»   » ದರ್ಶನ್ ರೀಲ್ ಜಗ್ಗೂದಾದ, ರಿಯಲ್ ಯಾರು ಗೊತ್ತಾ?

ದರ್ಶನ್ ರೀಲ್ ಜಗ್ಗೂದಾದ, ರಿಯಲ್ ಯಾರು ಗೊತ್ತಾ?

By: ಕುಸುಮ
Subscribe to Filmibeat Kannada

'ಜಗ್ಗೂದಾದಾ' ಅಂದ್ರೆ ಕನ್ನಡದಲ್ಲಿ ಯಾರು ಅಂದ್ರೆ ದರ್ಶನ್ ಅಂತ ಇವತ್ತು ಅಭಿಮಾನಿಗಳು ಹೇಳಬಹುದು. ಆದರೆ 90ರ ದಶಕದಿಂದಲೂ ಕಾಮಿಡಿ ಕಿಲಾಡಿಯಾಗಿ ಆಕ್ಷನ್ ಸೆಂಟಿಮೆಂಟ್, ಲವ್ ಸಿನಿಮಾಗಳಲ್ಲೂ ಮಿಂಚಿದ ನವರಸ ನಾಯಕ ಜಗ್ಗೇಶ್ ನಿಜವಾದ 'ಜಗ್ಗೂದಾದ'!

ಜಗ್ಗೇಶ್ ಯಾವತ್ತೂ ದಾದಾ ಅನ್ನಿಸಿಕೊಳ್ಳಬಹುದಾದ ಮಾಸ್ ಪಾತ್ರಗಳನ್ನು ಮಾಡಲಿಲ್ಲ. ತಿಳಿ ಹಾಸ್ಯ ಮಿಶ್ರಿತ ನಾಯಕತ್ವದ ಪಾತ್ರಗಳೇ ಜಡೆಮಾಯಸಂದ್ರದ ಜಗಜಟ್ಟಿಗೆ ಸರಿ ಹೊಂದಿದ್ದು.


ಹಾಗೆ ನೋಡಿದರೆ ಇವತ್ತು ತೆರೆಮೇಲಿರೋ 'ಜಗ್ಗೂದಾದಾ'ನಿಗೂ ನಿಜವಾದ 'ಜಗ್ಗೂದಾದ' ಜಗ್ಗೇಶ್ ನಡುವಿನ ಸಂಬಂಧ ಅಷ್ಟಕ್ಕಷ್ಟೆ. ಜಗ್ಗೇಶ್ ಎಷ್ಟೋ ಬಾರಿ ಬಹಿರಂಗವಾಗಿಯೇ ಇವತ್ತಿನ ಸ್ಟಾರ್ ನಟರು ಅನ್ನಿಸಿಕೊಂಡಿರೋರ ಬಗ್ಗೆ ಮಾತನಾಡಿದ್ದಾರೆ. [ವಿಮರ್ಶೆ: 'ಜಗ್ಗುದಾದಾ' ಮದುವೆ ಊಟದ ರುಚಿ ಸ್ವಲ್ಪ ಸಿಹಿ, ಸ್ವಲ್ಪ ಸಪ್ಪೆ]

Who is the real Jaggu Dada in Kannada film industry

"ನಾಯಕರು ಅಂದ್ರೆ ಹೀರೋಗಳು ಅಂದ್ರೆ ಆರಡಿ ಎತ್ತರ ಇದ್ದು ಸಿಕ್ಸ್ ಪ್ಯಾಕ್ ಮಾಡಿಕೊಂಡು ಬಿಡೋದಲ್ಲ, ಅಭಿನಯ ಇರ್ಬೇಕು. ಅವನು ನಟ, ನಟ ಜೇಡಿ ಮಣ್ಣಿನ ಹಾಗೆ ನಿರ್ದೇಶಕನ ಕೈಯ್ಯಲ್ಲಿ ಸುಂದರ ಮೂರ್ತಿಯಾಗಿ ಅರಳಬೇಕು" ಅಂತ ಆರಡಿಗಳನ್ನು ಜಗ್ಗಿ ಝಾಡಿಸಿದ್ದಾರೆ ಜಗ್ಗೇಶ್. ದರ್ಶನ್ ಅಭಿಮಾನಿಗಳೇ ಇದಕ್ಕೇನಂತೀರಿ?

ನಟ ಅಂದ್ರೆ ಡಾ.ರಾಜ್ ಆದರ್ಶವಾಗಿರಬೇಕು. ಅವರ ವಿನಯ, ಅಭಿನಯ ಬರಬೇಕು. ಅವರ ಸದ್ಗುಣಗಳಲ್ಲಿ ಸ್ವಲ್ಪವಾದರೂ ಇರಬೇಕು. ಅದರಲ್ಲಿ ಒಂದು ಧೂಳೂ ಇಲ್ಲದ ಬಿಲ್ಡಪ್ಸ್ಟಾರ್ಗಳೆಲ್ಲ ನಾಯಕರು ಅಂತ ಚಿತ್ರರಂಗದ ಸ್ಥಿತಿಯನ್ನು ವ್ಯಂಗ್ಯವಾಡಿದ್ದರು. ಅದೆಲ್ಲವೂ ಸತ್ಯ ಕೂಡ. [ವಿಷ್ಣು ಅಭಿಮಾನಿಯಿಂದ ಜಗ್ಗೇಶ್ ಗೆ 11 ಖಡಕ್ ಪ್ರಶ್ನೆಗಳು!]


ಆದರೆ ಅದನ್ನು ಜಗ್ಗೇಶ್ ಮನಸ್ಸಲ್ಲಿ ಇಟ್ಟುಕೊಳ್ಳೋ ವ್ಯಕ್ತಿಯಲ್ಲ. ಹಾಗೆ ಮನಸ್ಸಲ್ಲಿ ಇಟ್ಟುಕೊಂಡಿದ್ರೆ 'ಜಗ್ಗುದಾದಾ' ಅನ್ನೋ ಟೈಟಲ್ ಇಟ್ಟಾಗ ಕನ್ನಡದ ನವರಸ ನಾಯಕ ಜಗ್ಗೇಶ್ ಇದು ನನ್ನ ಹೆಸರನ್ನು ಸೇರಿಸಿ ಇಡುತ್ತಿದ್ದೀರಿ ಅಂತ ಟೈಟಲ್ ವಿವಾದ ಮಾಡಬಹುದಿತ್ತು.


ಇದು ಸುಮ್ಮನೆ ನಿಮ್ಮ ಕುತೂಹಲಕ್ಕಷ್ಟೇ ಕೊಟ್ಟ ಮಾಹಿತಿ. ಅಂದ ಹಾಗೆ ಈ ರಿಯಲ್ ಮತ್ತು ರೀಲ್ ಜಗ್ಗೂದಾದಗಳು 'ಅಗ್ರಜ' ಸಿನಿಮಾದಲ್ಲಿ ಒಂದಾಗಿ ನಟಿಸಿದ್ರು. ಆದರೆ ಸಿನಿಮಾ ಅಷ್ಟಾಗಿ ಸೌಂಡ್ ಮಾಡಲಿಲ್ಲ. ಟುಸ್ ಪಟಾಕಿ ಅಂದಿತ್ತು. ['ಜಗ್ಗುದಾದಾ' ಸಡಗರ: ರೊಚ್ಚಿಗೆದ್ದ ದರ್ಶನ್ ಅಭಿಮಾನಿಗಳು]

English summary
Who is the real Jaggu Dada in Kannada film industry. Darshan may have done a movie with title Jaggu Dada. But, the real Jaggu Dada is none other than our Navarasa Nayaka Jaggesh. Do you agree with this?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada