For Quick Alerts
  ALLOW NOTIFICATIONS  
  For Daily Alerts

  ಜೋಡೆತ್ತುಗಳು ಕಾಣೆಯಾಗಿದೆ ಎಂದು ಕೂಗುತ್ತಿರುವವರಿಗೆ ಸುಮಲತಾ ಸ್ಪಷ್ಟನೆ

  |
  Lok Sabha Elections 2019 : ಜೋಡೆತ್ತುಗಳು ಕಾಣೆಯಾಗಿದೆ ಎಂದು ಕೂಗುತ್ತಿರುವವರಿಗೆ ಸುಮಲತಾ ಸ್ಪಷ್ಟನೆ

  ರಾಜ್ಯ ರಾಜಕಾರಣದಲ್ಲಿ ಈಗ ಜೋಡೆತ್ತುಗಳದ್ದೇ ಸದ್ದು ಸುದ್ದಿ. ಒಂದು ಕಡೆ ದರ್ಶನ್ ಮತ್ತು ಯಶ್ ಅವರನ್ನ ಜೋಡೆತ್ತುಗಳು ಎನ್ನುತ್ತಿದ್ದರೇ, ಮತ್ತೊಂದೆಡೆ ಎಚ್ ಡಿ ಕುಮಾರಸ್ವಾಮಿ ಮತ್ತು ಡಿ ಕೆ ಶಿವಕುಮಾರ್ 'ನಾವು ನಿಜವಾದ ಜೋಡೆತ್ತು' ಎನ್ನುತ್ತಿದ್ದಾರೆ.

  ಮಂಡ್ಯ ಅಖಾಡದಲ್ಲಿ ಈ ಸಲ ಟ್ರೈಲರ್ ತೋರಿಸಲ್ಲ, ಪೂರ್ತಿ ಸಿನಿಮಾ ಮಾಡ್ತೀವಿ ಎಂದು ಹೇಳಿಕೆ ನೀಡಿದ ನಟ ದರ್ಶನ್, ಸುಮಲತಾ ಅವರು ನಾಮಪತ್ರ ಸಲ್ಲಿಸಿದ ನಂತರ ಕಾಣೆಯಾಗಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗ್ತಿದೆ.

  ಜೋಡೆತ್ತುಗಳ ವಿರುದ್ಧ ಸಿಎಂ ಕುಮಾರಸ್ವಾಮಿ ಗರಂ: ಯಾರದು ಡಿ ಬಾಸ್?

  ದರ್ಶನ್ ಮತ್ತು ಯಶ್ ಸಂಪೂರ್ಣವಾಗಿ ಮಂಡ್ಯ ಪ್ರಚಾರದಲ್ಲಿ ಇರ್ತೀವಿ ಎಂದಿದ್ದರು. ಆದ್ರೆ, ಒಂದು ದಿನ ಕಾಣಿಸಿಕೊಂಡು ಜೋಡೆತ್ತುಗಳು ಮತ್ತೆ ಕಾಣಿಸಿಲ್ಲ. ಮತ್ತೆ ಯಾವಾಗ ಬರ್ತಾರೆ ಎಂಬ ಪ್ರಶ್ನೆಯನ್ನ ಕೇಳಲಾಗುತ್ತಿತ್ತು. ಅದಕ್ಕೆ ಸುಮಲತಾ ಅಂಬರೀಶ್ ಸ್ಪಷ್ಟನೆ ನೀಡಿದ್ದಾರೆ. ಜೋಡೆತ್ತುಗಳ ಬಗ್ಗೆ ಸುಮಲತಾ ಏನಂದ್ರು? ಮುಂದೆ ಓದಿ....

  ವೇಳಾಪಟ್ಟಿ ಸಿದ್ಧವಾಗಿಲ್ಲ

  ವೇಳಾಪಟ್ಟಿ ಸಿದ್ಧವಾಗಿಲ್ಲ

  ದರ್ಶನ್ ಮತ್ತು ಯಶ್ ಪ್ರಚಾರ ಮಾಡ್ತಾರೆ. ಯಾವುದೇ ಕಾರಣಕ್ಕೆ ಹಿಂದೆ ಸರಿಯಿಲ್ಲ ಎಂದು ಸುಮಲತಾ ಈಗಾಗಲೇ ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ. ಹೀಗಿದ್ದರೂ ಮಂಡ್ಯದಲ್ಲಿ ಸುಮಲತಾ ಮತ್ತು ಅಭಿಷೇಕ್ ಇಬ್ಬರೇ ಪ್ರಚಾರ ನಡೆಸುತ್ತಿದ್ದಾರೆ, ಜೋಡೆತ್ತುಗಳು ಕಾಣಿಸುತ್ತಿಲ್ಲ ಎಂಬ ಮಾತು ಕೇಳಿ ಬಂದಿದೆ. ಅದಕ್ಕೆ ಕಾರಣ 'ಇನ್ನು ವೇಳಾಪಟ್ಟಿ ಸಿದ್ಧವಾಗದೇ ಇರೋದು' ಎನ್ನುತ್ತಾರೆ ಸುಮಲತಾ.

  ನಾವಿಬ್ಬರು ಜೋಡಿ ಎತ್ತು: ಸುದೀಪ್ ಹೇಳಿಕೆಗೆ ದರ್ಶನ್ ಪ್ರತಿಕ್ರಿಯೆ ಹೀಗಿತ್ತು

  ಪ್ಲಾನ್ ಮಾಡಿ ಅಖಾಡಕ್ಕೆ ಇಳಿಯಲಿದೆ ಜೋಡೆತ್ತು

  ಪ್ಲಾನ್ ಮಾಡಿ ಅಖಾಡಕ್ಕೆ ಇಳಿಯಲಿದೆ ಜೋಡೆತ್ತು

  ದರ್ಶನ್ ಮತ್ತು ಯಶ್ ಇಬ್ಬರು ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿ ಇದ್ದಾರೆ. ಹಾಗಿದ್ದರೂ ಬಿಡುವು ಮಾಡಿಕೊಂಡು ಸುಮಲತಾ ಪರ ಪ್ರಚಾರ ಮಾಡೋದಕ್ಕೆ ಸಜ್ಜಾಗಿದ್ದಾರೆ. ಆದ್ರೆ, ಸರಿಯಾದ ವೇಳಾಪಟ್ಟಿ ಸಿದ್ಧವಾಗದ ಕಾರಣ ಇನ್ನು ಪ್ರಚಾರಕ್ಕೆ ಧುಮುಕಿಲ್ಲವಂತೆ. ಯಾರು ಎಲ್ಲೆಲ್ಲಿ, ಯಾವಾಗ ಪ್ರಚಾರ ನಡೆಸಬೇಕು ಎಂಬ ಪ್ಲಾನ್ ಆಗ್ತಿದ್ದಂತೆ ಎಂಟ್ರಿಯಾಗ್ತಾರಂತೆ ಜೋಡೆತ್ತುಗಳು.

  'ಸುಮಲತಾ ಹಿಂದೆ ನಾನು' ಎಂದ ದರ್ಶನ್: ನಿಖಿಲ್ ಬಗ್ಗೆ ದಾಸ ಏನಂದ್ರು?

  ಇಬ್ಬರು ಒಂದೊಂದು ಕಡೆ ಹೋಗಬಹುದಾ?

  ಇಬ್ಬರು ಒಂದೊಂದು ಕಡೆ ಹೋಗಬಹುದಾ?

  ಸದ್ಯಕ್ಕೆ ದರ್ಶನ್ ಮತ್ತು ಯಶ್ ಯಾವಾಗ ಪ್ರಚಾರಕ್ಕೆ ಬರ್ತಾರೆ ಎನ್ನುವುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಒಂದು ಸಲ ವೇಳಾಪಟ್ಟಿ ರೆಡಿ ಆದ್ಮೇಲೆ ಪಕ್ಕಾ ಆಗುತ್ತೆ. ಈ ನಡುವೆ ಮಂಡ್ಯ ಜನರಿಗೆ ಕಾಡ್ತಿರುವ ಕುತೂಹಲ ಒಬ್ಬರು ಒಟ್ಟಿಗೆ ಪ್ರಚಾರ ಮಾಡ್ತಾರಾ ಅಥವಾ ಒಂದೊಂದು ಕಡೆ ಹಂಚಿಕೊಳ್ತಾರಾ ಎಂಬುದು ಪ್ರಶ್ನೆಯಾಗಿದೆ.

  ಅಂಬಿ ಸಮಾಧಿ ಬಗ್ಗೆ ಮಾತನಾಡಿದ ಮುನಿರತ್ನಗೆ ಸುಮಲತಾ ತಿರುಗೇಟು

  ಬೆದರಿಕೆ ಬೇರೆ ಇದೆ

  ಬೆದರಿಕೆ ಬೇರೆ ಇದೆ

  ಮತ್ತೊಂದೆಡೆ ನಟ ದರ್ಶನ್ ಅವರ ನಿವಾಸದ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ಮಾಡಿದ್ದರು. ಇದು ಸಹಜವಾಗಿ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿತ್ತು. ಸುಮಲತಾ ಪರ ಪ್ರಚಾರ ಮಾಡುತ್ತಿರುವುದಕ್ಕೆ ಕಿಡಿಗೇಡಿಗಳು ಬೆದರಿಕೆಯೊಡ್ಡುತ್ತಿದ್ದಾರೆ ಎಂಬ ಮಾತು ಕೇಳಿ ಬಂತು. ಇದ್ಯಾವುದಕ್ಕೂ ತಲೆಕಡೆಸಿಕೊಳ್ಳದ ಯಶ್ ಮತ್ತು ದರ್ಶನ್ ಇಬ್ಬರು ಅಂಬಿ ಪತ್ನಿ ಪರವಾಗಿ ಮತಯಾಚನೆ ಮಾಡಲಿದ್ದಾರಂತೆ.

  English summary
  Why Kannada actor Darshan and Yash have not yet start campaign in mandya. here is the sumalatha reaction about this question.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X