»   » ಕನ್ನಡದ ಅತ್ಯಂತ ಬ್ಯುಸಿ ನಟಿ ಯಾರು ಗೊತ್ತಾ?

ಕನ್ನಡದ ಅತ್ಯಂತ ಬ್ಯುಸಿ ನಟಿ ಯಾರು ಗೊತ್ತಾ?

Posted By: ಜೀವನರಸಿಕ
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಚಂದನವನದಲ್ಲಿ ರಂಗು ರಂಗೀನ್ ಚಿಟ್ಟೆಗಳಿವೆ. ಒಂದೊಂದು ಚಿಟ್ಟೆಗೆ ಒಂದೊಂದು ಕಾಲ. ಕೆಲವರು ಒಂದೊಂದೇ ಸಿನಿಮಾಗಳನ್ನ ಮುಗಿಸ್ತಾ ಮತ್ತೊಂದು ಸಿನಿಮಾವನ್ನ ಆಯ್ಕೆ ಮಾಡಿಕೊಳ್ತಿದ್ರೆ ಮತ್ತೊಬ್ಬರದ್ದು ನಾಲ್ಕೈದು ಸಿನಿಮಾಗಳಲ್ಲಿ ಒಮ್ಮೆಗೆ ತೊಡಗಿಕೊಳ್ಳೋ ತಾಕತ್ತು.

  ಅವಕಾಶ ಬಂದಾಗ ಬಾಚಿಕೊಂಡು ಬಿಡಬೇಕು ಅನ್ನೋ ಪಾಲಿಸಿಯನ್ನ ಕನ್ನಡದ ಸುಂದರಿಯರೂ ಪಾಲಿಸಿಕೊಂಡು ಬಂದಿದ್ದಾರೆ. ಯಾಕಂದ್ರೆ ಬೃಂದಾವನ ಅನ್ನೋ ಸಿನಿಮಾದಲ್ಲಿ ಚಾಲೆಂಜಿಂಗ್ಸ್ಟಾರ್ಗೆ ಜೋಡಿಯಾಗಿ ಸಿನಿಮಾ ಮುಗಿಸಿದಾಗ ನಟಿ ಮಿಲನಗೆ 20ಕ್ಕೂ ಹೆಚ್ಚು ಆಫರ್ ಬಂದಿತ್ತು. [ಅಂಧ ಮಕ್ಕಳಿಗೆ ಸುದೀಪ್ 'ರನ್ನ' ಸ್ಪೆಷಲ್ ಶೋ]

  ಆದ್ರೆ ಸಿನಿಮಾ ಗೆಲ್ಲುತ್ತೆ ಅಂತ ನಂಬಿ ಮತ್ತಷ್ಟು ಒಳ್ಳೆಯ ಕಥೆಗೆ ಕಾಯ್ತಿದ್ದ ಅವರಿಗೆ ಬೃಂದಾವನ ಅಷ್ಟಕ್ಕಷ್ಟೇ ಅನ್ನಿಸಿದ ನಂತ್ರ ಬಂದ ಆಫರ್ಗಳು ದೂರ ಆದ್ವು, ಆದ್ರೆ ಚಂದನವನದ ಬುದ್ದಿವಂತೆ ನಟಿಯೊಬ್ಬರು ಹಾಗೆ ಮಾಡ್ಲಿಲ್ಲ. ಈಗ ಅವರ ಕೈಯ್ಯಲ್ಲಿ ಸಾಲು ಸಾಲು ಸಿನಿಮಾಗಳು. ['ರನ್ನ'ನಿಗೆ ಜೈಕಾರ ಹಾಕಿದ್ದಾರಾ ವಿಮರ್ಶಕರು?]

  ಉಳಿದ ನಟಿಯರು ಕೈಕೈ ಹಿಸುಕಿಕೊಳ್ಳುವಷ್ಟು ಆಫರುಗಳು ಅವರ ಪಾಲಿಗೆ ಬಂದಿವೆ. ಅವರು ಯಾರೆ, ಎಂತೆಂಥ ಸಿನೆಮಾಗಳನ್ನು ಆಯ್ದುಕೊಂಡಿದ್ದಾರೆ, ಯಾಯ್ಯಾವ ನಾಯಕರು ಅದರಲ್ಲಿ ನಟಿಸುತ್ತಿದ್ದಾರೆ ಎಂಬುದನ್ನು ಮುಂದೆ ಓದಿರಿ. ಗಾಳಿ ಬೀಸಿದಾಗ ತೂರಿಕೊಳ್ಳುವುದೇ ಜಾಣತನ ಅಲ್ಲವಾ?

  ಮಾಸ್ ಅಮ್ಮಾಯಿ ಹರಿಪ್ರಿಯಾ

  ಸ್ಯಾಂಡಲ್ವುಡ್ನಲ್ಲಿ ಮಾತ್ರವಲ್ಲ ಪಕ್ಕದ ಟಾಲಿವುಡ್ನಲ್ಲೂ ಮಾಸ್ ಅಮ್ಮಾಯಿಯಾಗಿ ಕ್ಲಾಸ್ ಅಬ್ಬಾಯಿ ಮುಂದೆ ಮಿಂಚಿದ ಚೆಲುವೆ ಹರಿಪ್ರಿಯಾ ಸ್ಯಾಂಡಲ್ವುಡ್ನಲ್ಲಿ ನಾಲ್ಕು ಸಿನಿಮಾಗಳಲ್ಲಿ ಬ್ಯುಸಿ.. ಸದ್ಯ ಹರಿಪ್ರಿಯಾ ಅಭಿನಯದ ರನ್ನ ಚಿತ್ರಮಂದಿರದಲ್ಲಿದೆ.

  ಬುಲೆಟ್ ಬಸ್ಯಾ ಆಗಸ್ಟ್ನಲ್ಲಿ

  ಕಾಮಿಡಿರ್ಯಾಂಬೋ ಶರಣ್ ಜೊತೆ ಅಭಿನಯಿಸಿರೋ ಬುಲೆಟ್ ಬಸ್ಯಾ ಚಿತ್ರದ ಹಾಡುಗಳು ಮತ್ತು ಟ್ರೈಲರ್ ಈಗ ಭರ್ಜರಿ ಸೌಂಡ್ ಮಾಡ್ತಿದ್ದು ಹರಿಪ್ರಿಯಾ ಫುಲ್ ಖುಷ್. ಬುಲೆಟ್ ಬಸ್ಯಾ ಆಗಸ್ಟ್ನಲ್ಲಿ ತೆರೆಗೆ ಬರಲಿದೆ.

  ರಿಕ್ಕಿ ಕೂಡ ಸದ್ಯದಲ್ಲೇ

  ರಿಕ್ಕಿ ಚಿತ್ರದಲ್ಲಿ ಸಿಂಪಲ್ಸ್ಟಾರ್ ರಕ್ಷಿತ್ ಶೆಟ್ಟಿಗೆ ಜೋಡಿಯಾಗಿದ್ದಾರೆ ಹರಿಪ್ರಿಯಾ. ಉಳಿದವರು ಕಂಡಂತೆ ಚಿತ್ರದ ನಿರ್ದೇಶನಕ್ಕೆ ಫಿಲಂಫೇರ್ ಅವಾರ್ಡ್ ಪಡ್ಕೊಂಡ ರಕ್ಷಿತ್ ಅಭಿನಯದ ರಿಕ್ಕಿ ಬಗೆಗೂ ಗಾಂಧಿನಗರದಲ್ಲಿ ಭರ್ಜರಿ ನಿರೀಕ್ಷೆಗಳಿವೆ.

  ಮಂಜಿನಹನಿಯಲ್ಲಿ ರವಿಪ್ರಿಯೆ

  ರವಿಮಾಮನ ಕನಸಿನ ಪ್ರಾಜೆಕ್ಟ್ ಮಂಜಿನಹನಿಯಲ್ಲಿ ಹರಿಪ್ರಿಯಾರದ್ದು ಮುಖ್ಯಪಾತ್ರ. ಹರಿಪ್ರಿಯಾ ಈ ವರ್ಷದಲ್ಲಿ ಮಂಜಿನಹನಿ ಮೂಲಕ ತೆರೆಗೆ ಬರೋ ಕನಸಿನಲ್ಲಿದ್ದಾರೆ.

  "ಫ್ಲೈ"ಯಿಂಗ್ ಇಲ್ಲ

  ಹರಿಪ್ರಿಯಾ ಈ ಹಿಂದೆ ಫ್ಲೈ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ರು. ಆದ್ರೆ ಬೇರೆ ಬೇರೆ ಚಿತ್ರಗಳ ಒತ್ತಡದಿಂದ ಹರಿಪ್ರಿಯಾ ಫ್ಲೈ ಚಿತ್ರದಿಂದ ಹೊರಬಂದ್ರು.

  ಉಗ್ರಂನಿಂದ ಹರಿಪ್ರಿಯಾ ಲಕ್ ಚೆಂಜ್

  ಪರಭಾಷೆಗಳಲ್ಲಿ ಕಾಣಿಸಿಕೊಂಡ್ರೂ ಅಷ್ಟಾಗಿ ಹೆಸ್ರು ಮಾಡದೇ ಸೈಲೆಂಟಾಗಿದ್ದ ಹರಿಪ್ರಿಯಾಗೆ ಉಗ್ರಂ ಚಿತ್ರ ಹೊಸ ಅವಕಾಶಗಳನ್ನ ತೆರೆದುಕೊಡ್ತು. ಉಗ್ರಂ ನಂತ್ರ ಹರಿಪ್ರಿಯಾ ಲಕ್ ಚೆಂಜಾಯ್ತು.

  ತೆಲುಗಿನಲ್ಲಿ ಭರ್ಜರಿ ಆಫರ್

  ಸದ್ಯ ಸ್ಯಾಂಡಲ್ವುಡ್ನಲ್ಲಿ ಮಿಂಚ್ತಿರೋ ಚೆಲುವೆಗೆ ತೆಲುಗಿನಲ್ಲೂ ಆಫರ್ಗಳಿದೆ ಆದ್ರೂ ಹರಿಪ್ರಿಯಾ ಕನ್ನಡದಲ್ಲಿ ಒಳ್ಳೆಯ ಸಿನಿಮಾ ಮಾಡೋ ಯೋಚನೆಯಲ್ಲಿದ್ದಾರೆ.

  English summary
  Do you know who is the busiest actress in Kannada film industry now? She is none other than Ugram heroine Haripriya. Though the pretty actress is busy in other language film industry also, she is acting in number of big banner movies in Kannada too.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more