»   » ರಾಕಿಂಗ್ ಸ್ಟಾರ್ ಯಶ್ ಕಾರಿನ ಮೇಲೆ ದಾಳಿ ಮಾಡಿದವರಾರು?

ರಾಕಿಂಗ್ ಸ್ಟಾರ್ ಯಶ್ ಕಾರಿನ ಮೇಲೆ ದಾಳಿ ಮಾಡಿದವರಾರು?

By: ಹರಾ
Subscribe to Filmibeat Kannada

'ಸ್ಯಾಂಡಲ್ ವುಡ್ ಸುಲ್ತಾನ್' ಅಂತಲೇ ಈಗ ಸ್ಯಾಂಡಲ್ ವುಡ್ ನಲ್ಲಿ ಪ್ರಖ್ಯಾತವಾಗಿರುವ ನಟ ರಾಕಿಂಗ್ ಸ್ಟಾರ್ ಯಶ್. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನ ನೀಡುತ್ತಾ ಬಂದಿರುವ ಯಶ್, ಗಾಂಧಿನಗರದಲ್ಲಿ ಸೋಲಿಲ್ಲದ ಸರದಾರನಾಗಿದ್ದಾರೆ.

'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರ ಮೊನ್ನೆಯಷ್ಟೇ ಶತದಿನೋತ್ಸವ ಆಚರಿಸಿಕೊಂಡಿದೆ. ಇದು ಯಶ್ ವೃತ್ತಿಬದುಕಿನಲ್ಲಿ ಸತತ ನಾಲ್ಕನೇ ಸೆಂಚುರಿ. 'ಗೂಗ್ಲಿ', 'ರಾಜಾಹುಲಿ', 'ಗಜಕೇಸರಿ' ನಂತರ 'ರಾಮಾಚಾರಿ' ಆದ ಯಶ್ ಹಿಂದೆ ಈಗ ಅಭಿಮಾನಿ ಬಳಗ ದೊಡ್ಡದಾಗಿ ಬೆಳೆದು ನಿಂತಿದೆ.

ಯಶಸ್ಸಿನ ಎತ್ತರೆತ್ತರಕ್ಕೇರುತ್ತಿರುವಾಗಲೇ, ಅದರ ಅಡ್ಡ ಪರಿಣಾಮ ಯಶ್ ಮೇಲೆ ಬೀರಿರುವ ಹಾಗಿದೆ. ಅಭಿಮಾನಿಗಳು ಹೆಚ್ಚಾದಂತೆ ಯಶ್ ಗೆ ಬದ್ಧ ವೈರಿಗಳೂ ಹೆಚ್ಚಾಗಿದ್ದಾರೆ ಎನ್ನಲಾಗಿದೆ. ಪ್ರಖ್ಯಾತ ಕನ್ನಡ ಸುದ್ದಿ ವಾಹಿನಿ ಟಿವಿ9 ವರದಿ ಮಾಡಿರುವ ಪ್ರಕಾರ ಕಳೆದ ಎರಡು ತಿಂಗಳ ಹಿಂದೆ ಯಶ್ ಕಾರಿನ ಮೇಲೆ ದಾಳಿ ನಡೆದಿದೆ. ಮುಂದೆ ಓದಿ...

ಯಶ್ ಕಾರಿನ ಮೇಲೆ ದಾಳಿ..!

ಅದು ಎಲ್ಲೆಲ್ಲೂ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಹವಾ ಇದ್ದ ಟೈಮು. ಅಂದ್ರೆ, ಸಿನಿಮಾ ರಿಲೀಸ್ ಆಗಿ ಎಲ್ಲಾ ಚಿತ್ರಮಂದಿರಗಳಲ್ಲೂ ಭರ್ಜರಿ ಕಲೆಕ್ಷನ್ ಮಾಡುತ್ತಿರುವಾಗಲೇ ಯಶ್ ಕಾರಿನ ಮೇಲೆ ಕಲ್ಲು ತೂರಿ ದಾಂಡಿಗರು ದಾಳಿ ನಡೆಸಿದ್ದಾರೆ. ಹಾಗಂತ ಟಿವಿ9 ಸುದ್ದಿ ವಾಹಿನಿ ವರದಿ ಮಾಡಿದೆ. [ಯಶ್ ವಿರುದ್ಧ ನಡೀತಿದೆ 'ಮಂಡ್ಯ ಸ್ಟಾರ್'ಗಳ ಮಸಲತ್ತು?]

ಅಸಲಿಗೆ ಆಗಿದ್ದು ಏನು?

