»   » 'ಮಾರ್ಚ್ 3' ರಂದೇ 'ಡಬ್ಬಿಂಗ್' ಚಿತ್ರ ಬಿಡುಗಡೆ ಯಾಕೆ? ಹಿಂದಿರುವ ಸತ್ಯವೇನು?

'ಮಾರ್ಚ್ 3' ರಂದೇ 'ಡಬ್ಬಿಂಗ್' ಚಿತ್ರ ಬಿಡುಗಡೆ ಯಾಕೆ? ಹಿಂದಿರುವ ಸತ್ಯವೇನು?

Posted By:
Subscribe to Filmibeat Kannada

ತಮಿಳಿನ ಚಿತ್ರ ಕನ್ನಡದಲ್ಲಿ 'ಡಬ್ಬಿಂಗ್' ಆಗಿ 'ಸತ್ಯದೇವ್ ಐಪಿಎಸ್' ಎಂಬ ಹೆಸರಿನಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲು ಸಜ್ಜಾಗಿದೆ. ಚಿತ್ರಮಂದಿರಗಳಲ್ಲಿ 'ಡಬ್ಬಿಂಗ್' ಸಿನಿಮಾ ರಿಲೀಸ್ ಆಗುತ್ತಿರುವುದು ಒಂದೆಡೆಯಾದ್ರೆ, ಮಾರ್ಚ್ 3 ರಂದೇ ಈ ಚಿತ್ರ ಬಿಡುಗಡೆಯಾಗುತ್ತಿರುವುದು ಮತ್ತೊಂದು ವಿಶೇಷವಾಗಿದೆ.[ಡಬ್ಬಿಂಗ್ ಮೇಲಿದ್ದ ನಿಷೇಧ ತೆರವು, ಮುಂದೇನು? ]

ಹೌದು, ಕನ್ನಡ ಚಿತ್ರರಂಗಕ್ಕೆ ಡಬ್ಬಿಂಗ್ ಬೇಕು? ಬೇಡ? ಎಂಬ ಚರ್ಚೆಯ ನಡುವೆ ಸಿನಿಮಾ ತೆರೆಕಾಣುತ್ತಿದೆ. ಆದ್ರೆ, ಮಾರ್ಚ್ 3 ರಂದು ಈ 'ಡಬ್ಬಿಂಗ್' ಚಿತ್ರ ರಿಲೀಸ್ ಮಾಡಬೇಕು ಎಂದು ನಿರ್ಧರಿಸಿರುವುದರ ಹಿಂದೆ 83 ವರ್ಷಗಳ ಇತಿಹಾಸವಿದೆ. ಏನದು ಅಂತ ಮುಂದೆ ಓದಿ...

'ಮಾರ್ಚ್ 3' ಕನ್ನಡ ಚಿತ್ರರಂಗಕ್ಕೆ ಐತಿಹಾಸಿಕ ದಿನ

ಕನ್ನಡ ಚಿತ್ರರಂಗಕ್ಕೆ 'ಮಾರ್ಚ್ 3' ಐತಿಹಾಸಿಕ ದಿನ. ಯಾಕಂದ್ರೆ, ಮಾರ್ಚ್ 3 ರಂದು ಕನ್ನಡದ ಮೊಟ್ಟ ಮೊದಲ ವಾಕ್ಚಿತ್ರ ಬಿಡುಗಡೆಯಾದ ದಿನ. ಹೌದು, 1934 ಮಾರ್ಚ್ 3ನೇ ತಾರೀಖು ಕನ್ನಡದ ಮೊದಲ ವಾಕ್ಚಿತ್ರ ಸತಿ ಸುಲೋಚನ' ತೆರೆಕಂಡಿತ್ತು.['ಕನ್ನಡದ ಹೆಸರಲ್ಲಿ ಅನಾಚಾರ': 'ಡಬ್ಬಿಂಗ್' ವಿರುದ್ಧ ಗುಡುಗಿದ ನಟ ಜಗ್ಗೇಶ್.! ]

'ಮಾರ್ಚ್ 3 ' ಕನ್ನಡ ಚಿತ್ರರಂಗದ ಹುಟ್ಟಿದ ದಿನ

'1934 ಮಾರ್ಚ್ 3'ರಲ್ಲಿ ಬಿಡುಗಡೆಯಾದ 'ಸತಿ ಸುಲೋಚನ' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಉದಯವಾಯಿತು. ಹೀಗಾಗಿ, ಡಬ್ಬಿಂಗ್ ಚಿತ್ರವನ್ನ ಇದೇ ದಿನದಂದು ಬಿಡುಗಡೆ ಮಾಡಿ ಮತ್ತೆ ಇತಿಹಾಸ ನಿರ್ಮಿಸಬೇಕು ಎಂಬುದು ಡಬ್ಬಿಂಗ್ ಪರ ಚಿತ್ರೋಧ್ಯಮಿಗಳ ಉದ್ದೇಶವಾಗಿದೆ.[ಸತ್ಯದೇವ್ ಐಪಿಎಸ್ 'ಡಬ್ಬಿಂಗ್' ಚಿತ್ರದ ಟ್ರೈಲರ್ ನೋಡಿ]

ಮಾರ್ಚ್ 3, 2017 ಡಬ್ಬಿಂಗ್ ಸಿನಿಮಾ ರಿಲೀಸ್

ಇದೀಗ, 2017 ಮಾರ್ಚ್ 3 ರಂದು ಕನ್ನಡಕ್ಕೆ ಡಬ್ಬಿಂಗ್ ಅಧೀಕೃತವಾಗಿ ಪ್ರವೇಶ ಮಾಡುತ್ತಿರುವ ದಿನ. ತಮಿಳು ನಟ ಅಜಿತ್ ಅಭಿನಯದ ಚಿತ್ರ ಕನ್ನಡದಲ್ಲಿ 'ಸತ್ಯದೇವ್ ಐಪಿಎಸ್' ಅವತಾರದಲ್ಲಿ ಸ್ಯಾಂಡಲ್ ವುಡ್ ಅಂಗಳಕ್ಕೆ ಕಾಲಿಡುತ್ತಿದೆ.

ಯಾವುದು ಈ 'ಡಬ್ಬಿಂಗ್' ಸಿನಿಮಾ

2015 ರಲ್ಲಿ ತೆರೆಕಂಡಿದ್ದ ತಮಿಳಿನ ಸೂಪರ್ ಹಿಟ್ ಸಿನಿಮಾ 'ಎನ್ಯೈ ಅರಿಂದಾಲ್' ಈಗ ಕನ್ನಡ ಭಾಷೆಗೆ ಡಬ್ ಆಗಿದ್ದು, 'ಸತ್ಯದೇವ್ ಐಪಿಎಸ್' ಎಂಬ ಹೆಸರಿನಲ್ಲಿ ಬಿಡುಗಡೆಯಾಗುತ್ತಿದೆ. ಅಜಿತ್ ನಾಯಕನಾಗಿ ಅಭಿನಯಿಸಿದ್ದು, ತ್ರಿಷಾ, ಅನುಷ್ಕಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಗೌತಮ್ ಮೆನನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.[ಬೆರಕೆ-ಕಲಬೆರಕೆ ಅಳಿಯಲಿ ಎಂದ ಕನ್ನಡದ ಕಂದ ಪ್ರಜ್ವಲ್ ದೇವರಾಜ್]

ಟ್ರೈಲರ್ ಹೇಗಿದೆ ಗೊತ್ತಾ?

'ಸತ್ಯದೇವ್ ಐಪಿಎಸ್' ಡಬ್ಬಿಂಗ್ ಚಿತ್ರದ ಟ್ರೈಲರ್ ಯ್ಯೂಟ್ಯೂಬ್ ನಲ್ಲಿ ಉತ್ತಮ ಪ್ರತಿಕ್ರಿಯೆ ದೊರಕಿದೆ ಎಂಬ ಸಂತಸದಲ್ಲಿದ್ದಾರೆ ವಿತರಕರು. 1.75 ಲಕ್ಷ ಜನ ಟ್ರೈಲರ್ ನೋಡಿದ್ದಾರೆ. ಸುಮಾರು 60 ಸ್ಕ್ರೀನ್ ಗಳಲ್ಲಿ ಈ ಸಿನಿಮಾ ರಿಲೀಸ್ ಮಾಡುವ ತಯಾರಿಯಲ್ಲಿದೆ.

'ಡಬ್ಬಿಂಗ್' ಅಭಿಯಾನ

ಸತ್ಯದೇವ್ ಐಪಿಎಸ್ ಚಿತ್ರದ ನಂತರ ಮತ್ತಷ್ಟು ಪರಭಾಷಾ ಚಿತ್ರಗಳು ಕನ್ನಡಕ್ಕೆ ಡಬ್ ಆಗುವ ಸಾಧ್ಯತೆಯಿದೆ ಎಂದು ಹೇಳಲಾಗ್ತಿದೆ. ಈಗಾಗಲೇ 'ಬಾಹುಬಲಿ-2' ಕನ್ನಡಕ್ಕೆ ಡಬ್ ಆಗಲಿ ಎಂದು ಟ್ವಿಟ್ಟರ್ ನಲ್ಲಿ ಅಭಿಯಾನ ಶುರುವಾಗಿದೆ.[ಬಾಹುಬಲಿ 2 ಕನ್ನಡಕ್ಕೆ ಡಬ್ ಆಗಲಿ- ಟ್ವೀಟ್ ಅಭಿಯಾನ]

ವಿರೋಧದ ನಡುವೆ ರಿಲೀಸ್ ಆಗುತ್ತಾ?

ಚಿತ್ರದ ಬಿಡುಗಡೆಗೆ ತಯಾರಿ ನಡೆರಯುತ್ತಿದ್ದಂತೆ, ವಿರೋಧ ಕೂಡ ಭುಗಿಲೆದ್ದಿದೆ. ಕನ್ನಡ ಪರ ಸಂಘಟನೆಗಳು, ನಟ ಜಗ್ಗೇಶ್ ಸೇರಿದಂತೆ ಹಲವರು ಬಿಡುಗಡೆ ಮಾಡದಿರಲು ಎಚ್ಚರಿಕೆ ಕೊಟ್ಟಿದ್ದಾರೆ. ಇಷ್ಟೆಲ್ಲ ವಿರೋಧಗಳ ಮಧ್ಯೆ ಸಿನಿಮಾ ಬಿಡುಗಡೆಯಾಗುತ್ತಾ?

English summary
March 3 is a significant date in the history of Kannada films. It is the day that the first Kannada talkie film Sati Sulochana was released more than 80 years ago. By releasing the dubbed film on March 3.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada