For Quick Alerts
  ALLOW NOTIFICATIONS  
  For Daily Alerts

  'ರಾಬರ್ಟ್' ಸಿನಿಮಾಗೆ ಮ್ಯೂಸಿಕ್ ಡೈರೆಕ್ಟರ್ ಯಾರು?

  |

  'ರಾಬರ್ಟ್' ಸಿನಿಮಾದ ನಟ ದರ್ಶನ್, ನಿರ್ದೇಶಕ ತರುಣ್ ಸುಧೀರ್, ನಿರ್ಮಾಪಕರು ಉಮಾಪತಿ, ಸಂಭಾಷಣೆಗಾರರು ರಾಜಶೇಖರ್ ಹಾಗೂ ಚಂದ್ರಮೌಳಿ. ಪೋಸ್ಟರ್ ಡಿಸೈನ್ ಮಾಡಿದ್ದು, ಪರಿವರ್ತನ್ ಹಾಗೂ ಆದರ್ಶ್ ಮೋಹನ್ ದಾಸ್.

  'ರಾಬರ್ಟ್' ಸಿನಿಮಾದ ಬಗ್ಗೆ ಇದಕ್ಕಿಂತ ಹೆಚ್ಚು ವಿಷಯವನ್ನು ಚಿತ್ರತಂಡ ಇದುವರೆಗೆ ಬಿಟ್ಟುಕೊಟ್ಟಿಲ್ಲ. ಹೀಗಿರುವಾಗ, ಸಿನಿಮಾದ ಅನೇಕ ವಿಷಯಗಳ ಬಗ್ಗೆ ಪ್ರೇಕ್ಷಕರಿಗೆ ದೊಡ್ಡ ನಿರೀಕ್ಷೆ ಇದೆ. ಅದರಲ್ಲಿ ಚಿತ್ರಕ್ಕೆ ಸಂಗೀತ ಯಾರು ನೀಡುತ್ತಾರೆ ಎನ್ನುವ ಕುತೂಹಲ ಇದೆ.

  ''ರಾಬರ್ಟ್ ಪೋಸ್ಟರ್ ನಕಲಿ ಅಲ್ಲ'' - ತರುಣ್ ಸುಧೀರ್ ಸ್ಪಷ್ಟನೆ

  ಕನ್ನಡದಲ್ಲಿ ಸದ್ಯ ಟ್ರೆಂಡಿಂಗ್ ಮ್ಯೂಸಿಕ್ ಡೈರೆಕ್ಟರ್ ಆಗಿರುವುದು ಅರ್ಜುನ್ ಜನ್ಯ ಹಾಗೂ ವಿ ಹರಿಕೃಷ್ಣ. ಈ ಇಬ್ಬರಲ್ಲಿ ಯಾರೋ ಒಬ್ಬರು ಸಿನಿಮಾಗೆ ಸಂಗೀತ ನೀಡಬಹುದಾದ ಸಾಧ್ಯತೆ ಹೆಚ್ಚಿದೆ. ಈ ರೀತಿ ಹೇಳಲು ಕೆಲವು ಕಾರಣಗಳೂ ಇವೆ. ಮುಂದೆ ಓದಿ....

  'ರಾಬರ್ಟ್' ಪೋಸ್ಟರ್ ಹಂಚಿಕೊಂಡಿದ್ದ ಹರಿಕೃಷ್ಣ

  'ರಾಬರ್ಟ್' ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ. ಸಂಗೀತ ನಿರ್ದೇಶಕ ವಿ ಹರಿಕೃಷ್ಣ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟರ್ ಹಂಚಿಕೊಂಡಿದ್ದಾರೆ. ''ರಾಬರ್ಟ್' ಚಾಲೆಂಜ್ ಗೆ ರೆಡಿ'' ಎಂದು ಬರೆದುಕೊಂಡಿದ್ದಾರೆ. ಹೀಗಾಗಿ ಅವರು ಕೂಡ ಚಿತ್ರತಂಡದ ಭಾಗ ಆಗಿದ್ದಾರೆಯೇ ಎನ್ನುವ ಸಣ್ಣ ಅನುಮಾನ ಇದೆ.

