»   » ಇಲ್ಲಿ ಯಾರು 'ಡವ್' ಮಾಡ್ತಿದ್ದಾರೋ ಗೊತ್ತಿಲ್ಲ...

ಇಲ್ಲಿ ಯಾರು 'ಡವ್' ಮಾಡ್ತಿದ್ದಾರೋ ಗೊತ್ತಿಲ್ಲ...

By: ಜೀವನರಸಿಕ
Subscribe to Filmibeat Kannada

ಕನ್ನಡದ 'ಡವ್' ಚಿತ್ರದ ನಿರ್ದೇಶಕ ಸಂತು ಗೊತ್ತಲ್ಲ. ಅಲೆಮಾರಿ ಸಂತು ಅದೃಷ್ಟ ನೆಟ್ಟಗಿಲ್ವೋ ಅಥವಾ ಅದೇನು ಸಮಸ್ಯೇನೋ ಗೊತ್ತಿಲ್ಲ. 'ಡವ್' ಕಥೆ ಅಲ್ಲಿಗೇ ನಿಂತಿದೆ. ಸಿನಿಮಾದ ಶೂಟಿಂಗ್ ಶುರುವಾಗಿರೋದು, ಮುಗಿದಿರೋದು ನಿಮಗೇ ಗೊತ್ತಿದೆ. ಆದರೆ ನಿಜ್ವಾಗ್ಲೂ ಸಿನಿಮಾ ಮುಗಿದಿದೆಯಾ ಇನ್ನೂ ಅನುಮಾನವಿದೆ.

ಆದರೆ ಈಗ ಕುತೂಹಲ ಮೂಡಿಸ್ತಿರೋದು ಸಂತು 'ಡವ್' ಮಾಡ್ತಿರೋದು ನಿಜಾನಾ ಅಂತ. ಯಾಕಂದ್ರೆ ಸಾ.ರಾ. ಗೋವಿಂದು ಪುತ್ರ ಅನೂಪ್ ಸಾ.ರಾ. ಗೋವಿಂದು, ಜೋಶ್ ರಾಕೇಶ್ ಅಭಿನಯದ 'ಡವ್' ಚಿತ್ರ ಶೂಟಿಂಗ್ ಮುಗಿಸಿದೆ. ಆದರೆ ಒಂದಾದ ನಂತರ ಮತ್ತೊಂದು ಸಿನಿಮಾ ಮಾಡ್ತಿದ್ದ, ಸಿನಿಮಾಗಳನ್ನ ರಿಲೀಸೂ ಮಾಡ್ತಿದ್ದ ನಿರ್ಮಾಪಕ ಬೆಂಕೋಶ್ರೀ (ಬಿ.ಕೆ.ಶ್ರೀನಿವಾಸ್) ಸೈಲೆಂಟಾಗಿದ್ದಾರೆ. [ಪಿಯು ಸ್ಟೂಡೆಂಟ್ ಗೋವಿಂದು ಮಗನ ಡವ್]


ಬೆಂಕೋಶ್ರಿಯವರ 'ಅಂಗುಲಿಮಾಲಾ' ಸಿನಿಮಾ ರಿಲೀಸ್ ನ ಬಗ್ಗೆಯೂ ಯಾವುದೇ ಸುದ್ದಿ ಇಲ್ಲ. ಸಾಯಿಕುಮಾರ್ ಅಭಿನಯದ, ಬರಗೂರು ರಾಮಚಂದ್ರಪ್ಪ ನಿರ್ದೇಶನದ 'ಅಂಗುಲಿಮಾಲಾ' ವಿದೇಶಗಳ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದ್ದು ಬಿಟ್ರೆ ಬಿಡುಗಡೆಯ ಭಾಗ್ಯ ಸಿಕ್ಕಿಲ್ಲ. [ಯೋಗಿ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲು]

ಇದರ ನಡುವೆ 'ಡವ್' ಮಾಡೋದರ ಬಗ್ಗೆ ತಲೆಕೆಡಿಸಿಕೊಳ್ಳದ ಸಂತು 'ಡಾರ್ಲಿಂಗ್' ಶುರುಮಾಡಿ ಅರ್ಧಭಾಗ ಶೂಟಿಂಗ್ ಮುಗಿಸೋ ಹಂತಕ್ಕೆ ತಂದಿದ್ದಾರೆ. ಚಿತ್ರದ ವೇಗ ನೋಡಿದ್ರೆ 'ಡಾರ್ಲಿಂಗ್' ಚಿತ್ರವೇ ಬೇಗ ತೆರೆಗೆ ಬರೋ ಲಕ್ಷಣ ಕಾಣ್ತಿದೆ. ಬೆಂಕೋಶ್ರೀ ಸಿನಿಮಾ ರಿಲೀಸ್ ಗೆ ಇಷ್ಟು ಲೇಟ್ ಮಾಡೋದಿಲ್ಲ ಇಷ್ಟಕ್ಕೂ ಇಲ್ಲಿ 'ಡವ್' ಮಾಡ್ತಿರೋದ್ಯಾರು ಅನ್ನೋದು ನಮ್ಗೂ ಗೊತ್ತಾಗ್ತಾ ಇಲ್ಲ.

English summary
Why Kannada movie 'Dove' release delayed. The shooting for the movie, Dove, which is directed by Santhu, has been completed. Produced by B K Srinivas under the banner of Sri Harsha Productions.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada