»   » ಯಾರು ನಿಜವಾದ 'ಮಂಡ್ಯ'ದ ಮಾಸ್ಟರ್ ಪೀಸ್?

ಯಾರು ನಿಜವಾದ 'ಮಂಡ್ಯ'ದ ಮಾಸ್ಟರ್ ಪೀಸ್?

By: ಜೀವನರಸಿಕ
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಎಲ್ಲಾ ಸ್ಟಾರ್ ಗಳಿಗೆ ಮಂಡ್ಯ ಅಂದ್ರೆ ಅದೇನೋ ಮೋಹ. ಮಂಡ್ಯ, ಮೈಸೂರು ಅಂದ್ರೆ ಸ್ಯಾಂಡಲ್ ವುಡ್ ಸಿನಿಮಾಗಳನ್ನ ಜನರು ಹುಚ್ಚೆದ್ದು ನೋಡೋ ಜಿಲ್ಲೆಗಳು. ಕನ್ನಡ ಸಿನಿಮಾ ರಂಗದ ಪ್ರೇಕ್ಷಕರ ಬೇರು ಆಳವಾಗಿ ಬೇರೂರಿರೋದು ಅಲ್ಲೇ. ಅದಕ್ಕೆ ಕಾರಣವೂ ಇದೆ.

ಇನ್ನು ಬೆಂಗಳೂರಿನ ವಿಷಯಕ್ಕೆ ಬಂದ್ರೆ ತಮಿಳು, ತೆಲುಗು, ಹಿಂದಿ ನಂತರ ಹೆಚ್ಚು ಪ್ರೇಕ್ಷಕರಿರೋದು ಕನ್ನಡ ಸಿನಿಮಾಗಳಿಗೆ. ಇನ್ನು ಬಳ್ಳಾರಿ ಸೇರಿದಂತೆ ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಲ್ಲಿ ಬಳ್ಳಾರಿಯ ಕಡೆಗೆ ತೆಲುಗು ಸಿನಿಮಾಗಳದ್ದು ಸಿಂಹಪಾಲು. ಜೊತೆಗೆ ಕೋಲಾರ, ದೊಡ್ಡಬಳ್ಳಾಪುರದಿಂದ ಚಿಕ್ಕಬಳ್ಳಾಪುರಗಳೂ ಸೇರಿ.

ಉತ್ತರಕ್ಕೆ ಹೋದ್ರೆ ಮರಾಠಿ, ಹಿಂದಿ ಪ್ರಭಾವದಿಂದ ಬಾಲಿವುಡ್ ಸಿನಿಮಾಗಳಿಂದ ಕನ್ನಡದ ಮಾರುಕಟ್ಟೆ ಅಷ್ಟಕ್ಕಷ್ಟೆ. ಇನ್ನು ಕರಾವಳಿಯಲ್ಲಿ ಇತ್ತೀಚೆಗೆ ತುಳು ಸಿನಿಮಾಗಳು ಶತದಿನೋತ್ಸವ ಆಚರಿಸುತ್ತಿವೆ. ಅಲ್ಲೂ ಕನ್ನಡ ಚಿತ್ರಪ್ರೇಮಿಗಳ ಸಂಖ್ಯೆ ದೊಡ್ಡದಿಲ್ಲ.

ಇದೆಲ್ಲದ್ರ ನಡುವೆ ಕನ್ನಡ ಸಿನಿಮಾಗಳು ಕನ್ನಡ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಸಿಕ್ಕೋದು ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ. ಕಾವೇರಿ ನೀರಿನ ವಿಚಾರ ಕನ್ನಡ ಪ್ರೀತಿ ಅಂದ್ರೆ ಮೊದಲಿಗೆ ಕಿಚ್ಚು ಹೊತ್ತಿಕೊಳ್ಳೋದು ಮಂಡ್ಯದಲ್ಲಿ.