ಘಟನೆ ನಡೆದಿರುವುದು ಬೆಂಗಳೂರಿನ ಶೇಷಾದ್ರಿಪುರಂ ನಲ್ಲಿ. ಆಟೋದಲ್ಲಿ ಮತ್ತು ನಂಬರ್ ಪ್ಲೇಟ್ ಇಲ್ಲದ ಪಲ್ಸರ್ ಬೈಕ್ ನಲ್ಲಿ ಬಂದ ದಾಂಡಿಗರು ಶೇಷಾದ್ರಿಪುರಂನಲ್ಲಿ ಸಾಗುತ್ತಿದ್ದ ಯಶ್ ಅವರ ಕಪ್ಪು ಬಣ್ಣದ ಕಾರಿನ ಮೇಲೆ ಕಲ್ಲು ತೂರಿದ್ದಾರೆ. ಇದಾಗಿದ್ದು ಎರಡು ತಿಂಗಳ ಹಿಂದೆ. ['ರಾಜಾಹುಲಿ' ಯಶ್ ವಿರುದ್ಧ ಅಣ್ತಮ್ಮಂದಿರು ತಿರುಗಿಬಿದ್ದಿರುವುದೇಕೆ?]

ಅದೃಷ್ಟವಶಾತ್ ಯಶ್ ಪಾರು

ಘಟನೆ ನಡೆದಾಗ ಯಶ್ ಕಾರಿನಲ್ಲಿರಲಿಲ್ಲ. ಯಶ್ ಸ್ನೇಹಿತರು ಕಾರನ್ನ ತೆಗೆದುಕೊಂಡು ಶೇಷಾದ್ರಿಪುರಂಗೆ ಬಂದಿದ್ದರು. ಕಾರನ್ನ ಹಿಂಬಾಲಿಸಿ ಆಟೋ ಮತ್ತು ಪಲ್ಸರ್ ಬೈಕ್ ನಲ್ಲಿ ಬಂದ ಯುವಕರು 'ಯಶ್ ಎಲ್ಲಿ' ಅಂತ ಕೇಳಿದ್ದಾರೆ. ಯಶ್ ಸ್ನೇಹಿತರು 'ಇಲ್ಲಾ' ಅಂದಿದ್ದಾರೆ. ಅದಾಗಲೇ ಕುಡಿದ ಮತ್ತಿನಲ್ಲಿದ್ದ ದಾಂಡಿಗರು ಕಾರಿನ ಮೇಲೆ ದಾಳಿ ಮಾಡಿ ಪರಾರಿಯಾಗಿದ್ದಾರೆ. [ಅಣ್ತಮ್ಮಂದಿರಿಗೆ ಕೈಮುಗಿದ ರಾಕಿಂಗ್ ಸ್ಟಾರ್ ಯಶ್]

ಪೊಲೀಸರಿಗೆ ಮಾಹಿತಿ ನೀಡಿದ ಯಶ್!

ಆದ ಘಟನೆಯಿಂದ ಯಶ್ ಕಾರಿನ ಮುಂಭಾಗ ಜಖಂಗೊಂಡಿತ್ತು. ಇದರಿಂದ ಕೊಂಚ ಸೀರಿಯಸ್ ಆದ ಯಶ್, ನಡೆದ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದ್ರೆ, ದಾಳಿ ಮಾಡಿದವರ ಗುರುತು ಮತ್ತು ಹೆಚ್ಚಿನ ಮಾಹಿತಿ ಇಲ್ಲದ ಕಾರಣ ದೂರು ದಾಖಲಿಸಿಲ್ಲ. ಪೊಲೀಸರೂ ಕೂಡ ಜಾಗರೂಕರಾಗಿರುವಂತೆ ಯಶ್ ಗೆ ಸೂಚಿಸಿದ್ದಾರೆ.

ಗನ್ ಮ್ಯಾನ್ ನೇಮಿಸಿಕೊಂಡ ಯಶ್!

ಹೊಸ ವಿವಾದವನ್ನ ಸೃಷ್ಟಿಸಬಾರದು ಅನ್ನುವ ಕಾರಣಕ್ಕೆ ಯಶ್ ಈ ಪ್ರಕರಣವನ್ನ ಬಯಲು ಮಾಡಿರಲಿಲ್ಲ. ಹಾಗೇ, ಯಾರ ಮೇಲೂ ಅನುಮಾನ ವ್ಯಕ್ತಪಡಿಸಿರಲಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಅಬ್ಬರ ಬೊಬ್ಬಿರಿಯುತ್ತಲೇ ಇತ್ತು. ಹೀಗಾಗಿ, ಮುಂಜಾಗ್ರತ ಕ್ರಮವಾಗಿ ಗನ್ ಮ್ಯಾನ್ ಒಬ್ಬರನ್ನ ಯಶ್ ನೇಮಿಸಿಕೊಂಡಿದ್ದಾರೆ ಅಂತಲೂ ಟಿವಿ9 ವರದಿ ಮಾಡಿದೆ.

ಯಶ್ ಮೇಲೆ ಟಾರ್ಗೆಟ್..?

ಇದು ರಾಕಿಂಗ್ ಸ್ಟಾರ್ ಮೇಲೆ ಮಾಡಿರುವ ಟಾರ್ಗೆಟ್? ಅಥವಾ ಅಚಾನಕ್ಕಾಗಿ ಆಗಿರುವ ಘಟನೆ ಅನ್ನುವುದಕ್ಕೆ ನಿಖರ ಉತ್ತರ ಇಲ್ಲ. ಆದ್ರೆ, ಇದರಿಂದ ಯಶ್ ಗೊಂದು ಕಹಿ ಅನುಭವ ಆಗಿರುವುದಂತೂ ಸತ್ಯ. ['ಯಶ್' ಮುಂದೆ ಮಂಡಿಯೂರುತ್ತಿವೆ ಪರಭಾಷಾ ಚಿತ್ರಗಳು]

ಘಟನೆ ಹಿಂದಿನ ಕೈವಾಡ ಯಾರದ್ದು?

ಯಶ್ ಕಾರಿನ ಮೇಲೆ ನಡೆದಿರುವ ದಾಳಿ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಾರೆ. ಗಾಂಧಿನಗರದಲ್ಲಂತೂ ತಲೆಗೊಂದು ಮಾತು ಶುರುವಾಗಿದೆ. ಇದೆಲ್ಲಾ 'ಸ್ಟಾರ್' ನಟರೊಬ್ಬರ ಕೈವಾಡ ಅಂತ ಬೆರಳು ಮಾಡಿ ತೋರಿಸುವವರೂ ಇದ್ದಾರೆ. ಆದ್ರೆ, ಸತ್ಯ ಮಾತ್ರ ಯಾರಿಗೂ ಗೊತ್ತಿಲ್ಲ. [ದರ್ಶನ್, ಕಿಚ್ಚ ಮತ್ತು ನನ್ನ ನಡುವೆ ತಂದಿಡಬೇಡಿ ಪ್ಲೀಸ್: ಯಶ್]

ಇದೆಲ್ಲಾ ಅಭಿಮಾನದ ಅತಿರೇಕ.?!

''ಸ್ಟಾರ್ ಗಳೆಲ್ಲರೂ ಒಂದೇ. ನಾವೆಲ್ಲಾ ಒಟ್ಟಾಗಿದ್ದೇವೆ. ನಮ್ಮನಮ್ಮಲ್ಲಿ ತಂದಿಡಬೇಡಿ''- ಹೀಗಂತ ಹಿಂದೊಮ್ಮೆ ರಾಕಿಂಗ್ ಸ್ಟಾರ್ ಯಶ್ ಹೇಳಿದ್ದರು. ಸೆಲೆಬ್ರಿಟಿಗಳೆಲ್ಲರೂ ಒಂದಾಗಿದ್ದರೂ, ಅವರನ್ನ ಆರಾಧಿಸುವ ಅಭಿಮಾನಿಗಳ ಅಭಿಮಾನದ ಪರಾಕಾಷ್ಟೆ ಇಷ್ಟೆಲ್ಲಾ ಅನಾಹುತಗಳಿಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಒಬ್ಬ ಸ್ಟಾರ್ ಅಭಿಮಾನಿ, ಇನ್ನೊಬ್ಬ ಸ್ಟಾರ್ ಮತ್ತವರ ಅಭಿಮಾನಿಗಳಿಗೆ ನಿಂದಿಸುವುದು ಇತ್ತೀಚೆಗೆ ವಿಪರೀತವಾಗಿದೆ. 'ಸ್ಟಾರ್ ವಾರ್' ಇಲ್ಲದಿದ್ದರೂ ಅಭಿಮಾನಿಗಳಿಂದಲೇ ಬೆಂಕಿ ಕಿಡಿ ಹೊತ್ತಿಕೊಳ್ಳುತ್ತಿರುವುದು ಸುಳ್ಳಲ್ಲ.

English summary
According to the reports of Kannada News Channel TV9, Rocking Star Yash's car was attacked two months ago in Sheshadripuram, Bengaluru. Who is the person behind the attack is question as of now.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada