twitter
    For Quick Alerts
    ALLOW NOTIFICATIONS  
    For Daily Alerts

    ಸುದೀಪ್ ರೀಮೇಕ್ ಚಿತ್ರಗಳ ಹಿಂದಿನ ಸತ್ಯ ಸಂಗತಿ

    By ಜೀವನರಸಿಕ
    |

    ಈ ವರ್ಷ ಗೆದ್ದ ಕನ್ನಡ ಸಿನಿಮಾಗಳು ಸಾಲು ಸಾಲು ರೀಮೇಕ್ ಸಿನಿಮಾಗಳು. ಶ್ರೀಮುರಳಿ ಅಭಿನಯದ 'ಉಗ್ರಂ' ಬಿಟ್ರೆ ಉಳಿದ ಸಿನಿಮಾಗಳು ರೀಮೇಕ್ ಗಳೇ. ಅದರಲ್ಲಿ ಸುದೀಪ್ ನಿರ್ದೇಶಿಸಿ, ಅಭಿನಯಿಸಿದ ಕ್ರೇಜಿಸ್ಟಾರ್ ರವಿಮಾಮ ಕೂಡ ನಟಿಸಿದ್ದ ತೆಲುಗಿನ 'ಮಿರ್ಚಿ' ರೀಮೇಕ್ 'ಮಾಣಿಕ್ಯ' ಚಿತ್ರವೂ ಇದೆ.

    ಇತ್ತೀಚೆಗೆ ಮಾಧ್ಯಮದಲ್ಲಿ ಬರ್ತಿರೋ ಮಾತುಗಳ ಬಗ್ಗೆ ಕಿಚ್ಚ ಬೇಸರ ಮಾಡಿಕೊಂಡಿದ್ದಾರೆ. ಆದರೆ ಕಿಚ್ಚ ಈ ಬಗ್ಗೆ ಯಾವುದೇ ರಾಜಿ ಮಾಡಿಕೊಳ್ಳದೇ ಮಾತನಾಡಿದ್ದಾರೆ. ಸತ್ಯವನ್ನ ಹೊರಹಾಕಿದ್ದಾರೆ. ಸುದೀಪ್ ಮಾತಲ್ಲಿ ಕಿಚ್ಚು ಇರುತ್ತೆ. ಅವ್ರ ನೋಟದಲ್ಲೂ ನರ್ತಿಸೋ ಬೆಂಕಿ ಇರುತ್ತೆ. ಆ ಬೆಂಕಿಯನ್ನ ತಮ್ಮ ಮಾತಲ್ಲಿ ಹೊರಹಾಕಿದ್ದಾರೆ. [ವಿಷ್ಣು ಸ್ಮಾರಕದ ಬಗ್ಗೆ ಸುದೀಪ್ ಹೇಳಿದ್ದರಲ್ಲಿ ತಪ್ಪೇನಿದೆ?]

    ಸುದೀಪ್ ಅಂದ್ರೆ ಅಂದುಕೊಂಡಿದ್ದನ್ನೇ ಮಾಡೋ ವ್ಯಕ್ತಿ. ಅವರಿಗೆ ಯಾರು ಹೇಳೋಕೆ ಸಾಧ್ಯ ಅನ್ನೋದು ಹಲವರ ಮಾತು. ಆದ್ರೆ ಸುದೀಪ್ ಹಾಗಲ್ಲ. ಕಿಚ್ಚನ ಮನಸ್ಸಿನೊಳಗೊಂದು ಹೂವಿನಂತಹಾ ಮಗುವಿದೆ. ಆ ಸತ್ಯ ಈಗ ಹೊರಬಂದಿದೆ.

    ವೀರಮದಕರಿಗೆ ನಾಯಕನಾದ ಕಿಚ್ಚ

    ವೀರಮದಕರಿಗೆ ನಾಯಕನಾದ ಕಿಚ್ಚ

    ವೀರಮದಕರಿ ಸಿನಿಮಾದ ರೀಮೇಕ್ ಮಾಡೋಕೆ ಹೊರಟ ಕಿಚ್ಚ ಯೋಚಿಸಿದ್ದು ಕಷ್ಟದಲ್ಲಿದ್ದ ನಿರ್ಮಾಪಕರನ್ನ ಪಾರು ಮಾಡೋಕೆ. ಹಾಗಾಗಿ ಸುದೀಪ್ ವೀರಮದಕರಿ ಸಿನಿಮಾ ಮಾಡೋಕೆ ಒಪ್ಪಿಕೊಂಡ್ರು.

    ಕೆಂಪೇಗೌಡ ಕೂಡ ಕಷ್ಟದಲ್ಲಿರೋರಿಗೆ

    ಕೆಂಪೇಗೌಡ ಕೂಡ ಕಷ್ಟದಲ್ಲಿರೋರಿಗೆ

    ತಮಿಳಿನ 'ಸಿಂಘಂ' ಚಿತ್ರವನ್ನ ರೀಮೇಕ್ ಮಾಡಿದ ಕಿಚ್ಚ, 'ಕೆಂಪೇಗೌಡ' ಸಿನಿಮಾ ಮೂಲಕ ಭರ್ಜರಿ ಯಶಸ್ಸು ಪಡ್ಕೊಂಡ್ರು. ರೀಮೇಕ್ ಸಿನಿಮಾ ನಿರ್ದೇಶನ ಮಾಡ್ಬೇಕು ಅನ್ನೋ ನಿರ್ಧಾರ ತೆಗೆದುಕೊಂಡಿದ್ದು ಕೂಡ ನಿರ್ಮಾಪಕರಿಗೆ ಸಹಾಯವಾಗ್ಲಿ ಅನ್ನೋ ಕಾರಣಕ್ಕೆ.

    ವರದನಾಯಕ ಮಾಡಿದ್ದು ತಮ್ಮನಿಗಾಗಿ

    ವರದನಾಯಕ ಮಾಡಿದ್ದು ತಮ್ಮನಿಗಾಗಿ

    ಕಿಚ್ಚನಿಗೆ ತಮ್ಮ ಯಾರಿದ್ದಾರೆ ಅನ್ಕೋಬೇಡಿ. ತೆಲುಗಿನ 'ಲಕ್ಷ್ಯಂ' ರೀಮೇಕ್ ಆಗಿದ್ದ 'ವರದನಾಯಕ'ದಲ್ಲಿ ಕಿಚ್ಚ ಅಭಿನಯಿಸಿದ್ದು ಚಿರಂಜೀವಿ ಸರ್ಜಾಗಾಗಿ. ಆದ್ರೆ ಮತ್ತೊಂದು ರೀಮೇಕ್ ಸಿನಿಮಾ ಹಣೆಪಟ್ಟಿ ಕಿಚ್ಚ ಸುದೀಪ್ ಹೆಗಲೇರಿತು.

    ಮಾಣಿಕ್ಯ ಗುಣದಿಂದ ಮತ್ತೊಂದು ರೀಮೇಕ್

    ಮಾಣಿಕ್ಯ ಗುಣದಿಂದ ಮತ್ತೊಂದು ರೀಮೇಕ್

    ಅನ್ನದಾತ ಅನ್ನಿಸಿಕೊಂಡಿರೋ ಕಷ್ಟದಲ್ಲಿರೋ ನಿರ್ಮಾಪಕರಿಗಾಗಿ ಕಿಚ್ಚ ಮತ್ತೊಂದು ಸಿನಿಮಾ ಮಾಡೋಕೆ ಒಪ್ಪಿಕೊಂಡ್ರು. ಒಳ್ಳೆಯ ಸಬ್ಜೆಕ್ಟ್ ಹುಡುಕಿದಾಗ ಸಿಕ್ಕಿದ್ದು ಮಿರ್ಚಿ, ಜೊತೆಗೆ ಅದರ ನಿರ್ದೇಶನದ ಜವಾಬ್ದಾರಿ ಕೂಡ ಕಿಚ್ಚನಿಗೆ ಸಿಕ್ತು. ದೊಡ್ಡ ನಿರ್ದೇಶಕರು ಬಿಜಿ ಇದ್ದಿದ್ದರಿಂದ ಸುದೀಪ್ ನಿರ್ದೇಶನ ಮಾಡ್ಬೇಕಾಯ್ತು.

    ರನ್ನದಂತಹ ಗುಣದಿಂದ ಮತ್ತೊಂದು ರೀಮೇಕ್

    ರನ್ನದಂತಹ ಗುಣದಿಂದ ಮತ್ತೊಂದು ರೀಮೇಕ್

    ಸದ್ಯ ಕಿಚ್ಚ ಮಾಡ್ತಿರೋ ತೆಲುಗಿನ 'ಅತ್ತಾರಿಂಟಿಕಿ ದಾರೇದಿ' ರೀಮೇಕ್ ಮಾಡ್ತಿರೋದು ಕೂಡ ಮತ್ತೊಬ್ಬ ನಿರ್ಮಾಪಕರ ನಿಯತ್ತಿಗಾಗಿ. ತನಗಾಗಿ ಮೂರುವರೆ ವರ್ಷ ಕಾದಿದ್ದ ನಿರ್ಮಾಪಕರಿಗಾಗಿ 'ರನ್ನ' ಸಿನಿಮಾ ಒಪ್ಪಿಕೊಂಡ್ರು ಕಿಚ್ಚ.

    ಕಿಚ್ಚನ ಮನಸ್ಸಲ್ಲಿ ನೋವಿದೆ

    ಕಿಚ್ಚನ ಮನಸ್ಸಲ್ಲಿ ನೋವಿದೆ

    ತಾನು ಮಾಡಿದ್ದೆಲ್ಲವೂ ಒಳ್ಳೆಯದಕ್ಕಾಗಿ ಆದ್ರೆ ಯಾಕೆ ಈ ರೀತಿ ಜನರು ನನ್ನನ್ನ ದೂಷಿಸ್ತಿದ್ದಾರೆ ಅನ್ನೋ ನೋವು ಕಿಚ್ಚನ ಮನಸ್ಸಲ್ಲಿದೆ. ಸುದೀಪ್ ಕೋಪದೊಳಗೊಂದು ಒಳ್ಳೆಯತನವಿದೆ. ಒಳ್ಳೆಯ ಗುಣವಿದೆ. ರೀಮೇಕ್ ಚಿತ್ರಗಳ ಮುಂದೆ ಅದು ಕಾಣಿಸುತ್ತಿಲ್ಲ ಅಷ್ಟೇ.

    English summary
    Why Kannada actor Kichcha Sudeep prefers remake movies? What is the secret behind tend to choose. remake films? Sudeep is not blindly doing these remake films for his personal benifit. Their is a truth factor behind his remake movies!
    Monday, November 3, 2014, 11:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X