ಈ ಕನ್ನಡ ಪ್ರೇಮವನ್ನ ಕನ್ನಡ ಸಿನಿಮಾಗಳು ಎನ್ ಕ್ಯಾಶ್ ಮಾಡಿಕೊಳ್ಳೋದ್ರಲ್ಲಿ ಯಾವತ್ತೂ ಹಿಂದೆ ಬಿದ್ದಿಲ್ಲ. ಅದಕ್ಕಾಗೀನೆ ಮಂಡ್ಯ ಮಣ್ಣಿನ ಬಗೆಗಿನ ಸಿನಿಮಾಗಳು ಹೆಚ್ಚಿವೆ. ವರ್ಷಕ್ಕೊಂದರಂತೆ ಬರ್ತಾನೇ ಇವೆ. ಇನ್ನು ಹೀರೋಗಳು ಮಂಡ್ಯ, ಮೈಸೂರು ಅಂತ ತಮ್ಮನ್ನ ಬಿಂಬಿಸಿಕೊಳ್ಳೋದ್ರಲ್ಲಿ ಹಿಂದೆ ಬಿದ್ದಿಲ್ಲ. ಹಾಗಾದ್ರೆ ಸ್ಯಾಂಡಲ್ವುಡ್ನ ಮಂಡ್ಯ ಸ್ಟಾರ್ಗಳ್ಯಾರು ಅಂತ ನಾವು ತೋರಿಸ್ತಾ ಇದ್ದೀವಿ.


ಮಂಡ್ಯ ಸ್ಟಾರ್ ಯಾರು?

ಮಂಡ್ಯದ ಗಂಡು ಅಂಬರೀಶ್ 1972ರಿಂದ ಜಲೀಲನಾಗಿ ಎಂಟ್ರಿಕೊಟ್ಟಾಗಿನಿಂದ ಮಂಡ್ಯ ಜನರಿಗೆ ಅಂಬೀನೇ 'ಮಂಡ್ಯದ ಗಂಡು'. ಮಂಡ್ಯದ ಸ್ಟಾರ್. ಮಂಡ್ಯದ ಗಂಡು ಅನ್ನೋ ಹಾಡು ಕೇಳಿ ಬರ್ತಿದ್ರೆ ಮಂಡ್ಯದ ಜನ್ರೇ ಯಾಕೆ ಕನ್ನಡ ಜನತೇನೇ ನಿನ್ನ ಮರೆಯೊಲ್ಲ ಎಂದು ಅಂತ ಹಾಡುತ್ತೆ.

ವಿಷ್ಣು ಕೂಡ ಮಂಡ್ಯ ಮೈಸೂರ್ ಸ್ಟಾರ್

ಮೇರು ನಟ ಸಾಹಸಸಿಂಹ ವಿಷ್ಣುವರ್ಧನ್ ಕೂಡ ಅಂಬರೀಶ್ ಜೊತೆ ಮೈಸೂರ್, ಮಂಡ್ಯದಲ್ಲಿ ವೇದಿಕೆಯ ಮೇಲೆ ಕುಳಿತಾಗ ಅದೆಷ್ಟೋ ಬಾರಿ ನಾನೂ ನಿಮ್ಮವನೇ ಅಂತ ಹೇಳಿದ್ದಿದೆ. ವಿಷ್ಣುವರ್ಧನ್ ಕೂಡ ಹಳೆ ಮೈಸೂರು ಮಣ್ಣಿನ ಪ್ರತಿಭೆ ತಾನೆ.

ಮಂಡ್ಯದ ಮಗನಾಗಿ ದರ್ಶನ್

'ಮಂಡ್ಯ' ಅನ್ನೋ ಟೈಟಲ್ ನಲ್ಲೇ ಸಿನಿಮಾ ಮಾಡಿ ಯಶಸ್ವಿಯೂ ಆದ್ರು ಚಾಲೆಂಜಿಂಗ್ ಸ್ಟಾರ್ ದರ್ಶನ್. ಮೈಸೂರಿನಲ್ಲಿ ಹಸುವನ್ನ ಸಾಕಿ ಹಾಲು ಕರೆದು ಹಾಲು ಮಾರಿ ಬೆಳೆದ ದರ್ಶನ್ ರನ್ನ ಕೂಡ ಮಂಡ್ಯ ಜನ್ರು ನಮ್ ಹುಡ್ಗ ಅಂತ ಕೊಂಡಾಡ್ತಾರೆ.

ನೆನಪಿರಲಿ ಮತ್ತೊಬ್ಬ ಮೈಸೂರ್ ಹುಡ್ಗ

ಕೂರಕ್ ಕುಕ್ಕಳ್ಳಿ ಕೆರೆ ತೇಲಕ್ ಕಾರಂಜಿ ಕೆರೆ ಅಂತ ಹಾಡಿ ಕುಣಿದ ಮತ್ತೊಬ್ಬ ಮೈಸೂರ್ ಮಂಡ್ಯ ಹೈದ 'ನೆನಪಿರಲಿ ಪ್ರೇಮ್'. ಸ್ಯಾಂಡಲ್ ವುಡ್ ನ ಹ್ಯಾಂಡಸಮ್ ಹೀರೋ ಪ್ರೇಮ್ ಫೇವರೀಟ್ ಪ್ಲೇಸ್ ಅಂದ್ರೆ ಮೈಸೂರು.

ಮಂಡ್ಯ ಮಾಸ್ಟಪೀಸ್ ಯಶ್

ರಾಕಿಂಗ್ ಸ್ಟಾರ್ ಯಶ್ ಅಪ್ಪಟ ಮಂಡ್ಯದ ಮಣ್ಣಿನ ಹೈದ. ಅದು ಅವರ ಭಾಷೆಯಲ್ಲೇ ಇದೆ. ಬಹುಶಃ ಅಂಬರೀಶ್ ನಂತರ ಮಾತಿನಿಂದಲೇ ಮಂಡ್ಯ ಗಂಡು ಅನ್ನಿಸಿಕೊಳ್ಳೋ ನಟ ಅಂದ್ರೆ ಅದು ಅಣ್ತಮ್ಮ ಯಶ್ ಅನ್ನೋದ್ರಲ್ಲಿ ಅನುಮಾನವಿಲ್ಲ.

ನೀನಾಸಂ ಸತೀಶ್

ಇತ್ತೀಚೆಗೆ ಬಂದ ಲವ್ ಇನ್ ಮಂಡ್ಯ ಹೈದ ನೀನಾಸಂ ಸತೀಶ್ ಕೂಡ ಅಪ್ಪಟ ಮಂಡ್ಯದ ಹೈದ. ಸತೀಶ್ ಭಾಷೆಯ ಬಳಕೇನೇ ಅದನ್ನ ಸ್ಪಷ್ಟವಾಗಿ ಹೇಳುತ್ತೆ. ಇನ್ನು ಲವ್ ಇನ್ ಮಂಡ್ಯ ಸಿನಿಮಾದಲ್ಲಿ ಅವ್ರ ಪಾತ್ರ ನೋಡಿದ್ರೇ ನೀನಾಸಂ ಸತೀಶ್ ಮಂಡ್ಯದ ಅಚ್ಚು ಅನ್ನೋದ್ರಲ್ಲಿ ಅನುಮಾನ ಬರೋಕೆ ಸಾಧ್ಯಾನಾ.

ಡೈರೆಕ್ಟರ್ ಪ್ರೇಮ್

ಮಂಡ್ಯ ಮಣ್ಣಿನ ಮತ್ತೊಂದು ಮಾಸ್ಟರ್ ಪೀಸ್ ಅಂದ್ರೆ ನಿರ್ದೇಶಕ ಪ್ರೇಮ್. ಏನೇ ತಡ ಬಡಾಯಿಸಿಕೊಂಡು ಇಂಗ್ಲೀಷ್ ಮಾತ್ನಾಡಿದ್ರೂ ಫ್ರೇಂ ಟು ಫ್ರೇಂ ಮಂಡ್ಯ ಮಣ್ಣನ್ನೇ ಎರಕಹೊಯ್ದಂತಿರೋ ಹೈದ ಅಂದ್ರೆ ಅದು ನಿರ್ದೇಶಕ ಪ್ರೇಮ್.

English summary
Here is an interesting question about Sandalwood film industry. Who is the real masterpiece of 'Mandya'? The reply is very simple it it noon other than Rebel Star Ambarish. But many stars are represented Mandya and Mysore. Here is the complete list.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada