»   » ದರ್ಶನ್ ಮಾಧ್ಯಮದವರನ್ನು ದೂರ ತಳ್ಳಿದ್ದು, ಯಾಕೆ?

ದರ್ಶನ್ ಮಾಧ್ಯಮದವರನ್ನು ದೂರ ತಳ್ಳಿದ್ದು, ಯಾಕೆ?

By: ಜೀವನರಸಿಕ
Subscribe to Filmibeat Kannada

ದರ್ಶನ್ ಅವ್ರು ಮಾಧ್ಯಮಗಳನ್ನ ಯಾಕೆ ದೂರ ಇಡ್ತಾರೆ, (ದೂರ ಇಡ್ತಾರೆ ಅನ್ನೋದಕ್ಕಿಂತ ದೂರ ತಳ್ತಾರೆ ಅನ್ನೋ ಪದ ಸೂಕ್ತ.) ಅನ್ನೋದನ್ನ ಪ್ರಶ್ನಿಸಿ ಕೇಳಿದ್ದ ಒಂದಷ್ಟು ಪ್ರಶ್ನೆಗಳಿಗೆ ಮಕ್ಕಿಕಾಮಕ್ಕಿ ಹೇಳಿದ್ದನ್ನೇ ಹೇಳೋ ಅದೇ ಉತ್ತರಗಳು ಕಮೆಂಟ್ ಗಳ ರೂಪದಲ್ಲಿ ಬಂದಿವೆ.

ಚಾಲೆಂಜಿಂಗ್ ಸ್ಟಾರ್ ಹೇಗೆ ಮಾತಲ್ಲಿ ಆಕ್ಚುವಲಿ ಅನ್ನೋ ಪದವನ್ನ, ಪದೇ ಪದೇ ಬಳಸ್ತಾರೋ ಹಾಗೆ. ಅವರ ಅಭಿಮಾನಿಗಳೂ ಕೂಡ ನಮ್ಮ ಬಾಸ್ ಸೂಪರ್. ಅವ್ರನ್ನ ದೂರೋರೆಲ್ಲ ಕೆಲಸವಿಲ್ಲದವರು. ಅಥವಾ ದ್ವೇಷ ಮಾಡುವವರು ಅಂತ ಪದೇ ಪದೇ ಅರಚಿದ್ದಾರೆ. [ಕನ್ನಡ ಸಿನಿ ಪ್ರೇಮಿಗಳು ಉತ್ತರಿಸಲೇಬೇಕಾದ ಪ್ರಶ್ನೆಗಳಿವು.!]

ದರ್ಶನ್ ಅವ್ರ ಸಿನಿಮಾಗಳು ಗೆದ್ದಿದೆ ಆದ್ರೂ ನೀವು ಸೋತಿದೆ ಅಂತ ಹೇಳ್ತಿದ್ದೀರಾ, ಚೆನ್ನಾಗಿದ್ದರೂ ಚೆನ್ನಾಗಿಲ್ಲ, ಅಂತ ಸುದ್ದಿ ಹಬ್ಬಿಸ್ತೀರಾ ಅಂತ ದೂರಿದ್ದಾರೆ.
ಹೆಚ್ಚಿನವರು ದರ್ಶನ್ ಗೆ ಪ್ರಶ್ನೆ ಕೇಳಿದ ರೊಚ್ಚಿಗೆ ಕನ್ನಡ ಚಿತ್ರರಂಗಕ್ಕೆ ಮಾಧ್ಯಮಗಳ ಬೆಂಬಲ ಅಷ್ಟಕ್ಕಷ್ಟೇ ಅಂತ ದೂರಿ ದಬಾಯಿಸಿದ್ದಾರೆ. [ಸ್ವಾಮೀ ನಿಮ್ಮ ಪ್ರಶ್ನೆಗಳಿಗೆ ದರ್ಶನ್ ಅಭಿಮಾನಿಯ ಉತ್ತರ]

ಆದ್ರೆ ದುರಂತ ಅಂದ್ರೆ 19 ಪ್ರಶ್ನೆಗಳಲ್ಲಿ ಒಂದಕ್ಕೂ ಒಬ್ಬರೂ ಸ್ಪಷ್ಟ ಕಾರಣ, ಉತ್ತರ ಯಾವುದನ್ನೂ ಕೊಟ್ಟಿಲ್ಲ. ಯಾವುದಕ್ಕೂ ಸರಿಯಾದ ಸಮರ್ಥನೆ ಇಲ್ಲ. ಯಾವುದೂ ಸರಿಯಾದ ಸಬೂಬು ಅಲ್ಲ. [ನಮ್ಮ ಪ್ರಶ್ನೆ ಉತ್ತರ ಕೊಡ್ತೀರಾ ಚಾಲೆಂಜಿಂಗ್ ಸ್ಟಾರ್?]

ನೀವು ನಿಜ್ವಾಗ್ಲೂ ದರ್ಶನ್ ಅಭಿಮಾನಿಗಳು ಅಂತ ಪ್ರೂವ್ ಮಾಡಿಬಿಟ್ರಿ. ನೀವು ಕೊಡೋ ಉತ್ತರಗಳೂ ಅವ್ರು ಕೊಟ್ಟಿರೋ ಉತ್ತರಗಳೂ ತುಂಬಾ ಹೋಲಿಕೆ ಆಗ್ತವೆ. ಅವ್ರ ಪ್ರಭಾವ ನಿಮ್ಮ ಮೇಲೆ ಬಹಳಷ್ಟಿದೆ. ಯಾಕ್ ಗೊತ್ತಾ ನಿಮ್ಗೆ ನಾವು ಕೇಳಿದ ಪ್ರಶ್ನೆಗಳು ಅರ್ಥನೇ ಆಗಲ್ಲ.. ಯಾಕೆ ಅನ್ನೋದಕ್ಕೆ ಒಂದು ಘಟನೆ ಹೇಳ್ತೀನಿ....ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ....

ಸಂಗೊಳ್ಳಿರಾಯಣ್ಣ ಚಿತ್ರ ರಿಲೀಸಾದ ದಿನ

ಕಿಚ್ಚ ಸುದೀಪ್ ದರ್ಶನ್ ಇಬ್ಬರೂ ಒಟ್ಟಿಗೆ ಸಿನಿಮಾ ನೋಡ್ತಿದ್ರು:
ಸಿನಿಮಾ ಮುಗಿದ ನಂತ್ರ ಪ್ರತಿಷ್ಠಿತ ಮಾಧ್ಯಮವೊಂದರ ವರದಿಗಾರ ಒಂದು ಪ್ರಶ್ನೆ ಕೇಳಿದ್ದಷ್ಟೇ;
ಸರ್ ನಿಮ್ಮ ಸಂಗೊಳ್ಳಿ ರಾಯಣ್ಣ ಸಿನಿಮಾ ಭರ್ಜರಿ ರೆಸ್ಪಾನ್ಸ್ ಪಡ್ಕೊಂಡಿದೆ.
ಮುಂದೆ ಕೂಡ ಇಂತಹಾ ಸಿನಿಮಾಗಳನ್ನ ಮಾಡ್ತೀರಾ.
ದರ್ಶನ್ ಉತ್ತರ: ನಿಮ್ಗೆ ಪ್ರಶ್ನೆ ಕೇಳೋಕೆ ಬರೋಲ್ವೇನ್ರಿ.. ಇದೇನ್ರಿ ಪ್ರಶ್ನೆ ? ಪ್ರಶ್ನೆ ಏನು ಕೇಳ್ಬೇಕು ಅಂತ ಗೊತ್ತಿಲ್ವಾ ?

ರಿಪೋರ್ಟರ್ ಕೇಳಿದ ಪ್ರಶ್ನೆಯನ್ನ ಮತ್ತೊಮ್ಮೆ ಓದಿ. ಏನಾದ್ರೂ ತಪ್ಪಿದೆಯಾ ?

ದರ್ಶನ್ ಪ್ರಶ್ನಾತೀತರಲ್ಲ, ಚಿತ್ರರಂಗದಲ್ಲಿ ಅಂಬರೀಶ್ ರಂತಹಾ, ಅಂಬರೀಷ್ ಕೂಡ ಪ್ರಶ್ನೆಗಳಿಗೆ ಉತ್ತರಿಸಿ ನಿನ್ನೆ ಮೊನ್ನೆ ವರದಿಗಾರಿಕೆಗೆ ಬಂದ ರಿಪೋರ್ಟ್ ಗಳಿಗೂ ಬೆಲೆಕೊಡ್ತಾರೆ.
ಅಂತಾದ್ರಲ್ಲಿ ಚಾಲೆಂಜಿಂಗ್ ಸ್ಟಾರ್ ಬೃಂದಾವನ ಸಿನಿಮಾ ರಿಲೀಸ್ ಆದ ನಂತರದ ಪ್ರೆಸ್ ಮೀಟ್ ನಲ್ಲಿ ಏನಾಗಿತ್ತು ಗೊತ್ತಾ..

ಬೃಂದಾವನ ಸಿನಿಮಾ ರಿಲೀಸ್ ಆದ ನಂತರದ ಪ್ರೆಸ್ ಮೀಟ್

5-6 ವರ್ಷ ಸಿನಿಮಾ ರಿಪೋರ್ಟರ್ ಆಗಿ ಕೆಲಸ ಮಾಡಿದ್ದ ಸಿನಿಮಾ ರಿಪೋರ್ಟರ್ ಒಬ್ಬರ ನಡುವಿನ ಒಂದು ಸಂಭಾಷಣೆ ಕೇಳಿ...

ರಿಪೋರ್ಟರ್: ಹೇಳಿ ಸಾರ್ ಸಿನಿಮಾ ರಿಲೀಸ್ ಆಗಿ ದೊಡ್ಡ ಓಪನಿಂಗ್ ತೊಗೊಂಡಿದೆ. ಈಗ ಪಬ್ಲಿಸಿಟಿನ ಮುಂದುವರಿಸ್ತಾರೆ. ಹೇಗೆಲ್ಲಾ ಪಬ್ಲಿಸಿಟಿ ಮಾಡೋ ಪ್ಲಾನ್ ಇದೆ ಸಾರ್..
ದರ್ಶನ್: ಯಾರಪ್ಪಾ ಇದು, ನಿಂಗೆ ಪ್ರಶ್ನೆ ಕೇಳೋದೇ ಗೊತ್ತಿಲ್ಲ. ಹೊಸ ರಿಪೋರ್ಟರ್ರಾ ? ಯಾರಾದ್ರೂ ಹಳಬ್ರು ಇದ್ದೀರೇನಪ್ಪಾ ಅಂದಿದ್ದಾರೆ.
ಅದಕ್ಕೆ ಸಿಕ್ಕ ಉತ್ತರ ಇಂಟರೆಷ್ಟಿಂಗ್.

ಇಂಟರೆಷ್ಟಿಂಗ್ ಉತ್ತರ

ರಿಪೋರ್ಟರ್: ( ಮನಸ್ಸಲ್ಲಿ) ಹಳಬ್ರಿಗೆಲ್ಲಾ ನಿಮ್ಮ ಹಣೆಬರಹ ಗೊತ್ತು ಯಾರೂ ಪ್ರಶ್ನೆ ಕೇಳಲ್ಲ. ನಿಮ್ಗೇನಿದ್ರೂ ಹೊಸಬರೇ ಗತಿ. ಒಂದೆರೆಡೇ ವರ್ಷಗಳಲ್ಲಿ ದರ್ಶನ್ರ ಬಗ್ಗೆ ಒಬ್ಬೊಬ್ಬ ವರದಿಗಾರ ಕೂಡ ಇಂತಹ ನಾಲ್ಕೈದು ಕಥೆಗಳನ್ನ ಹೇಳಬಲ್ಲ, ಅಂದ್ರೆ ಯೋಚನೆ ಮಾಡಿ ದರ್ಶನ್ ಇನ್ನೆಂತಹಾ ವಿಶೇಷ ಸಂಬಂಧವನ್ನ ಎಲ್ಲ ರಿಪೋರ್ಟರ್ಗಳ ಜೊತೆ ಹೊಂದಿರಬೇಕು.

ಇನ್ನೊಂದು ವಿಚಾರ ಗೊತ್ತಾ ಅಭಿಮಾನಿಗಳೇ ನಿಮಗೆ:

ಎಷ್ಟೋ ಸಿನಿಮಾ ನಿರ್ಮಾಪಕ ನಿರ್ದೇಶಕರ ಬಗ್ಗೆ ವೈಯಕ್ತಿಕ ದ್ವೇಷದಿಂದ ತಪ್ಪು ಮಾಹಿತಿ ಕೊಡೋ ಲೇಖನ ಬರೆದಿದ್ದಕ್ಕೆ ಅಂತಹಾ ವರದಿಗಾರರೆಲ್ಲ ಕೆಲಸ ಕಳೆದುಕೊಂಡಿದ್ದಾರೆ.
ಆದ್ರೆ ದರ್ಶನ್ರ ಬಗ್ಗೆ ಇಂತಹಾ ವರದಿಗಳು ಬಂದಾಗ ಅದಕ್ಕಿರೋ ಸಾವಿರಾರು ಸಾಕ್ಷ್ಯಗಳನ್ನ ನೋಡಿ ಸ್ವತಃ ವಾಹಿನಿಯ ಮುಖ್ಯಸ್ಥರೇ ದಂಗಾಗಿಹೋಗಿದ್ದಾರೆ.

ಇದು ಚಿಕ್ಕ ಜಗತ್ತು

ಕನ್ನಡ ಚಿತ್ರರಂಗ ಚಿಕ್ಕದು. ಇಲ್ಲಿ ಚಾಲ್ತಿಯಲ್ಲಿರೋದು ನಾಲ್ಕು ಜನ ಸೂಪರ್ಸ್ಟಾರ್ಗಳು ಐದೋ ಹತ್ತೋ ಸ್ಟಾರ್ಗಳು ನಮ್ಗೆ ಇವತ್ತಲ್ಲದಿದ್ರೆ ನಾಳೆ ಅವ್ರು ಸಿಗ್ತಾನೇ ಇರ್ತಾರೆ.
ಅಂಥಾದ್ರಲ್ಲಿ ಇರೋ ನಾಲ್ಕು ಜನ್ರಲ್ಲಿ ಯಾಕೆ ಒಬ್ಬರನ್ನ ಕಳ್ಕೊಳ್ಳೋದು ಅಂತ ಪ್ರತೀ ಮಾಧ್ಯಮದವ್ರಿಗೂ ಅನ್ನಿಸುತ್ತೆ.

ಆದ್ರೆ ಯಾಕೋ ಅವರೇ ದೂರ ಆದ್ರೆ ನಾವೇನು ಕಾಲು ಹಿಡ್ಕೊಳ್ಳೋಕಾಗುತ್ತಾ ?

ನಮಗ್ಯಾಗೆ ದ್ವೇಷ

ಅಭಿಮಾನಿಗಳೇ ಹೇಳೋ ಹಾಗೆ ದರ್ಶನ್ ರಾಜಕಾರಿಣಿಗಳ ಹಾಗೆ ಕರೆಂಟ್ ಕೊಡದೇ ತೊಂದ್ರೆ ಕೊಟ್ಟಿಲ್ಲ. ಅಥ್ವಾ ನಮ್ಮ ಭೂಮೀನ ಕಸಿದುಕೊಂಡಿಲ್ಲ.

ಭ್ರಷ್ಟಾಚಾರ ಮಾಡಿಲ್ಲ. ನಮ್ಮ ಮನೆಗೇನೂ ಕನ್ನ ಹಾಕಿಲ್ಲ. ನಮ್ಮ ಆಸ್ತಿಪಾಸ್ತೀನ ಕೊಳ್ಳೆ ಹೊಡೆದಿಲ್ಲ. ನಮಗ್ಯಾಕ್ರೀ ದರ್ಶನ್ ಬಗ್ಗೆ ದ್ವೇಷ.

ಒಳ್ಳೆಯವರಾಗಿ ಅಂತ ಹೇಳೋದು ನಮ್ಮ ಧರ್ಮ ಕೇಳೋದು ಬಿಡೋದು ಅವ್ರ ಕರ್ಮ.

ಸಂಗೊಳ್ಳಿರಾಯಣ್ಣ ನಮಗೂ ಇಷ್ಟ

ನಮಗೂ ದರ್ಶನ್ ಸಂಗೊಳ್ಳಿ ರಾಯಣ್ಣ ಸಿನಿಮಾದಲ್ಲಿ ರಾಯಣ್ಣನಾಗಿ ಡೈಲಾಗ್ ಹೊಡೆಯೋದು ನೋಡಿ ರೋಮಾಂಚನವಾಗುತ್ತೆ.

ಮತ್ತೊಮ್ಮೆ ದರ್ಶನ್ರಲ್ಲಿ ನಾವು ನೋಡದ ರಾಯಣ್ಣನನ್ನ ನೋಡ್ತೀವಿ. ಅದ್ರೂ ಡೈಲಾಗ್ ಸ್ವಲ್ಪ ಹುಬ್ಳಿ ಸ್ಟೈಲಲ್ಲಿದ್ದಿದ್ದರೆ ಇನ್ನೂ ಸೂಪರ್ರಾಗಿರ್ತಿತ್ತು ಅಂತ ಆಸೆಪಟ್ಟಿದ್ದೀವಿ.

ಆದ್ರೆ ಕೆಟ್ಟ ಸಿನಿಮಾ ಮಾಡಿದಾಗ ಈ ಸಿನಿಮಾಗ ನಾವು ವರ್ಷ ಇಡೀ ಸ್ವಮೇಕ್ ಸಿನಿಮಾ ಅಂತ ಪ್ರಚಾರ ಕೊಟ್ಟಿದ್ದು ಅಂತ ಬೈಯ್ಕೋತೀವಿ ತಪ್ಪಾ ?

ನಮ್ದು 360 ಡಿಗ್ರಿ..

ನಿಮ್ಗೆ ದರ್ಶನ್ ಹೀರೋ ಆಗಿ ಮಾತ್ರ ಗೊತ್ತು. ಥಿಯೇಟರ್ನಲ್ಲಿ ಸಿನಿಮಾ ನೋಡ್ತೀರ.
ಚಪ್ಪಾಳೆ ಹೊಡೀತೀರಾ. ಬರ್ತಡೇ ದಿನ ಕೇಕ್ ತಂದು ಕಟ್ ಮಾಡ್ತೀರ.

ಎರಡು ಕಣ್ಣಿಂದ ನೋಡ್ತೀರಾ ಕಣ್ಣು ತುಂಬಿಸಿಕೊಂಡು ಹೋಗ್ತೀರಾ.
ನಾವು ಮೈಯೆಲ್ಲಾ ಕಣ್ಣಾಗಿರೋರು. ಗೋಡೆ ಗೋಡೆಯಲ್ಲೂ ಕಿವಿಯಿಟ್ಟಿರೋರು ನಮ್ಗೆ ಅವ್ರ ದಶಾವತಾರಗಳೂ ಕಾಣ್ತವಲ್ಲ.

ಏನ್ಮಾಡ್ತೀರ ? ನಾವು ಶೂಟಿಂಗ್ ಸೆಟ್ನಲ್ಲಿ ನೋಡ್ತೀವಿ, ಪ್ರೆಸ್ ಮೀಟಲ್ಲಿ ಮನೆಯಲ್ಲಿ, ಇಂಟರ್ವ್ಯೂವಲ್ಲಿ.. ಎಲ್ಲಾ ಕಡೆ ಹತ್ತಿರದಿಂದ ನೋಡ್ತೀವಿ.

ನಮ್ಗೆ ಚಂದ್ರನ ಮುಖದಮೇಲೆ ಇರೋ ಹಳ್ಳ ಗುಂಡಿಗಳು ಉಬ್ಬುತಗ್ಗುಗಳೂ ಕಾಣ್ತವೆ. ನಮ್ಮದು 360 ಡಿಗ್ರಿಯ ಲುಕ್. ಯಾಕಂದ್ರೆ ನಮ್ಮ ಕೆಲಸವೇ ಅದಲ್ವಾ..

ರಿಯಾಲಿಟಿ ಅಲ್ಲ ಕ್ರ್ಯೂಯಾಲಿಟಿ

ದೂರದಿಂದ ನೋಡೋದೆಲ್ಲ ಸತ್ಯ ಅಲ್ಲ. ಅಭಿಮಾನಿಗಳು ಕೊಡ್ತಿರೋ ಧರ್ಪದ ದಾಷ್ಠ್ರ್ಯದ ಉತ್ತರಗಳನ್ನ ನೋಡಿದ್ರೇ ಗೊತ್ತಾಗುತ್ತೆ.

ಯಾರು ಮಾಧ್ಯಮದ ಕ್ಯಾಮೆರಾಮನ್ಗಳ ಮೇಲೆ ಹಲ್ಲೆ ಮಾಡೋದು ಅಂತ. ದರ್ಶನ್ ಅವ್ರ ಅಭಿಮಾನ ನಟನ ಬಗ್ಗೆ ಇರ್ಲಿ.

ದರ್ಶನ್ ತಮ್ಮ ಸಿನಿಮಾಗಳಲ್ಲಿ ವಿಲನ್ಗಳ ಮೇಲೆ ಹಲ್ಲೆ ಮಾಡಿದ ಹಾಗೆ ಅಮಾಯಕ ರಿಪೋರ್ಟರ್ಗಳ ಮೇಲೆ ಅವ್ರ ಅಭಿಮಾನಿಗಳು ಹಲ್ಲೆ ಮಾಡೋದು ಎಂತಹಾ ದುರಂತ ಅಲ್ವಾ.

ಇದು ಆಗಾಗ ಮಾಧ್ಯಮಗಳಲ್ಲಿ ಬಂದ್ರೂ ನಮ್ಮದೇ ಸರಿ ಅಂತೀರಲ್ಲ...

ಒಂದೇ ಪ್ರಶ್ನೆ..

ಯಾಕೆ ಬೇರೆ ಯಾವ ಸ್ಟಾರ್ಗಳೂ ಈ ತರಹದ ಪ್ರಶ್ನೆಗಳಿಗೇ ಗುರಿಯಾಗಲ್ಲ ಮಾಧ್ಯಮದವ್ರಿಂದ.
ದರ್ಶನ್ ಮಾತ್ರ ಯಾಕೆ ಇಂತಹಾ ಆರೋಪಗಳಿಗೆ ಪದೇ ಪದೇ ಸಿಕ್ತಾರೆ. ಬೆಂಕಿ ಇಲ್ಲದೆ ಹೊಗೆ ಆಡಲ್ಲ ಅಲ್ವಾ.

ನಮಗ್ಯಾಕೆ ಹೊಟ್ಟೆ ಕಿಚ್ಚು

ಕಾಸುಕೊಟ್ರೆ ಪ್ರಚಾರ ಮಾಡ್ತೀವಿ. ಇಲ್ಲದಿದ್ರೆ ಸುಮ್ಮನಿರ್ತೀವಿ. ಜಾಹಿರಾತು ಇಲ್ಲದೆ ಚಾನೆಲ್ನ ನಿಮ್ಮ ಮನೆಗೆ ತಲುಪಿಸೋದು ಅಂದ್ರೆ ಹೆಂಗೆ ಗೊತ್ತಾ.. ನೀವು ಕೆಲಸಾನೇ ಮಾಡದೇ ಸಂಬಳ ಬರ್ಲಿ ಅನ್ಕೊಳ್ಳೋದು. ಕಬ್ಬನ್ನೇ ಹಾಕದೇ ಸಕ್ಕರೇ ಬರ್ಲಿ ಅನ್ಕೊಳ್ಳೋದು.

2013ರ ಬುಲ್ ಬುಲ್ ಕೊನೇ

ಇನ್ನು ಸಿನಿಮಾ ವಿಚಾರಕ್ಕೆ ಬಂದ್ರೆ ದರ್ಶನ್ ಸಿನಿಮಾಗಳು ಗೆದ್ದಿರೋದು 2013ರಲ್ಲೇ ಕೊನೆ.
ಬುಲ್ ಬುಲ್ ಸಿನಿಮಾ ಮಾತ್ರ ಸಂಪೂರ್ಣ ಯಶಸ್ವಿ ಸಿನಿಮಾ ಅನ್ನಿಸಿಕೊಂಡಿದ್ದು. ಅದಾದ ನಂತ್ರ ನಿರೀಕ್ಷೆ ಮೂಡಿಸಿದ.

ನಾವೂ ಯರ್ರಾಬಿರ್ರಿ ಪ್ರಚಾರ ಕೊಟ್ಟ ಬೃಂದಾವನ,ಅಂಬರೀಷ, ಸಿನಿಮಾಗಳು ಮಕಾಡೆ ಮಲಗಿವೆ.
ಲೆಕ್ಕಾಚಾರ ಗೊತ್ತಿಲ್ಲದೆ ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅನ್ಕೊಂಡ್ರೆ ನಿಮ್ಮ ಲೆಕ್ಕಾಚಾರ ತಪ್ಪು.

English summary
Fans are defending Kannada Actor Darshan blindly. The comments which Fans are passing are exactly the same as Darshan's statements on Kannada Media. Read the article to know how Darshan has reacted to media.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada