For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್ 2 ಟೀಸರ್ ಸಕ್ಸಸ್ ಹಿಂದಿದೆ ಮಾಸ್ಟರ್ ಪ್ಲಾನ್, ಆ ಕಾರಣದಿಂದಲೇ ಈ ದಾಖಲೆ ಆಗಿದ್ದು!

  |

  ಕೆಜಿಎಫ್ ಚಾಪ್ಟರ್ 2 ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ತೆರೆಗೆ ಬರಲಿದೆ. 2018ರಲ್ಲಿ ಚಾಪ್ಟರ್ 1 ರಂದು ರಿಲೀಸ್ ಆಗಿ ಬಹಳ ದೊಡ್ಡ ಯಶಸ್ಸು ಕಂಡಿತ್ತು. ಇದೀಗ, ಮೊದಲ ಭಾಗಕ್ಕಿಂತ ಎರಡನೇ ಭಾಗ ಭಾರಿ ನಿರೀಕ್ಷೆ ಹುಟ್ಟುಹಾಕಿದೆ.

  KGF 2 ಟೀಸರ್ ಈ ಮಟ್ಟಕ್ಕೆ ಹಿಟ್ ಆಗಲು ಈ ಮಾಸ್ಟರ್ ಪ್ಲಾನ್ ಕಾರಣ | Filmibeat Kannada

  ಯಶ್ ಅವರ ಹುಟ್ಟುಹಬ್ಬದ ಪ್ರಯುಕ್ತ ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಹಿಂದೆ ಯಾವ ಭಾರತೀಯ ಚಿತ್ರವೂ ಮಾಡದ ದಾಖಲೆಗಳನ್ನು ಕೆಜಿಎಫ್ 2 ಟೀಸರ್ ಮಾಡಿದೆ. ಕೇವಲ ಭಾರತೀಯ ಮಟ್ಟದಲ್ಲಿ ಮಾತ್ರವಲ್ಲ, ವಿಶ್ವಮಟ್ಟದಲ್ಲಿ ರೆಕಾರ್ಡ್ ಕ್ರಿಯೇಟ್ ಮಾಡಿದೆ. ಅಂದ್ಹಾಗೆ, ಕೆಜಿಎಫ್ ಚಾಪ್ಟರ್ 2 ಟೀಸರ್ ಇಷ್ಟು ದೊಡ್ಡ ಸಕ್ಸಸ್ ಆಗಲು ಅದರ ಹಿಂದೆ ಮಾಸ್ಟರ್ ಪ್ಲಾನ್ ಆಗಿದೆ. ಆ ಕಾರಣದಿಂದಲೇ ಇಂತಹ ಸಕ್ಸಸ್ ಸಾಧ್ಯವಾಗಿದೆ. ಅಷ್ಟಕ್ಕೂ, ಏನದು? ಮುಂದೆ ಓದಿ...

  ಕೆಜಿಎಫ್ 2 ಟೀಸರ್‌ ವಿಶ್ವದಾಖಲೆ: ಧೂಳಿಪಟವಾದ 'ಮಾಸ್ಟರ್', 'ಅವೇಂಜರ್ಸ್'

  ಐದು ಭಾಷೆಯಲ್ಲಿ ಟೀಸರ್ ಬಂದಿತ್ತು

  ಐದು ಭಾಷೆಯಲ್ಲಿ ಟೀಸರ್ ಬಂದಿತ್ತು

  ಈ ಹಿಂದೆ ಕೆಜಿಎಫ್ ಚಾಪ್ಟರ್ 1 ಬಂದಂತಹ ಸಂದರ್ಭದಲ್ಲಿ ಐದು ಭಾಷೆಯಲ್ಲಿ ಪ್ರತ್ಯೇಕವಾಗಿ ಟೀಸರ್ ಹಾಗೂ ಟ್ರೈಲರ್ ಲಾಂಚ್ ಆಗಿತ್ತು. ಕನ್ನಡ, ತೆಲುಗು ಹಾಗೂ ಹಿಂದಿಯಲ್ಲಿ ಟೀಸರ್ ಹೆಚ್ಚು ವೀಕ್ಷಣೆ ಕಂಡಿತ್ತು. ಮಲಯಾಳಂ ಹಾಗೂ ತಮಿಳಿನಲ್ಲಿ ಸಾಧಾರಣ ಯಶಸ್ಸು ಕಂಡಿತ್ತು. ಆದರೆ, ಐದು ಭಾಷೆಯ ಟೀಸರ್ ವೀಕ್ಷಣೆ ಒಟ್ಟುಗೂಡಿಸಿದರೆ ಸಂಖ್ಯೆ ದೊಡ್ಡಾಗಿತ್ತು.

  ಕೆಜಿಎಫ್ 2 ಟೀಸರ್ ಬಿಡುಗಡೆ: ರಾಕಿ ಭಾಯ್ ಗತ್ತಿಗೆ ಯಾರಿಲ್ಲ ಸಾಟಿ

  ಯೂನಿವರ್ಸಲ್ ಟೀಸರ್ ಪ್ಲಾನ್!

  ಯೂನಿವರ್ಸಲ್ ಟೀಸರ್ ಪ್ಲಾನ್!

  ಐದು ಪ್ರತ್ಯೇಕ ಟೀಸರ್ ಬಿಡುಗಡೆ ವೀಕ್ಷಣೆ ಹಂಚಿಕೆ ಆಗಿತ್ತು. ಆದ್ರೀಗ, ಚಾಪ್ಟರ್ 2ರ ಟೀಸರ್ ವಿಚಾರದಲ್ಲಿ ಚಿತ್ರತಂಡ ಸ್ವಲ್ಪ ತಲೆ ಉಪಯೋಗಿಸಿದೆ. ಐದು ಪ್ರತ್ಯೇಕ ಟೀಸರ್ ರಿಲೀಸ್ ಮಾಡುವ ಬದಲು ಯೂನಿವರ್ಸಲ್ ಆಗಿ ಒಂದೇ ಟೀಸರ್ ಬಿಡುಗಡೆ ಮಾಡೋಣ ಎಂಬ ನಿರ್ಧಾರಕ್ಕೆ ಬಂದಿದೆ. ಅದರ ಪರಿಣಾಮ ಈಗ ಟೀಸರ್ ಅಷ್ಟೇ ಯಶಸ್ಸು ಸಾಧಿಸಿದೆ.

  ಇಂಗ್ಲಿಷ್ ಮಾತ್ರ ಬಳಕೆ

  ಇಂಗ್ಲಿಷ್ ಮಾತ್ರ ಬಳಕೆ

  ಹೊಂಬಾಳೆ ಫಿಲಂಸ್ ಯ್ಯೂಟ್ಯೂಬ್ ವಾಹಿನಿಯಲ್ಲಿ ತೆರೆಕಂಡ ಚಾಪ್ಟರ್ 2 ಟೀಸರ್ ಯೂನಿವರ್ಸಲ್ ಎನಿಸಿಕೊಂಡಿದೆ. ಏಕಂದ್ರೆ, ಎಲ್ಲ ಭಾಷಿಗರು ನೋಡುವಂತಹ ಟೀಸರ್ ಇದಾಗಿದೆ. ಯೂನಿವರ್ಸಲ್ ಭಾಷೆಯಾಗಿ ಇಂಗ್ಲಿಷ್ ಬಳಸಿರುವುದು ಸಹ ಇದೇ ಕಾರಣಕ್ಕೆ. ಒಂದೇ ಟೀಸರ್ ಎಲ್ಲ ಭಾಷಿಗರು ನೋಡುವುದರಿಂದ ಸಹಜವಾಗಿ ಯ್ಯೂಟ್ಯೂಬ್ ವೀಕ್ಷಣೆ ಸಹ ನಿರೀಕ್ಷೆಗೂ ಮೀರಿ ಹೆಚ್ಚಾಗಿದೆ.

  12 ಗಂಟೆಯಲ್ಲಿ 25 ಮಿಲಿಯನ್ ವೀಕ್ಷಣೆ

  12 ಗಂಟೆಯಲ್ಲಿ 25 ಮಿಲಿಯನ್ ವೀಕ್ಷಣೆ

  ಜನವರಿ 7ರ ರಾತ್ರಿ 9.29ಕ್ಕೆ ಹೊಂಬಾಳೆ ಫಿಲಂಸ್ ಯ್ಯೂಟ್ಯೂಬ್ ವಾಹಿನಿಯಲ್ಲಿ ತೆರೆಕಂಡಿದ್ದ ಟೀಸರ್ ಆರಂಭದ 49 ನಿಮಿಷದಲ್ಲಿ 5 ಮಿಲಿಯನ್ ವೀಕ್ಷಣ ಕಂಡಿತ್ತು. ಬಳಿಕ 12 ಗಂಟೆಯಲ್ಲಿ 25 ಮಿಲಿಯನ್ ವೀಕ್ಷಣೆ ಕಂಡಿದೆ. ಒಟ್ಟಾರೆ ವೀಕ್ಷಣೆ 40 ಮಿಲಿಯನ್‌ಗೂ ಅಧಿಕವಾಗಿದೆ.

  ಕನ್ನಡ ಭಾಷೆ ಬಳಸಿಲ್ಲ ಎಂಬ ಬೇಸರವೂ ಇದೆ

  ಕನ್ನಡ ಭಾಷೆ ಬಳಸಿಲ್ಲ ಎಂಬ ಬೇಸರವೂ ಇದೆ

  ಕೆಜಿಎಫ್ ಚಾಪ್ಟರ್ 2 ಮೂಲತಃ ಕನ್ನಡ ಸಿನಿಮಾ. ಕನ್ನಡ ಭಾಷೆಯಲ್ಲಿ ಟೀಸರ್ ಬರುತ್ತೆ ಎಂದು ನಿರೀಕ್ಷೆ ಮಾಡಿಕೊಂಡಿದ್ದವರಿಗೆ ನಿರಾಸೆ ಎದುರಾಗಿದೆ. ಟೀಸರ್‌ನಲ್ಲಿ ಕನ್ನಡ ಭಾಷೆ ಬಳಸಿಲ್ಲ. ಯೂನಿವರ್ಸಲ್ ಭಾಷೆಯಾಗಿ ಇಂಗ್ಲಿಷ್ ಮಾತ್ರ ಬಳಕೆಯಾಗಿದೆ.

  English summary
  Why KGF Chapter 2 team released Universal teaser? why they did not released teaser in regional language?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X