For Quick Alerts
  ALLOW NOTIFICATIONS  
  For Daily Alerts

  ಧ್ರುವ ಸರ್ಜಾ 'ದುಬಾರಿ' ಚಿತ್ರಕ್ಕೆ ನಾಯಕಿ ಯಾರಾಗಬಹುದು?

  |

  ಪೊಗರು ಸಿನಿಮಾದ ಬಳಿಕ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟಿಸುತ್ತಿರುವ ಚಿತ್ರ 'ದುಬಾರಿ'. ನಂದ ಕಿಶೋರ್ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದು, 'ಬಚ್ಚನ್' ಖ್ಯಾತಿಯ ಉದಯ್ ಮೆಹ್ತಾ ನಿರ್ಮಿಸುತ್ತಿದ್ದಾರೆ.

  ಅಧಿಕೃತವಾಗಿ ಸೆಟ್ಟೇರಿರುವ ದುಬಾರಿ ಚಿತ್ರದಲ್ಲಿ ನಾಯಕಿಯಾರಾಗಬಹುದು ಎಂಬ ಕುತೂಹಲ ಕಾಡುತ್ತಿದೆ. ನಾಯಕಿ ಬಗ್ಗೆ ಸ್ಪಷ್ಟನೆ ನೀಡಿರುವ ನಂದ ಕಿಶೋರ್ ಈ ಚಿತ್ರದಲ್ಲಿ ಇಬ್ಬರಿಗಿಂತ ಹೆಚ್ಚಿನ ನಟಿಯರು ಇರಲಿದ್ದಾರೆ ಎಂದು ಸುಳಿವು ನೀಡಿದ್ದಾರೆ.

  ಪೊಗರು ನಂತರ ಮತ್ತೆ ಒಂದಾದ ಧ್ರುವ ಸರ್ಜಾ ಮತ್ತು ಚಂದನ್ ಶೆಟ್ಟಿ

  ಆದ್ರೆ, ಮುಖ್ಯ ನಾಯಕಿ ಯಾರಾಗಬಹುದು ಎಂಬ ವಿಚಾರವನ್ನು ಹೇಳಿಲ್ಲ. ದುಬಾರಿ ಚಿತ್ರಕ್ಕೆ ಕನ್ನಡದವರೇ ನಾಯಕಿ ಆಗ್ತಾರಾ ಅಥವಾ ಪರಭಾಷೆಯಿಂದ ಯಾರಾದರು ಬರಬಹುದಾ ಎಂಬ ಪ್ರಶ್ನೆಯೂ ಕಾಡಿದೆ.

  ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಡೈರೆಕ್ಟರ್ ''ಕನ್ನಡದಲ್ಲಿಯೇ ನೋಡ್ತೇವೆ, ಸರಿ ಆಗ್ಲಿಲ್ಲ ಅಂದ್ರೆ ಕೆಲವೊಮ್ಮೆ ಬೇರೆ ಭಾಷೆಯಿಂದಲೂ ನೋಡಬೇಕಾಗುತ್ತದೆ'' ಎಂದು ತಿಳಿಸಿದ್ದಾರೆ.

  ಪೊಗರು ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ. ಅದಕ್ಕೂ ಮುಂಚೆ ತೆರೆಕಂಡಿದ್ದ ಭರ್ಜರಿ ಚಿತ್ರದಲ್ಲಿ ರಚಿತಾ ರಾಮ್, ಹರಿಪ್ರಿಯಾ, ವೈಶಾಲಿ ದೀಪಕ್ ಕಾಣಿಸಿಕೊಂಡಿದ್ದರು.

  ಇವನ ಬೆನ್ನು ತಟ್ಟಿ ಆಶೀರ್ವಾದ ಮಾಡಿ | NodidavaruEnantare | Umapathy Srinivas | Filmibeat Kannada

  ವಿಶೇಷ ಅಂದ್ರೆ ಚಂದನ್ ಶೆಟ್ಟಿ ಅವರೇ ಈ ಚಿತ್ರಕ್ಕೂ ಸಂಗೀತ ಒದಗಿಸಲಿದ್ದಾರೆ. ಇನ್ನುಳಿದಂತೆ ಪ್ರಮುಖ ಪಾತ್ರದಲ್ಲಿ ದೊಡ್ಡಣ್ಣ ಮತ್ತು ತಾರಾ ಕಾಣಿಸಿಕೊಳ್ಳಲಿದ್ದಾರೆ. ಡಿಸೆಂಬರ್ ನಂತರ ದುಬಾರಿ ಚಿತ್ರೀಕರಣ ಆರಂಭವಾಗಲಿದೆ.

  English summary
  Dhruva Sarja and Nanda kishore Movie: who will playing female lead role in Dhruva sarja Dobari movie?.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X