»   » ಮನೆಯವರ ಮೇಲೆ ಹುಚ್ಚ ವೆಂಕಟ್ ಗೆ ಕೋಪ ಯಾಕೆ?

ಮನೆಯವರ ಮೇಲೆ ಹುಚ್ಚ ವೆಂಕಟ್ ಗೆ ಕೋಪ ಯಾಕೆ?

Posted By:
Subscribe to Filmibeat Kannada

ಬಿಗ್ ಬಾಸ್ ಖ್ಯಾತಿಯ ವಿವಾದಾತ್ಮಕ ನಟ-ನಿರ್ದೇಶಕ ಹುಚ್ಚ ವೆಂಕಟ್ ಅವರು ಜೈಲಿನಿಂದ ಕೊನೆಗೂ ಬಿಡುಗಡೆಯಾಗಿದ್ದಾರೆ. ಮೈಲಹಳ್ಳಿ ಮಂಜೇಗೌಡ ಎನ್ನುವರು ವೆಂಕಟ್ ಅವರ ನೆರವಿಗೆ ಬಂದು ಶ್ಯೂರಿಟಿ ನೀಡಿದ್ದರಿಂದ ವೆಂಕಟ್ ಅವರಿಗೆ ಬಿಡುಗಡೆ ಭಾಗ್ಯ ದೊರೆತಿದೆ.

ಅಂದಹಾಗೆ ವೆಂಕಟ್ ಅವರಿಗೆ ಜಾಮೀನು ಸಿಕ್ಕಿದ್ರು, ಶ್ಯೂರಿಟಿ ನೀಡಲು ಯಾರೂ ಮುಂದೆ ಬರದೇ ಇದ್ದದ್ದರಿಂದ ವೆಂಕಟ್ ಅವರ ಬಿಡುಗಡೆ ಆಗೋದು ತಡ ಆಯಿತು.

Why Controversial actor-director Huccha Venkat angry on their family

ಯಾವಾಗಲೂ ವೆಂಕಟ್ ಅವರ ಕುಟುಂಬಸ್ಥರು ಅವರಿಗೆ ಸಾಥ್ ಕೊಡುತ್ತಿದ್ದರು. ಜೊತೆಗೆ ವೆಂಕಟ್ ಅವರಿಗೆ ಕುಟುಂಬದವರ ಜೊತೆ ಹಾಗೂ ಅವರ ತಂದೆಯವರ ಜೊತೆ ಎಷ್ಟರಮಟ್ಟಿಗೆ ಬಾಂಧವ್ಯ ಇತ್ತು ಎಂಬುದನ್ನು ಖುದ್ದು ವೆಂಕಟ್ ಅವರೇ ಎಲ್ಲಾ ಕಡೆ ತುಂಬಾ ಸಲ ಹೇಳಿಕೊಂಡಿದ್ದರು.[ಜೈಲಿನಿಂದ ಹೊರಬಂದು ಕಣ್ಣೀರು ಹಾಕಿದ ವೆಂಕಟ್]

ಆದರೆ ವಿಶೇಷ ಏನಪ್ಪಾ ಅಂದ್ರೆ, ವೆಂಕಟ್ ಅವರು ಜೈಲಲ್ಲಿ ಇದ್ದರೂ ಕೂಡ ಅವರ ಮನೆಯವರು ಯಾಕೆ ಸಹಾಯಕ್ಕೆ ಬರಲಿಲ್ಲ ಎಂಬುದು ಎಲ್ಲರಿಗೂ ಕಾಡುವ ಯಕ್ಷಪ್ರಶ್ನೆ.

ಜೈಲಿನಿಂದ ಬಿಡುಗಡೆಯಾಗಿ ಹೊರಬಂದ ತಕ್ಷಣ ಶ್ಯೂರಿಟಿ ನೀಡಿದ ಮೈಲಹಳ್ಳಿ ಮಂಜೇಗೌಡ ಅವರನ್ನು ತಬ್ಬಿಕೊಂಡು ಗಳಗಳನೇ ಅತ್ತ ವೆಂಕಟ್ ಅವರು 'ನಾನಿವತ್ತು ಹೊರಬರೋಕೆ ಇವರೇ ಕಾರಣ. ನನ್ನ ಮನೆಯವರು ನನ್ನ ನೋಡೋಕು ಬರ್ಲಿಲ್ಲಾ. ಇವತ್ತು ಇವರು ಬರ್ತಾ ಇರ್ಲಿಲ್ಲಾ ಅಂದ್ರೆ ನಾನು ಅಲ್ಲೇ ಸಾಯಬೇಕಿತ್ತು' ಎಂದು ನುಡಿದಿದ್ದಾರೆ.

Why Controversial actor-director Huccha Venkat angry on their family

ಇನ್ನು ವೆಂಕಟ್ ಅವರು ಬಿಡುಗಡೆಯಾಗಿ ಹೊರಬಂದ ಮೇಲೆ ತಮ್ಮ ಸ್ವಂತ ಅಣ್ಣನ ಮೇಲೆಯೇ ಕೇಸ್ ಹಾಕುತ್ತೀನಿ ಎಂದು ಗುಡುಗುತ್ತಿದ್ದಾರೆ. 'ಕರ್ನಾಟಕದ ಜನತೆ ತನ್ನನ್ನು ಹುಚ್ಚ ಎನ್ನಲಿಲ್ಲ. ಬದಲಾಗಿ ತನ್ನ ಮನೆಯವರೇ ನನಗೆ ಹುಚ್ಚನ ಪಟ್ಟ ಕಟ್ಟಿದರು. ಅಣ್ಣನೇ ನನ್ನನ್ನು ಹೊಡೆಯಲು ಯತ್ನಿಸುತ್ತಿದ್ದು, ಆಸ್ತಿ ಕಬಳಿಸಲು ಇಷ್ಟೆಲ್ಲಾ ಮಾಡುತ್ತಿದ್ದಾರೆ ಎಂದು ವೆಂಕಟ್ ಅವರು ತಮ್ಮ ಮನೆಯವರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.[ಜೈಲಿನ ಗೋಡೆಗೆ ತಲೆ ಚಚ್ಚಿಕೊಂಡು ಹುಚ್ಚಾಟ ನಡೆಸಿದ ವೆಂಕಟ್.!]

ಆದರೆ ಇದರ ಕುರಿತಾಗಿ ವೆಂಕಟ್ ಅವರ ಕುಟುಂಬಸ್ಥರ ನಿಲುವೇ ಬೇರೆ ಆಗಿದೆ.ಇನ್ನು ಮುಂದಕ್ಕೆ ವೆಂಕಟ್ ಅವರು ಎಲ್ಲಾದರೂ ಯಾವುದಾದರೂ ರಂಪಾಟ ಮಾಡಿ ಮತ್ತೆ ಅದರಿಂದ ಸಾಲು ಸಾಲು ಸಮಸ್ಯೆಗಳನ್ನು ಇಡೀ ಕುಟುಂಬಕ್ಕೆ ತರೋದನ್ನು ತಪ್ಪಿಸುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದು, ಒಟ್ನಲ್ಲಿ ವೆಂಕಟ್ ಅವರನ್ನು ಜೋಪಾನ ಮಾಡುವ ಯೋಜನೆಯನ್ನು ವೆಂಕಟ್ ಅವರ ಕುಟುಂಬಸ್ಥರು ಹಾಕಿಕೊಂಡಿದ್ದಾರೆ.

ಆದರೆ ಹುಚ್ಚ ವೆಂಕಟ್ ಅವರು ಮಾತ್ರ ಕೆಂಡಾಮಂಡಲವಾಗಿ ಸಹೋದರನ ಮೇಲೆ ಕೂಗಾಡುತ್ತಿರುವುದು ನೋಡಿದ್ರೆ, ಅವರು ಮತ್ತೆ ತಮ್ಮ ಫ್ಯಾಮಿಲಿ ಜೊತೆ ಇರೋದು ಅನುಮಾನ ಅನ್ಸುತ್ತೆ. ಒಟ್ನಲ್ಲಿ ಇನ್ನುಮುಂದೆ ಏನಾಗುತ್ತದೆ ಎಂದು ಕಾದು ನೋಡಬೇಕಿದೆ.

English summary
Controversial actor-director Huccha Venkat are angry on their family. Kannada actor Huccha Venkat was released from jail on Wednesday (December 2) evning after the president ot the Rajya Vokkaligara Hitharakshana Sena paid the surety amount and comleted the bail formalities.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada