»   » 'ಜೇಮ್ಸ್' ಬಾಂಡ್ ಚಿತ್ರಕ್ಕೆ ಯಶ್, ಪುನೀತ್ ಗೆ ಆಹ್ವಾನ

'ಜೇಮ್ಸ್' ಬಾಂಡ್ ಚಿತ್ರಕ್ಕೆ ಯಶ್, ಪುನೀತ್ ಗೆ ಆಹ್ವಾನ

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡುವೆ ಸಣ್ಣದೊಂದು ಪೈಪೋಟಿ ಏರ್ಪಟ್ಟಿದೆ. 'ಜೇಮ್ಸ್' ಬಾಂಡ್ ಆಗೋದಕ್ಕೆ ಈ ಇಬ್ಬರೂ ನಟರು ತುದಿಗಾಲಲ್ಲಿ ನಿಂತಿದ್ದಾರೆ. ಜೇಮ್ಸ್ ಬಾಂಡ್ ಅಂದಿದ ತಕ್ಷಣ ನಿಮಗೆ ಹಾಲಿವುಡ್ ನ ಬಾಂಡ್ ಸೀರೀಸ್ ನೆನಪಿಗೆ ಬರಬಹುದು.

ಹಾಗಾದ್ರೆ, ಸ್ಯಾಂಡಲ್ ವುಡ್ ನಲ್ಲಿ ಬಾಂಡ್ ಶೈಲಿಯ ಸಿನಿಮಾ ಬರ್ತಿದ್ಯಾ? ಜೇಮ್ಸ್ ಬಾಂಡ್ ಪಾತ್ರಕ್ಕೆ ಯಶ್ ಮತ್ತು ಪುನೀತ್ ರಾಜ್ ಕುಮಾರ್ ಪೈಪೋಟಿ ನಡೆಸ್ತಾಯಿದ್ದಾರಾ ಅಂದುಕೊಳ್ತಿದ್ರೆ, ಸ್ವಲ್ಪ ತಾಳಿ.... ಅಸಲಿ ವಿಷಯ ಬೇರೆಯದ್ದೇ ಇದೆ. [ಪವರ್ ಸ್ಟಾರ್ 25ನೇ ಸಿನಿಮಾ ಯಾವುದು ಗೊತ್ತಾ?]

Yash and Puneth

ಸಕ್ಸಸ್ ಅಲೆಯಲ್ಲಿ ತೇಲುತ್ತಿರುವ 'ಬಹದ್ದೂರ್' ಚಿತ್ರದ ನಿರ್ದೇಶಕ ಚೇತನ್ ಹೊಸ ಸಿನಿಮಾ ಮಾಡ್ತಿದ್ದಾರೆ. ಅದ್ರ ಹೆಸರು 'ಜೇಮ್ಸ್'' ಅಂತ. 'ಜೇಮ್ಸ್' ಅಂದಕೂಡಲೆ ಎಲ್ರಿಗೂ ಜೇಮ್ಸ್ ಬಾಂಡ್ ನೆನಪಾಗ್ತಾರೆ. ಆದ್ರೆ 'ಜೇಮ್ಸ್ ಬಾಂಡ್' ಗೂ ಈ 'ಜೇಮ್ಸ್'ಗೂ ಯಾವುದೇ ಸಂಬಂಧವಿಲ್ಲ. ಯಾಕೆ ಗೊತ್ತಾ, ಜೇಮ್ಸ್ ಅಂದ್ರೆ ''(JA) ಜಕ್ಕಳ್ಳಿ (M)ಮಾದಪ್ಪ (E)ಈರವ್ವನ ಮಗ (S)ಸಂತು''

ಈಗ ಗೊತ್ತಾಗಿರ್ಬೇಕಲ್ವಾ. ಈ ಜೇಮ್ಸ್ ಯಾರು..? ಹೇಗಿರ್ಬಹುದು ಅಂತ..! ಜೇಮ್ಸ್‌ ಫುಲ್ ಫಾರ್ಮ್ ಕೇಳಿ ಇದ್ಯಾವ್ದೋ ಹಳ್ಳಿ ಸ್ಟೋರಿ ಇರ್ಬೇಕು ಅಂದುಕೊಳ್ಬೇಡಿ. 'ಜೇಮ್ಸ್' ಸಿನಿಮಾ ಪಕ್ಕಾ ಆಕ್ಷನ್ ಕಮರ್ಶಿಯಲ್ ಎಂಟರ್ ಟೇನರ್.

''ಪ್ರೇಕ್ಷಕರಿಗೆ ಬೇಕಾದ ಎಲ್ಲಾ ಮನರಂಜನಾ ಅಂಶಗಳು ಚಿತ್ರದಲ್ಲಿರಲಿವೆ. ಇದು ಹಾಲಿವುಡ್ ನ ಯಾವ್ದೇ ಬಾಂಡ್ ಸಿನಿಮಾದಿಂದ ಸ್ಫೂರ್ತಿ ಪಡೆದಿಲ್ಲ, ನನ್ನ ಸ್ವಂತ ಕಥೆ'' ಅಂತ 'ಫಿಲ್ಮಿಬೀಟ್ ಕನ್ನಡ' ಜೊತೆ ಹಂಚಿಕೊಂಡಿದ್ದಾರೆ ನಿರ್ದೇಶಕ ಚೇತನ್. ಅದರ ಎಕ್ಸ್ ಕ್ಲೂಸಿವ್ ವರದಿ ಇದು [ಯಶ್ ಪುನೀತ್ ಟಾಟ್ಯೂ]

ಆರ್.ಎಸ್.ಪ್ರೊಡಕ್ಷನ್ಸ್ ಈ ಚಿತ್ರವನ್ನ ಅದ್ದೂರಿಯಾಗಿ ನಿರ್ಮಿಸಲಿದ್ದು, ಈಗಾಗ್ಲೇ ಚಿತ್ರಕಥೆಯನ್ನ ಯಶ್ ಮತ್ತು ಪುನೀತ್ ರಾಜ್ ಕುಮಾರ್ ಗೆ ಹೇಳಿದ್ದಾರಂತೆ. ಇಬ್ಬರಿಗೂ ಕಥೆ ಇಷ್ಟವಾಗಿದ್ದು, ಸದ್ಯಕ್ಕೆ ತಮ್ಮ ತಮ್ಮ ಪ್ರಾಜೆಕ್ಟ್ಸ್ ಗಳಲ್ಲಿ ಬಿಜಿಯಾಗಿದ್ದಾರೆ. ಡೇಟ್ಸ್ ಹೊಂದಾಣಿಕೆಯಾಗಿ ಇಬ್ಬರಲ್ಲಿ ಯಾರು 'ಜೇಮ್ಸ್' ಆಗ್ತಾರೆ ಅನ್ನೋದನ್ನ ಸಿನಿಪ್ರಿಯರು ಕಾದುನೋಡಬೇಕಷ್ಟೆ. (ಫಿಲ್ಮಿಬೀಟ್ ಕನ್ನಡ)

English summary
Rocking Star Yash and Power Star Puneeth Rajkumar are competing to become 'James'. The movie is not about James Bond, James means "Jakkalli Madappa Eeravvana maga Santhu" is complete action entertainer and not inspired by any of the Bond movies says director Chethan, on exclusively chat with FimiBeat kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada