»   » ಕರ್ನಾಟಕದಲ್ಲಿ ಮತ್ತೆ ಭುಗಿಲೆದ್ದ ಡಬ್ಬಿಂಗ್ ವಿವಾದ

ಕರ್ನಾಟಕದಲ್ಲಿ ಮತ್ತೆ ಭುಗಿಲೆದ್ದ ಡಬ್ಬಿಂಗ್ ವಿವಾದ

Posted By:
Subscribe to Filmibeat Kannada

ಇಷ್ಟು ದಿನ ತಣ್ಣಗಿದ್ದ ಡಬ್ಬಿಂಗ್ ವಿವಾದ ಈಗ ಮತ್ತೆ ಭುಗಿಲೆದ್ದಿದೆ. "ದೇಶದ ಯಾವುದೇ ರಾಜ್ಯಗಳಲ್ಲಿ ಡಬ್ಬಿಂಗ್ ಚಿತ್ರಗಳಿಗೆ ನಿಷೇಧವಿಲ್ಲ. ಆದರೆ ಕರ್ನಾಟಕದಲ್ಲಿ ಮಾತ್ರ ಯಾಕೆ ಈ ನಿಮಯ? ಅಸಂವಿಧಾನಿಕವಾದ ಈ ನಿರ್ಧಾರವನ್ನು ಕೈಗೊಳ್ಳುವ ಅಧಿಕಾರ ನಿಮಗೆ ಯಾರು ಕೊಟ್ಟರು? ಎಂದು ಕಾಂಪಿಟೇಷನ್ ಕಮೀಷನ್ ಆಫ್ ಇಂಡಿಯಾ (ಸಿಸಿಐ) ಪ್ರಶ್ನಿಸಿದೆ. ಈ ಸಂಬಂಧ ನೋಟೀಸ್ ಕೂಡ ಜಾರಿ ಮಾಡಿದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕರ್ನಾಟಕ ಚಲನಚಿತ್ರ ಅಕಾಡೆಮಿ, ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್, ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ ಹಾಗೂ ಚಲನಚಿತ್ರ ಕಾರ್ಮಿಕರು, ತಂತ್ರಜ್ಞರ ಒಕ್ಕೂಟಕ್ಕೆ ಈ ನೋಟೀಸನ್ನು ಜಾರಿ ಮಾಡಿದೆ.

ಪರಭಾಷಾ ಚಿತ್ರಗಳನ್ನು ಕನ್ನಡದಲ್ಲಿ ನೋಡವಂತಾಗಬೇಕು. ಅಲ್ಲಿನ ಪಾತ್ರಗಳು ಕನ್ನಡ ಭಾಷೆಯಲ್ಲಿ ಮಾತನಾಡಿದರೆ ಚಿತ್ರವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಡಬ್ಬಿಂಗ್ ಚಿತ್ರಗಳಿಗೆ ಅವಕಾಶ ನೀಡಬೇಕು ಎಂದು ಗಣೇಶ್ ಚೇತನ್ ಎಂಬುವವರು ಕರ್ನಾಟಕ ಗ್ರಾಹಕರ ಸಂಘಕ್ಕೆ ದೂರು ನೀಡಿದ್ದರು.

Dubbing controversy

ಈ ಸಂಬಂಧ ಸೂಕ್ತ ನಿರ್ದೇಶನ ನೀಡುವಂತೆ ಸಿಸಿಐಗೆ ಕರ್ನಾಟಕ ಗ್ರಾಹಕರ ಸಂಘ ಆದೇಶಿಸಿದೆ. ಡಬ್ಬಿಂಗ್ ನಿಷೇಧದ ಹಕ್ಕು ನಿಮಗ್ಯಾರು ಕೊಟ್ಟರು ಎಂದು ಸಿಸಿಐ ಈಗ ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದೆ.

ಈ ನೋಟೀಸಿಗೆ ಸೂಕ್ತ ಉತ್ತರ ನೀಡಲು ನಿರ್ಮಾಪಕರು, ನಿರ್ದೇಶಕರು ಹಾಗೂ ಕಲಾವಿದರ ಸಂಘಗಳು ನಿರ್ಧರಿಸಿವೆ. ಸಂಘದ ಪದಾಧಿಕಾರಿಗಳು ಫಿಲಂ ಚೇಂಬರ್ ನಲ್ಲಿ ಸಭೆ ಸೇರಿ ಚಿಂತನ ಮಂಥನ ನಡೆಸುತ್ತಿದ್ದಾರೆ. ಮುಂದೇನಾಗುತ್ತದೋ ಏನೋ? ಇಷ್ಟಕ್ಕೂ ಡಬ್ಬಿಂಗ್ ಬೇಕೆ ಬೇಡವೆ? ಇನ್ನೊಮ್ಮೆ ನಿಮ್ಮ ಅಭಿಪ್ರಾಯ ತಿಳಿಸಿ. ಇದೇ ಲಾಸ್ಟ್ ಚಾನ್ಸ್. (ಏಜೆನ್ಸೀಸ್)

English summary
The Competition Commission of India (CCI) has asking why the dubbing of films or television serials has to be stopped in Karnataka while it is not done in any other states of the country. CCI issued notice to Karnataka Film Chamber of Commerce along with four fraternal organizations.
Please Wait while comments are loading...