For Quick Alerts
  ALLOW NOTIFICATIONS  
  For Daily Alerts

  ಪ್ರಣಿತಾ ಸುಭಾಷ್‌ರ ಮೆಚ್ಚಿನ ನಟ ಹಾಗೂ ಮೆಚ್ಚಿನ ಕನ್ನಡದ ನಟ ಯಾರು?

  |

  ನಟಿ ಪ್ರಣಿತಾ ಸುಭಾಷ್‌, ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯರಾಗಿರುತ್ತಾರೆ. ತಮ್ಮ ಅಭಿಮಾನಿಗಳೊಟ್ಟಿಗೆ ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಂವಾದ ಸಹ ನಡೆಸುತ್ತಿರುತ್ತಾರೆ.

  ಹೀಗೆಯೇ ಒಂದು ಚುಟುಕು ಸಂವಾದದಲ್ಲಿ ಪ್ರಣಿತಾ ರನ್ನು ಹಲವು ಪ್ರಶ್ನೆಗಳನ್ನು ಅಭಿಮಾನಿಗಳು ಕೇಳಿದ್ದಾರೆ. ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರವಾಗಿ ಚಿತ್ರಗಳನ್ನು, ವಿಡಿಯೋಗಳನ್ನು ಅಪ್‌ಲೋಡ್ ಮಾಡಿದ್ದಾರೆ ನಟಿ ಪ್ರಣಿತಾ.

  ಹತ್ತನೇ ತರಗತಿಯಲ್ಲಿ ಎಷ್ಟು ಅಂಕ ಗಳಿಸಿದ್ದಾರೆ ಗೊತ್ತೆ ನಟಿ ಪ್ರಣಿತಾ ಸುಭಾಷ್

  ಹತ್ತನೇ ತರಗತಿ ಅಂಕಗಳು, ಚಿಕ್ಕಂದಿನ ಫೋಟೊ, ಬಾಯ್‌ಫ್ರೆಂಡ್ ಫೊಟೊ ಹಾಕಿ, ಕಾರಿನ ಚಿತ್ರ, ಶೂಟಿಂಗ್ ಸ್ಥಳದ ಚಿತ್ರ ಇನ್ನೂ ಹಲವು ಬೇಡಿಕೆಗಳನ್ನು ಅಭಿಮಾನಿಗಳು ಇಟ್ಟಿದ್ದಾರೆ ಎಲ್ಲದರ ಚಿತ್ರ ಹಂಚಿಕೊಂಡಿದ್ದಾರೆ ಪ್ರಣಿತಾ. ಇದರ ಜೊತೆ 'ನಿಮ್ಮ ನೆಚ್ಚಿನ ಸಹನಟ ಯಾರು?' ಹಾಗೂ ಮೆಚ್ಚಿನ ಕನ್ನಡದ ನಟ ಯಾರು ಎಂಬ ಪ್ರಶ್ನೆಗಳು ಸಹ ಪ್ರಣಿತಾಗೆ ಎದುರಾಗಿದೆ.

  'ಮೆಚ್ಚಿನ ಸಹ ನಟ ಯಾರು?'

  'ಮೆಚ್ಚಿನ ಸಹ ನಟ ಯಾರು?'

  'ನಿಮ್ಮ ಮೆಚ್ಚಿನ ಸಹನಟ ಯಾರು?' ಎಂದು ಅಭಿಮಾನಿಯೊಬ್ಬ ಪ್ರಶ್ನಿಸಿದ್ದಾನೆ. ಇದಕ್ಕೆ ಉತ್ತರವಾಗಿ ತೆಲುಗು ನಟ ಪವನ್ ಕಲ್ಯಾಣ್ ಚಿತ್ರ ಪ್ರಕಟಿಸಿದ್ದಾರೆ ಪ್ರಣಿತಾ. ಪವನ್ ಕಲ್ಯಾಣ್ ಜೊತೆಗೆ ಸೂಪರ್ ಹಿಟ್ ಸಿನಿಮಾ 'ಅತ್ತಾರಿಂಟಿಕಿ ದಾರೇದಿ' ಸಿನಿಮಾದಲ್ಲಿ ನಟಿಸಿದ್ದಾರೆ ಪ್ರಣಿತಾ.

  'ಮೆಚ್ಚಿನ ಕನ್ನಡದ ನಾಯಕ ನಟ ಯಾರು?'

  'ಮೆಚ್ಚಿನ ಕನ್ನಡದ ನಾಯಕ ನಟ ಯಾರು?'

  'ನಿಮ್ಮ ಮೆಚ್ಚಿನ ಕನ್ನಡದ ನಾಯಕ ನಟ ಯಾರು?' ಎಂಬ ಪ್ರಶ್ನೆ ಸಹ ಪ್ರಣಿತಾ ಗೆ ಎದುರಾಗಿದೆ. ಇದಕ್ಕೆ ನಟ ದರ್ಶನ್ ಚಿತ್ರವನ್ನು ಹಂಚಿಕೊಂಡಿದ್ದಾರೆ ಪ್ರಣಿತಾ. ನಟಿ ಪ್ರಣಿತಾ ನಾಯಕಿಯಾಗಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದೇ, ದರ್ಶನ್ ನಟನೆಯ ಪೊರ್ಕಿ ಸಿನಿಮಾದ ಮೂಲಕ. ಆ ನಂತರ ದರ್ಶನ್ ನಟನೆಯ 'ಜಗ್ಗುದಾದ' ಸಿನಿಮಾದಲ್ಲಿ ಅತಿಥಿ ಪಾತ್ರೊಂದನ್ನು ನಿರ್ವಹಿಸಿದ್ದರು.

  ಪವನ್ ಕಲ್ಯಾಣ್ ಜೊತೆ ನಟಿಸಲು ದೊಡ್ಡ ಮೊತ್ತದ ಸಂಭಾವನೆ ಪಡೆದ ಸಾಯಿ ಪಲ್ಲವಿ!

  ಸ್ಟಾರ್ ನಟರೊಂದಿಗೆ ನಟಿಸಿರುವ ಪ್ರಣಿತಾ

  ಸ್ಟಾರ್ ನಟರೊಂದಿಗೆ ನಟಿಸಿರುವ ಪ್ರಣಿತಾ

  ತೆಲುಗು-ಕನ್ನಡ-ತಮಿಳು ಸಿನಿಮಾರಂಗಗಳಲ್ಲಿ ಸಖತ್ ಬ್ಯುಸಿ ನಟಿ ಪ್ರಣಿತಾ. ತೆಲುಗಿನಲ್ಲಿ ಪವನ್ ಕಲ್ಯಾಣ್, ಜೂ ಎನ್‌ಟಿಆರ್, ಮಹೇಶ್‌ ಬಾಬು, ರಾಮ್ ಪೋತಿನೇನಿ, ಬಾಲಕೃಷ್ಣ, ಸಿದ್ಧಾರ್ಥ್, ಮಂಚು ವಿಷ್ಣು ಅಂಥಹಾ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.

  B K ಗಂಗಾಧರ್ ಮನೆ ಮತ್ತು ಆಫೀಸ್ ಮೇಲೆ IT Raid | Filmibeat Kannada
  ಬಾಲಿವುಡ್‌ಗೆ ಹೊರಟ ಪ್ರಣಿತಾ ಸುಭಾಷ್‌

  ಬಾಲಿವುಡ್‌ಗೆ ಹೊರಟ ಪ್ರಣಿತಾ ಸುಭಾಷ್‌

  ಕನ್ನಡದಲ್ಲಿ ಪೊರ್ಕಿ ಸಿನಿಮಾದ ಮೂಲಕ ಪಾದಾರ್ಪಣೆ ಮಾಡಿದ ಪ್ರಣಿತಾ, ದರ್ಶನ್, ಉಪೇಂದ್ರ, ಶಿವರಾಜ್ ಕುಮಾರ್, ದುನಿಯಾ ವಿಜಯ್, ಪ್ರಜ್ವಲ್ ದೇವರಾಜ್ ಅವರುಗಳೊಟ್ಟಿಗೆ ಸಿನಿಮಾ ಮಾಡಿದ್ದಾರೆ. ಪ್ರಸ್ತುತ ಎರಡು ಬಾಲಿವುಡ್‌ ಸಿನಿಮಾಗಳಲ್ಲಿ ನಟಿಸಲು ತಯಾರಾಗಿದ್ದಾರೆ.

  English summary
  Who is actress Pranitha Subhash's favorite Kannada hero and favorite co star movie industry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X