»   » ಕಂಕಣಭಾಗ್ಯವಿಲ್ಲದೆ ಯುವ ನಿರ್ದೇಶಕರು ಕಂಗಾಲು

ಕಂಕಣಭಾಗ್ಯವಿಲ್ಲದೆ ಯುವ ನಿರ್ದೇಶಕರು ಕಂಗಾಲು

By: ಜೀವನರಸಿಕ
Subscribe to Filmibeat Kannada

ಹೌದು ಕನ್ನಡ ಚಿತ್ರರಂಗದ ನಿರ್ದೇಶಕರಿಗೆ ನಿದ್ರೆ ಕೆಡಿಸಿರೋ ಸಂಗತಿಯೊಂದಿದೆ. ಅವರಿಗೆ ಒಳ್ಳೆಯ ಗುಣವಿರೋ ಅಂದ ಚಂದದ ಹುಡುಗಿಯರು ಬೇಕಾಗಿದ್ದಾರೆ. ಅರ್ಜೆಂಟಾಗಿ ಹುಡುಗಿಯರು ಬೇಕಾಗಿದ್ದಾರೆ ನಿಬಂಧನೆಗಳು ಮತ್ತು ಅರ್ಹತೆಗಳು ಹೀಗಿವೆ..

ಅದಕ್ಕೂ ಮುನ್ನ ಇವರಿಗೆಲ್ಲಾ ಯಾಕೆ ಹೆಣ್ಣು ಸಿಗ್ತಿಲ್ಲ ಅಂಥ ನೋಡೋಣ. ಇವೆಲ್ಲಾ ಕಂಡೀಷನ್ಸ್ ಅಲ್ಲ ನಾವೇ ಕೊಡ್ತಿರೋ ರಿಯಾಯಿತಿಗಳು. ನಮ್ಮನ್ನ ಮದುವೆಯಾಗೋಕೆ ಇಷ್ಟಿದ್ರೆ ಸಾಕು. ಯಾರಾದ್ರೂ ಮದ್ವೆಯಾಗ್ತೀರಾ ಅಂತ ಸ್ಯಾಂಡಲ್ ವುಡ್ ಯಂಗ್ ನಿರ್ದೇಶಕರು ಕಾದಿದ್ದಾರೆ. ಆದರೆ ದುರಂತ ಅಂದ್ರೆ ಹುಡ್ಗೀರೇ ಸಿಕ್ತಾ ಇಲ್ಲ.

ಸಿನಿಮಾ ಅಂದ್ರೆ ನೋಡೋಕೆ ಬಣ್ಣದ ಪರಪಂಚ. ಹೊರಗೆ ಎಲ್ಲವೂ ಅಂದ ಚೆಂದ. ಆದರೆ ಸಿನಿಮಾದೊಳಗಿನ ಬವಣೆಯ ಬದುಕು ನಿಮಗ್ಗೊತ್ತಿಲ್ಲ. ಸಿನಿಮಾದವ್ರಿಗೆ ಮದುವೆಯಾಗ್ಬೇಕು ಅಂದ್ರೆ ಹೆಣ್ಣು ಕೊಡಲ್ಲ. ಸಿನಿಮಾದವ್ರು ಅಂದ್ರೆ ಅದೇನೋ ಅನುಮಾನ.

ಇತ್ತೀಚೆಗೆ ನಿರ್ದೇಶಕರೊಬ್ಬರು ನೋವಿನಿಂದ ಈ ಮಾತು ಹೇಳ್ತಿದ್ರು. ಅದ್ಯಾಕೆ ಸಿನಿಮಾದವ್ರು ಅಂದ್ರೆ ಹುಡ್ಗೀರನ್ನ ಕೊಡಲ್ಲ. ಸಿನಿಮಾಗೆ ಬಂದ್ರ ಹಣ ದುಡೀಬಹುದು. ಕಲರ್ ಫುಲ್ ಪ್ರಪಂಚ ನೋಡ್ಬಹುದು ಅಂದುಕೊಂಡು ಇಲ್ಲಿಗೆ ಬಂದವವರಿಗೆ ಮದುವೆ ಅನ್ನೋ ವಿಷಯ ಬಂದಾಗ ಕುತ್ತಿಗೆಗೆ ಬಂದ ಹಾಗಾಗುತ್ತೆ.

ಹೆಣ್ಣು ಕೇಳಿದ್ರೆ ಅನುಮಾನದಿಂದ ನೋಡ್ತಾರೆ

ಹೆಣ್ಣು ಕೇಳಿದ್ರೆ ಸಿನಿಮಾದಲ್ಲಿರೋರಾ ಅಂತ ಅನುಮಾನದಿಂದ ನೋಡ್ತಾರೆ. ಅದರಲ್ಲೂ ನಿರ್ದೇಶಕರ ಕಥೆ ಅಂತೂ ದೇವರಿಗೇ ಪ್ರೀತಿ. ಸಿನಿಮಾದಲ್ಲಿ ಇವತ್ತು ಕೇಳಿ ಬರೋ ಗಾಸಿಪ್ ಗಳು ಹೀರೋಯಿನ್ ಗಳ ಜೊತೆ ಲವ್ವಂತೆ ಕಿಸ್ಸಂತೆ ಇಂತಹಾ ಕಥೆಯನ್ನ ಓದಿ ಕೇಳಿರೋರಿಗೆ ನಂಬಿಕೆ ಬರೋದು ಕಷ್ಟಾನೇ.

ಐದು ಹುಡುಗೀರಿಂದ ತಿರಸ್ಕೃತನಾದ ಡೈರೆಕ್ಟರ್

ಕನ್ನಡ ಚಿತ್ರರಂಗದ ಹೆಸರು ಮಾಡಿದ ನಿರ್ದೇಶಕರನ್ನ ಇತ್ತೀಚೆಗೆ ಐದು ಹುಡುಗಿಯರು ಸಿನಿಮಾ ಡೈರೆಕ್ಟರ್ ಅನ್ನೋ ಕಾರಣಕ್ಕೆ ರಿಜೆಕ್ಟ್ ಮಾಡಿದ್ರಂತೆ. ಇಷ್ಟಕ್ಕೂ ಅವ್ರ ಬಗ್ಗೆ ಅಂತಹಾ ಗಾಸಿಪ್ ಗಳೇನೂ ಕೇಳಿ ಬಂದಿರಲಿಲ್ಲ.

ಡೈರೆಕ್ಟರ್ ರಿಯಲ್ ಲೈಫ್ ಬರ್ಬಾದ್ ಆಗಿದೆ

ಇನ್ನು ಆ ನಿರ್ದೇಶಕರು ಇನ್ನೂ ಒಂದೆರೆಡು ಸಿನಿಮಾ ಮಾಡಿ ಆಮೇಲೆ ಮದುವೆ ಬಗ್ಗೆ ಯೋಚನೆ ಮಾಡ್ತೀನಿ ಅಂತ ನೋವಿನಿಂದ ಹೇಳ್ತಿದ್ರಂತೆ. ಪಾಪ ರೀಲ್ ಲೈಫ್ ಗೆ ಇಳಿದ್ರೆ ರಿಯಲ್ ಲೈಫ್ ಹೇಗೆ ಬರ್ಬಾದ್ ಆಗ್ಬಿಡುತ್ತೆ ಅಲ್ವಾ. ಮೊದ್ಲೇ ಬೇಸರದಲ್ಲಿರೋ ಆ ನಿರ್ದೇಶಕರ ಹೆಸರು ಬೇಡ ಆದರೆ ನಡ್ದಿರೋ ಕಥೆ ಇಷ್ಟು. ಮುಂದೆ ಆ ನಿರ್ದೇಶಕರಿಗೆ ಬೇಗನೇ ಮದುವೆಯಾಗ್ಲಿ ಅನ್ನೋದು ನಮ್ಮ ಆಶಯ.

ಹುಡುಗಿ ಸುರಸುಂದರಿ ಆಗಿರ್ಬೇಕು ಅಂತೇನಿಲ್ಲ

ನೋಡೋಕೆ ಸುರಸುಂದರಿ ಆಗಿರ್ಬೇಕು ಅಂತೇನಿಲ್ಲ. ಹುಡುಗಿ ಚೆನ್ನಾಗಿದ್ರೆ ಸಾಕು. ಪರ್ವಾಗಿಲ್ಲ ಅನ್ನುವಷ್ಟಿದ್ದರೂ ಓಕೆ.

ಹುಡುಗಿ ಸಿಂಪಲ್ಲಾಗಿದ್ರೂ ಓಕೆ

ಬಣ್ಣ ಬಣ್ಣದ ಮಾತಾಡಿ ಮರಳು ಮಾಡೋ ಚೆಲುವೆಯರೇ ಬೇಕು ಅಂತೇನಿಲ್ಲ. ಸಿಂಪಲ್ಲಾಗಿದ್ರೂ ಓಕೆ.

ಸೀರೆ ಉಟ್ಕೊಂಡಿದ್ರೂ ಪರ್ವಾಗಿಲ್ಲವಂತೆ

ಹೈ ಹೀಲ್ಡ್ ಲೆಗ್ಗಿಂಗ್ಸ್ ಹಾಕಿ ಗ್ಲಾಮರಸ್ಸಾಗಿ ಇರ್ಬೇಕು ಅಂತೇನಿಲ್ಲ. ಸೀರೆ ಉಟ್ಕೊಂಡಿದ್ರೂ ಪರ್ವಾಗಿಲ್ಲ.

ಉನ್ನತ ವ್ಯಾಸಂಗ ಬೇಕಾಗಿಲ್ಲ ಎಸ್ಸೆಸ್ಸೆಲ್ಸಿ ಸಾಕು

ಫಾರಿನ್ನಲ್ಲೇ ಓದ್ಬೇಕು. ಎಂಜಿನಿಯರಿಂಗ್, ಡಾಕ್ಟರ್, ಎಂಬಿಎ ಓದಿರ್ಬೇಕು ಅಂತೇನಿಲ್ಲ ಎಸ್ಸೆಸ್ಸೆಲ್ಸಿಯಾದ್ರೂ ಓಕೆ.

ಬೆಂಗಳೂರು ಕನ್ನಡದ ತರ ಇದ್ರೆ ಡಬಲ್ ಓಕೆ

ಇಂಗ್ಲಿಷ್ ಮಾತಾಡ್ಬೇಕು ಅಂತೇನು ಇಲ್ಲ. ಕನ್ನಡ ಬಂದ್ರೂ ಓಕೆ, ಅರ್ಧಂಬರ್ಧ ಕನ್ನಡ ಇಂಗ್ಲಿಷ್ ಮಿಕ್ಸ್ ಆಗಿ ಬೆಂಗಳೂರು ಕನ್ನಡದ ತರ ಇದ್ರೆ ಡಬಲ್ ಓಕೆ.

ರಾಗಿಣಿ ತರಹದ ತುಪ್ಪಾನೂ ಬೇಡ, ಐಂದ್ರಿತಾ ತರಹ ಸ್ಲಿಮೂ ಬೇಡ

ರಾಗಿಣಿ ತರಹದ ತುಪ್ಪಾನೂ ಬೇಡ, ಅಷ್ಟು ಉದ್ದ ದಪ್ಪಾನೂ ಬೇಡ. ಹಾಗಂತ ಐಂದ್ರಿತಾ ತರಹ ಸ್ಲಿಮೂ ಬೇಡ ಮೀಡಿಯಂ ಇದ್ರೆ ಸೂಪರ್.

ಕಷ್ಟಪಡೋದು ಬೇಡ ಸುಮ್ಕೆ ಜೊತೆಯಲ್ಲಿದ್ರೆ ಸಾಕು

ಅಷ್ಟೋ ಇಷ್ಟೋ ದುಡ್ಡು ಕೊಡ್ಬೇಕು ಕಷ್ಟ ಪಡ್ಬೇಕು ಅಂತಾನೂ ಹೇಳಲ್ಲ ಸುಮ್ನೆ ಜೊತೆ ಇದ್ರೆ ಸಾಕು.

English summary
Sandalwood young film directors are looking for perfect match, but brides are not ready to marry. Because they think that the directors job is indefinite. So the directors facing hard luck for getting bride in Kannada.
Please Wait while comments are loading...