  ಕೆಲವು ಅಭಿಮಾನಿಗಳ ಆಸೆ

  ಕೆಲವು ಅಭಿಮಾನಿಗಳ ಆಸೆ

  ಹರಿಕೃಷ್ಣ ಟ್ವೀಟ್ ಗೆ ಕೆಲವು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ಸಿನಿಮಾಗೆ ನೀವೇ ಮ್ಯೂಸಿಕ್ ಮಾಡಿ ಎಂದು ಕೇಳಿಕೊಂಡಿದ್ದಾರೆ. ದರ್ಶನ್ ಹಾಗೂ ಹರಿಕೃಷ್ಣ ಕಾಂಬಿನೇಶನ್ ಈಗಾಗಲೇ ಅನೇಕ ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದು, ಇಲ್ಲಿಯೂ ಅದು ಮುಂದುವರೆಯಲಿ ಎನ್ನುವುದು ಅಭಿಮಾನಿಗಳ ಆಸೆಯಾಗಿದೆ.

  'ರಾಬರ್ಟ್' ನಾಯಕಿಯ ಪಟ್ಟಕ್ಕೆ ಕೇಳಿ ಬಂದ ಟಾಪ್ ನಟಿಯರ ಹೆಸರು.!

  ಹರಿಕೃಷ್ಣ ಮ್ಯೂಸಿಕ್ ಮಾಡುವುದು ಕಡಿಮೆಯಾಗಿದೆ

  ಹರಿಕೃಷ್ಣ ಮ್ಯೂಸಿಕ್ ಮಾಡುವುದು ಕಡಿಮೆಯಾಗಿದೆ

  ಹಾಗೆ ನೋಡಿದರೆ, ಹರಿಕೃಷ್ಣ ಸದ್ಯ ಮ್ಯೂಸಿಕ್ ಮಾಡುತ್ತಿರುವ ಸಿನಿಮಾಗಳ ಸಂಖ್ಯೆ ಕಡಿಮೆಯಾಗಿದೆ. 'ಯಜಮಾನ' ಚಿತ್ರದ ಮೂಲಕ ನಿರ್ದೇಶಕರಾದ ಹರಿಕೃಷ್ಣ ಬೇರೆ ಬೇರೆ ಚಿತ್ರಗಳಿಗೆ ಸಂಗೀತ ನೀಡುವುದನ್ನು ಕಡಿಮೆ ಮಾಡಿದ್ದಾರೆ. ಜೊತೆಗೆ ಇನ್ನೊಂದು ಕಥೆ ಸಿದ್ಧ ಮಾಡಿಕೊಳ್ಳುತ್ತಿದ್ದಾರಂತೆ. ಹೀಗಿರುವಾಗ, 'ರಾಬರ್ಟ್' ಚಿತ್ರಕ್ಕೆ ಹರಿಕೃಷ್ಣ ಸಂಗೀತ ನೀಡುತ್ತಾರ.. ಇಲ್ವಾ? ಎನ್ನುವ ಪ್ರಶ್ನೆ ಮೂಡಿದೆ.

  ಅರ್ಜುನ್ ಜನ್ಯ - ತರುಣ್ ಸುಧೀರ್ ಕಾಂಬಿನೇಶನ್

  ಅರ್ಜುನ್ ಜನ್ಯ - ತರುಣ್ ಸುಧೀರ್ ಕಾಂಬಿನೇಶನ್

  ನಿರ್ದೇಶಕ ತರುಣ್ ಮತ್ತು ಅರ್ಜುನ್ ಜನ್ಯ ನಡುವೆ ಒಳ್ಳೆಯ ಸ್ನೇಹ ಇದೆ. 'ರಾಂಬೋ' ಸಿನಿಮಾದಿಂದ ಇತ್ತೀಚಿಗಿನ 'ವಿಕ್ಟರಿ 2' ವರೆಗೆ ಅವರಿಗೆ ಸಂಬಂಧ ಪಟ್ಟ ಚಿತ್ರಗಳಿಗೆ ಅರ್ಜುನ್ ಮ್ಯೂಸಿಕ್ ನೀಡಿದ್ದಾರೆ. ಆ ಪೈಕಿ ಬಹುತೇಕ ಎಲ್ಲ ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗಿವೆ. ಅಲ್ಲದೆ, ಜನ್ಯ ಈಗ ನಂಬರ್ 1 ಸ್ಥಾನದಲ್ಲಿ ಇದ್ದು, 'ರಾಬರ್ಟ್' ಮ್ಯೂಸಿಕ್ ಡೈರೆಕ್ಟರ್ ಪಟ್ಟಿಯಲ್ಲಿ ಇದ್ದಾರೆ.

  ಅವರ.. ಇವರ.. ಇಲ್ಲ ಬೇರೆಯವರ..?

  ಅವರ.. ಇವರ.. ಇಲ್ಲ ಬೇರೆಯವರ..?

  ಅರ್ಜುನ್ ಜನ್ಯ ಹಾಗೂ ಹರಿಕೃಷ್ಣ ಬಿಟ್ಟು ಬೇರೆ ಸಂಗೀತ ನಿರ್ದೇಶಕರ ಜೊತೆಗೆ ತರುಣ್ ಕೆಲಸ ಮಾಡುತ್ತಾರೆಯೇ ಎನ್ನುವ ನಿರೀಕ್ಷೆ ಮತ್ತೊಂದು ಕಡೆ ಇದೆ. ಚರಣ್ ರಾಜ್, ಅಜನೀಶ್ ಲೋಕನಾಥ್, ರವಿ ಬಸ್ರೂರ್ ಹೀಗೆ ಸದ್ಯ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿರುವ ಮ್ಯೂಸಿಕ್ ಡೈರೆಕ್ಟರ್ ಗಳಿಗೆ 'ರಾಬರ್ಟ್' ನಲ್ಲಿ ಅವಕಾಶ ಸಿಕ್ಕರು ಅಚ್ಚರಿ ಪಡಬೇಕಾಗಿಲ್ಲ.

  'ಚೌಕ'ಗೆ ನಾಲ್ಕು ಜನ ಮ್ಯೂಸಿಕ್ ಮಾಡಿದ್ದರು

  'ಚೌಕ'ಗೆ ನಾಲ್ಕು ಜನ ಮ್ಯೂಸಿಕ್ ಮಾಡಿದ್ದರು

  ತರುಣ್ ಸುಧೀರ್ ನಿರ್ದೇಶನದ ಮೊದಲ ಸಿನಿಮಾ 'ಚೌಕ'ದಲ್ಲಿ ನಾಲ್ಕು ಮ್ಯೂಸಿಕ್ ಡೈರೆಕ್ಟರ್ ಗಳು ಕೆಲಸ ಮಾಡಿದ್ದರು. ಹರಿಕೃಷ್ಣ, ಅರ್ಜುನ್ ಜನ್ಯ, ವಿ ಶ್ರೀಧರ್ ಸಂಭ್ರಮ್ ಹಾಗೂ ಗುರುಕಿರಣ್ ಚಿತ್ರಕ್ಕೆ ಒಂದೊಂದು ಹಾಡು ನೀಡಿದ್ದರು. ಹೀಗಾಗಿ 'ರಾಬರ್ಟ್' ಮ್ಯೂಸಿಕ್ ಡೈರೆಕ್ಟರ್ ಯಾರು ಎಂದು ಹೇಳುವುದು ಕಷ್ಟ.

  English summary
  Who will be the music director for 'Robert' kannada movie. The movie is starring Challenging star Darshan and directed by Tharun Sudhir.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X