For Quick Alerts
ALLOW NOTIFICATIONS  
For Daily Alerts

ಯಾರು ಈ ನೇಸಮಣಿ: ಇವನಿಗಾಗಿ ಯಾಕೆ ಜಗತ್ತೇ ಪ್ರಾರ್ಥಿಸುತ್ತಿದೆ?

|

ಎರಡನೇ ಬಾರಿ ಭಾರತದ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇಡೀ ವಿಶ್ವವೇ ಇದಕ್ಕೆ ಸಾಕ್ಷಿಯಾಗುತ್ತಿದೆ. ಹೀಗಿದ್ದರೂ ಮೋದಿಯನ್ನ ಮೀರಿ ನೇಸಮಣಿ ಟ್ರೆಂಡಿಂಗ್ ನಲ್ಲಿದ್ದಾನೆ. ಇದನ್ನ ಕಂಡು ಭಾರತೀಯರು ಹಾಗೂ ವಿಶ್ವದ ಜನರು ಕೂಡ ಅಚ್ಚರಿಗೊಳಗಾಗಿದ್ದಾರೆ,

#pray for nesamani ಮತ್ತು #nesamani ಹ್ಯಾಷ್ ಟ್ಯಾಗ್ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ನಲ್ಲಿದ್ದು ಈ ನೇಸಮಣಿ ಯಾರು? ಯಾಕೆ ಈ ಪ್ರಾರ್ಥನೆ ಎಂಬುದು ಗೊತ್ತಿಲ್ಲದ ಜನರು ತಲೆಕೆಡಿಸಿಕೊಂಡು ಕೂತಿದ್ದಾರೆ.

ನೇಸಮಣಿ ಟ್ರೆಂಡಿಂಗ್ ನಲ್ಲಿ ತಮಿಳು ನಟ ವಡಿವೇಲು ಅವರ ದೃಶ್ಯಗಳು, ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ. ರಾಷ್ಟ್ರದ ನಾಯಕರು, ಜಗತ್ತಿನ ಸೆಲೆಬ್ರಿಟಿಗಳು, ಜನಸಮಾನ್ಯರು ಈ ನೇಸಮಣಿಯನ್ನ ಬದುಕಿಸುವುದಕ್ಕಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ. ಅಷ್ಟಕ್ಕೂ, ಈ ನೇಸಮಣಿ ಯಾರು? ಏನಿದು #pray for nesamani ಅಭಿಯಾನ ಎಂಬುದರ ಪೂರ್ತಿ ವಿವರ ಇಲ್ಲಿದೆ? ಮುಂದೆ ಓದಿ....

ಎಲ್ಲದಕ್ಕೂ ಕಾರಣ ವಡಿವೇಲು ದೃಶ್ಯ

ಎಲ್ಲದಕ್ಕೂ ಕಾರಣ ವಡಿವೇಲು ದೃಶ್ಯ

2001ರಲ್ಲಿ ಮೂಡಿಬಂದಿದ್ದ ಫ್ರೆಂಡ್ಸ್ ಚಿತ್ರದ ಕಾಮಿಡಿ ದೃಶ್ಯ ಈಗ ಈ ನೇಸಮಣಿ ಟ್ರೆಂಡಿಂಗ್ ಆಗಲು ಕಾರಣವಾಗಿದೆ. ತಮಿಳು ನಟ ವಿಜಯ್, ಸೂರ್ಯ ಅಭಿನಯಿಸಿದ್ದ ಈ ಸಿನಿಮಾದಲ್ಲಿ ವಡಿವೇಲು, ರಮೇಶ್ ಖನ್ನಾ ನಟಿಸಿದ್ದರು. ಈ ಚಿತ್ರದಲ್ಲಿ ವಡಿವೇಲು ನೇಸಮಣಿ ಎಂಬ ಪಾತ್ರದಲ್ಲಿ ನಟಿಸಿದ್ದರು. ಇದೀಗ, ಅದೇ ಪಾತ್ರ ಟ್ವಿಟ್ಟರ್ ಲೋಕದಲ್ಲಿ ಭಾರಿ ಸದ್ದು ಮಾಡ್ತಿದೆ. ಅದಕ್ಕೂ ಕಾರಣವೂ ಇದೆ.

ನೇಸಮಣಿಗೆ ಏನಾಗಿದೆ?

ಅಂದ್ಹಾಗೆ, ನೇಸಮಣಿ ಅಂದ್ರೆ ವಡಿವೇಲು (ಕಟ್ಟಡ ಕಂಟ್ರಾಕ್ಟರ್) ಒಂದು ಐತಿಹಾಸಿಕ ಕಟ್ಟಡವನ್ನ ನವೀಕರಣ ಮಾಡುವ ಗುತ್ತಿಗೆ ಪಡೆದುಕೊಂಡಿರುತ್ತಾನೆ. ಕೆಲವರನ್ನ ಕೆಲಸಕ್ಕೆ ಇಟ್ಕೊಂಡು ಕಟ್ಟಡ ನವೀಕರಣ ಕೆಲಸ ಮಾಡಿಸುತ್ತಾನೆ. ಈ ವೇಳೆ ಕಟ್ಟಡದ ಮಹಡಿಯಲ್ಲಿದ್ದ ವ್ಯಕ್ತಿ (ರಮೇಶ್ ಖನ್ನಾ) ಆಕಸ್ಮಿಕವಾಗಿ ಸುತ್ತಿಗೆಯನ್ನ ಕೆಳಗೆ ಬೀಳಿಸುತ್ತಾನೆ. ಅದು ನೇರವಾಗಿ ಬಂದ ಕೆಳಗೆ ನಿಂತಿದ್ದ ನೇಸಮಣಿ ತಲೆಯ ಮೇಲೆ ಬೀಳುತ್ತೆ. ತಲೆಯ ಮೇಲೆ ಬಿದ್ದ ಕೂಡಲೇ ನೇಸಮಣಿ ಮೂರ್ಛೆ ಹೋಗ್ತಾನೆ. ಈ ವಿಡಿಯೋ ಈಗ ಸಿಕ್ಕಾಪಟ್ಟೆ ಟ್ರೆಂಡ್ ಆಗ್ತಿದೆ.

ನೇಸಮಣಿ ಸ್ಥಿತಿ ಹೇಗಿದೆ?

ನೇಸಮಣಿ ಸ್ಥಿತಿ ಹೇಗಿದೆ?

ತಲೆಯ ಮೇಲೆ ಸುತ್ತಿಗೆ ಬೀಳುತ್ತಿದ್ದಂತೆ ಮೂರ್ಛೆ ಹೋದ ನೇಸಮಣಿಯ ಸ್ಥಿತಿ ಈಗ ಹೇಗಿದೆ? ನೇಸಮಣಿಗೆ ಏನಾಗಿದೆ ಎಂದು ಇಡೀ ಜಗತ್ತು ಆತಂಕಗೊಂಡಿದೆ. ಅದಕ್ಕಾಗಿ ವಿಶ್ವಾದ್ಯಂತ ಎಲ್ಲರೂ ಪ್ರಾರ್ಥನೆ ಮಾಡುತ್ತಿದ್ದಾರೆ. ಹೀಗೆ ಬಗೆ ಬಗೆಯ ಟ್ರೋಲ್ ಗಳು ನೇಸಮಣಿ ಹೆಸರಿನಲ್ಲಿ ನಡೆಯುತ್ತಿದೆ.

ಇಡೀ ದೇಶದ ಗಮನ ಸೆಳೆದ ಪ್ರಕರಣ

ಇಡೀ ದೇಶದ ಗಮನ ಸೆಳೆದ ಪ್ರಕರಣ

ನಾನು ಉತ್ತರ ಭಾರತದಿಂದ ನೇಸಮಣಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥನೆ ಮಾಡುತ್ತಿದ್ದೇನೆ ಎಂದು ವ್ಯಕ್ತಿಯೊಬ್ಬ ಪೇಪರ್ ಮೇಲೆ ಬರೆದುಕೊಂಡು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾನೆ.

ಹೆಲ್ಮೆಟ್ ಹಾಕಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ

ಹೆಲ್ಮೆಟ್ ಹಾಕಿದ್ದರೆ ಈ ಘಟನೆ ನಡೆಯುತ್ತಿರಲಿಲ್ಲ

ಅಹಮದಬಾದ್ ಪೊಲೀಸ್ ಇಲಾಖೆಯವರು ಈ ನೇಸಮಣಿಯನ್ನ ಬಳಸಿ ಜಾಗೃತಿ ಮೂಡಿಸುತ್ತಿದ್ದಾರೆ. 'ಆ ಘಟನೆ ನಡೆದಾಗ ನೇಸಮಣಿ ತಲೆಗೆ ಹೆಲ್ಮೆಟ್ ಹಾಕಿಕೊಂಡಿದ್ದರೇ ಈ ಅವಘಡ ಸಂಭವಿಸುತ್ತಿರಲಿಲ್ಲ. ಹೀಗಾಗಿ, ಮನೆಯೊಳಗೂ ಅಥವಾ ರಸ್ತೆಯಲ್ಲೂ ಹೆಲ್ಮೆಟ್ ಹಾಕಿಕೊಳ್ಳಿ'' ಎಂದು ಟ್ವೀಟ್ ಮಾಡಿದೆ.

ಟಂಪ್, ಇಮ್ರಾನ್ ಖಾನ್ ಪ್ರಾರ್ಥನೆ

ಟಂಪ್, ಇಮ್ರಾನ್ ಖಾನ್ ಪ್ರಾರ್ಥನೆ

ಅಮೇರಿಕಾ ಅಧ್ಯಕ್ಷ ಟಂಪ್, ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಸೇರಿದಂತೆ ಹಲವರು ನೇಸಮಣಿಗಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ. ನೇಸಮಣಿ ಆದಷ್ಟೂ ಬೇಗ ಚೇತರಿಸಿಕೊಳ್ಳಲಿ ಎಂದು ಕೇಳಿಕೊಳ್ಳುತ್ತಿದ್ದಾರೆ.

English summary
Who is Nesamani? why it's trending in all over India and world twitter. Contractor Nesamani is actually a fictional character from a 2001 Tamil film played by an iconic comedian.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more