಾಂಡಲ್ ವುಡ್ ಬಿಗ್ ಬಿ ಅಂದ್ರೆ ಕಿಚ್ಚ ಸುದೀಪ್

ಕಂಚಿನ ಕಂಠದ ಕಿಚ್ಚ ಸುದೀಪ್ ಅವರು ಅಮಿತಾಭ್ ಬಚ್ಚನ್ ರ ಕಂಠವನ್ನ ಹೋಲೋ ಕನ್ನಡದ ಏಕೈಕ ನಟ. ಕನ್ನಡದ ಬಿಗ್ ಬಿ ಅಂದ್ರೆ ಕಿಚ್ಚ ಅನ್ನೋದು ಎಲ್ಲರಿಗೂ ಗೊತ್ತಾಗುವಂತಾದ್ದು. ಕಿಚ್ಚನ ಹೈಟು ಕೂಡ ಅಮಿತಾಭ್ ಬಚ್ಚನ್ ಗೆ ಹೋಲಿಕೆಯಾಗುತ್ತೆ.

ಸ್ಯಾಂಡಲ್ ವುಡ್ ಸಲ್ಮಾನ್ ಖಾನ್ ದರ್ಶನ್

ಸ್ಯಾಂಡಲ್ ವುಡ್ ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಾಕ್ಸಾಫೀಸ್ ಕಾ ಸುಲ್ತಾನ್. ಹೈಟಲ್ಲಿ ದರ್ಶನ್ ಗೆ ಸಲ್ಲೂ ಸಮನಾಗಿಲ್ಲದಿದ್ರೂ ಇಬ್ಬರ ಸಿನಿಮಾಗಳೂ ಕೂಡ ಕೋಟಿ ಕೋಟಿ ಕೊಳ್ಳೆ ಹೊಡೀತವೆ. ಬಾಲಿವುಡ್ ನಲ್ಲಿ ಹೆಚ್ಚು ಮಾಸ್ ಸಿನಿಪ್ರೇಮಿಗಳನ್ನ ಹೊಂದಿರೋ ನಟ ಅಂದ್ರೆ ಸಲ್ಮಾನ್, ಕನ್ನಡದಲ್ಲಿ ದರ್ಶನ್.

ಸ್ಯಾಂಡಲ್ ವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್

ಸ್ಯಾಂಡಲ್ ವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಂದ್ರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಪುನೀತ್ ರಾಜ್ ಕುಮಾರ್ ಸಿನಿಮಾಗಳು ಸೋಲೋದು ತೀರಾ ಕಡಿಮೆ. ತುಂಬಾ ಲೆಕ್ಕಾಚಾರ ಹಾಕಿ ಸಿನಿಮಾ ಮಾಡೋದು ಅಮೀರ್ ಸ್ಪೆಷಾಲಿಟಿ ಹಾಗೇ ಪುನೀತ್ ಲೆಕ್ಕಾಚಾರ ಕೂಡ.

ಸ್ಯಾಂಡಲ್ವುಡ್ ಕಿಂಗ್ ಹ್ಯಾಟ್ರಿಕ್ ಹೀರೋ

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಆದ್ರೆ ಸ್ಯಾಂಡಲ್ ವುಡ್ ನ ಕಿಂಗ್ ಅಂದ್ರೆ ಶಿವರಾಜ್ ಕುಮಾರ್. ಶಾರುಖ್ ಖಾನ್ ಕೂಡ ಎಸ್ಆರ್ ಕೆ ಶಿವರಾಜ್ ಕುಮಾರ್ ಕೂಡ ಎಸ್ಆರ್ ಕೆ. ಶಾರುಖ್ ಖಾನ್ ಕೂಡ ಬಾಲಿವುಡ್ ಫ್ಯಾಮಿಲಿ ಸಿನಿಮಾಗಳ ಸರದಾರ. ಶಿವಣ್ಣ ಕೂಡ ಫ್ಯಾಮಿಲಿ ಸಿನಿಮಾಗಳ ಸರದಾರ.

ಸ್ಯಾಂಡಲ್ ವುಡ್ ನ ಇಮ್ರಾನ್ ಹಶ್ಮಿ

ಇಮ್ರಾನ್ ಹಶ್ಮಿ ವಯಸ್ಸಿನಲ್ಲಿ ಚಿಕ್ಕವರಾದ್ರೂ ರಸಿಕರರಾಜ. ಕ್ರೇಜಿಸ್ಟಾರ್ ರವಿಚಂದ್ರನ್ ಕನ್ನಡದ ಇಮ್ರಾನ್ ಹಶ್ಮಿ. ರೋಮ್ಯಾನ್ಸ್ ನಲ್ಲಿ ರವಿಚಂದ್ರನ್ ರನ್ನ ಮೀರಿಸೋ ಕನ್ನಡದ ನಟ ಇಲ್ಲ. ಬಾಲಿವುಡ್ ನಲ್ಲಿ ರೋಮ್ಯಾನ್ಸ್ ಅಂದ್ರೇ ಇಮ್ರಾನ್ ಹಶ್ಮಿ.

ಸ್ಯಾಂಡಲ್ ವುಡ್ ನ ಖಿಲಾಡಿ

ಬಾಲಿವುಡ್ ನಲ್ಲಿ ಅಕ್ಷಯ್ ಕುಮಾರ್ ಅನ್ನೋ ಖಿಲಾಡಿ ಇದ್ದ ಹಾಗೆ ಕನ್ನಡದಲ್ಲೂ ಇರೋ ಒಬ್ಬ ಖಿಲಾಡಿ ಅಂದ್ರೆ ಯಶ್. ರಾಕಿಂಗ್ ಸ್ಟಾರ್ ಯಶ್ ಕಾಮಿಡಿಗೂ ಸೈ ಆಕ್ಷನ್ ಗೂ ಜೈ ಹಾಗಾಗೀನೇ ಯಶ್ ಗೆ ಅಕ್ಷಯ್ ಕುಮಾರ್ ಹೋಲಿಕೆಯಾಗ್ತಾರೆ.

English summary
Who is Mr. Perfectionist in Sandalwood? Likewise who is Sandalwood Big B, Sandalwood Salman Khan, Sandalwood Emraan Hashmi? Here is the similarities and comparision of Sandalwood stars and Bollywood stars.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada