For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್ ವುಡ್ ಕ್ವಿನ್ ಪಟ್ಟ ಯಾರಿಗೂ ಬೇಡವಾಯ್ತೆ?

  By ಜೀವನರಸಿಕ
  |

  ನಮ್ಮ ಸ್ಯಾಂಡಲ್ ವುಡ್ ಅನ್ನೋ ಅರಮನೆಯಲ್ಲಿ ರಾಜರಿದ್ದಾರೆ, ರಾಜಕುಮಾರರಿದ್ದಾರೆ. ಆದರೆ ರಾಣಿಯರಿಲ್ಲ, ರಾಜಕುಮಾರಿಯರಿಲ್ಲ. ಕನ್ನಡ ಚಿತ್ರರಂಗದ ಹೀರೋಯಿನ್ ಗಳ ಪರಿಸ್ಥಿತಿ ಅಕ್ಷರಶಃ ಒಂದೂವರೆ ವರ್ಷ ಹಿಂದಿನ ಟೀಂ ಇಂಡಿಯಾ ತರಹ ಆಗಿದೆ.

  ಸ್ಯಾಂಡಲ್ ವುಡ್ ಕಿಂಗ್ ಶಿವಣ್ಣ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಪವರ್ ಸ್ಟಾರ್ ಪುನೀತ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೀಗೆ ಸ್ಯಾಂಡಲ್ ವುಡ್ ದೊಡ್ಡ ಸ್ಟಾರ್ ಗಳ ಲೋಕ. ಆದರೆ ಸ್ಟಾರ್ ನಟಿಯರೇ ಇಲ್ಲ. [ಎಲ್ಲೆಲ್ಲೋ ಜಾರಿದೆ ನಟಿ ರಮ್ಯಾ ಮೇಡಂ ಮನಸು]

  ಆವತ್ತು ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್ ರಂತಹಾ ದಿಗ್ಗಜರನ್ನ ಕಳೆದುಕೊಂಡ ಭಾರತ ಕ್ರಿಕೆಟ್ ತಂಡ ವೆರಿ ವೆರಿ ಸ್ಪೆಷಲ್ ಲಕ್ಷ್ಮಣ್ ರನ್ನೂ ದೂರಮಾಡಿಕೊಂಡಿತ್ತು. ಒಂದು ಕ್ಷಣ ಟೀಂ ಇಂಡಿಯಾಗೆ ಅನಾಥಭಾವ ಕಾಡಿತ್ತು. ಈಗ ಕನ್ನಡ ಚಿತ್ರರಂಗದ ಕಥೆಯೂ ಅದೇ ಆಗಿದೆ.

  ಯಾಕಂದ್ರೆ ಹಿಂದೆ ಒಬ್ಬರಿಗೊಬ್ಬರು ಸ್ಪರ್ಧೆ ಕೊಡುವ ನಟಿಯರಿದ್ದರು. ಪ್ರತೀ ಮೂರು ತಿಂಗಳಿಗೊಮ್ಮೆ ಯಾರು ಟಾಪ್ ಹೀರೋಯಿನ್ ಅಂತ ಆಗಾಗ ಲೆಕ್ಕಾಚಾರ ನಡೀತಿತ್ತು. ಈಗ ಯಾವ ಲೆಕ್ಕಾಚಾರವೂ ಇಲ್ಲ. ಹೇಳಿಕೊಳ್ಳೋಕೆ ಇಲ್ಯಾವ ರಾಣಿಯರೂ ಇಲ್ಲ. ಕನ್ನಡ ಚಿತ್ರರಂಗದಿಂದ ದೂರವಾಗಿರೋ ರಾಣಿಯರ್ಯಾರು? ಯಾಕೆ? ಏನು? ಅನ್ನೋ ಇಂಟರೆಸ್ಟಿಂಗ್ ಡೀಟೈಲ್ಸ್ ಇಲ್ಲಿದೆ.

  ರಮ್ಯಾ ಅನ್ನೋ ಸ್ಯಾಂಡಲ್ವುಡ್ ಕ್ವೀನ್

  ರಮ್ಯಾ ಅನ್ನೋ ಸ್ಯಾಂಡಲ್ವುಡ್ ಕ್ವೀನ್

  ಕನ್ನಡ ಚಿತ್ರರಂಗವನ್ನ ಹತ್ತು ವರ್ಷ ಆಳಿದ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಈಗ ರಾಜಕೀಯದಲ್ಲಿ ಬಿಜಿಯಾಗಿದ್ದಾರೆ. ಅವರು 'ಆರ್ಯನ್' ಬಹುಶಃ ನನ್ನ ಕೊನೆಯ ಸಿನಿಮಾ ಅಂದಿದ್ದಾರೆ. ಚುನಾವಣೆ ಬೇರೆ ಬಂದಿದೆ ಸಿನಿಮಾ ಕಥೆ ಅಷ್ಟಕ್ಕಷ್ಟೆ.

  ರಾಧಿಕಾ ಕುಮಾರಸ್ವಾಮಿ ಟ್ರ್ಯಾಕ್ ನಲ್ಲಿಲ್ಲ

  ರಾಧಿಕಾ ಕುಮಾರಸ್ವಾಮಿ ಟ್ರ್ಯಾಕ್ ನಲ್ಲಿಲ್ಲ

  ಒಂದು ಕಾಲದಲ್ಲಿ ರಮ್ಯಾಗೆ ಸಮನಾಗಿ ಪೈಪೋಟಿ ನೀಡಿದ ಸ್ಯಾಂಡಲ್ ವುಡ್ ನ ಮಂಗಳೂರು ಮೀನು ರಾಧಿಕಾ ಕುಮಾರಸ್ವಾಮಿ ಈಗ ಮದುವೆಯಾಗಿ ಮಗುವಾಗಿ ಮತ್ತೆ ಟ್ರ್ಯಾಕ್ ಗೆ ಮರಳೋ ಪ್ರಯತ್ನದಲ್ಲಿದ್ದಾರೆ. ಆದರೆ ರಾಣಿಯಾಗೋ ಕನಸು ಅವರಿಗಿಲ್ಲ ಅನ್ನಿಸುತ್ತೆ.

  ರಕ್ಷಿತಾ ಸಿನಿಮಾಗೆ ಬರೋದೇ ಡೌಟು

  ರಕ್ಷಿತಾ ಸಿನಿಮಾಗೆ ಬರೋದೇ ಡೌಟು

  ರಮ್ಯಾ ಹೆಚ್ಚೋ ರಕ್ಷಿತಾ ಹೆಚ್ಚೋ ಅನ್ನೋ ವಾದಗಳು ಸ್ಯಾಂಡಲ್ ವುಡ್ ನಲ್ಲಿ ಶುರುವಾದ ಕಾಲವಿತ್ತು, ಅಷ್ಟರಮಟ್ಟಿಗೆ ಈ ಚೆಲುವೆಯರು ಸ್ಯಾಂಡಲ್ ವುಡ್ ನಲ್ಲಿ ಹವಾ ಕಾಪಾಡಿಕೊಂಡಿದ್ರು. ಆದರೆ ಈಗ ರಕ್ಷಿತಾ ಪ್ರೇಮ್ ರನ್ನ ಮದುವೆಯಾಗಿ ಸಿನಿಮಾದಿಂದ ದೂರ ಉಳಿದಿದ್ದಾರೆ.

  ಗ್ಲಾಮರ್ ಗಿಣಿ ತೆಲುಗು, ತಮಿಳು, ಹಿಂದಿ ಕಡೆಗೆ

  ಗ್ಲಾಮರ್ ಗಿಣಿ ತೆಲುಗು, ತಮಿಳು, ಹಿಂದಿ ಕಡೆಗೆ

  ರಮ್ಯಾ ನಂತರ ರಾಗಿಣಿನೇ ಅನ್ನೋ ನಿರೀಕ್ಷೆ ಮೂಡಿಸಿದ ಗ್ಲಾಮರ್ ಗಿಣಿ ರಾಗಿಣಿ ಇತ್ತೀಚೆಗೆ ಕನ್ನಡ ಸಿನಿಮಾಗಳಿಂದ ದೂರವಾಗಿ ತೆಲುಗು ತಮಿಳಿನ ಕಡೆ ಹೊರಟಿದ್ದಾರೆ. ಕನ್ನಡಕ್ಕೆ ನಾನೊಬ್ಬಳೇ ರಾಣಿ ಅಂತ ಹೇಳ್ತಾ ಇಲ್ಲಿ ಉಳಿಯೋಕೆ ರಾಗಿಣಿಯೂ ಮನಸ್ಸು ಮಾಡಿಲ್ಲ.

  ಐಂದ್ರಿತಾ ಬೆಂಗಾಲಿಯಲ್ಲಿ ಬಿಜಿ

  ಐಂದ್ರಿತಾ ಬೆಂಗಾಲಿಯಲ್ಲಿ ಬಿಜಿ

  ಟಾಪ್ ನಟಿಯರ ಲಿಸ್ಟ್ ನಲ್ಲಿ ಸದಾ ಕಾಣಿಸಿಕೊಳ್ತಿದ್ದ ಮತ್ತೊಬ್ಬ ರಾಣಿ ಐಂದ್ರಿತಾ ಈಗ ಕನ್ನಡದ 'ವಿಷ್ಣುವರ್ಧನ'ದ ಬೆಂಗಾಲಿ ರೀಮೇಕ್ ಸಿನಿಮಾದಲ್ಲಿ ನಟಿಸ್ತಿದ್ದಾರೆ. ಹಾಗಾಗಿ ಸದ್ಯ ಕನ್ನಡದಲ್ಲಿ ಕಾಣಿಸಿಕೊಳ್ಳೋದು ಅನುಮಾನ.

  ರಾಧಿಕಾ ಪಂಡಿತ್ ಗೆ ರಾಣಿಯಾಗೋ ಮನಸ್ಸಿಲ್ಲ

  ರಾಧಿಕಾ ಪಂಡಿತ್ ಗೆ ರಾಣಿಯಾಗೋ ಮನಸ್ಸಿಲ್ಲ

  ನನ್ನ ನಂತರ ಸ್ಯಾಂಡಲ್ ವುಡ್ ನಲ್ಲಿ ಕ್ವೀನ್ ಆಗೋಕೆ ಸೂಕ್ತ ಅಂದ್ರೆ ಅದು ರಾಧಿಕಾ ಪಂಡಿತ್ ಅಂತ ಸ್ವತಃ ರಮ್ಯಾ ರಾಜಕೀಯಕ್ಕೆ ಹೊರಟ ಸಮಯದಲ್ಲಿ ಹೇಳಿದರು. ಆದರೆ ರಾಧಿಕಾ ಇಂತಹ ವಿಷಯಕ್ಕೆ ತಲೆಕೆಡಿಸಿಕೊಳ್ಳೋ ವ್ಯಕ್ತಿಯಲ್ಲ.

  ಯಾರಾಗಲಿದ್ದಾರೆ ಸ್ಯಾಂಡಲ್ ವುಡ್ ಕ್ವೀನ್

  ಯಾರಾಗಲಿದ್ದಾರೆ ಸ್ಯಾಂಡಲ್ ವುಡ್ ಕ್ವೀನ್

  ಚಂದನವನ ಒಂದು ಕಾಲದಲ್ಲಿ ರಾಣಿಯರ ರಂಗೀನ್ ಲೋಕವಾಗಿತ್ತು. ಈಗೇನಿದ್ದರೂ ಹೊಸಬರದ್ದೇ ಹವಾ. ಆದ್ರೆ ಅಂದು ಇದ್ದ ಸ್ಪರ್ಧೆ ಇಲ್ಲ. ಈಗ ಎಲ್ಲ ಹೀರೋಯಿನ್ ಗಳೂ ಹೊಸದಾಗಿ ಬೆಳೀತಿದ್ದಾರೆ ಕಲೀತಿದ್ದಾರೆ. ಸ್ಯಾಂಡಲ್ ವುಡ್ ಕ್ವೀನ್ ಯಾರಾಗಲಿದ್ದಾರೆ?

  English summary
  Who will become Sandalwood queen in Kannada film industry? There would be no competation for 'queen' post in Sandalwood. All Sandalwood queens like Ramya, Radhika Pandit, Aindrita Ray, Radhika Kumaraswamy are busy in some other work.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X