For Quick Alerts
  ALLOW NOTIFICATIONS  
  For Daily Alerts

  'ಕೆಸಿಸಿ' ಫೈನಲ್ ಪಂದ್ಯದಲ್ಲಿ ಯಾರಿಗೆ ಯಾವ ಪ್ರಶಸ್ತಿ ಸಿಕ್ತು.?

  By Bharath Kumar
  |
  KCC Cricket 2018 : ಕರ್ನಾಟಕ ಚಲನಚಿತ್ರ ಕಪ್ ( ಕೆ ಸಿ ಸಿ 2 ) ಗೆದ್ದಿದ್ದು ಯಾರು? | Filmibeat Kannada

  'ಕನ್ನಡ ಚಲನಚಿತ್ರ ಕಪ್' ಎರಡನೇ ಆವೃತ್ತಿಯನ್ನ ಗೋಲ್ಡನ್ ಸ್ಟಾರ್ ಗಣೇಶ್ ಸಾರಥ್ಯದ 'ಒಡೆಯರ್ ಜಾರ್ಜರ್ಸ್' ತಂಡ ಗೆದ್ದುಕೊಂಡಿದೆ. ಫೈನಲ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ರಾಷ್ಟ್ರಕೂಟ ಪ್ಯಾಂಥರ್ಸ್ ತಂಡವನ್ನ ಮಣಿಸಿದ ಗಣಿ ಬಾಯ್ಸ್ ಚೊಚ್ಚಲ ಬಾರಿಗೆ ಕೆಸಿಸಿ ಟ್ರೋಫಿಯನ್ನ ಎತ್ತಿ ಹಿಡಿದಿದ್ದಾರೆ.

  ಬಹಳ ರೋಚಕವಿದ್ದ ಪಂದ್ಯದಲ್ಲಿ ಶ್ರೀಲಂಕಾ ಆಟಗಾರ ತಿಲಕರತ್ನೆ ದಿಲ್ಶಾನ್ ಆಲ್ ರೌಂಡರ್ ಆಟ ಪ್ರದರ್ಶನ ನೀಡಿ ಗೋಲ್ಡನ್ ಸ್ಟಾರ್ ತಂಡವನ್ನ ಗೆಲುವಿನ ದಡ ಸೇರಿಸಿದರು.

  ಕೊನೆಯ ಬಾಲ್ ನಲ್ಲಿ ಫೈನಲ್ ಗೆದ್ದ ಗಣೇಶ್: 6 ಎಸೆತದ ರೋಚಕ ಕಥೆಕೊನೆಯ ಬಾಲ್ ನಲ್ಲಿ ಫೈನಲ್ ಗೆದ್ದ ಗಣೇಶ್: 6 ಎಸೆತದ ರೋಚಕ ಕಥೆ

  ಎರಡು ದಿನಗಳ ಟೂರ್ನಿಯಲ್ಲಿ ಅತ್ಯುತ್ತಮವಾಗಿ ಆಟವಾಡಿದ ಆಟಗಾರರಿಗೆ, ಹಾಗೂ ಮನರಂಜನೆ ನೀಡಿದ ಸ್ಟಾರ್ ನಟರಿಗೆ ವಿಶೇಷವಾದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಟ ಶಿವರಾಜ್ ಕುಮಾರ್, ಗಣೇಶ್ ಅವರಿಗೂ ಅವಾರ್ಡ್ ಸಿಕ್ತು. ಹಾಗಿದ್ರೆ, ಯಾರಿಗೆ ಯಾವ ಪ್ರಶಸ್ತಿ ಲಭಿಸಿತು.? ಮ್ಯಾನ್ ಆಫ್ ದಿ ಮ್ಯಾಚ್ ಮತ್ತು ಸರಣಿ ಪುರುಷೋತ್ತಮ ಯಾರು ಎಂದು ತಿಳಿಯಲು ಮುಂದೆ ಓದಿ....

  ಮ್ಯಾನ್ ಆಫ್ ದಿ ಮ್ಯಾಚ್ ಮತ್ತು ಸೀರಿಸ್

  ಮ್ಯಾನ್ ಆಫ್ ದಿ ಮ್ಯಾಚ್ ಮತ್ತು ಸೀರಿಸ್

  ಫೈನಲ್ ಪಂದ್ಯದಲ್ಲಿ ಅಮೋಘ ಆಟ ಪ್ರದರ್ಶನ ನೀಡಿದ ತಿಲಕರತ್ನೆ ದಿಲ್ಶಾನ್ ಅವರಿಗೆ ಪಂದ್ಯ ಪುರುಷೋತ್ತಮ ಪ್ರಶಸ್ತಿ ಮತ್ತು ಸರಣಿಯಲ್ಲಿ ಅತ್ಯುತ್ತಮ ಆಟ ನೀಡಿದ್ದಕ್ಕಾಗಿ ಸರಣಿ ಪುರುಷೋತ್ತಮ ಪ್ರಶಸ್ತಿ ನೀಡಲಾಯಿತು. ಫೈನಲ್ ಪಂದ್ಯದಲ್ಲಿ 3 ವಿಕೆಟ್ ಪಡೆದು 68 ರನ್ ಬಾರಿಸಿದರು. ಸರಣಿಯಲ್ಲಿ ಮೂರು ಪಂದ್ಯಗಳಿಂದ 129 ರನ್ ಬಾರಿಸಿದರು.

  ಕೆಸಿಸಿ 2018 ಟ್ರೋಫಿಗೆ ಮುತ್ತಿಟ್ಟ ಗೋಲ್ಡನ್ ಸ್ಟಾರ್ ಗಣೇಶ್ ಹುಡುಗ್ರುಕೆಸಿಸಿ 2018 ಟ್ರೋಫಿಗೆ ಮುತ್ತಿಟ್ಟ ಗೋಲ್ಡನ್ ಸ್ಟಾರ್ ಗಣೇಶ್ ಹುಡುಗ್ರು

  ಬೆಸ್ಟ್ ಬ್ಯಾಟ್ಸಮನ್

  ಬೆಸ್ಟ್ ಬ್ಯಾಟ್ಸಮನ್

  ರಾಕಿಂಗ್ ಸ್ಟಾರ್ ಯಶ್ ಅವರ ರಾಷ್ಟ್ರಕೂಟ ಪ್ಯಾಂಥರ್ಸ್ ತಂಡದ ಸ್ಟಾರ್ ಬ್ಯಾಟ್ಸಮನ್ ಸ್ಟಾಲೀನ್ ಹೂವರ್ ಅವರು ಕೆಸಿಸಿ ಟೂರ್ನಿಯ ಅತ್ಯುತ್ತ ಬ್ಯಾಟ್ಸಮನ್ ಆಗಿ ಹೊರಹೊಮ್ಮಿದ್ದಾರೆ. ಜೊತೆಗೆ ಮ್ಯಾಕ್ಸಿಮಮ್ ಸಿಕ್ಸ್ ಅವಾರ್ಡ್ ಕೂಡ ಅವರೇ ಪಡೆದುಕೊಂಡಿದ್ದಾರೆ. ಇವರ ಖಾತೆಯಲ್ಲಿ ಭರ್ಜರಿ 8 ಸಿಕ್ಸ್ ಸೇರಿದೆ.

  'ಅಪ್ಪು' ಬಳಗವನ್ನ ಸೋಲಿಸಿ ಫೈನಲ್ ಗೆ ಲಗ್ಗೆಯಿಟ್ಟ ಯಶ್ 'ವಾರಿಯರ್ಸ್''ಅಪ್ಪು' ಬಳಗವನ್ನ ಸೋಲಿಸಿ ಫೈನಲ್ ಗೆ ಲಗ್ಗೆಯಿಟ್ಟ ಯಶ್ 'ವಾರಿಯರ್ಸ್'

  ಬೆಸ್ಟ್ ಬೌಲರ್

  ಬೆಸ್ಟ್ ಬೌಲರ್

  ಶಿವರಾಜ್ ಕುಮಾರ್ ಅವರ ವಿಜಯನಗರ ಪೆಟ್ರಿಯೋಟ್ಸ್ ತಂಡದ ಸ್ಟಾರ್ ಬೌಲರ್ ಅಭಿಷೇಕ್ ಬಿ ಅವರು ಈ ಟೂರ್ನಿಯ ಬೆಸ್ಟ್ ಬೌಲರ್ ಆಗಿ ಹೊರಹೊಮ್ಮಿದ್ದಾರೆ.

  ಕೆಸಿಸಿ 2018: ಶಿವಣ್ಣ ಬಳಗ 'ಪ್ಯಾಟ್ರಿಯೋಟ್ಸ್'ಗೆ 7 ವಿಕೆಟ್ ಭರ್ಜರಿ ಜಯ

  ಕ್ಯಾಪ್ಟನ್ ಆಫ್ ದಿ ಸೀಸನ್

  ಕ್ಯಾಪ್ಟನ್ ಆಫ್ ದಿ ಸೀಸನ್

  ಒಟ್ಟು ಆರು ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸಿದ್ದವು. ಶಿವರಾಜ್ ಕುಮಾರ್, ಸುದೀಪ್, ಯಶ್, ಗಣೇಶ್, ಪುನೀತ್ ರಾಜ್ ಕುಮಾರ್, ಉಪೇಂದ್ರ ತಂಡದ ಸ್ಟಾರ್ ನಾಯಕರಾಗಿದ್ದರು. 'ಕ್ಯಾಪ್ಟನ್ ಆಫ್ ದಿ ಸೀಸನ್' ಪ್ರಶಸ್ತಿಯನ್ನ ನಟ ಶಿವರಾಜ್ ಕುಮಾರ್ ಗೆ ನೀಡಲಾಗಿದೆ.

  ಗೆಲುವಿನೊಂದಿಗೆ ಟೂರ್ನಿಗೆ ವಿದಾಯ ಹೇಳಿದ ಸುದೀಪ್ ಬಾಯ್ಸ್ಗೆಲುವಿನೊಂದಿಗೆ ಟೂರ್ನಿಗೆ ವಿದಾಯ ಹೇಳಿದ ಸುದೀಪ್ ಬಾಯ್ಸ್

  ಮ್ಯಾಕ್ಸಿಮಮ್ ವಿಕೆಟ್

  ಮ್ಯಾಕ್ಸಿಮಮ್ ವಿಕೆಟ್

  ಕನ್ನಡದ ಸ್ಟಾರ್ ನಿರ್ದೇಶಕ ಪ್ರೀತಂ ಗುಬ್ಬಿ ಕೆಸಿಸಿ ಎರಡನೇ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸಿದ್ದಾರೆ. ಆಡಿದ ಮೂರು ಮ್ಯಾಚ್ ಗಳಿಂದ ಪ್ರೀತಂ ಗುಬ್ಬಿ 5 ವಿಕೆಟ್ ಪಡೆದುಕೊಂಡಿದ್ದಾರೆ. ಹೀಗಾಗಿ, ಇವರಿಗೆ ಮ್ಯಾಕ್ಸಿಮಮ್ ವಿಕೆಟ್ ಪ್ರಶಸ್ತಿ ನೀಡಲಾಯಿತು.

  ಜಗತ್ ಕಿಲಾಡಿ ಆಫ್ ದಿ ಡೇ

  ಜಗತ್ ಕಿಲಾಡಿ ಆಫ್ ದಿ ಡೇ

  ಮೊದಲ ದಿನ 'ಜಗತ್ ಕಿಲಾಡಿ ಆಫ್ ದಿ ಡೇ' ಪ್ರಶಸ್ತಿ ಪಡೆದುಕೊಂಡಿದ್ದ ಗಣೇಶ್ ಎರಡನೆ ದಿನವೂ 'ಜಗತ್ ಕಿಲಾಡಿ ಆಫ್ ದಿ ಡೇ' ಎನಿಸಿಕೊಂಡರು. ನಂತರ ಈ ಪ್ರಶಸ್ತಿಯನ್ನ 'ಸಿಎಂ ಗೌತಮ್' ಅವರಿಗೆ ಕೊಟ್ಟರು.

  English summary
  Golden Star Ganesh's Wodeyar Chargers has beaten Yash's Rashtrakuta Panthers in the final of Kannada Chalanachitra Cup (KCC 2).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X