»   » ನಾಯಕಿ ಸಂಗೀತಾ ಚೌಹಾಣ್ ಗಳಗಳನೆ ಅತ್ತಿದ್ದು ಯಾಕೆ?

ನಾಯಕಿ ಸಂಗೀತಾ ಚೌಹಾಣ್ ಗಳಗಳನೆ ಅತ್ತಿದ್ದು ಯಾಕೆ?

Posted By:
Subscribe to Filmibeat Kannada

ನೀವು ಇಂದ್ರಜಿತ್ ಲಂಕೇಶ್ ನಿರ್ದೇಶನದ 'ಲವ್ ಯು ಆಲಿಯ' ಸಿನಿಮಾ ನೋಡಿದ್ರೆ, ನಿಮಗೆ ನಟಿ ಸಂಗೀತಾ ಚೌಹಾಣ್ ಪರಿಚಯ ಇದ್ದೇ ಇರುತ್ತೆ.

'ಲವ್ ಯು ಆಲಿಯ' ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ಸಂಗೀತಾ ಚೌಹಾಣ್ 'ಶಾರ್ಪ್ ಶೂಟರ್' ಚಿತ್ರದ ಹೀರೋಯಿನ್ ಕೂಡ. ಹಾಗ್ನೋಡಿದ್ರೆ, ಸಂಗೀತಾಗೆ 'ಶಾರ್ಪ್ ಶೂಟರ್' ಚೊಚ್ಚಲ ಕನ್ನಡ ಚಿತ್ರ.

sharp-shooter

ಮಾಡೆಲ್ ಆಗಿದ್ದ ಸಂಗೀತಾ ನಟನೆಗೆ ಮೊದಲು ಆಡಿಷನ್ ಕೊಟ್ಟಿದ್ದು ದಿಗಂತ್ ಅಭಿನಯದ 'ಶಾರ್ಪ್ ಶೂಟರ್' ಚಿತ್ರಕ್ಕೆ. ಕನ್ನಡ ಗೊತ್ತಿಲ್ಲದ ಸಂಗೀತಾ, 'ಶಾರ್ಪ್ ಶೂಟರ್' ಸಿನಿಮಾದ ನಾಯಕಿಯಾಗಿ ಸೆಲೆಕ್ಟ್ ಆದರು. ಆಮೇಲೆ ಅವರಿಗೆ ಡೈಲಾಗ್ ಸಂಕಟ ಅರ್ಥವಾಗಿದ್ದು.! [ಆಕ್ಷನ್ ಹೀರೋ ಆದ 'ಶಾರ್ಪ್ ಶೂಟರ್' ದಿಗಂತ್]

ನಿರ್ದೇಶಕ ಗೌಸ್ ಪೀರ್ ಡೈಲಾಗ್ ಕೊಟ್ಟಾಗ, ಚಿಕ್ಕ ಮಕ್ಕಳಂತೆ ಬೈಹಾರ್ಟ್ ಮಾಡಿಕೊಂಡು ಸಂಗೀತಾ ಡೈಲಾಗ್ ಒಪ್ಪಿಸುತ್ತಿದ್ದರಂತೆ. ಕೆಲವೊಮ್ಮೆ ತೀರಾ ಕಷ್ಟವಾದಾಗ ನಿರ್ದೇಶಕರ ಮುಂದೆ ಗೊಳೋ ಅಂತ ಅತ್ತಿದ್ದರಂತೆ ಸಂಗೀತಾ ಚೌಹಾಣ್.

ನಿರ್ದೇಶಕ ಗೌಸ್ ಪೀರ್ ಆತ್ಮವಿಶ್ವಾಸ ತುಂಬಿ ಸಪೋರ್ಟ್ ಮಾಡಿದ್ದರಿಂದ ಕನ್ನಡ ಕಲಿಕೆ ಸಂಗೀತಾಗೆ ಸುಲಭವಾಯ್ತಂತೆ. ಆದ್ದರಿಂದ 'ಲವ್ ಯು ಆಲಿಯ' ಸಿನಿಮಾದಲ್ಲಿ ನಟಿಸುವುದಕ್ಕೂ ಕಷ್ಟವಾಗ್ಲಿಲ್ಲ ಅಂತ ಹೇಳ್ತಾರೆ ಸಂಗೀತಾ. [ಡಿಸೆಂಬರ್ 11 ರಂದು ದಿಗಂತ್ 'ಶಾರ್ಪ್ ಶೂಟರ್' ರಿಲೀಸ್]

ದಿಗಂತ್ ಗೆ ನಾಯಕಿಯಾಗಿರುವ ಸಂಗೀತಾ 'ಶಾರ್ಪ್ ಶೂಟರ್' ಚಿತ್ರದಲ್ಲಿ ಗ್ಲಾಮರ್ ಗೊಂಬೆಯಾಗಿ ಮಿಂಚಿದ್ದಾರೆ. ಇದೇ ಶುಕ್ರವಾರ 'ಶಾರ್ಪ್ ಶೂಟರ್' ನಿಮ್ಮ ಮುಂದೆ ಬರಲಿದೆ. ನೋಡೋಕೆ ನೀವು ರೆಡಿನಾ..?

English summary
Kannada Actress Sangeetha Chauhan, heroine of 'Sharp Shooter' cried because of language problem. Diganth starrer 'Sharp Shooter' is releasing on December 11th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada