For Quick Alerts
  ALLOW NOTIFICATIONS  
  For Daily Alerts

  ಯಕ್ಷಗಾನದ ರಂಗಸ್ಥಳದಲ್ಲೇ ಸಾವು: ರಂಗಸ್ಥಳದಲ್ಲೆ ಮಡಿದ ಕಲಾವಿದರು ಯಾರು ಗೊತ್ತೇ?

  By ಮಂಗಳೂರು ಪ್ರತಿನಿಧಿ
  |

  ಸಾವು ಅನ್ನೋದು ಎಲ್ಲಿ ಹೇಗೆ? ಯಾವಾಗ ಬರುತ್ತೆ ಅನ್ನೋದೇ ಗೊತ್ತಾಗುವುದಿಲ್ಲ. ಕೆಲವರಂತು ಕಾಯಕದಲ್ಲಿ ನಿರತವಾಗಿರುವಾಗಲೇ ಇಹಲೋಕ ತ್ಯಜಿಸುತ್ತಾರೆ. ತನ್ನ ಬದುಕನ್ನೇ ಯಕ್ಷಗಾನಕ್ಕೆ ಸಮರ್ಪಿಸಿದ ಯಕ್ಷಗಾನದ ದಿಗ್ಗಜರೋರ್ವರು ಕಟೀಲು ಶ್ರೀದೇವಿಯ ಸೇವೆಯಾದ ಯಕ್ಷಗಾನದ ರಂಗಸ್ಥಳದಲ್ಲೆ ವೇಷದೊಂದಿಗೆ ನಿಧನ ಹೊಂದಿದ್ದಾರೆ. ತ್ರಿಜನ್ಮ ಮೋಕ್ಷ ಅನ್ನೊ ಯಕ್ಷಗಾನ ಪ್ರಸಂಗದ ಶಿಶುಪಾಲ ಪಾತ್ರಧಾರಿಗೆ ರಂಗಸ್ಥಳದಲ್ಲೆ ಮೋಕ್ಷ ಪ್ರಾಪ್ತಿಯಾಗಿದೆ.

  ಕರಾವಳಿಯ ಗಂಡುಕಲೆ ಯಕ್ಷಗಾನ ಅಲ್ಲಿನ ಜನರ ಜಾನಪದ, ಸಾಂಸ್ಕೃತಿಕ, ಮನೋರಂಜನಾ, ಧಾರ್ಮಿಕ ನಂಬಿಕೆಯ ಪ್ರತೀಕ. ಹೆಚ್ಚಾಗಿ ಯಕ್ಷಗಾನ ಸೇವೆ ನಡೆಯೋದೇ ಹರಕೆಯ ರೂಪದಲ್ಲಿ. ಎಲ್ಲಾ ಪ್ರಸಿದ್ದ ಪುಣ್ಯ ಕ್ಷೇತ್ರಗಳಲ್ಲಿ ಯಕ್ಷಗಾನ ಮೇಳಗಳಿದ್ದು ಸಾವಿರಾರು ಜನ ಕಲಾವಿದರು ಯಕ್ಷಗಾನದಲ್ಲೆ ಬದುಕು ಕಟ್ಟಿಕೊಂಡಿದ್ದಾರೆ. ಅಪ್ರತಿಮ‌ ಸಾಧನೆ ಮಾಡಿದ ಸಾಧಕರೂ ಯಕ್ಷಗಾನ ಕ್ಷೇತ್ರದಲ್ಲಿದ್ದಾರೆ.ಕಲಾವಿದರೂ ದೇವರ ಸೇವೆ ಅನ್ನೋ ನಿಟ್ಟಿನಲ್ಲಿ ಶ್ರದ್ಧಾ ಭಕ್ತಿಯಿಂದಲೇ ಯಕ್ಷಗಾನದ ಸೇವೆ ಸಲ್ಲಿಸುತ್ತಾರೆ.ಹೀಗಾಗಿ ಕಾಯಕವೇ ಕೈಲಾಸ ಅಂದುಕೊಂಡ ಸಾಕಷ್ಟು ಕಲಾವಿದರು ಯಕ್ಷಗಾನದ ರಂಗಸ್ಥಳದಲ್ಲೆ ವೇಷಧಾರಿಯಾಗಿ ಪ್ರದರ್ಶನ ನೀಡುತ್ತಿದ್ದಾಗಲೆ ಇಹಲೋಕ ತ್ಯಜಿಸಿದ್ದಾರೆ. ಅದಕ್ಕೊಂದು ಸೇರ್ಪಡೆಯಂತೆ ಗುರುವಾರ ಮಧ್ಯ ರಾತ್ರಿಯಲ್ಲಿ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣ ಸರಸ್ವತಿ ಸದನದಲ್ಲಿ ನಡೆದ ತ್ರಿಜನ್ಮ ಮೋಕ್ಷ ಅನ್ನೊ ಯಕ್ಷಗಾನ ಪ್ರದರ್ಶನದ ವೇಳೆ ಇಹಲೋಕ ತ್ಯಜಿಸಿದ್ದಾರೆ.

  ತ್ರಿಜನ್ಮ ಮೋಕ್ಷ ಪ್ರಸಂಗ

  ತ್ರಿಜನ್ಮ ಮೋಕ್ಷ ಪ್ರಸಂಗ

  ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ನಾಲ್ಕನೆ ಮೇಳದ ತ್ರಿಜನ್ಮ ಮೋಕ್ಷ ಪ್ರಸಂಗದ ಕೊನೆಯ ಹಂತದ ಯಕ್ಷಗಾನ ನಡೆಯುತ್ತಿದ್ದಾಗ ಶಿಶುಪಾಲನ‌ ಪಾತ್ರಧಾರಿಯಾಗಿದ್ದ ಹಿರಿಯ ಕಲಾವಿದ 58 ವರ್ಷದ ಗುರುವಪ್ಪ ಬಾಯಾರು ರಂಗಸ್ಥಳದಲ್ಲೆ ಇದ್ದು ಸಹ ಕಲಾವಿದರ ಜೊತೆಗಿದ್ದರು. ಇನ್ನೊಂದು ಪಾತ್ರಧಾರಿ ಯಕ್ಷಗಾನದ ರಂಗಸ್ಥಳದಲ್ಲಿ ಕುಣಿಯುತ್ತಿದ್ದಾಗ ಅಲ್ಲೆ ಇದ್ದ ಗುರುವಪ್ಪ ಬಾಯಾರು ಅವರಿಗೆ ಹೃದಯಾಘಾತವಾಗಿ ಏಕಾಏಕಿ ಕೆಳಗೆ ಕುಸಿದು ಬಿದ್ದರು. ತಕ್ಷಣ ರಂಗಸ್ಥಳದಲ್ಲಿ ಇದ್ದ ಕಲಾವಿದರು ದಿಗ್ಭ್ರಮೆಗೊಂಡು ಪ್ರದರ್ಶನ‌ ನಿಲ್ಲಿಸಿ ಎಲ್ಲರು ಸೇರಿ‌ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಆದ್ರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು. ಇಂಥಹಾ ಅಪ್ರತಿಮ ಕಲಾವಿದರ ಅಗಲುವಿಕೆಗೆ ಯಕ್ಷಗಾನ ರಂಗ ಕಂಬನಿ ಮಿಡಿದಿದೆ.

  ಅಂದು ನಡೆದಿದ್ದೇನು?

  ಅಂದು ನಡೆದಿದ್ದೇನು?

  ಗುರುವಪ್ಪ ಬಾಯಾರು ಅವರಿಗೆ ಹಿಂದಿನ ದಿನವೇ ತಲೆ ಸುಸ್ತು, ಆಯಾಸ ಆಗುತ್ತಿದೆ ಅಂತಾ ಮನೆಯವರಲ್ಲಿ ಹೇಳಿದ್ದರು. ಯಕ್ಷಗಾನದ ಆರಂಭದ ಸಂಧರ್ಭದಲ್ಲು ತಲೆ ಸುಸ್ತು, ಆಯಾಸ ಎಂದು ಹೇಳಿ ಸ್ವಲ್ಪ ಹೊತ್ತು ಚೌಕಿಯಲ್ಲಿ ಮಲಗಿದ್ದರು. ಶಿಶುಪಾಲನಿಗಿರುವ ನಾಲ್ಕು ಪದ್ಯಗಳಲ್ಲಿ ಎರಡಕ್ಕೆ ಕುಣಿದು, ನಂತರದ ಪದ್ಯಕ್ಕೆ ದಂತವಕ್ತ್ರ ಪಾತ್ರಧಾರಿ ಕೃಷ್ಣ ಪ್ರಸಾದ್ ಭಟ್‌ರಿಗೆ ನಿರ್ವಹಿಸಲು ರಂಗಸ್ಥಳದಲ್ಲೆ ಹೇಳಿದರಂತೆ. ಈ ಹಂತದಲ್ಲೆ, ರಂಗಸ್ಥಳದಿಂದ ತಲೆಕೆಳಗಾಗಿ ಕುಸಿದು ಬಿದ್ದರು ಅಂತಾ ಹಿರಿಯ ಯಕ್ಷಗಾನಾಸಕ್ತ ಶಾಂತರಾಮ ಕುಡ್ವ ಮೂಡಬಿದಿರೆಯವರು ಹೇಳುತ್ತಾರೆ.

  ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ

  ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ

  ಕಲಾವಿದರು, ತಲೆ ಸುಸ್ತು, ಆಯಾಸ, ಹೃದಯ ನೋವು, ಎಡಕೈ ನೋವು ಈ ಎಲ್ಲಾ ಲಕ್ಷಣ ಕಂಡುಬಂದರೆ, ವಿಳಂಬಿಸದೆ, ವೈದ್ಯರನ್ನು ಭೇಟಿಯಾಗಬೇಕು ಎಂದು ಮಂಗಳೂರು ಕೆ.ಎಂ.ಸಿ.ಯ ಸುಪ್ರಸಿದ್ಧ ಹೃದ್ರೋಗ ತಜ್ಞರಾದ ಡಾ.ಪದ್ಮನಾಭ ಕಾಮತ ಹೇಳುತ್ತಾರೆ. ಗುರುವಪ್ಪ ಬಾಯಾರು ಅವರು ಕೇವಲ ಕಲಾವಿದರಾಗಿ ಮಾತ್ರವಲ್ಲದೆ ಪ್ರಸಂಗ ಕರ್ತರಾಗಿಯೂ ಯಕ್ಷಗಾನದ ಸೇವೆ ಸಲ್ಲಿಸಿದವರು.

  ಈ ಹಿಂದೆಯೂ ಕೆಲವರು ನಿಧನರಾಗಿದ್ದಾರೆ

  ಈ ಹಿಂದೆಯೂ ಕೆಲವರು ನಿಧನರಾಗಿದ್ದಾರೆ

  ವಜ್ರ ಕೋಗಿಲೆ, ಕೀರ್ತಿಚಂದ್ರಿಕೆ, ಗಟ್ಟದಗರುಡೆ, ಗಂಧರ್ವ ನರ್ತಕಿ, ಕುಡ್ಲದ ಕುರಲ್, ಕಡಲ ಕೇಸರಿ, ಚಂದ್ರ ಮಲ್ಲಿಗೆ, ಸೂರ್ಯಕಾಂತಿ, ನಾಗಮಂಡಲ, ಅಷ್ಟ ಮಂಗಲ, ಸ್ವರ್ಣ ಮಲ್ಲಿ, ಪೂಜೆದ ಪುಣ್ಣಮೆ ಮೊದಲಾದ ಹಲವಾರು ತುಳು ಪ್ರಸಂಗಗಳನ್ನು ರಚಿಸಿದ್ದಾರೆ. 2013 ರಲ್ಲಿ ವೃತ್ತಿಪರ ಕಲಾವಿದನಾಗಬೇಕೆಂಬ ಒಲವು ತೋರಿ ಕಟೀಲು ಮೇಳಕ್ಕೆ ಸೇರ್ಪಡೆಗೊಂಡ ಅವರು, ಶ್ರೀ ದೇವೀ ಮಹಾತ್ಮೆಯ ಮಧು, ಕೈಟಭ, ದೇವೇಂದ್ರ, ವಿದ್ಯುನ್ಮಾಲಿ, ಶಿಶುಪಾಲ, ಮೈಂದ, ಅರ್ಜುನ, ಶತ್ರುಘ್ನ, ಸುಗ್ರೀವ, ಶಂತನು‌ ಮುಂತಾದ ಕೋಲು ಕಿರೀಟದ ಪಾತ್ರದಲ್ಲೂನಾಟಕೀಯ ಪಾತ್ರಗಳಲ್ಲೂ ಕಾಣಿಸಿಕೊಂಡು ಪ್ರಸಿದ್ಧಿಯಾಗಿದ್ದಾರೆ. ಕಳೆದ ನಾಲ್ಕು ವರ್ಷಗಳ ಹಿಂದೆ‌, ಎಕ್ಕಾರಿನಲ್ಲಿ ಜರುಗಿದ ಕಟೀಲು ಮೇಳದ ಸುಪ್ರಸಿದ್ಧ ಕಲಾವಿದರಾದ ಗಂಗಯ್ಯ ಶೆಟ್ಟರೂ, ಅರುಣಾಸುರನ ಪಾತ್ರದಲ್ಲಿ ಇರುವಾಗ‌, ರಂಗಸ್ಥಳದಲ್ಲೆ ಕುಸಿದು ಬಿದ್ದು ನಿಧನರಾಗಿದ್ದು, ಇದೀಗ, ಆ ಸಾಲಿಗೆ ಗುರುವಪ್ಪ ಬಾಯಾರುರವರ ಹೆಸರು ಸೇರಿಕೊಂಡಿರುವುದು ಖೇದಕರ ಅನ್ನೋದು ಶಾಂತರಾಮ ಕುಡ್ವ ಅವರ ಅಭಿಪ್ರಾಯವಾಗಿದೆ. ಈ ಹಿಂದೆ ನಿಧನರಾದ ಶಿರಿಯಾರ ಮಂಜು ನಾಯ್ಕ, ದಾಮೋದರ ಮಂಡೆಚ್ಚ, ಅರುವ ನಾರಾಯಣ ಶೆಟ್ಟಿ, ಕೆರೆಮನೆ ಶಂಭು ಹೆಗಡೆ, ಗಂಗಯ್ಯ ಶೆಟ್ಟಿ, ಹುಡುಗೋಡು ಚಂದ್ರಹಾಸ, ಸಾಧು ಕೊಠರಿಯವರಂತೆಯೇ, ಗುರುವಪ್ಪ ಬಾಯಾರುರವರು ನಿಧನರಾಗಿದ್ದಾರೆ.

  English summary
  Who is the artist who died on Yakshaghana stage. Here is the detail about the artist. Recently there is surge in sudden deaths.
  Saturday, December 24, 2022, 12:47
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X