»   » ದೂರ ಸರಿಯಲು ಚಂದ್ರಚೂಡ್ ಕೊಟ್ಟ ಕಾರಣಗಳು

ದೂರ ಸರಿಯಲು ಚಂದ್ರಚೂಡ್ ಕೊಟ್ಟ ಕಾರಣಗಳು

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಖ್ಯಾತ ಅಭಿನೇತ್ರಿ ಶ್ರುತಿ ಅವರ ಎರಡನೇ ಮದುವೆಗೆ ಭಾರಿ ಅಪಶ್ರುತಿಗಳು ಎದುರಾಗಿವೆ. ಶ್ರುತಿ ಮತ್ತು ಚಂದ್ರಚೂಡ್ ಅವರ ಎರಡನೇ ಮದುವೆಯನ್ನು ಅಸಿಂಧುಗೊಳಿಸುವಂತೆ ಚಂದ್ರಚೂಡ್ ಅವರ ಮೊದಲ ಪತ್ನಿ ಮಂಜುಳಾ ಅವರು ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಶ್ರುತಿ ಜೊತೆಗಿನ ಮದುವೆ ಅಸಿಂಧುತ್ವವನ್ನು ತಾನು ಒಪ್ಪುತ್ತೇನೆ ಎಂದು ಚಂದ್ರಚೂಡ್ ಅವರು ತಮ್ಮ ವಕೀಲರ ಮೂಲಕ ಲಿಖಿತ ಹೇಳಿಕೆ ನೀಡಿದ್ದಾರೆ. ಈ ಮೂಲಕ ಶ್ರುತಿ ಅವರ ಎರಡನೇ ಮದುವೆ ರದ್ದಾಗುವ ಸಾಧ್ಯತೆಗಳಿವೆ. ಈ ಬಗ್ಗೆ ಚಂದ್ರಚೂಡ್ ಅವರು ಮಾಧ್ಯಮಗಳ ಜೊತೆ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.

ನನಗೆ ತುಂಬಾ ತೊಂದರೆ ಆಗಿದೆ ಮುಂದಕ್ಕೂ ತೊಂದರೆ ಆಗದಿರಲಿ ಎಂದುಕೊಂಡಿದ್ದೇನೆ. ಶ್ರುತಿ ಅವರು ತಮ್ಮ ಮುಂದಿನ ಜೀವನವನ್ನು ನಿಭಾಯಿಸಿಕೊಳ್ಳುವಷ್ಟು ಗಟ್ಟಿಯಾಗಿದ್ದಾರೆ. ಈ ಮದುವೆಯಿಂದಾಗಿ ಶ್ರುತಿ ಅವರ ಜೀವನದಲ್ಲಿ ಅಲ್ಲೋಲಕಲ್ಲೋಲವೇ ಆಗಿದೆ. ಬಹಳಷ್ಟು ತೊಂದರೆಗಳಾಗಿವೆ. [ಶ್ರುತಿ ಎರಡನೆ ಮದುವೆಗೆ ಭಾರಿ ಅಪಶ್ರುತಿ]

ಶ್ರುತಿ ಅವರ ಮನಸ್ಸಿಗೆ ತುಂಬಾ ನೋವಾಗಿದೆ. ಇನ್ನು ಮುಂದೆ ನನ್ನಿಂದ ತೊಂದರೆ ಆಗದಿರಲಿ ಎಂಬ ಕಾರಣಕ್ಕೆ ಅವರಿಂದ ದೂರವಾಗುತ್ತಿದ್ದೇನೆ. ಇಬ್ಬರೂ ಚರ್ಚೆ ಮಾಡಿ ಈ ತೀರ್ಮಾನಕ್ಕೆ ಬಂದಿದ್ದೇವೆ. ಮುಂದಿನ ಅವರ ಮಾತುಗಳನ್ನು ಸ್ಲೈಡ್ ಗಳಲ್ಲಿ ಓದಿ.

ಮಂಜುಳಾ ಜೊತೆ ಬಾಳ್ವೆ ನಡೆಸುವ ಪ್ರಶ್ನೆಯೇ ಇಲ್ಲ

ಮಂಜುಳಾ ಜೊತೆಗೆ ಮತ್ತೆ ಬಾಳ್ವೆ ನಡೆಸುವ ಪ್ರಶ್ನೆಯೇ ಇಲ್ಲ. ಮುಂದಿನ ದಿನಗಳಲ್ಲಿ ಅದನ್ನು ಕಾನೂನಿನ ಚೌಕಟ್ಟಿನಲ್ಲಿ ಏನು ಮಾಡಬೇಕು ಎಂಬ ಬಗ್ಗೆ ಚರ್ಚೆ ಮಾಡುತ್ತಿದ್ದೇನೆ. ಸದ್ಯಕ್ಕೆ ಆ ವಿಚಾರವನ್ನು ಪಕ್ಕಕ್ಕೆ ಇಟ್ಟಿದ್ದೇನೆ. ಇನ್ನು ನನ್ನ ಮಕ್ಕಳ ವಿಚಾರದಲ್ಲಿ ಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದೇನೆ. ಮುಂದೆಯೂ ನಡೆದುಕೊಳ್ಳುತ್ತೇನೆ.

ತಮ್ಮ ನಿರ್ಧಾರದ ಹಿಂದೆ ಯಾವುದೇ ದುರದ್ದೇಶವಿಲ್ಲ

ತಮ್ಮ ಈ ನಿರ್ಧಾರಗಳ ಹಿಂದೆ ಯಾವುದೇ ದುರುದ್ದೇಶವಾಗಲಿ ಅಜೆಂಡಾವಾಗಲಿ ಇಲ್ಲ. ಇದುವರೆಗೂ ಶ್ರುತಿ ಹಾಗೂ ನನ್ನ ಮದುವೆ ವಿಚಾರವಾಗಿ ಒಂದೇ ಒಂದು ಸುಳ್ಳನ್ನು ಮಾಧ್ಯಮಗಳಿಗೆ ಹೇಳಿಲ್ಲ. ಪ್ರತಿಯೊಂದು ಸಂದರ್ಭಗಳಲ್ಲೂ ಇಬ್ಬರೂ ಸ್ಪಷ್ಟೀಕರಣ ಕೊಡುತ್ತಲೇ ಬಂದಿದ್ದೇವೆ.

ಸತ್ಯಕ್ಕೆ ಹೆದರುತ್ತೇನೆಯೇ ವಿನಃ ಇನ್ಯಾವುದಕ್ಕೂ ಅಲ್ಲ

ಕೆಲವೊಂದು ಸಂದರ್ಭಗಳಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುವಂತಿರಲಿಲ್ಲ. ಅಂತಹ ಸಂದರ್ಭಗಳಲ್ಲೂ ಮನಬಿಚ್ಚಿ ಎಲ್ಲವನ್ನೂ ಹೇಳಿಕೊಂಡಿದ್ದೇವೆ. ನಾನು ಸತ್ಯಕ್ಕೆ ಹೆದರುತ್ತೇನೆಯೇ ವಿನಃ ಬೇರೆ ಯಾವುದೇ ವಿಚಾರಕ್ಕೂ ಹೆದರುವುದಿಲ್ಲ. ಆದರೆ ವಿಚ್ಛೇದನ ನೀಡದೆ ಎರಡನೆ ಮದುವೆಯಾಗಿರುವುದು ತಪ್ಪು ಎಂಬುದನ್ನು ಈ ಹಿಂದೆಯೇ ನಾನು ಒಪ್ಪಿಕೊಂಡಿದ್ದೇನೆ.

ನ್ಯಾಯಾಲಯ ಶಿಕ್ಷೆ ವಿಧಿಸಿದರೆ ತಲೆ ಬಾಗುತ್ತೇನೆ

ಈ ವಿಚಾರವಾಗಿ ಒಂದು ವೇಳೆ ನ್ಯಾಯಾಲಯ ನನಗೆ ಶಿಕ್ಷೆ ವಿಧಿಸಿದರೆ ಅದಕ್ಕೆ ಗೌರವಿಸುತ್ತೇನೆ, ತಲೆ ಬಾಗುತ್ತೇನೆ. ತಮ್ಮ ಮದುವೆಯ ಅಸಿಂಧುತ್ವವನ್ನು ಇಬ್ಬರೂ ಕುಳಿತು ಚರ್ಚಿಸಿ ಈ ತೀರ್ಮಾನಕ್ಕೆ ಬಂದಿದ್ದೇವೆ.

ಶ್ರುತಿ ಅವರನ್ನು ಮಾನಸಿಕವಾಗಿ ಗೌರವಿಸುತ್ತೇನೆ

ಶ್ರುತಿ ಅವರು ನನಗೆ ಒಬ್ಬ ಗೆಳತಿಯಾಗಿ, ಸಹವರ್ತಿಯಾಗಿ ನನ್ನನ್ನು ಸಲುಹಿಸಿದ್ದಾರೆ. ಅವರು ಕೊಟ್ಟಂತಹ ಪ್ರೀತಿಗೆ ನಾನು ಯಾ ಹೊತ್ತಿಗೂ ಋಣಿಯಾಗಿರುತ್ತೇನೆ. ಮಾನಸಿಕವಾಗಿ ಅವರನ್ನು ಗೌರವಿಸುತ್ತೇನೆ. ಇದಿಷ್ಟು ಚಂದ್ರಚೂಡ್ ಅವರು ಮಾಧ್ಯಮಗಳಿಗೆ ಹೇಳಿದ್ದು.

English summary
Why actress Shruti's second hubby Chandrachud decides to stay away from the actress? He has given many reasons for break up with the actress. Shruthi's marriage life has been hit by a storm again as her second wedding, which happened on June 6, is in deep trouble now.
Please Wait while comments are loading...