»   » ಯಾರೀ ಮೈತ್ರಿಯಾ ಗೌಡ? ರಿಯಲ್ ಕಹಾನಿ

ಯಾರೀ ಮೈತ್ರಿಯಾ ಗೌಡ? ರಿಯಲ್ ಕಹಾನಿ

Posted By:
Subscribe to Filmibeat Kannada

ಮೈತ್ರಿಯಾ ಗೌಡ ಯಾರಿಗ್ತಾನೆ ಗೊತ್ತಿಲ್ಲ ಹೇಳಿ? ಕಳೆದ ಎರಡು ತಿಂಗಳಿಂದ ಎಲ್ಲರ ಮನೆಯಲ್ಲೂ ಮೈತ್ರಿಯಾಳದ್ದೇ ಸುದ್ದಿ. ಡಿ.ವಿ.ಎಸ್ ಪುತ್ರನ ವಿಷಯದಿಂದ ಈಗ ಏಕ್ದಂ ಫೇಮಸ್ ಆಗಿರುವ ಮೈತ್ರಿಯಾ ಅನ್ನುವ 'ನಟಿಮಣಿ'ಯನ್ನ ಅದಕ್ಕೂ ಮುನ್ನ ಕೇಳುವವರೂ ಇರಲಿಲ್ಲ.

ಎಲ್ಲಾ ಸುದ್ದಿ ಮಾಧ್ಯಮಗಳಲ್ಲಿ ಮೈತ್ರಿಯಾ 'ನಟಿ' ಅಂತ ಹೇಳ್ತಿದ್ದಾರೆ. ಆದರೆ ಸಿನಿ ಪ್ರಿಯರು ತೆರೆಮೇಲೆ ಮೈತ್ರಿಯಾಳನ್ನ ನೋಡಿರುವ ನೆನಪಿದ್ಯಾ? ಮೈತ್ರಿಯಾ ನಟಿಸಿರುವ ಚಿತ್ರಗಳಾವುವು.? ಮೈತ್ರಿಯಾ ಹಿನ್ನಲೆ ಏನು? ಇದು ಯಾರಿಗೂ ಗೊತ್ತಿಲ್ಲ.

ಮೈತ್ರಿಯಾಳ ಅಸಲಿ ರೀಲ್ ಕಹಾನಿಯನ್ನ ನಿಮ್ಮ ಮಂದೆ ಇಡ್ತಾಯಿದ್ದೀವಿ. ಈಗ ಮೈತ್ರಿಯಾ ಗೌಡ ಅಂತ ಗುರುತಿಸಿಕೊಳ್ಳುತ್ತಿರುವ ಈಕೆ ಮಾಡಲಿಂಗ್ ನಲ್ಲಿ ಶೃತಿ ಗೌಡ, ಶಿವಾನಿ ಅಂತಲೂ ಪರಿಚಿತ. ಸ್ಲೈಡ್ ನಲ್ಲಿ ನೋಡಿ.

ಸಕ್ಕರೆ ನಾಡಿನ ಹಳ್ಳಿ ಗೊಂಬೆ

ಮೈತ್ರಿಯಾ ಹುಟ್ಟಿದ್ದು ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನಲ್ಲಿ. ಬಾಲ್ಯವನ್ನ ಮಂಡ್ಯದಲ್ಲೇ ಕಳೆದ ಮೈತ್ರಿಯಾ ಬೆಂಗಳೂರಿಗೆ ಕಾಲಿಟ್ಟಿದ್ದು ಹದಿಮೂರು ವರ್ಷದ ಹುಡುಗಿಯಾಗಿದ್ದಾಗ.

ಟೀಚರಮ್ಮನ ಮಗಳು

ಮೂಲತಃ ಮಂಡ್ಯದಲ್ಲೇ ನೆಲೆಯೂರಿರುವ ಮೈತ್ರಿಯಾ ಕುಟುಂಬಕ್ಕೆ ವ್ಯವಸಾಯವೇ ಜೀವಾಳ. ಮೈತ್ರಿಯಾ ತಂದೆ ಮತ್ತು ತಾತ ವ್ಯವಸಾಯ ಮಾಡುತ್ತಲೇ ಜೀವನ ನಡೆಸುತ್ತಿದ್ದಾರೆ. ಇನ್ನು ಮೈತ್ರಿಯಾ ತಾಯಿ ಇಂದಿರಾ ಹೈ ಸ್ಕೂಲ್ ಟೀಚರ್ ಆಗಿದ್ದವರು.

ಮಾಡೆಲಿಂಗ್ ನ ಕೋಲ್ಮಿಂಚು

ಚಿಕ್ಕವಯಸ್ಸಲ್ಲೇ ಬಣ್ಣದ ಪ್ರಪಂಚಕ್ಕೆ ಅಡಿಯಿಟ್ಟ ಮೈತ್ರಿಯಾ ಸಣ್ಣ ಪುಟ್ಟ ಜಾಹೀರಾತುಗಳಲ್ಲಿ ಮಿಂಚುವುದಕ್ಕೆ ಶುರು ಮಾಡಿದ್ದರು. ಮಾಡೆಲಿಂಗ್ ಪ್ರಪಂಚಕ್ಕೆ ಕಾಲಿಟ್ಟ ಮೈತ್ರಿಯಾ ಅನೇಕ ಟಿವಿ ಆಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಿಮಗೆ ನೆನಪಿಲ್ಲ ಅಂದ್ರೆ, ಒಮ್ಮೆ ರೆಕ್ಸೋನಾ ಸೋಪ್ ಆಡ್ ನೆನಪಿಸಿಕೊಳ್ಳಿ.

ಸೂರ್ಯನಿಗೆ ಜೋಡಿಯಾದ ಚಂದ್ರಿಕೆ

ಓದಿಗೆ ತಿಲಾಂಜಲಿ ಬಿಟ್ಟು, ಬಣ್ಣ ಹಚ್ಚೋಕು ಶುರು ಮಾಡಿದ ಮೈತ್ರಿಯಾ 'ಸೂರ್ಯ ದಿ ಗ್ರೇಟ್' ಚಿತ್ರದಲ್ಲಿ ಅಜಯ್ ರಾವ್ ಗೆ ನಾಯಕಿಯಾಗಿ ನಟಿಸಿದ್ರು. ಶಿವಾನಿ ಹೆಸರಿನ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ಮೈತ್ರಿಯಾಗೆ ಅಂದು ಯಶಸ್ಸು ಸಿಗಲಿಲ್ಲ.

ಸಣ್ಣ-ಪುಟ್ಟ ಪಾತ್ರಗಳಲ್ಲಿ ಅಭಿನಯ

'ಸೂರ್ಯ ದಿ ಗ್ರೇಟ್' ಚಿತ್ರ ಸಕ್ಸಸ್ ಆಗ್ಲಿಲ್ಲ. ಹಾಗೆ ಮೈತ್ರಿಯಾ ಕೂಡ ಹೇಗೆ ಬಂದ್ರೋ, ಹಾಗೆ ತೆರೆಮೇಲೆ ಮಾಯವಾಗ್ಬಿಟ್ರು. ವರ್ಷಗಳ ನಂತರ ಪುನೀತ್ ರಾಜ್ ಕುಮಾರ್ ಅಭಿನಯದ 'ಮೌರ್ಯ' ಮತ್ತು ಹೆಸರೇ ಕೇಳಿರದ 'ಹೃದಯ ಐ ಮಿಸ್ ಯೂ' ಚಿತ್ರದಲ್ಲಿ ಪುಟ್ಟದೊಂದು ಪಾತ್ರ ಮಾಡಿದ್ದು ಬಿಟ್ರೆ ಮೈತ್ರಿಯಾ ಮತ್ತೆ ಬಣ್ಣ ಹಚ್ಚಿದ್ದೇ ಇಲ್ಲ.

'ಟೋಪಿ' ಹಾಕಿದ ನಟಿ

ಗಾಂಧಿನಗರದ ಕೆಲವರ ಕೃಪೆಯಿಂದ ಉಪೇಂದ್ರ ಜೊತೆ 'ಟೋಪಿವಾಲ' ಮತ್ತು 'ನಮಸ್ತೆ ಇಂಡಿಯಾ' ಚಿತ್ರದಲ್ಲಿ ಮೈತ್ರಿಯಾ ನಟಿಸಿದ್ರು.

ರೆಬೆಲ್ ಸ್ಟಾರ್ ಗೆ ಆಪ್ತೆ!

ಮಂಡ್ಯದಿಂದ ಬಂದಿರುವ ಕಾರಣ ರೆಬೆಲ್ ಸ್ಟಾರ್ ಡಾ.ಅಂಬರೀಶ್ ಗೆ ಆಪ್ತೆ ಅಂತ ಹೇಳಿಕೊಂಡಿರುವ ಮೈತ್ರಿಯಾ, ಅಂಬಿ ಕುರಿತು ಸುದ್ದಿ ಮಾಧ್ಯಮಗಳಲ್ಲಿನ ಅನೇಕ ಚರ್ಚಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ರು.

ವಿವಾದದ ಕೇಂದ್ರ ಬಿಂದು

ಇದ್ಯಾವುದರಲ್ಲೂ ಗುರುತಿಸಿಕೊಳ್ಳದ ಮೈತ್ರಿಯಾ ವಿವಾದದಿಂದ ಹೆಸರುವಾಸಿಯಾಗಿದ್ದಾರೆ. ಸದ್ಯಕ್ಕೆ ಟಿವಿ ಚಾನೆಲ್ ಗಳಲ್ಲಿ 'ನಟಿ'ಯಂತೆ ಮಿಂಚುತ್ತಿರುವ ಮೈತ್ರಿಯಾ 'ನಟಿ' ಅಂತ ಜನಪ್ರಿಯಾವಾಗೋದು ಅದ್ಯಾವಾಗಲೋ?

English summary
Model and Actress Mythriya Gowda occupy news columns for the past few months for alleged affair with Karthik Gowda, NDA minister`s son. Let`s take a look at Mythriya Gowda`s career as Kannada movie artist. the filmography.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada