ನಿಖಿಲ್ ಕುಮಾರ್ ಜೊತೆ ಡ್ಯುಯೆಟ್ ಹಾಡುವ ಬೆಡಗಿ ಯಾರು?
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ರ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರವರ ಮಗ ನಿಖಿಲ್ ಕುಮಾರ್ 'ಜಾಗ್ವಾರ್' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಅಡಿಯಿಟ್ಟಿದ್ದಾರೆ.
ಇತ್ತೀಚೆಗಷ್ಟೇ 'ಜಾಗ್ವಾರ್' ಚಿತ್ರದ ಮುಹೂರ್ತ ಅದ್ದೂರಿಯಾಗಿ ನೆರವೇರಿತು. ಜನವರಿಯಿಂದ ಚಿತ್ರೀಕರಣ ಶುರುವಾಗಲಿದೆ. ಸ್ಯಾಂಡಲ್ ವುಡ್ ನಲ್ಲಿ ಬಹುನಿರೀಕ್ಷೆ ಹುಟ್ಟಿಸಿರುವ ಈ ಚಿತ್ರದ ನಾಯಕಿ ಯಾರು?

ಮೂಲಗಳ ಪ್ರಕಾರ, 'ಜಾಗ್ವಾರ್' ಚಿತ್ರದಲ್ಲಿ ಹೊಸ ಪ್ರತಿಭೆಯ ಅನಾವರಣವಾಗಲಿದೆ. ಮಾಡೆಲಿಂಗ್ ಹಿನ್ನಲೆ ಇರುವ ಮುಂಬೈ ಬೆಡಗಿ, ನಿಖಿಲ್ ಕುಮಾರ್ ಜೊತೆ ಡ್ಯುಯೆಟ್ ಹಾಡಲಿದ್ದಾರೆ. [ನಿಖಿಲ್ ಕುಮಾರ್ 'ಜಾಗ್ವಾರ್' ಸ್ಪೆಷಾಲಿಟೀಸ್ ಏನು ಗೊತ್ತಾ?]
ಈಗಾಗಲೇ ನಾಯಕಿಯ ಫೋಟೋಶೂಟ್ ನಡೆದಿದ್ದು, ಜನವರಿ ಹೊತ್ತಿಗೆ 'ಜಾಗ್ವಾರ್' ಹೀರೋಯಿನ್ ಮುಖ ಪರಿಚಯ ನಿಮಗೆ ಆಗಲಿದೆ.
ಅಂದ್ಹಾಗೆ, ಟಾಲಿವುಡ್ ನಿರ್ದೇಶಕ ರಾಜಮೌಳಿ ಶಿಷ್ಯ ಮಹದೇವ್ 'ಜಾಗ್ವಾರ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಚೆನ್ನಾಂಬಿಕ ಫಿಲ್ಮ್ಸ್ ಬ್ಯಾನರ್ ನಡಿಯಲ್ಲಿ ಅನಿತಾ ಕುಮಾರಸ್ವಾಮಿ ಈ ಚಿತ್ರ ನಿರ್ಮಾಣ ಮಾಡಲಿದ್ದಾರೆ.


Click it and Unblock the Notifications











