twitter
    For Quick Alerts
    ALLOW NOTIFICATIONS  
    For Daily Alerts

    ಕ್ರೆಜಿಸ್ಟಾರ್ ಚಿತ್ರಗಳ ಸತತ ಸೋಲಿಗೆ ಕಾರಣ ಏನು?

    By Rajendra
    |

    ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಚಿತ್ರಗಳನ್ನು ಮುಗಿಬಿದ್ದು ನೋಡುವ ಕಾಲವೊಂದಿತ್ತು. ಆದರೆ ಈಗ ಕಾಲವೂ ಬದಲಾಗಿದೆ ಪ್ರೇಕ್ಷಕರ ನಿಲುವು ಬದಲಾಗಿದೆ. ರವಿಚಂದ್ರನ್ ಅವರ ಚಿತ್ರಗಳನ್ನು ಯಾಕೋ ಏನೋ ಪ್ರೇಕ್ಷಕ ಪ್ರಭುಗಳು ಇಷ್ಟಪಡುತ್ತಿಲ್ಲ. ಕಾರಣ ಏನಿರಬಹುದು?

    ಕನ್ನಡ ಚಿತ್ರರಂಗದ ರಾಜ್ ಕಪೂರ್ ಎಂದೇ ಖ್ಯಾತರಾಗಿರುವ ಕನಸುಗಾರ ರವಿಚಂದ್ರನ್ ಚಿತ್ರಗಳು ಈ ರೀತಿ ಸೋಲಲು ಕಾರಣ ಏನಿರಬಹುದು? ಹೂವು, ಹಣ್ಣು, ದ್ರಾಕ್ಷಿ, ದಾಳಿಂಬೆ ಬಳಕೆ ಕಡಿಮೆಯಾಗಿದ್ದಾ? ರವಿಚಂದ್ರನ್‌ ಚಿತ್ರಗಳಲ್ಲಿ ವೈವಿಧ್ಯತೆ ಇಲ್ಲದಿರುವುದೇ? ಅಥವಾ ಹೊಟ್ಟೆ ಬೆಳೆಸಿಕೊಂಡಿದ್ದೇ? ಏನು ಎಂಬುದು ಗಾಂಧಿನಗರಕ್ಕೂ ಗೊತ್ತಾಗುತ್ತಿಲ್ಲ.

    'ಏಕಾಂಗಿ' ಚಿತ್ರದಿಂದ ಈ ಸೋಲಿನ ಸರಮಾಲೆ ರವಿ ಅವರನ್ನು ಕಾಡುತ್ತಿದೆ. ರವಿ ತಮ್ಮ ಹಳೆಯ ಶೈಲಿಯನ್ನು ಬಿಟ್ಟಿದ್ದೇ ಇದಕ್ಕೆ ಕಾರಣವೇ? ಅಥವಾ ರವಿಗೆ ವಯಸ್ಸಾಯಿತೆ? ಹಾಗಿದ್ದರೆ ಹಿಂದಿ, ತೆಲುಗು, ತಮಿಳಿನಲ್ಲಿ ಅಮಿತಾಬ್, ಚಿರಂಜೀವಿ,ರಜನಿಕಾಂತ್ ಅವರಿಗೂ ವಯಸ್ಸಾಗಿಲ್ಲವೆ? ಅವರ ಚಿತ್ರಗಳೇಕೆ ಗಲ್ಲಾಪೆಟ್ಟಿಗೆಯಲ್ಲಿ ಇನ್ನೂ ಗುಲ್ಲೆಬ್ಬಿಸುತ್ತಿವೆ?

    ಕ್ರೇಜಿಲೋಕ, ನರಸಿಂಹ ಚಿತ್ರಗಳ ಆಡಿಯೋ ರಿಲೀಸ್ ಆಗಿದೆ. ಪರಮಶಿವ ಇನ್ನೂ ಚಿತ್ರೀಕರಣ ಹಂತದಲ್ಲಿದೆ. ಇತ್ತೀಚೆಗೆ ತೆರೆಕಂಡಿದ್ದ ದಶಮುಖ ಚಿತ್ರ ಬಾಕ್ಸಾಫೀಸಲ್ಲಿ ಮಕಾಡೆ ಮಲಗಿದೆ. ರವಿ ಅವರ ಮುಂಬರುವ ಚಿತ್ರಗಳ ಬಗ್ಗೆಯೂ ಕುತೂಹಲ ಉಳಿದಿಲ್ಲ. ಏನಿದಕ್ಕೆಲ್ಲಾ ಕಾರಣ? ರವಿ ಚಿತ್ರಗಳು ಬಾಕ್ಸಾಫೀಸಲ್ಲಿ ಗೆಲ್ಲಬೇಕಾದರೆ ಏನು ಮಾಡಬೇಕು? ನಿಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ಕಾಮೆಂಟ್ ಬಾಕ್ಸಲ್ಲಿ ಹಾಕಿ. ರವಿಚಂದ್ರನ್‌ಗೆ ಸಹಾಯ ಮಾಡಿ. (ಒನ್‌ಇಂಡಿಯಾ ಕನ್ನಡ)

    English summary
    Why Crazy Star Ravichandran movies continuously flop at box office? What is the reason? What is your suggestion, advice to Ravichandran? comment please.
    Wednesday, May 16, 2012, 13:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X